ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲೂ ತನ್ನ ಪ್ರಮುಖ ಮೋಟಾರ್‌ಸೈಕಲ್‌ಗಳ ಅಧಿಕೃತವಾಗಿ ಮಾರಾಟ ಆರಂಭಿಸಿದ್ದು, ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ಹೊಸ ವಾಹನಗಳು ರಿಯಾಯ್ತಿ ದರದಲ್ಲಿ ಮಾರಾಟಗೊಳ್ಳಲಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲಿ ಕೇಂದ್ರ ಸರ್ಕಾರವು ಸೇನಾಧಿಕಾರಿಗಳಿಗಾಗಿಯೇ ವಿಶೇಷ ರಿಯಾಯತಿ ದರದಲ್ಲಿ ಅಗತ್ಯ ಸಾಮಾಗ್ರಿಗಳ ಮಾರಾಟ ಮಾಡುವ ಸೌಲಭ್ಯವನ್ನು ಹೊಂದಿದ್ದು, ಹೋಂಡಾ ಮೋಟಾರ್‌ಸೈಕಲ್ ಕಂನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಹೊಸ ಒಪ್ಪಂದದೊಂದಿಗೆ ತನ್ನ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್ ಬೈಕ್ ಮಾದರಿಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುವ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್ ಬೈಕ್ ಮಾದರಿಗಳು ಸಾಮಾನ್ಯ ಡೀಲರ್ಸ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮಾದರಿಗಿಂತಲೂ ತುಸು ರಿಯಾಯ್ತಿ ದರದಲ್ಲಿ ಖರೀದಿ ಲಭ್ಯವಿರಲಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಿಎಸ್‌ಡಿ ಮಾರಾಟ ಮಳಿಗೆಯಲ್ಲಿ ಹೈನೆಸ್ ಸಿಬಿ350 ಮಾದರಿಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.70 ಲಕ್ಷದಿಂದ ಮತ್ತು ಸಿಬಿ350ಆರ್‌‌ಎಸ್ ಬೈಕ್ ಮಾದರಿಯ ಬೆಲೆಯನ್ನು ಆರಂಭಿಕವಾಗಿ ರೂ. 1.74 ಲಕ್ಷಕ್ಕೆ ದರ ನಿಗದಿ ಮಾಡಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಸಿಎಸ್‌ಡಿ ಮಾರಾಟ ಮಳಿಗೆಯಲ್ಲಿಯಲ್ಲಿರುವ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್ ಬೈಕ್ ಮಾದರಿಗಳು ಸಾಮಾನ್ಯ ಡೀಲರ್ಸ್‌ಗಳಿಂತಲೂ ರೂ. 25 ಸಾವಿರದಿಂದ ರೂ.30 ಸಾವಿರದಷ್ಟು ರಿಯಾಯ್ತಿ ದರ ಹೊಂದಿರಲಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸೇನಾಧಿಕಾರಿಗಳು ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಈ ರಿಯಾಯ್ತಿ ದರ ಅನ್ವಯಿಸುತ್ತದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಪ್ರಮುಖ ವಾಹನ ತಯಾರಕ ಕಂಪನಿಗಳು ಈಗಾಗಲೇ ಸಿಎಸ್‌ಡಿ ಮಾರಾಟ ಮಳಿಗೆಗಳ ಮೂಲಕ ವಿವಿಧ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್ ಬೈಕ್ ಮಾದರಿಗಳು ಸಹ ಖರೀದಿಗೆ ಲಭ್ಯವಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ನಮ್ಮ ಬೆಂಗಳೂರಿನಲ್ಲಿರುವ ಸಿಎಸ್‌ಡಿ ಕ್ಯಾಂಟಿನ್ ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿರುವ 35 ಮಾರಾಟ ಮಳಿಗೆಗಳಲ್ಲಿ ಹೋಂಡಾ ಬೈಕ್ ಖರೀದಿಗೆ ಲಭ್ಯವಿದ್ದು, ಪ್ರೀಮಿಯಂ ಫೀಚರ್ಸ್‌ಗಳು ಹೋಂಡಾ ಹೊಸ ಬೈಕ್ ಮಾದರಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಈ ಎರಡೂ ರೆಟ್ರೊ ಶೈಲಿಯ ಬೈಕ್‌ಗಳು ಆಕರ್ಷಕ ಮಾದರಿಗಳಾಗಿವೆ, ಸಿಬಿ350 ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು, ಹೋಂಡಾ ಕಂಪನಿಯು ಭಾರತದಲ್ಲಿ ಸಿಬಿ350 ಸರಣಿಯ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೈನೆಸ್ ಸಿಬಿ350 ಮತ್ತು ಸಿಬಿ350 ಆರ್‌‌ಎಸ್ ಬೈಕ್‌ಗಳು ಒಂದೇ ಮಾದರಿಯ 348.6ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಪಡೆದುಕೊಂಡಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಹೈನೆಸ್ ಸಿಬಿ350 ಮತ್ತು ಸಿಬಿ350 ಆರ್‌‌ಎಸ್ ಬೈಕ್‌ಗಳು 348.6ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ನೊಂದಿಗೆ 5,500 ಆರ್‌ಪಿಎಂನಲ್ಲಿ 20.78 ಬಿಹೆಚ್‌ಪಿ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ, ಇದು ಕ್ಲಚ್ ಲಿವರ್ ಕಾರ್ಯಾಚರಣೆಯ ಹೊರೆ ಕಡಿಮೆಮಾಡಿ ಗೇರ್ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಹೈನೆಸ್ ಸಿಬಿ350 ಬೈಕ್ ಬಗ್ಗೆ ಹೇಳುವುದಾದರೆ, ಇದು ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸುತ್ತದೆ. ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್‌ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಈ ಹೈನೆಸ್ ಸಿಬಿ350 ಬೈಕಿನಲ್ಲಿ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಣೆಯೊಂದಿಗೆ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ. ಇನ್ನು ಇದರಲ್ಲಿ ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದೆ. ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಈ ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಹೈನೆಸ್ ಸಿಬಿ350 ಬೈಕಿನಲ್ಲಿ 350ಸಿಸಿ ಸೆಗ್ಮೆಂಟಿನಲ್ಲಿ ಮೊದಲ ಬಾರಿಗೆ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದ್ದು, ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಇನ್ನು ಹೋಂಡಾ ಸಿಬಿ350 ಆರ್‌ಎಸ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಬೃಹತ್ ಫ್ಯೂಯಲ್ ಟ್ಯಾಂಕ್ 7-ವೈ ಆಕಾರದ ಅಲಾಯ್ ವ್ಹೀಲ್ ಗಳ ಮೇಲೆ ಹೋಂಡಾ ಬ್ಯಾಡ್ಜ್ ಅನ್ನು ಹೊಂದಿದೆ, ಇದರೊಂದಿಗೆ ದುಂಡಗಿನ ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ವಿಂಕರ್‌ಗಳು ಮತ್ತು ಅಂಡರ್ ಸೀಟ್ ನಯವಾದ ಎಲ್‌ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಹೋಂಡಾ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌‌ಎಸ್

ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹಗುರವಾದ ಬ್ಲ್ಯಾಕ್ ಫೆಂಡರ್ ಅನ್ನು ಸಹ ಪಡೆಯುತ್ತದೆ, ಇದು ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಸ್ಪೋರ್ಟಿ ಲುಕಿಂಗ್ ಗ್ರಾಬ್ ರೈಲ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಬಿ350 ಆರ್‌ಎಸ್ ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್--ಹೈಡ್ರಾಲಿಕ್ ಅನ್ನು ಪಡೆಯುತ್ತದೆ.

Article Published On: Thursday, February 17, 2022, 15:26 [IST]
English summary
Honda h ness cb350 and cb350rs now available at csd stores details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+