ಜನಪ್ರಿಯ ಹೋಂಡಾ CB300F ಬೈಕ್ ಬೆಲೆ ರೂ.50 ಸಾವಿರ ಕಡಿತ: ಗ್ರಾಹಕರಿಗೆ ಸುವರ್ಣವಕಾಶ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಡೀಲರ್‌ಗಳು ಹೋಂಡಾ CB300F ಬೈಕಿನ ಬೆಲೆಯಲ್ಲಿ ರೂ. 50,000 ಕಡಿತಗೊಳಿಸಿದೆ. ಈ ಹೊಂಡಾ ವರ್ಷಾಂತ್ಯದ ಕೊಡುಗೆಯ ಭಾಗವಾಗಿದೆ. ಈ ಹೊಸ ಹೊಂಡಾ CB300F ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ.
ಈ ಹೊಸ ಹೋಂಡಾ CB300F ಬೈಕಿನ ಎಕ್ಸ್ ಶೋರೂಂ ಪ್ರಕಾರ ರೂ. 1.75 ಲಕ್ಷವಾಗಿದೆ. ಇನ್ನು ಕರ್ನಾಟಕದಲ್ಲಿ ಈ ಬೈಕಿನ ಆನ್ ರೋಡ್ ಬೆಲೆಯು ಸುಮಾರು 2.2 ಲಕ್ಷವಾಗಿದೆ. 300cc ಮೋಟಾರ್‌ಸೈಕಲ್ ಖರೀದಿಸಲು ಬಯಸುವ ಹೋಂಡಾ ಅಭಿಮಾನಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 300 ಸಿಸಿ ವಿಭಾಗದಲ್ಲಿ ಪ್ರಮುಖ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಈ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಮಾದರಿಯು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೊ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈ ಹೊಸ ಬೈಕ್ ಮಾದರಿಯನ್ನು ತನ್ನ ಪ್ರೀಮಿಯಂ ಬೈಕ್ ಶೋರೂಂ ಹೋಂಡಾ ಬಿಗ್‌ವಿಂಗ್ ಮೂಲಕ ಮಾರಾಟ ಮಾಡುತ್ತಿದೆ. ಈ ಹೋಂಡಾ ಬೈಕ್ ಮಾದರಿಯು ಅಗ್ರೇಸಿವ್ ವಿನ್ಯಾಸ ಮತ್ತು ಸಾಕಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ನಿರ್ಮಾಣಗೊಂಡಿದೆ.
ಈ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್‌ನಲ್ಲಿ ಕಂಪನಿಯು 286 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.13 ಬಿಎಚ್‌ಪಿ ಪವರ್ ಮತ್ತು 25.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುಗಮ ಸವಾರಿಗಾಗಿ ಹೊಸ ಬೈಕಿನಲ್ಲಿ ಕಂಪನಿಯು ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಜೊತೆಗೆ ಆಕ್ರಮಣಕಾರಿ ವಿನ್ಯಾಸವನ್ನು ನೀಡಿದೆ. ಸುರಕ್ಷತೆಯನ್ನು ಸುಧಾರಿಸಲು ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ಜೊತೆಗೆ ಇದು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ನೀಡಿದೆ.
ಇದರೊಂದಿಗೆ ಇದು ಸ್ಪ್ಲಿಟ್ ಸೀಟ್ ಮತ್ತು ಗೋಲ್ಡನ್ ಫ್ರಂಟ್ ಸಸ್ಪೆನ್ಷನ್ ಅನ್ನು ಸಹ ಹೊಂದಿದೆ. ಇದು ಬೈಕಿನ ಹೊರ ನೋಟವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಇದರೊಂದಿಗೆ ಬೈಕಿನ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಹೊಸ ಬೈಕಿನ ವೈಶಿಷ್ಟ್ಯತೆಗಳ ಬಗೆಗೆ ಹೇಳುವುದಾದರೆ ಎಲ್ಲಾ ಕಡೆಗಳಲ್ಲೂ ಎಲ್ಇಡಿ ಲ್ಯಾಂಪ್ ಗಳನ್ನು ನೀಡಲಾಗಿದ್ದು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ.
ಬ್ಲೂಟೂತ್ ಸಂಪರ್ಕದ ಮೂಲಕ ಮಲ್ಟಿ ಕನೆಕ್ಟ್ ನಿರ್ವಹಿಸುವ ಹೋಂಡಾ ರೋಡ್‌ಸಿಂಕ್ ವೈಶಿಷ್ಟ್ಯವನ್ನು ಇದಕ್ಕೆ ನೀಡಲಾಗಿದ್ದು, ಈ ತಂತ್ರಜ್ಞಾನದ ಸಹಾಯದಿಂದ ನೀವು ಕರೆಗಳು, ಸಂದೇಶಗಳು, ಸಂಗೀತ, ನ್ಯಾವಿಗೇಷನ್ ಮತ್ತು ಹವಾಮಾನ ಮಾಹಿತಿಯನ್ನು ಪಡೆಯಬಹುದು. ಎಲ್ಲಾ ಮಾಹಿತಿಗಳನ್ನು ಪಡೆಯಲು ಮತ್ತು ನಿಯಂತ್ರಿಸಲು ಹ್ಯಾಂಡಲ್‌ನಲ್ಲಿರುವ ಸ್ವಿಚ್‌ನೊಂದಿಗೆ ನಿರ್ವಹಿಸಬಹುದಾಗಿದ್ದು, ಮಸ್ಕಲ್ಯೂರ್ ಡ್ಯುಯಲ್ ಟೋನ್ ಫ್ಯೂಲ್ ಟ್ಯಾಂಕ್ ಹೊ ಬೈಕಿಗೆ ಬಲಿಷ್ಠ ವಿನ್ಯಾಸ ನೀಡುತ್ತದೆ. ಇದರೊಂದಿಗೆ ಕಂಪ್ಯಾಕ್ಟ್ ಮಫ್ಲರ್ ಮತ್ತು ವಿ-ಆಕಾರದ ಅಲಾಯ್ ವ್ಹೀಲ್ ಗಳೊಂದಿಗೆ ಸ್ಪ್ಲಿಟ್ ಸೀಟ್ ಅನ್ನು ಪಡೆಯುತ್ತದೆ.
ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 5-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಪೆನ್ಶನ್ ಅನ್ನು ಪಡೆಯುತ್ತದೆ. ಇದು ಹಿಂಭಾಗದಲ್ಲಿ 150 ಎಂಎಂ ಅಗಲದ ರೇಡಿಯಲ್ ಟೈರ್‌ಗಳನ್ನು ಪಡೆಯುತ್ತದೆ. ಸವಾರನ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಹೋಂಡಾ ಬೈಕ್‌ನಲ್ಲಿ ಎಂಜಿನ್ ಸ್ಟಾರ್ಟ್ ಸ್ಟಾಪ್ ಸ್ವಿಚ್, ಟ್ಯಾಂಕ್ ಮೇಲ್ಭಾಗದಲ್ಲಿ ಕೀ, ಯುಎಸ್‌ಬಿ-ಸಿ ಫೋನ್ ಚಾರ್ಜರ್ ನೀಡಲಾಗಿದೆ.
ಹೋಂಡಾ ಸಿಬಿ300ಎಫ್ ಬೈಕ್ 14.1 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಒಟ್ಟು 153 ಕೆಜಿ ತೂಕ ವಿದೆ. ಈ ಬೈಕ್ 2084 ಎಂಎಂ ಉದ್ದ, 765 ಎಂಎಂ ಅಗಲ, 1075 ಎಂಎಂ ಎತ್ತರ ಮತ್ತು 1,390 ಎಂಎಂ ವ್ಹೀಲ್‌ಬೆಸ್ ಹೊಂದಿದೆ. ಈ ಬೈಕ್ ಟಿವಿಎಸ್ ಅಪಾಚೆ ಆರ್‌ಆರ್ 310 ಮಾದರಿಗೆ ಉತ್ತಮ ಪೈಪೋಟಿ ನೀಡುತ್ತದೆ. ಇನ್ನು ಈ ಬೈ ಸ್ಪೋರ್ಟ್ಸ್ ರೆಡ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.


Click it and Unblock the Notifications