ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ನೋಡುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಸಜ್ಜಾಗುತ್ತಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಇತ್ತೀಚೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಿಬಿಆರ್ 150ಆರ್ ಪೇಟೆಂಟ್ ಪಡೆದಿದ್ದೇವೆ ಎಂದು ಹೇಳಿದ್ದರು, ಫೇರ್ಡ್ ಸೂಪರ್‌ಸ್ಪೋರ್ಟ್ ಸ್ಪರ್ಧಾತ್ಮಕವಾಗಿ ಬೆಲೆಯಿದ್ದರೆ ಯಮಹಾ ಆರ್15 ವಿ4 ಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದು ಆದರೆ ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದಿಲ್ಲ. ಇದೀಗ ಕಂಪನಿಯು ಸಿಆರ್‌ಎಫ್‌190ಎಲ್ ಅನ್ನು ಪೇಟೆಂಟ್ ಮಾಡಿದೆ. ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಬೈಕ್ ಚೀನಾದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಸಿಆರ್‌ಎಫ್‌1100ಎಲ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಸಿಆರ್‌ಎಫ್‌300ಎಲ್ ಡ್ಯುಯಲ್-ಸ್ಪೋರ್ಟ್ ಮೋಟಾರ್‌ಸೈಕಲ್‌ಗೆ ವಿನ್ಯಾಸ ಪೇಟೆಂಟ್‌ಗಳನ್ನು ಹೋಂಡಾ ಅನ್ವಯಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಹೋಂಡಾ ಸಿಆರ್‌ಎಫ್‌300ಎಲ್ ತನ್ನ ಜಾಗತಿಕ ಪ್ರಥಮ ಪ್ರದರ್ಶನವನ್ನು 2021 ರಲ್ಲಿ ಮಾಡಿತು ಮತ್ತು ಉದ್ದೇಶ-ನಿರ್ಮಿತ ನೋಟದೊಂದಿಗೆ ಹೆಚ್ಚು ಆಫ್-ರೋಡ್ ಆಧಾರಿತ ಮೋಟಾರ್‌ಸೈಕಲ್‌ನಂತೆ ಸಿಬಿ150ಎಕ್ಸ್ ಮೇಲೆ ಸ್ಥಾನ ಪಡೆದಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ವಿನ್ಯಾಸಕ್ಕೆ ಸಂಬಂಧಿಸಿದಂತೆ ಸಿಆರ್‌ಎಫ್‌190ಎಲ್ ಆಯತಾಕಾರದ ಆಕಾರದ ಹೆಡ್‌ಲ್ಯಾಂಪ್, ವೃತ್ತಾಕಾರದ-ಆಕಾರದ ಹಿಂಬದಿಯ ಮೀರರ್ಸ್, ಸಿಂಗಲ್-ಪೀಸ್ ಸೀಟ್ ಸೆಟಪ್, ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಮ್, ಗಟ್ಟಿಮುಟ್ಟಾದ ಗ್ರಾಬ್ ರೈಲು, ಎತ್ತರದ ವಿಂಡ್‌ಸ್ಕ್ರೀನ್, ಲಗೇಜ್ ರ್ಯಾಕ್, ಎಂಡ್ಯೂರೋ-ನೊಂದಿಗೆ ಡಾಕರ್-ಪ್ರೇರಿತ ಬಾಡಿ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಬಾಡಿ ಪ್ಯಾನೆಲ್‌ಗಳು, ಮಿಡ್ ಸೆಟ್ ಫುಟ್‌ಪೆಗ್‌ಗಳು, ನೇರವಾಗಿ ಹ್ಯಾಂಡಲ್‌ಬಾರ್ ಸ್ಥಾನೀಕರಣ, ಇತ್ಯಾದಿ ಅಂಶಗಳನ್ನು ಹೊಂದಿವೆ. ಹೋಂಡಾ ಸಿಆರ್‌ಎಫ್‌190ಎಲ್ 830 ಎಂಎಂ ಕೆಟಿಎಂ 390 ಅಡ್ವೆಂಚರ್ ಗಿಂತ 25 ಎಂಎಂ ಕಡಿಮೆಯಾಗಿದೆ. ಸಿಆರ್‌ಎಫ್‌190ಎಲ್ 240 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ ಮತ್ತು 145 ಕೆಜಿ ತೂಕವನ್ನು ಹೊಂದಿದೆ,

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೋಂಡಾ ಸಿಆರ್‌ಎಫ್‌190ಎಲ್ ಬೈಕಿನಲ್ಲಿ ಹಾರ್ನೆಟ್ 2.0 ಮಾದರಿಯಲ್ಲಿರುವ ಅದೇ 184 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹಂಚಿಕೊಳ್ಳುತ್ತದೆ. ಪವರ್‌ಟ್ರೇನ್ ಭಾರತಕ್ಕೆ ಆಗಮಿಸಿದ ನಂತರ 17.3 ಬಿಹೆಚ್‍ಪಿ ಪವರ್ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಐದು-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಬೈಕಿನಲ್ಲಿ ಡ್ಯುಯಲ್-ಪರ್ಪಸ್ ಟೈರ್‌ಗಳೊಂದಿಗೆ 19-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಸ್ಪೋಕ್ಡ್ ವೀಲ್‌ಗಳನ್ನು ಹೊಂದಿದೆ. ಇನ್ನು ಈ ಅಡ್ವೆಂಚರ್ ಬೈಕಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಸಿಆರ್‌ಎಫ್‌190ಎಲ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಕ್ಷನ್ ಇತ್ಯಾದಿಗಳು ಇತರ ಮುಖ್ಯಾಂಶಗಳಾಗಿವೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಇಂಡಿಯಾ ಕಂಪನಿಯು ತನ್ನ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬೆಲೆಯನ್ನು ರೂ.1.09 ಲಕ್ಷಗಳಷ್ಟು ಕಡಿತಗೊಳಿಸಿದೆ. ಈ ಭಾರಿ ಮೊತ್ತದ ಬೆಲೆ ಕಡಿತದ ಬಳಿಕ ಇದೀಗ ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.5.79 ಲಕ್ಷವಾಗಿದೆ. ಕಳೆದ ವರ್ಷ ಈ ಬೈಕ್ ಅನ್ನು ರೂ, 6.88 ಲಕ್ಷಕ್ಕೆ ಬಿಡುಗಡೆಗೊಳಿಸಿತ್ತು. ಆದರೆ ಬೆಲೆ ಹೆಚ್ಚಾದ ಕಾರಣ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿತ್ತು.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಇದರಿಂದ ಇದೀಗ ಹೋಂಡಾ ಕಂಪನಿಯು ಈ ಬೈಕಿನ ಬೆಲೆಯನ್ನು ಕಡಿತಗೊಳಿಸಿದೆ. ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ 471ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಹೊಸ ಹೋಂಡಾ ಅಡ್ವೆಂಚರ್ ಟೂರರ್ ಅನ್ನು ಬಿಗ್‌ವ್ಹಿಂಗ್ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, 150ಎಂಎಂ ಟ್ರ್ಯಾವೆಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 135 ಎಂಎಂ ಟ್ರಾವೆಲ್ ಯುನಿಟ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕ್‍‍ಗಾಗಿ ಪೇಟೆಂಟ್ ನೋಂದಾಯಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ಅಧ್ಯಕ್ಷ ಅಟ್ಸುಶಿ ಒಗಾಟಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬ್ರ್ಯಾಂಡ್ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಮುಂದಿನ ಹಣಕಾಸು ವರ್ಷದಲ್ಲಿ ದೇಶೀಯ ಮಾರುಕಟ್ಟೆಗೆ ತರಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ಹೊಸ ಹೋಂಡಾ ಸಿಆರ್‌ಎಫ್‌190ಎಲ್ ಅಡ್ವೆಂಚರ್ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಬಹಿರಂಗವಾಗಲಿದೆ.

Article Published On: Tuesday, March 1, 2022, 15:31 [IST]
English summary
Honda motorcycle filed patent for crf190l in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+