ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ಪ್ರಸ್ತುತ ಜನರೇಷನ್ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‌ಗೆ ಪೇಟೆಂಟ್ ಸಲ್ಲಿಸಿದೆ. ಪೇಟೆಂಟ್ ಡಾಕ್ಯುಮೆಂಟ್ ನಲ್ಲಿರುವ ಪ್ರಸ್ತುತ ಜನರೇಷನ್ ಹೋಂಡಾ ಸಿಬಿಆರ್150ಆರ್ ಬೈಕಿನ ತೀಕ್ಷ್ಣವಾದ ಶೈಲಿಯನ್ನು ತೋರಿಸುತ್ತದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಪ್ರಸ್ತುತ ಜನರೇಷನ್ ಹೋಂಡಾ ಸಿಬಿಆರ್150ಆರ್ ಬೈಕ್ ಅಂತರಾಷ್ಟ್ರೀಯ ಆವೃತ್ತಿಗೆ ಹೋಲುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ನವೀಕರಿಸಿದ ಮಾದರಿ ಹೋಂಡಾ ಸಿಬಿಆರ್150ಆರ್ ಬೈಕ್ ಮುಂಭಾಗದ ಹೆಡ್‌ಲ್ಯಾಂಪ್ ಕ್ವಾಡ್-ಎಲ್ಇಡಿ ಸೆಟಪ್ ಅನ್ನು ಹೊಂದಿದೆ, ಜೊತೆಗೆ ಓರೆಯಾದ ವಿಸರ್ ಮತ್ತು ತೀಕ್ಷ್ಣವಾದ ಫೇರಿಂಗ್. ಇದು ಗೋಲ್ಡನ್-ಫಿನಿಶ್ಡ್ USD ಫ್ರಂಟ್ ಫೋರ್ಕ್‌ಗಳನ್ನು ಪಡೆದುಕೊಂಡಿದೆ, ಇದು ಅತ್ಯಂತ ಪ್ರೀಮಿಯಂ ಆಗಿ ಕಾಣುತ್ತದೆ. ಈ ಬೈಕ್ ಎಲ್ಇಡಿ ಟರ್ನ್ ಇಂಡಿಕೇಟರ್ಸ್ ನೀಡುತ್ತದೆ, ಜೊತೆಗೆ ನಯವಾದ ಟೈಲ್‌ಲೈಟ್. ಅದನ್ನು ಹೊರತುಪಡಿಸಿ, ಇದು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಬೈಕ್ ಅಪ್ಸ್ವಿಫ್ಟ್ ಎಕ್ಸಾಸ್ಟ್ ಅನ್ನು ಕೂಡ ಪಡೆಯುತ್ತದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ .ರೈಡಿಂಗ್ ಸ್ಥಾನವು ತುಂಬಾ ಬದ್ಧತೆಯಿಲ್ಲದೆ ಸ್ಪೋರ್ಟಿ ಆಗಿದೆ, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸೆಂಟರ್-ಸೆಟ್ ಫೂಟ್‌ಪೆಗ್‌ಗಳನ್ನು ಹೊಂದಿದೆ. ಮಲೇಷ್ಯಾ-ಸ್ಪೆಕ್ ಮಾದರಿಯು ಮ್ಯಾಟ್ ಚಾರ್ಕೋಲ್ ಗ್ರೇ ಮೆಟಾಲಿಕ್ ಮತ್ತು ಕ್ಯಾಂಡಿ ಸಿಂಟಿಲ್ಲೇಟ್ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿ ಇನ್ ಟ್ರೂಮೆಂಟ್ ಕ್ಲಸ್ಟರ್ ಸಂಪೂರ್ಣ ಡಿಜಿಟಲ್ LCD ಇನ್ ಟ್ರೂಮೆಂಟ್ ಕನ್ಸೋಲ್ ಆಗಿದ್ದು, ಇದರಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಇಂಧನ ಬಳಕೆ ರೀಡ್ಔಟ್ ಕೂಡ ಇರುತ್ತದೆ. ಬ್ರೇಕಿಂಗ್ ಸಿಸ್ಟಂ ಎರಡು ವ್ಹೀಲ್ ಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್‌ಎಸ್) ನ ಸುರಕ್ಷತಾ ಜಾಲವನ್ನು ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೊಸ ಶೋವಾ ಯುಎಸ್ಡಿ (ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್ಸ್) ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಮೊನೊಶಾಕ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಇದರಲ್ಲಿ ನೀಡಲಾಗಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿ 149 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 16.3 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 14.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಇಂಡೋನೇಷ್ಯಾ-ಸ್ಪೆಕ್ ಸಿಬಿಆರ್150ಆರ್ ಮಾದರಿಗೆ ಹೋಲಿಸಿದರೆ, ಇದು ಸುಮಾರು 1 ಬಿಹೆಚ್‍ಪಿ ಮತ್ತು 0.7 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ನಿರ್ವಹಿಸುತ್ತದೆ, ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಕ್ಲಚ್ ಲಿವರ್ ಅನ್ನು ನಿರ್ವಹಿಸಲು ಇದು ಶೇಕಡಾ 15 ರಷ್ಟು ಕಡಿಮೆ ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ. ಇದು ಅಗ್ರೇಸಿವ್ ಆಗಿ ಕೆಳಮುಖವಾಗಿ ಚಲಿಸುವಾಗ ವ್ಹೀಲ್-ಲಾಕಿಂಗ್ ಮತ್ತು ಜಿಗಿತವನ್ನು ತಡೆಯುತ್ತದೆಬೈಕು ಎರಡೂ ತುದಿಗಳಲ್ಲಿ 17 ಇಂಚಿನ ಚಕ್ರಗಳನ್ನು ಪಡೆಯುತ್ತದೆ, ಮುಂಭಾಗದಲ್ಲಿ 100/80 ಟೈರ್‌ಗಳು ಮತ್ತು ಹಿಂಭಾಗದಲ್ಲಿ 130/70 ಟೈರ್‌ಗಳು, ಇದು ಎರಡೂ ಟೈರ್‌ಗಳು ಟ್ಯೂಬ್‌ಲೆಸ್ ಆಗಿದೆ,

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ 2022ರ ಜನವರಿ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ವರದಿ ಪ್ರಕಾರ ಜಪಾನ್ ಮೂಲದ ದ್ವಿಚಕ್ರ ವಾಹನ ಕಂಪನಿ ಹೋಂಡಾಕಳೆದ ತಿಂಗಳು 354,209 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2021ರ ಜನವರಿ ತಿಂಗಳಿನಲ್ಲಿ ಹೋಂಡಾ ಕಂಪನಿಯು 437,183 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 20 ಪ್ರತಿಶತದಷ್ಟು ಕುಸಿತವಾಗಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಕಳೆದ ತಿಂಗಳು ಹೋಂಡಾ ಕಂಪನಿಯ ಮಾರಾಟವು 315,196 ಯುನಿಟ್‌ಗಳಷ್ಟಿದ್ದರೆ 39,013 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ರಫ್ತು ಸಂಖ್ಯೆಗಳು ನಿರ್ದಿಷ್ಟವಾಗಿ ಹೋಂಡಾ 2ವೀಲರ್ಸ್ ಇಂಡಿಯಾಕ್ಕೆ ಉತ್ತಮ ಪ್ರದರ್ಶನ ನೀಡಿದ್ದು, ಬ್ರ್ಯಾಂಡ್ ಕಳೆದ ತಿಂಗಳು ರಫ್ತಿನಲ್ಲಿ ಎರಡಂಕಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇನ್ನು ಸಾಂಕ್ರಾಮಿಕ ಸಮಯದಲ್ಲಿ ದ್ವಿಚಕ್ರ ವಾಹನ ವಲಯವು ಬೇಡಿಕೆಯಲ್ಲಿ ಕುಸಿತ ಕಂಡಿದೆ ಮತ್ತು ಇದು ಬಹುತೇಕ ಎಲ್ಲಾ ಪ್ರಮುಖ ತಯಾರಕರ ಮೇಲೆ ಪರಿಣಾಮ ಬೀರಿದೆ. ಬೆಳವಣಿಗೆಯ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವನ್ನು ಹೊರತುಪಡಿಸಿ, ರಾಯಲ್ ಎನ್‌ಫೀಲ್ಡ್, ಟಿವಿಎಸ್ ಮತ್ತು ಹೀರೋ 022ರ ಜನವರಿ ತಿಂಗಳ ಮಾರಾಟದಲ್ಲಿ ಕುಸಿತವನ್ನು ವರದಿ ಮಾಡಿದೆ.

ಭಾರತದಲ್ಲಿ ಹೊಸ ಸಿಬಿಆರ್150ಆರ್ ಸ್ಪೋರ್ಟ್ಸ್‌ಬೈಕ್‍‍ಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಕರೋನಾ ತ್ರೀವತೆ ಕಡಿಮೆಯಾಗುವುದರಿಂದ ಮುಂದಿನ ದಿನಗಳಲ್ಲಿ ವಾಹನಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು. ಅಲ್ಲದೇ ಮುಂದಿನ ದಿನಗಳಲ್ಲಿ ಹೋಂಡಾ ಕಂಪನಿಯು ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಿದೆ. ಹೋಂಡಾ ಸಿಬಿ150ಆರ್ ಸ್ಪೋರ್ಟ್ಸ್‌ಬೈಕ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಮಹಾ YZF-R15 v4 ಬೈಕಿಗೆ ಪೈಪೋಟಿ ನೀಡುತ್ತದೆ.

Article Published On: Saturday, February 12, 2022, 10:34 [IST]
English summary
Honda cbr150r sportsbike patent filed in india yamaha r15 v4 rival details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+