Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೀರೋ ಎಕ್ಸ್‌ಪಲ್ಸ್ 200 4ವಿ ಮೊದಲ ಬ್ಯಾಚ್‌ನ ಎಲ್ಲಾ ಯುನಿಟ್ ಗಳು ಸೋಲ್ಡ್ ಔಟ್ ಆಗಿದೆ. ಇದೀಗ ಹೀರೋ ಮೋಟೋಕಾರ್ಪ್ ಕಂಪನಿಯು ಆನ್‌ಲೈನ್ ಮೂಲಕ ಹೀರೋ ಎಕ್ಸ್‌ಪಲ್ಸ್ 200 4ವಿ ಎರಡನೇ ಬ್ಯಾಚ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷದ ಆರಂಭದ ಬೆಲೆ ಪರಿಷ್ಕರಣೆ ನಂತರ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,30,150 ಆಗಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಬೈಕಿನ ಬುಕ್ಕಿಂಗ್ ಗಾಗಿ ಟೋಕನ್ ಮೊತ್ತ ರೂ.10,000 ಮುಂಗಡ ಪಾವತಿ ಮಾಡಬೇಕು.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೀರೋ ಮೋಟೋಕಾರ್ಪ್‌ನ ಸೇಲ್ಸ್ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್ ಅವರು ಮಾತನಾಡಿ, ಹೀರೋ ಎಕ್ಸ್‌ಪಲ್ಸ್ 200 ಯಾವಾಗಲೂ ಅಸಾಧಾರಣ ಅನುಭವವನ್ನು ನೀಡಲು ಹೆಸರುವಾಸಿಯಾಗಿದೆ. ಅಸಾಧಾರಣ ತಂತ್ರಜ್ಞಾನ, ಆಧುನಿಕ ವಿನ್ಯಾಸ ಮತ್ತು ವಿಶಿಷ್ಟವಾದ ಆಕರ್ಷಣೆಯಿಂದ ಬೆಂಬಲಿತವಾಗಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ನಮ್ಮ ಗ್ರಾಹಕರಿಂದ ಎಕ್ಸ್‌ಪಲ್ಸ್ 200 4ವಿ ಪಡೆದಿರುವ ಅಗಾಧವಾದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ವ್ಯಾಪಕವಾದ ಸ್ವೀಕಾರದೊಂದಿಗೆ ಮೊದಲ ಬ್ಯಾಚ್ ತಕ್ಷಣವೇ ಮಾರಾಟವಾಗುತ್ತಿರುವುದು ಪ್ರೀಮಿಯಂ-ಮೋಟಾರ್‌ಸೈಕಲ್ ಬೇಡಿಕೆಯ ಬೆಳವಣಿಗೆಯನ್ನು ಮತ್ತು ಹೀರೋ ಬ್ರ್ಯಾಂಡ್‌ನಲ್ಲಿನ ಗ್ರಾಹಕರ ವಿಶ್ವಾಸವನ್ನು ತೋರಿಸುತ್ತದೆ. ದೇಶದಲ್ಲಿ ಈ ಬೈಕಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಸಲು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೀರೋ ಎಕ್ಸ್‌ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಹೀರೋ ಎಕ್ಸ್‌ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಈಗ, ಹೀರೋ ಮೋಟೋಕಾರ್ಪ್ ಎಕ್ಸ್‌ಪಲ್ಸ್ 200 ಅನ್ನು ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಜೊತೆಗೆ ಎಕ್ಸ್‌ಪಲ್ಸ್ 200 4ವ್ಯಾಲ್ಸ್ ಹೊಸ ಮನವಿಯೊಂದಿಗೆ ಪರಿಚಯಿಸಲು ಸಣ್ಣ ನವೀಕರಣಗಳನ್ನು ನೀಡುತ್ತದೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಅಲ್ಲದೇ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಭಾರತದ ಹೆಚ್ಚಿನ ಆಫ್-ರೋಡ್ ಪ್ರೇಮಿಗಳನ್ನು ಈ ಬೈಕ್ ಸೆಳದಿದೆ. ನವೀಕರಿಸಿದ ಇಂಜಿನ್‌ನ ನಾಲ್ಕು ವಾಲ್ವ್ ಸಿಲಿಂಡರ್ ಹೆಡ್ ಅನ್ನು ಒಳಗೊಂಡಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 4 ವಾಲ್ವ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೀರೋ ಎಕ್ಸ್‌ಪಲ್ಸ್ 200 ಈಗ 200 ಸಿಸಿ, ನಾಲ್ಕು ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಈ ಎಂಜಿನ್ 8,500 ಆರ್‌ಪಿಎಂನಲ್ಲಿ 19 ಬಿಎಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 ಶೇಕಡಾ ಹೆಚ್ಚು ಪವರ್ ಮತ್ತು 5 ಶೇಕಡಾ ಟಾರ್ಕ್ ಹೆಚ್ಚು ಸೇರಿಸಲಾಗಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೀರೋ ಮೋಟೋಕಾರ್ಪ್ ಪ್ರಕಾರ, ನಾಲ್ಕು-ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಮಧ್ಯಮ ಮತ್ತು ಟಾಪ್-ಎಂಡ್ ವೇಗದ ಶ್ರೇಣಿಯಲ್ಲಿ ಉತ್ತಮ ಶಕ್ತಿಯನ್ನು ಒದಗಿಸುತ್ತದೆ, ಆದರೆ ಕಂಪನಗಳನ್ನು ನಿಯಂತ್ರಿಸುವಾಗ ಹೆಚ್ಚಿನ ವೇಗದಲ್ಲಿಯೂ ಒತ್ತಡ ರಹಿತ ಎಂಜಿನ್ ಕಾರ್ಯಕ್ಷಮತೆಯನ್ನು ನೀಡುತ್ತದೆ. ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು 7-ಫಿನ್ ಆಯಿಲ್ ಕೂಲರ್‌ನೊಂದಿಗೆ ನವೀಕರಿಸಲಾಗಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಗೇರ್ ಅನುಪಾತಗಳನ್ನು ಉತ್ತಮ ಟ್ರ್ಯಾಕ್ಟಬಿಲಿಟಿ ಮತ್ತು ವೇಗವರ್ಧನೆಗಾಗಿ ನವೀಕರಿಸಲಾಗಿದೆ ಮತ್ತು ಒಟ್ಟಾರೆ ಟಾರ್ನ್ ಮಿಷನ್ ಸುಧಾರಿಸಲಾಗಿದೆ. ಸ್ಟಾಕ್ ಹೀರೋ ಎಕ್ಸ್‌ಪಲ್ಸ್ 200 4ವಿ ದೀರ್ಘ ಸಸ್ಪೆಂಕ್ಷನ್ ಟ್ರ್ಯಾವೆಲ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ 190 ಎಂಎಂ ಮತ್ತು ಹಿಂಭಾಗದಲ್ಲಿ 170 ಎಂಎಂ ಟ್ರ್ಯಾವೆಲ್ ಹೊಂದಿದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಎಕ್ಸ್‌ಪಲ್ಸ್ 200 ಸಹ ಸ್ಟ್ಯಾಂಡರ್ಡ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್ ಜೊತೆಗೆ ಎಂಜಿನ್ ಅನ್ನು ರಕ್ಷಿಸುತ್ತದೆ.ಮತ್ತು ಉತ್ತಮ ಹಿಡಿತಕ್ಕಾಗಿ ಹೊಸ ಹಲ್ಲಿನ ಬ್ರೇಕ್ ಪೆಡಲ್, ಮತ್ತು ನೀರಿನ ಕ್ರಾಸಿಂಗ್‌ಗಳನ್ನು ಸುಲಭವಾಗಿ ನಿಭಾಯಿಸಲು ಉತ್ಕೃಷ್ಟವಾದ ಎಕ್ಸಾಸ್ಟ್ ಅನ್ನು ಒಳಗೊಂಡಿದೆ..

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಅಡ್ವೆಂಚರ್ ಬೈಕಿನಲ್ಲಿ ಡ್ಯುಯಲ್-ಪರ್ಪಸ್ ಟೈರ್‌ಗಳು, 10-ಸ್ಟೆಪ್ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸಸ್ಪೆಂಕ್ಷನ್, 825 ಎಂಎಂ ಪ್ರವೇಶಿಸಬಹುದಾದ ಸೀಟ್ ಎತ್ತರ ಮತ್ತು 220 ಎಂಎಂನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಎಲ್ಲಾ ರೀತಿಯು ಈ ಬೈಕ್ ಯೋಗ್ಯವಾದ ಆಫ್-ರೋಡ್ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ಎಕ್ಸ್‌ಪಲ್ಸ್ 200 ಬಂಗೀ ಹುಕ್‌ಗಳೊಂದಿಗೆ ಸ್ಟ್ಯಾಂಡರ್ಡ್ ಲಗೇಜ್ ಪ್ಲೇಟ್‌ನೊಂದಿಗೆ ಬ್ಯಾಗೇಜ್‌ನಲ್ಲಿ ಸಹ ಪ್ರಯಾಣಿಕರೊಂದಿಗೆ ಲಗೇಜ್ ಸಾಗಿಸಲು ಬರುತ್ತದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಯಾಂತ್ರಿಕ ನವೀಕರಣಗಳ ಹೊರತಾಗಿ, ಹೀರೋ ಮೋಟೋಕಾರ್ಪ್ ಹೊಸ ಎಕ್ಸ್‌ಪಲ್ಸ್ 200 4ವಿ ಸ್ವಿಚ್ ಗೇರ್ ಅನ್ನು ಪರಿಷ್ಕರಿಸಿದೆ ಮತ್ತು ಹೊಸ ಮಾದರಿಯು ಸಂಯೋಜಿತ ಸ್ಟಾರ್ಟರ್/ಎಂಜಿನ್ ಕಟ್-ಆಫ್ ಬಟನ್ ಅನ್ನು ಪಡೆಯುತ್ತದೆ. ಇನ್ನು ಉಳಿದ ವೈಶಿಷ್ಟ್ಯಗಳು ಎರಡು-ವಾಲ್ವ್ ರೂಪಾಂತರವನ್ನು ಹೋಲುತ್ತವೆ. ಹೀರೋ ಎಕ್ಸ್‌ಪಲ್ಸ್ 200 4ವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್‌ಲೈಟ್, ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಬಳಸುತ್ತದೆ.

Hero XPulse 200 4V ಬೈಕ್ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಹೀರೋ ಎಕ್ಸ್‌ಪಲ್ಸ್ 200 4ವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್‌ಲೈಟ್, ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಬಳಸುತ್ತದೆ. ಹೊಸ ಮಾದರಿಯ ಹೆಡ್‌ಲೈಟ್ ಸುಧಾರಿತ ಗೋಚರತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ ಆದರೆ ಏಳು-ಫಿನ್ ಆಯಿಲ್ ಕೂಲರ್ ಉತ್ತಮ ಶಾಖ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

Article Published On: Friday, January 21, 2022, 10:27 [IST]
English summary
Hero xpulse 200 4v second batch bookings starts in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+