ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಕಮ್ಯೂಟರ್ ಬೈಕ್ ಆವೃತ್ತಿಯಾದ ಶೈನ್ ಮಾದರಿಯಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಮಾಡಿದೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಹೊಸ ಶೈನ್ ಸೆಲೆಬ್ರೇಷನ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್ ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಶೈನ್ ಬೈಕ್ ಮಾದರಿಯು ತನ್ನ ವಿಭಾಗದ ಅತ್ಯುತ್ತಮ ಬೈಕ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೋಂಡಾ ಕಂಪನಿಯು ಇದೀಗ ಗ್ರಾಹಕರಿಗೆ ಹೊಸ ಆಯ್ಕೆ ನೀಡವುದಕ್ಕಾಗಿ ಶೈನ್ ಸೆಲೆಬ್ರೆಷನ್ ಎಡಿಷನ್ ಬಿಡುಗಡೆ ಮಾಡಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಶೈನ್ ಸೆಲೆಬ್ರೇಷನ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 78,878 ಬೆಲೆ ಹೊಂದಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಶೈನ್ ಮಾದರಿಗಿಂತ ರೂ. 1500 ದುಬಾರಿಯಾಗಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ವಿಶೇಷ ಮಾದರಿಯಲ್ಲಿ ಯಾವುದೇ ತಾಂತ್ರಿಕ ಬದಲಾವಣೆಗಳಿಲ್ಲದಿದ್ದರೂ ಹೊಸ ಫೀಚರ್ಸ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಸೌಲಭ್ಯಗಳು ಗ್ರಾಹಕರನ್ನು ವಿಶೇಷ ಆವೃತ್ತಿಯತ್ತ ಗಮನಸೆಳೆಯಲಿದ್ದು, ಅದರ ಆಕರ್ಷಕ ಗೋಲ್ಡನ್ ಥೀಮ್‌ನೊಂದಿಗೆ ಹೊಸ ನೋಟವನ್ನು ನೀಡುತ್ತದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಜೊತೆಗೆ ಗಮನಸೆಳೆಯುವ ಸ್ಟ್ರೈಪ್‌ಗಳು, ಗೋಲ್ಡನ್ ವಿಂಗ್ ಮಾರ್ಕ್ ಲಾಂಛನ, ಫ್ಯೂಲ್ ಟ್ಯಾಂಕ್ ಮೇಲೆ ಸೆಲೆಬ್ರೇಶನ್ ಎಡಿಷನ್ ಲೋಗೋ ಹೊಸ ಬೈಕಿಗೆ ಹೆಚ್ಚಿನ ಪ್ರೀಮಿಯಂ ಸ್ಟೈಲಿಂಗ್‌ ನೀಡಲಿದ್ದು, ಹೊಸ ಸ್ಯಾಡಲ್ ಬ್ರೌನ್ ಸೀಟ್ ಹೊಸ ಬೈಕಿಗೆ ಹೊಸ ಲುಕ್ ನೀಡುತ್ತದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ಇದರೊಂದಿಗೆ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮಫ್ಲರ್ ಕವರ್, ಸೈಡ್ ಕವರ್‌ನಲ್ಲಿ ಗೋಲ್ಡನ್ ಟಚ್ ನೀಡಿರುವುದು ಸೆಲೆಬ್ರೇಷನ್ ಮಾದರಿಗೆ ಉತ್ತಮ ವಿನ್ಯಾಸ ನೀಡಿದ್ದು, ಹೊಸ ಮಾದರಿಯು ಮುಂಬರುವ ಹಬ್ಬದ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬದ ಋತುಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಹೊಸ ವಾಹನಗಳ ಮಾರಾಟ ನೀರಿಕ್ಷಿಸಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ತನ್ನ ಪ್ರಮುಖ ಮಾದರಿಗಳಲ್ಲಿ ವಿಶೇಷ ಮಾದರಿಗಳನ್ನು ಪರಿಚಯಿಸುತ್ತಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ಹೋಂಡಾ ಶೈನ್ ಮಾದರಿಯು 123.94 ಸಿಸಿ ಎಂಜಿನ್ ಆಯ್ಕೆ ಹೊಂದಿದ್ದು, 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10.59 ಬಿಎಚ್‌ಪಿ ಮತ್ತು 11 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆಯ 125 ಸಿಸಿ ವಿಭಾಗದ ಬೈಕ್ ಮಾದರಿಯಾಗಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಬಿಡುಗಡೆಯಾಗಿದ್ದ ಶೈನ್ ಮಾದರಿಯು ಇದುವರೆಗೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೆ ಶೈನ್ ವಿವಿಧ ಸರಣಿಗಳು ಸುಮಾರು 1 ಕೋಟಿಗೂ ಅಧಿಕ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಹೊಸ ಸರಣಿಗಳೊಂದಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಇದರೊಂದಿಗೆ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿರುವ ಅಗ್ರಸ್ಥಾನದಲ್ಲಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಕಾರಣ ಹೊಸ ದರಪಟ್ಟಿ ಬಿಡುಗಡೆ ಮಾಡಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮಾದರಿಗಳಿಗೆ ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರನ್ನು ಹೊರತುಪಡಿಸಿ ಹೊಸದಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಹೊಸ ದರಗಳು ಅನ್ವಯಿಸಲಿದ್ದು, ವಿವಿಧ ಮಾದರಿಗಳನ್ನು ಆಧರಿಸಿ ಎಕ್ಸ್‌ಶೋರೂಂ ದರದಲ್ಲಿ ರೂ. 1 ಸಾವಿರದಿಂದ ರೂ. 17 ಸಾವಿರ ತನಕ ದರ ಹೆಚ್ಚಳವಾಗಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಆಟೋ ಬಿಡಿಭಾಗಗಳ ದರದಲ್ಲಿ ನಿರಂತರ ಹೆಚ್ಚಳ ಪರಿಣಾಮ ಹೊಸ ವಾಹನಗಳ ಬೆಲೆ ಹೆಚ್ಚುತ್ತಿದ್ದು, ಕಳೆದ ಏಪ್ರಿಲ್‌ನಲ್ಲಿ ದರ ಪರಿಷ್ಕರಣೆ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಮತ್ತೊಮ್ಮೆ ದರ ಹೆಚ್ಚಿಸಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಹೊಸ ದರ ಪಟ್ಟಿಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 150 ಸಿಸಿಯಿಂದ 350 ಸಿಸಿ ಬೈಕ್ ಮಾದರಿಗಳ ಬೆಲೆಯಲ್ಲಿ ಹೆಚ್ಚಿನ ಮಟ್ಟದ ದರ ಹೆಚ್ಚಿಸಿದ್ದು, ಸಿಬಿ200ಎಕ್ಸ್ ಅಡ್ವೆಂಚರ್ ಬೈಕ್ ಮಾದರಿಯು ಗರಿಷ್ಠ ರೂ. 17,200 ದರ ಹೆಚ್ಚಳ ಪಡೆದುಕೊಂಡಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಸಿಬಿ200ಎಕ್ಸ್ ನಂತರ ಹೈನೆಸ್ ಸಿಬಿ350, ಸಿಬಿ 350 ಸರಣಿಗಳು, ಎಕ್ಸ್-ಬ್ಲೇಡ್, ಎಸ್‌ಪಿ 125, ಹಾರ್ನೆಟ್, ಯುನಿಕಾನ್, ಲಿವೊ, ಸಿಡಿ110 ಮಾದರಿಗಳ ಬೆಲೆ ಹೆಚ್ಚಳವಾಗಿದ್ದು, ಬೆಲೆಗೆ ಅನುಗುಣವಾಗಿ ಶೇ. 5ರಿಂದ ಶೇ.14ರಷ್ಟು ಹೆಚ್ಚಿಸಲಾಗಿದೆ.

ವಿನೂತನ ವಿನ್ಯಾಸದ ಹೋಂಡಾ ಶೈನ್ ಹೊಸ ಸೆಲೆಬ್ರೇಷನ್ ಎಡಿಷನ್ ಬೈಕ್ ಬಿಡುಗಡೆ

ಸ್ಕೂಟರ್ ವಿಭಾಗದಲ್ಲಿ ಗ್ರಾಜಿಯಾ 125 ಸ್ಕೂಟರ್ ಮಾದರಿಯು ಗರಿಷ್ಠ ರೂ. 6,300 ದರ ಹೆಚ್ಚಳ ಪಡೆದುಕೊಂಡಿದ್ದು, ತದನಂತರ ಡಿಯೋ, ಆಕ್ವಿವಾ ಸರಣಿಗಳು ಕೂಡಾ ಹೆಚ್ಚಿನ ದರ ಪಡೆದುಕೊಂಡಿವೆ.

Most Read Articles

Kannada
English summary
Honda shine celebration edition launched details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X