ಹೋಂಡಾ ಶೈನ್ VS ಹೀರೋ ಗ್ಲಾಮರ್ ಬೈಕ್ ನಡುವಿನ ಹೋಲಿಕೆಗಳು: ಬೆಸ್ಟ್ ಯಾವುದು ಗೊತ್ತಾ?

ಮಾರುಕಟ್ಟೆಯಲ್ಲಿ ಹೆಚ್ಚು ಜನರು ಇಷ್ಟಪಡುವ ಹೋಂಡಾ ಶೈನ್ - ಹೀರೋ ಗ್ಲಾಮರ್ ಹೆಚ್ಚಾಗಿ ಮೈಲೇಜ್ ಹಾಗೂ ಸ್ಟೈಲಿಷ್ ಲುಕ್‌ಗೆ ಜನಪ್ರಿಯವಾಗಿವೆ. ಈ ಎರಡು ಬೈಕುಗಳಲ್ಲಿ ಯಾವುದು ಅತ್ಯುತ್ತಮವಾಗಿ ಕಾಣಬಹುದು?

ಭಾರತದಲ್ಲಿ ಒಂದು ಅವಧಿಯಲ್ಲಿ ಬೈಕ್‌ನ ಆರಂಭಿಕ ಪವರ್ 100 ಸಿಸಿ ಇತ್ತು. ಆದರೆ ಇಂದು ಸಾಮಾನ್ಯವಾಗಿ ಜನರು ದೈನಂದಿನ ಬಳಕೆಗಾಗಿ 125 ಸಿಸಿ ಬೈಕನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಇವು ಪವರ್ ಹಾಗೂ ಮೈಲೇಜ್ ಎರಡನ್ನೂ ಸಮಾನವಾಗಿ ನೋಡಿಕೊಳ್ಳುತ್ತವೆ.

ಹೋಂಡಾ ಶೈನ್ VS ಹೀರೋ ಗ್ಲಾಮರ್ ಬೈಕ್ ನಡುವಿನ ಹೋಲಿಕೆಗಳು: ಬೆಸ್ಟ್ ಯಾವುದು ಗೊತ್ತಾ?

ಹಾಗಾಗಿ ಮಧ್ಯಮ ವರ್ಗದ ಜನತೆಗೆ 125 ಸಿಸಿ ಬೈಕ್‌ಗಳು ಮೊದಲ ಆಯ್ಕೆಯಾಗುವ ಮೂಲಕ ಸದ್ಯ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇದರಲ್ಲಿ ಸ್ಟೈಲಿಷ್ ಹಾಗೂ ಮೈಲೇಜ್ ಪ್ರೇರಿತ ಬೈಕ್‌ಗಳು ಎಂದಾಗ ಹೆಚ್ಚಾಗಿ ಕೇಳಿಬರುವ ಹೆಸರುಗಳೆಂದರೆ ಹೋಂಡಾ ಶೈನ್ ಹಾಗೂ ಹೀರೋ ಗ್ಲಾಮರ್ ಬೈಕ್‌ಗಳು. ಈ ಎರಡು ಬೈಕ್‌ಗಳು ಉತ್ತಮ ಮಾರಾಟದಲ್ಲಿರುವ ಪ್ರಸ್ತುದದ 125 ಸಿಸಿ ಬೈಕುಗಳಾಗಿವೆ. ಇವೆರಡರ ನಡುವಿನ ವಿನ್ಯಾಸ, ಎಂಜಿನ್, ಬೆಲೆ ನಡುವಿನ ವ್ಯತ್ಯಾಸದ ಮೂಲಕ ಯಾವುದು ಉತ್ತಮ ಎಂಬುದನ್ನು ತಿಳಿಯೋಣ.

ವಿನ್ಯಾಸ
ಹೀರೋ ಕಂಪನಿಯು ತನ್ನ ಗ್ಲಾಮರ್ ಬೈಕನ್ನು ಪರಿಚಯ ಮಾಡಿಕೊಂಡ ನಂತರ ಹೆಚ್ಚು ಬಾರಿ ಬದಲಾಗಿದೆ. ಪ್ರಸ್ತುತ ಮಾಡ್ರನ್ ಎಲ್ಇಡಿ ಹೈಟ್ಲೈಟ್, ಡ್ಯುಯಲ್ ಟೋನ್ ಕಲರ್ ಸ್ಕೀಮ್, ಅಂಗುಲರ್ ರಿಯಾರ್ ಎಂಟ್ ಅನ್ನು ನವೀಕರಣದ ಮೂಲಕ ಪಡೆದಿದೆ. ಆದರೆ ಶೈನ್ ಬೈಕಿನಲ್ಲಿ ದೊಡ್ಡ ಅಪ್ಡೇಟ್‌ಗಳು ಏನೂ ಬರಲಿಲ್ಲ, ಡಿಸೈನಿಗೆ ಹೊಂದಿಕೆಯಾಗುವವರೆಗೆ ಹೋಂಡಾ ಶೈನ್ ಪೈಕ್ ಸ್ವಲ್ಪ ಸರಳವಾಗಿ ಇರುತ್ತದೆ.

ಎಂಜಿನ್
ಎರಡು ಬೈಕ್‌ಗಳು 124 ಸಿಸಿ, ಸಿಂಗಿಲ್ ಸಿಲಿಂಡರ್, ಏರ್ ಕೂಲ್ಡು, ಫ್ಯೂಯಲ್ ಇಂಜೆಕ್ಷನ್ ಇಂಜಿನ್ ಅನ್ನು ಹೊಂದಿವೆ. ಗ್ಲಾಮರ್ ಬೈಕ್ 10.87 ಬಿಎಸ್ ಪವರ್, 10.6 ಎನ್ಎಂ ಟಾರ್ಕ್ ಸಾಮರ್ಥ್ಯವನ್ನು ತೋರಿಸುತ್ತದೆ. ಇನ್ನು ಶೈನ್ ಬೈಕ್ 10.7 ಪಿಎಸ್ ಪವರ್ 11 ಎನ್ಎಮ್ ಟಾರ್ಕ್ ಸಾಮರ್ಥ್ಯವನ್ನು ಹೊಂದಿದೆ. ಎರಡು ಬೈಕ್‌ಗಳ ಎಂಜಿನ್ ಅನ್ನು 5 ಸ್ಪೀಡ್ ಗೇರ್‌ ಬಾಕ್ಸ್ ಗೆ ಜೋಡಿಸಲಾಗಿದೆ.

ಬೆಲೆ
ಹೋಂಡಾ ಶೈನ್ ಬೈಕ್ ಬೆಲೆಯು ರೂ.78,414 ರಿಂದ ರೂ.83,914 ರ ಬೆಲೆಯಲ್ಲಿ ಲಭ್ಯವಿದ್ದರೆ, ಹೀರೋ ಗ್ಲಾಮರ್ ಬೈಕ್ ಬೆಲೆಯು ರೂ.78,018 ರಿಂದ ರೂ.84,138 ಬೆಲೆಗೆ ಖರೀದಿಗೆ ಲಭ್ಯವಿದೆ. ಎರಡು ಬೈಕ್‌ಗಳು ಬಹುತೇಕ ಒಂದೇ ಬೆಲೆ ಹೊಂದಿವೆ. ಆದರೆ ಹೀರೋ ಗ್ಲಾಮರ್ ಬೈಕ್ ಅದರ ನೋಟ, ವೈಶಿಷ್ಟ್ಯಗಳು ಮುಂತಾದ ವಿಷಯಗಳಲ್ಲಿ ಉತ್ತಮವಾಗಿ ಇರುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಮೈಲೇಜ್ ಹಾಗೂ ಸ್ಟೈಲಿಷ್‌ನೊಂದಿಗೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುವ ಬೈಕ್‌ಗಳು ಇವಾಗಿದ್ದು, ಪ್ರತಿ ತಿಂಗಳು ಉತ್ತಮ ಮಾರಾಟ ದಾಖಲಿಸುತ್ತಿವೆ. ಮೇಲೆ ತಿಳಿಸಿರುವ ಎಲ್ಲಾ ವಿಶೇಷತೆಗಳನ್ನು ಪರಿಶೀಲಿಸಿದ ಬಳಕ ಈ ಎರಡು ಬೈಕ್‌ಗಲ್ಲಿ ನಿಮಗೆ ಇಷ್ಟವಾದ ಬೈಕ್ ಯಾವುದು? ಎಂಬುದನ್ನು ಕಮೆಂಟ್‌ಗಳಲ್ಲಿ ತಿಳಿಸಿ. ಹೆಚ್ಚಿನ ಆಸಕ್ತಿಕರ ಸುದ್ದಿಗಳಿಗಾಗಿ ಕೆಳೆಗೆ ಸ್ಕ್ರಾಲ್ ಮಾಡಿ.

ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುವ ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಗ್ರಾಂ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Honda shine vs hero glamor bike comparisons
Story first published: Sunday, November 20, 2022, 9:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X