ಹೊಸ ಹೋಂಡಾ ಶೈನ್ ಬೈಕ್ ಖರೀದಿ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್‌ಎಂಎಸ್‌ಐ) ತನ್ನ ಶೈನ್ ಬೈಕ್ ಮೇಲೆ ವಿಶೇಷ ಆಪರ್ ಗಳನ್ನು ಘೋಷಿಸಿದೆ. ಹೋಂಡಾ ಶೈನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.

ಹೋಂಡಾ ಶೈನ್ ಬೈಕಿನಲ್ಲಿ ಸೀಮಿತ ಅವಧಿಯಲ್ಲಿ, ಖರೀದಿದಾರರಿಗೆ ರೂ.5,999 ಡೌನ್ ಪೇಮೆಂಟ್, ರೂ.5,000 ವರೆಗೆ ಕ್ಯಾಶ್‌ಬ್ಯಾಕ್ ಆಫರ್ ಅಥವಾ ರೂ.5 ಲಕ್ಷ ಮೌಲ್ಯದ ವಿಮೆಯಂತಹ ಪ್ರಯೋಜನಗಳನ್ನು ಪಡೆಯಬಹುದು. ಈ ಎಲ್ಲಾ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಕನಿಷ್ಠ ರೂ,30,000 ಗಳ ವಹಿವಾಟಿನ ಮೊತ್ತಕ್ಕೆ ಶೇ,5 ಕ್ಯಾಶ್‌ಬ್ಯಾಕ್ ಅನ್ವಯಿಸುತ್ತದೆ. ಈ ಆಪರ್ ಗಳು, ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಎಂಐ ವಹಿವಾಟುಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಇನ್ನು ಹೋಂಡಾ ಜಾಯ್ ಕ್ಲಬ್ ಲಾಯಲ್ಟಿ ಸದಸ್ಯತ್ವದ ಖರೀದಿಯ ಮೇಲೆ ರೂ.5 ಲಕ್ಷ ವೈಯಕ್ತಿಕ ವಿಮಾ ಪ್ರಯೋಜನೆಯು ಕೂಡ ಲಭಿಸುತ್ತದೆ.

ಈ ಹೋಂಡಾ ಶೈನ್ ಮಾದರಿಯು ಬ್ರ್ಯಾಂಡ್‌ಗೆ ಹೆಚ್ಚು ಮಾರಾಟವಾಗುವ ಬೈಕ್ ಗಳಲ್ಲಿ ಒಂದಾಗಿದೆ. ಈ ಹೋಂಡಾ ಶೈನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1 ಕೋಟಿ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.

ಭಾರತದಲ್ಲಿ 125 ಸಿಸಿ ಬೈಕ್ ವಿಭಾಗದಲ್ಲಿ ಹೋಂಡಾ ಶೈನ್ ಮಾದರಿಯು ಅಗ್ರ ಸ್ಥಾನವನ್ನು ಹೊಂದಿದೆ. ಅಲ್ಲದೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅವರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಹೋಂಡಾ ಶೈನ್ ವರ್ಷದಿಂದ ವರ್ಷಕ್ಕೆ ಶೇ.29 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ.

ಅಲ್ಲದೇ ಬರೊಬ್ಬರಿ 1 ಕೋಟಿ ಗ್ರಾಹಕರ ಮೈಲಿಗಲ್ಲನ್ನು ತಲುಪಿದ ಮೊದಲ 125 ಸಿಸಿ ಬೈಕ್ ಇದಾಗಿದೆ.ಈ ಹೋಂಡಾ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಹೋಂಡಾ ಶೈನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಯುನಿಟ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಪ್ರಮುಖವಾಗಿ ಹೋಂಡಾ ಶೈನ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಗಿದೆ, ಇದರೊಂದಿಗೆ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.

ಈ ಜನಪ್ರಿಯ ಹೋಂಡಾ ಶೈನ್ ಬೈಕ್ ಅನ್ನು 2006 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2008 ರಲ್ಲಿ ಬಿಡುಗಡೆಯಾದ ಕೇವಲ ಎರಡು ವರ್ಷಗಳ ನಂತರ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ 125 ಸಿಸಿ ಬೈಕ್ ಎಂಬ ಖ್ಯಾತಿಯನ್ನು ಪಡೆದುಕೊಂಡಿತ್ತು.

ಹೋಂಡಾ ಶೈನ್ ಬೈಕ್ 50 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ತಲುಪಿದ ಮೊದಲ 125 ಸಿಸಿ ಬೈಕ್ ಕೂಡ ಇದೇ ಆಗಿದೆ. ಇದು 2020ರ ವೇಳೆಗೆ 90 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸಾಧಿಸಿದೆ ಮತ್ತು 90 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸಾಧಿಸಿದೆ ಮತ್ತು ಬರೊಬ್ಬರಿಗ 1 ಕೋಟಿ ಮಾರಾಟಾದ ಮೈಲಿಗಲ್ಲನ್ನು ಸಾಧಿಸಿತು.

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ನೋಡುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಕಂಪನಿಯು ಸಜ್ಜಾಗಿದೆ. ಇತ್ತೀಚೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಿಬಿಆರ್ 150ಆರ್ ಪೇಟೆಂಟ್ ಅನ್ನು ದಾಖಲಿದೆ ಎಂದು ಹೇಳಲಾಗುತ್ತಿದೆ. ಈ ಹೋಂಡಾ ಫೇರ್ಡ್ ಸೂಪರ್‌ಸ್ಪೋರ್ಟ್ ಸ್ಪರ್ಧಾತ್ಮಕವಾಗಿ ಬೆಲೆಯಿದ್ದರೆ ಯಮಹಾ ಆರ್15 ವಿ4 ಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದು ಆದರೆ ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಇನ್ನು ಬಹಿರಂಗವಾಗಿಲ್ಲ.

ಇದೀಗ ಹೋಂಡಾ ಕಂಪನಿಯು ಸಿಆರ್‌ಎಫ್190ಎಲ್ ಅನ್ನು ಪೇಟೆಂಟ್ ಮಾಡಿದೆ. ಈ ಹೆಸರಿನ ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಬೈಕ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಸಿಆರ್‌ಎಫ್1100ಎಲ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆದುಕೊಳ್ಳುತ್ತದೆ. ಈ ಹೋಂಡಾ ಸಿಆರ್‌ಎಫ್300ಎಲ್ ಡ್ಯುಯಲ್-ಸ್ಪೋರ್ಟ್ ಮೋಟಾರ್‌ಸೈಕಲ್‌ಗೆ ವಿನ್ಯಾಸ ಪೇಟೆಂಟ್‌ಗಳನ್ನು ಹೋಂಡಾ ಅನ್ವಯಿಸಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ,

ಒಟ್ಟಾರೆಯಾಗಿ ಹೋಂಡಾ ಶೈನ್ ಬೈಕ್ ಮಾದರಿಯು 1 ಕೋಟಿಗೂ ಹೆಚ್ಚು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಹೋಂಡಾ ಶೈನ್ ಮಾದರಿಯು ಪ್ರತಿ ಮಾರಾಟದಲ್ಲಿ ಕಂಪನಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲಿದೆ ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications