India
YouTube

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಜುಲೈ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೋಂಡಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 4,02,701 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಹೋಂಡಾ ಕಂಪನಿಯು 3,40,420 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.18 ರಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ, ಕಂಪನಿಯು ಒಟ್ಟು ಜುಲೈ 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 4,43,643 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾಸಿಕ-ಮಾಸಿಕ (MoM) ಮಾರಾಟಕ್ಕೆ ಸಂಬಂಧಿಸಿದಂತೆ, ಕಂಪನಿಯು ಭಾರತದಲ್ಲಿ 2022ರ ಜೂನ್ 3,55,560 ಯುನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ 13.25 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಅವರು ಮಾತನಾಡಿ, "ಮೊದಲ ತ್ರೈಮಾಸಿಕದಲ್ಲಿನ ಕಾರ್ಯಕ್ಷಮತೆಯು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಗ್ರಾಹಕರ ಭಾವನೆಯೊಂದಿಗೆ ನಿಜವಾಗಿಯೂ ಉತ್ತೇಜನಕಾರಿಯಾಗಿದೆ. ಉತ್ತಮ ಮುಂಗಾರು ಮತ್ತು ವೈಯಕ್ತಿಕ ಬೇಡಿಕೆಯಂತಹ ಅಂಶಗಳು

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಮುಂಬರುವ ಹಬ್ಬದ ಸೀಸನ್ ನೊಂದಿಗೆ ಎರಡನೇ ತ್ರೈಮಾಸಿಕವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸುವುದರಿಂದ, ನಾವು ವೇಗದ ದರದಲ್ಲಿ ಬೆಳವಣಿಗೆಯ ವೇಗವನ್ನು ಮರಳಿ ಪಡೆಯಲು ನಿರೀಕ್ಷಿಸುತ್ತೇವೆ ಎಂದು ಹೆಳಿದರು.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಕಂಪನಿಯು ತನ್ನ ಪ್ರೀಮಿಯಂ ಮೋಟಾರ್‌ಸೈಕಲ್ ರಿಟೇಲ್ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದೆ-.ಬಿಗ್‌ವಿಂಗ್ ದಕ್ಷಿಣ ಭಾರತದಲ್ಲಿ. HMSI ತನ್ನ ಹೋಂಡಾ ಬಿಗ್‌ವಿಂಗ್ ಔಟ್‌ಲೆಟ್‌ಗಳನ್ನು ವಾರಂಗಲ್ (ತೆಲಂಗಾಣ), ಮಧುರೈ (ತಮಿಳುನಾಡು) ತೊಡುಪುಳ (ಕೇರಳ) ಮತ್ತು ಮಲಪ್ಪುರಂ (ಕೇರಳ) ದಲ್ಲಿ ಉದ್ಘಾಟಿಸಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

2022ರ ಜೂನ್ ನಲ್ಲಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪಶ್ಚಿಮ ಬಂಗಾಳದಲ್ಲಿ ಸಂಚಿತ ದ್ವಿಚಕ್ರ ವಾಹನಗಳ ಮಾರಾಟವು 20 ಲಕ್ಷ ಘಟಕಗಳ ಮಾರ್ಕ್ ಅನ್ನು ದಾಟಿದೆ ಎಂದು ಘೋಷಿಸಿತು. ಸಮಾನಾಂತರವಾಗಿ, ಹೋಂಡಾ ಶೈನ್ ಕುಟುಂಬವು ಕೇಂದ್ರ ಪ್ರದೇಶದಲ್ಲಿ 20 ಮಿಲಿಯನ್ ಸಂಚಿತ ಗ್ರಾಹಕರನ್ನು ಸಾಧಿಸಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಆಕ್ಟಿವಾ 6G ಸ್ಕೂಟರ್ ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದ್ದರೆ, ಹೋಂಡಾ ಶೈನ್ 125 ಅತಿ ಹೆಚ್ಚು ಮಾರಾಟವಾಗುವ 125 cc ಮೋಟಾರ್‌ಸೈಕಲ್ ಆಗಿದೆ. ವಾಸ್ತವವಾಗಿ, ಹೋಂಡಾ ಶೈನ್ ವಿಶ್ವಾದ್ಯಂತ ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇನ್ನೂ ಹೋಂಡಾ 2ವೀಲರ್ಸ್ ಇಂಡಿಯಾ ಕಂಪನಿಯು 2021-22ರ ಹಣಕಾಸು ವರ್ಷವನ್ನು 37,99,680 ಯುನಿಟ್‌ಗಳು ಮಾರಾಟ ಮಾಡುವುದರೊಂದಿಗೆ ಮುಕ್ತಾಯಗೊಳಿಸಿತು, ಅದರಲ್ಲಿ 3,30,852 ರಫ್ತುಗಳಾಗಿವೆ. ಈ ರಫ್ತು ಅಂಕಿಅಂಶವು ಹಣಕಾಸು ವರ್ಷ 2020 -21 ಕ್ಕಿಂತ 58% ಹೆಚ್ಚಾಗಿದೆ, ಆದರೆ ಹಣಕಾಸಿನ ವರ್ಷದಲ್ಲಿ ದೇಶೀಯ ಮಾರಾಟವು 34,68,828 ಯುನಿಟ್‌ಗಳಷ್ಟಿದೆ. ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ವಾಹನಗಳ ರಫ್ತಿನಲ್ಲಿ 30 ಲಕ್ಷದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕಂಪನಿಯು 21 ವರ್ಷಗಳ ಕಾರ್ಯಾಚರಣೆಯಲ್ಲಿ 30 ಲಕ್ಷ ಯುನಿಟ್ ಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದ್ದರು. ಜಪಾನಿನ ತಯಾರಕರಾದ ಹೋಂಡಾ 2001 ರಲ್ಲಿ ಐಕಾನಿಕ್ ಹೋಂಡಾ ಆಕ್ಟಿವಾದೊಂದಿಗೆ ರಫ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ 15 ಲಕ್ಷ ಮೈಲಿಗಲ್ಲನ್ನು ದಾಟಿದರು. ಉಳಿದಂತೆ ಹೋಂಡಾ ಕಂಪನಿಯು ತನ್ನ ಮುಂದಿನ 15 ಲಕ್ಷ ರಫ್ತುಗಳು ಕಳೆದ ಐದು ವರ್ಷಗಳಲ್ಲಿ ಸಾಧಿಸಿದೆ. ಇದು ಹಿಂದಿನದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಭಾರತೀಯ ನಿರ್ಮಿತ ಮಾಡೆಲ್ ಶ್ರೇಣಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿರುವ ಸಮಯದಲ್ಲಿ ರಫ್ತುಗಳಲ್ಲಿನ ಏರಿಕೆಯು ಸಹ ಕಂಡಿದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕಂಪನಿಯು ಎನ್ಎಕ್ಸ್ ಮತ್ತು ಎನ್ಎಕ್ಸ್500 ಹೆಸರಿಗಾಗಿ ಟ್ರೇಡ್‌ಮಾರ್ಕ್‌ಗಳನ್ನು ಸಲ್ಲಿಸಿದೆ. ಹೋಂಡಾದ ಇತ್ತೀಚಿನ ಟ್ರೇಡ್‌ಮಾರ್ಕ್ ಹೊಸ ಅಡ್ವೆಂಚರ್ ಬೈಕ್ ಗಾಗಿ ಎಂದು ಸುಳಿವು ನೀಡಿದ್ದಾರೆ. ಏಕೆಂದರೆ 'NX' ಮಾನಿಕರ್ ಹೋಂಡಾ ಪೋರ್ಟ್‌ಫೋಲಿಯೊದಲ್ಲಿ ಡೋಮಿನರ್ ಸರಣಿ ಮೋಟಾರ್‌ಸೈಕಲ್‌ಗಳೊಂದಿಗೆ ಸಂಬಂಧ ಹೊಂದಿದೆ. 1980 ಮತ್ತು 1990 ರ ದಶಕದಲ್ಲಿ ಹೋಂಡಾದ ಡೋಮಿನರ್ ಸರಣಿ ಅಡ್ವೆಂಚರ್ ಬೈಕ್ ಗಳಿಗೆ ಪ್ರಸಿದ್ಧವಾಗಿದ್ದರೂ, ನಾರ್ಟನ್ ಈಗಾಗಲೇ ಡೋಮಿನರ್ ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿರುವುದರಿಂದ ಹೋಂಡಾ ಆ ಮಾನಿಕರ್ ಅನ್ನು ಬಳಸುವುದಿಲ್ಲ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇದರ ಪರಿಣಾಮವಾಗಿ, ಜಪಾನಿನ ದ್ವಿಚಕ್ರ ವಾಹನ ತಯಾರಕರು 'NX' ಹೆಸರನ್ನು ಬಳಸಲು ಎದುರು ನೋಡುತ್ತಿದ್ದಾರೆ. ಮುಂಬರುವ ಹೋಂಡಾ ಎನ್ಎಕ್ಸ್500 ಹೊಸದಾಗಿ ಬಿಡುಗಡೆಯಾದ ಹೋಂಡಾ ಸಿಬಿ500ಎಕ್ಸ್ ಬೈಕಿನ ಅದೇ ಎಂಜಿನ್ ಅನ್ನು ಬಳಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರರ್ಥ ಮುಂಬರುವ ಅಡ್ವೆಂಚರ್ ಬೈಕ್ 471ಸಿಸಿ ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್‌ನೊಂದಿಗೆ ಬರಬಹುದು. ಹೋಂಡಾ ಸಿಬಿ500ಎಕ್ಸ್ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ 471ಸಿಸಿ,ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜುಲೈ ತಿಂಗಳಿನಲ್ಲಿ 4.43 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಸಜ್ಜಾಗುತ್ತಿದೆ. ಈ ಹೊಸ ಮಾದರಿಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
Honda 2wheelers india sells 443643 lakh units in july 2022 details
Story first published: Thursday, August 4, 2022, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X