ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಜೂನ್ ತಿಂಗಳ ಮಾರಾಟವನ್ನು ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 3,83,882 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇದು ಒಂದು ವರ್ಷದ ಹಿಂದಿನ ತಿಂಗಳಿಗಿಂತ 67 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. 2022ರ ಜೂನ್ ತಿಂಗಳಿನಲ್ಲಿ ಹೋಂಡಾ ದೇಶೀಯ ಮಾರುಕಟ್ಟೆಯ ಮಾರಾಟವು 3,55,560 ಯುನಿಟ್‌ಗಳಷ್ಟಿದ್ದರೆ, ರಫ್ತು 28,322 ಯುನಿಟ್‌ಗಳಷ್ಟು ಇದೆ. ಇನ್ನು 2021ರ ಜೂನ್ ತಿಂಗಳಿನಲ್ಲಿ 2,32,497 ಯುನಿಟ್‌ಗಳು ಮಾರಾಟವಾಗಿತ್ತು. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 2,12,453 ಯುನಿಟ್‌ಗಳು ಮತ್ತು 20,044 ಯುನಿಟ್‌ಗಳು ರಫ್ತುಗಳಾಗಿವೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಮಾರುಕಟ್ಟೆ ಪರಿಸ್ಥಿತಿಯ ಕುರಿತು, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಅವರು ಪ್ರತಿಕ್ರಿಯಿಸಿ, "ಎಫ್‌ವೈ'23 ರ ಆರಂಭದಲ್ಲಿ ನಾವು ಹೊಂದಿದ್ದ ಬೆಳವಣಿಗೆಯ ನಿರೀಕ್ಷೆಗಳು ಕ್ರಮೇಣ ವಾಸ್ತವಕ್ಕೆ ಬದಲಾಗುತ್ತಿವೆ. ಮಾನ್ಸೂನ್ ಸಮಯೋಚಿತ ಆಗಮನ ಆರ್ಥಿಕ ಸೂಚಕಗಳ ಮೇಲೆ ಅನುಕೂಲಕರವಾಗಿ ಪರಿಣಾಮ ಬೀರಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೆಚ್ಚಿನ ಗ್ರಾಹಕರು ದ್ವಿಚಕ್ರ ವಾಹನ ಚಲನಶೀಲತೆಯ ಆಯ್ಕೆಗಳನ್ನು ಹುಡುಕುತ್ತಿರುವುದರಿಂದ ಮುಂಬರುವ ತಿಂಗಳುಗಳು ಈ ಮೇಲ್ಮುಖ ಪ್ರವೃತ್ತಿಯನ್ನು ಉಳಿಸಿಕೊಳ್ಳಲು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

2022ರ ಜೂನ್ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪಶ್ಚಿಮ ಬಂಗಾಳದಲ್ಲಿ ಸಂಚಿತ ದ್ವಿಚಕ್ರ ವಾಹನಗಳ ಮಾರಾಟವು ಈಗ ಮಹತ್ವದ 20 ಲಕ್ಷ ಯುನಿಟ್‌ಗಳ ಗಡಿಯನ್ನು ದಾಟಿದೆ ಎಂದು ಘೋಷಿಸಿತು. ಸಮಾನಾಂತರವಾಗಿ, ಹೋಂಡಾ ಶೈನ್ ಕುಟುಂಬವು ಕೇಂದ್ರ ಪ್ರದೇಶದಲ್ಲಿ 20 ಮಿಲಿಯನ್ ಯುನಿಟ್‌ಗಳ ಮಾರಾಟವಾಗಿದೆ,

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಆಕ್ಟಿವಾ 6G ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದ್ದರೆ, ಹೋಂಡಾ ಶೈನ್ 125 ಅತಿ ಹೆಚ್ಚು ಮಾರಾಟವಾಗುವ 125 cc ಮೋಟಾರ್‌ಸೈಕಲ್ ಆಗಿದೆ. ವಾಸ್ತವವಾಗಿ, ಹೋಂಡಾ ಶೈನ್ ವಿಶ್ವಾದ್ಯಂತ ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಚೇತರಿಕೆಯ ಹಾದಿಯಲ್ಲಿದೆ ಮತ್ತು ದ್ವಿಚಕ್ರ ವಾಹನ ತಯಾರಕ ದೇಶಾದ್ಯಂತ ತನ್ನ ಅಸ್ತಿತ್ವವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ. ಇದು ಕೇರಳದ ಮುವಾಟ್ಟುಪುಳ ಮತ್ತು ಅಟ್ಟಿಂಗಲ್ ಮತ್ತು ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರೀಮಿಯಂ ಬಿಗ್‌ವಿಂಗ್ ಡೀಲರ್‌ಶಿಪ್‌ಗಳನ್ನು ಪ್ರಾರಂಭಿಸಲಾಗಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇನ್ನು ಹೋಂಡಾ 2ವೀಲರ್ಸ್ ಇಂಡಿಯಾ ಕಂಪನಿಯು 2021-22ರ ಹಣಕಾಸು ವರ್ಷವನ್ನು 37,99,680 ಯುನಿಟ್‌ಗಳು ಮಾರಾಟ ಮಾಡುವುದರೊಂದಿಗೆ ಮುಕ್ತಾಯಗೊಳಿಸಿತು, ಅದರಲ್ಲಿ 3,30,852 ರಫ್ತುಗಳಾಗಿವೆ. ಈ ರಫ್ತು ಅಂಕಿಅಂಶವು ಹಣಕಾಸು ವರ್ಷ 2020 -21 ಕ್ಕಿಂತ 58% ಹೆಚ್ಚಾಗಿದೆ, ಆದರೆ ಹಣಕಾಸಿನ ವರ್ಷದಲ್ಲಿ ದೇಶೀಯ ಮಾರಾಟವು 34,68,828 ಯುನಿಟ್‌ಗಳಷ್ಟಿದೆ. ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ವಾಹನಗಳ ರಫ್ತಿನಲ್ಲಿ 30 ಲಕ್ಷದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇನ್ನು ಹೋಂಡಾ ಕಂಪನಿಯು 21 ವರ್ಷಗಳ ಕಾರ್ಯಾಚರಣೆಯಲ್ಲಿ 30 ಲಕ್ಷ ಯುನಿಟ್ ಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದ್ದರು. ಜಪಾನಿನ ತಯಾರಕರಾದ ಹೋಂಡಾ 2001 ರಲ್ಲಿ ಐಕಾನಿಕ್ ಹೋಂಡಾ ಆಕ್ಟಿವಾದೊಂದಿಗೆ ರಫ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ 15 ಲಕ್ಷ ಮೈಲಿಗಲ್ಲನ್ನು ದಾಟಿದರು. ಉಳಿದಂತೆ ಹೋಂಡಾ ಕಂಪನಿಯು ತನ್ನ ಮುಂದಿನ 15 ಲಕ್ಷ ರಫ್ತುಗಳು ಕಳೆದ ಐದು ವರ್ಷಗಳಲ್ಲಿ ಸಾಧಿಸಿದೆ. ಇದು ಹಿಂದಿನದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಭಾರತೀಯ ನಿರ್ಮಿತ ಮಾಡೆಲ್ ಶ್ರೇಣಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿರುವ ಸಮಯದಲ್ಲಿ ರಫ್ತುಗಳಲ್ಲಿನ ಏರಿಕೆಯು ಸಹ ಕಂಡು ಬರುತ್ತಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಎನ್ಎಕ್ಸ್ ಮತ್ತು ಎನ್ಎಕ್ಸ್500 ಹೆಸರಿಗಾಗಿ ಟ್ರೇಡ್‌ಮಾರ್ಕ್‌ಗಳನ್ನು ಸಲ್ಲಿಸಿದೆ. ಹೋಂಡಾದ ಇತ್ತೀಚಿನ ಟ್ರೇಡ್‌ಮಾರ್ಕ್ ಹೊಸ ಅಡ್ವೆಂಚರ್ ಬೈಕ್ ಗಾಗಿ ಎಂದು ಸುಳಿವು ನೀಡಿದ್ದಾರೆ. ಏಕೆಂದರೆ 'NX' ಮಾನಿಕರ್ ಹೋಂಡಾ ಪೋರ್ಟ್‌ಫೋಲಿಯೊದಲ್ಲಿ ಡೋಮಿನರ್ ಸರಣಿ ಮೋಟಾರ್‌ಸೈಕಲ್‌ಗಳೊಂದಿಗೆ ಸಂಬಂಧ ಹೊಂದಿದೆ. 1980 ಮತ್ತು 1990 ರ ದಶಕದಲ್ಲಿ ಹೋಂಡಾದ ಡೋಮಿನರ್ ಸರಣಿ ಅಡ್ವೆಂಚರ್ ಬೈಕ್ ಗಳಿಗೆ ಪ್ರಸಿದ್ಧವಾಗಿದ್ದರೂ, ನಾರ್ಟನ್ ಈಗಾಗಲೇ ಡೋಮಿನರ್ ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿರುವುದರಿಂದ ಹೋಂಡಾ ಆ ಮಾನಿಕರ್ ಅನ್ನು ಬಳಸುವುದಿಲ್ಲ. ಇದರ ಪರಿಣಾಮವಾಗಿ, ಜಪಾನಿನ ದ್ವಿಚಕ್ರ ವಾಹನ ತಯಾರಕರು 'NX' ಹೆಸರನ್ನು ಬಳಸಲು ಎದುರು ನೋಡುತ್ತಿದ್ದಾರೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಮುಂಬರುವ ಹೋಂಡಾ ಎನ್ಎಕ್ಸ್500 ಹೊಸದಾಗಿ ಬಿಡುಗಡೆಯಾದ ಹೋಂಡಾ ಸಿಬಿ500ಎಕ್ಸ್ ಬೈಕಿನ ಅದೇ ಎಂಜಿನ್ ಅನ್ನು ಬಳಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರರ್ಥ ಮುಂಬರುವ ಅಡ್ವೆಂಚರ್ ಬೈಕ್ 471ಸಿಸಿ ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್‌ನೊಂದಿಗೆ ಬರಬಹುದು. ಹೋಂಡಾ ಸಿಬಿ500ಎಕ್ಸ್ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ 471ಸಿಸಿ,ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಜೂನ್ ತಿಂಗಳಿನಲ್ಲಿ 3.83 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಸಜ್ಜಾಗುತ್ತಿದೆ. ಈ ಹೊಸ ಮಾದರಿಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮತ್ತು ಮಾರಾಟದಲ್ಲಿ ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
Honda 2wheelers india sells 3 83 lakh units in june 2022 details
Story first published: Monday, July 4, 2022, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X