ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ: ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ, ಇದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವುದರಿಂದ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸುತ್ತಿದೆ.

ಬೇಡಿಕೆ ಹೆಚ್ಚಾಗುತಿದ್ದಂತೆ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕರಾದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ.

ಸದ್ಯ ಬಜಾಜ್‌ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದರ ನಡುವೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 2023ರ ಮೊದಲಾರ್ಧದಲ್ಲಿ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡುವುದರೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಈ ಹೆಸರನ್ನು ಬ್ರ್ಯಾಂಡ್‌ನಿಂದ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಮತ್ತು ಬಜಾಜ್ ಚೇತಕ್‌ನಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪ್ರತಿಸ್ಪರ್ಧಿಯಾಗಿರಬಹುದು.

ಈ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಆಕ್ಟಿವಾ ಎಲೆಕ್ಟ್ರಿಕ್ ಅವತಾರವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಇದರ ಬಗ್ಗೆ ಇನ್ನು ಸ್ಪಷ್ಟ ಮಾಹಿತಿಗಳು ಬಹಿರಂಗವಾಗಿಲ್ಲ. ಜಪಾನಿನ ಬ್ರ್ಯಾಂಡ್ ಪ್ರಸ್ತುತ ಜಪಾನ್‌ನ ಹೋಂಡಾ ಮೋಟಾರ್‌ಸೈಕಲ್‌ನ ಎಂಜಿನಿಯರ್‌ಗಳ ಸಹಯೋಗದೊಂದಿಗೆ ತಂಡವನ್ನು ರಚಿಸುವಲ್ಲಿ ಕೆಲಸ ಮಾಡುತ್ತಿದೆ. ಜಪಾನ್‌ನ ತಂಡವು ಬ್ರಾಂಡ್‌ಗೆ ಕೋರ್ ತಂತ್ರಜ್ಞಾನಗಳು ಮತ್ತು ಭಾರತೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಫ್ಲಾಟ್ ಫಾರ್ಮ್ ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರಾರಂಭಿಸುವ ಕಾರ್ಯಸಾಧ್ಯತೆಯನ್ನು ಮತ್ತು ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಿಸುವುದ ಬಗ್ಗೆ ಹೋಂಡಾ ಬ್ರ್ಯಾಂಡ್ ಆಂತರಿಕ ವಿಚಾರಣೆಗಳು ಮತ್ತು ಚರ್ಚೆಗಳನ್ನು ನಡೆಸಿತು. ಭಾರತೀಯ ಮಾರುಕಟ್ಟೆಗೆ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಉತ್ಪನ್ನವನ್ನು ವಿನ್ಯಾಸಗೊಳಿಸಲು ಜಪಾನ್‌ನಲ್ಲಿರುವ ತಂಡದೊಂದಿಗೆ ಇದೇ ರೀತಿಯ ಚರ್ಚೆಗಳನ್ನು ಮಾಡಲಾಗಿದೆ. ಉದ್ಯಮದ ತಜ್ಞರು 2017 ಮತ್ತು 2025ರ ನಡುವೆ ಭಾರತೀಯ ಎಲೆಕ್ಟ್ರಿಕ್ ಮಾರುಕಟ್ಟೆಯ 77% CAGR ಬೆಳವಣಿಗೆಯನ್ನು ಯೋಜಿಸಿದ್ದಾರೆ.

ದ್ವಿಚಕ್ರ ವಾಹನಗಳು ಪ್ರಸ್ತುತ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದೆ ಮತ್ತು ಮುಂದಿನ ದಿನಗಳಲ್ಲಿ ಹಲವು ಪಟ್ಟು ಬೆಳೆಯುವ ನಿರೀಕ್ಷೆಯಿದೆ. ಇನ್ನು ಹೋಂಡಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. 2025ರ ವೇಳೆಗೆ ಜಾಗತಿಕವಾಗಿ ಕನಿಷ್ಠ 10 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸುವ ಯೋಜನೆಯನ್ನು ಹೋಂಡಾ ಹೊಂದಿದೆ. ಆ 10 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಇಎಂಐ ಇ (EM1 e) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಒಂದಾಗಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2022 EICMA ಶೋನಲ್ಲಿ ಅನಾವರಣಗೊಳಿಸಲಾಗಿದೆ. ಈ ಇಎಂಐ ಇ ಎಲೆಕ್ಟ್ರಿಕ್ ಮೊಪೆಡ್‌ಗೆ ಚಿಕ್ಕದಾಗಿದೆ ಮತ್ತು ಇ: ಪ್ರತ್ಯಯವು ಹೋಂಡಾ ಮೊಬೈಲ್ ಪವರ್ ಪ್ಯಾಕ್ (MPP) ಅನ್ನು ಸೂಚಿಸುತ್ತದೆ. ಇಎಂಐ ಇ ಎಲೆಕ್ಟ್ರಿಕ್ ಮೊಪೆಡ್ ಎಂಪಿಪಿ ಪ್ಲಾಟ್‌ಫಾರ್ಮ್ ತೆಗೆಯಬಹುದಾದ ಬ್ಯಾಟರಿ ಪ್ಯಾಕ್‌ಗಳು ಮತ್ತು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗಳನ್ನು ಒಳಗೊಂಡಿದೆ, ಇದು ಹೋಂಡಾದ ಮುಂಬರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರಮುಖ ಮೂಲಸೌಕರ್ಯವಾಗಿ ಕಾರ್ಯನಿರ್ವಹಿಸುತ್ತದೆ.

ಹೋಂಡಾ ತನ್ನ ಎಂಟ್ರಿ ಲೆವೆಲ್ ಮಟ್ಟದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಿಕ್ಕ ಬ್ಯಾಟರಿ ಪ್ಯಾಕ್‌ಗಳ ಮೇಲೆ ಕೇಂದ್ರೀಕರಿಸುತ್ತಿದೆ. ಇವುಗಳನ್ನು ಬಳಸಲು ಸುಲಭ ಮತ್ತು ದೈನಂದಿನ ಪ್ರಯಾಣ ಮತ್ತು ದೈನಂದಿನ ನಗರ ಸ್ಪ್ರಿಂಟ್‌ಗಳಿಗೆ ಸಾಕಷ್ಟು ರೇಂಜ್ ಅನ್ನು ನೀಡುತ್ತವೆ. ಇನ್ನು ಹೋಂಡಾ ಕಂಪನಿಯು 2023ರ ಕೊನೆಯಲ್ಲಿ ಭಾರತದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ. ಭಾರತದಲ್ಲಿ ಬ್ಯಾಟರಿ-ಸ್ವಾಪ್ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ದೀರ್ಘಕಾಲ ಪರೀಕ್ಷಿಸುತ್ತಿದೆ. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

Most Read Articles

Kannada
English summary
Honda launching new electric scooter next year details
Story first published: Friday, November 25, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X