ಭಾರತದಲ್ಲಿ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಬೆಲೆ ರೂ.1 ಲಕ್ಷ ಕಡಿತ
ಹೋಂಡಾ ಇಂಡಿಯಾ ಕಂಪನಿಯು ತನ್ನ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬೆಲೆಯನ್ನು ರೂ.1.09 ಲಕ್ಷಗಳಷ್ಟು ಕಡಿತಗೊಳಿಸಿದೆ. ಈ ಭಾರಿ ಮೊತ್ತದ ಬೆಲೆ ಕಡಿತದ ಬಳಿಕ ಇದೀಗ ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.5.79 ಲಕ್ಷವಾಗಿದೆ.

ಕಳೆದ ವರ್ಷ ಈ ಬೈಕ್ ಅನ್ನು ರೂ, 6.88 ಲಕ್ಷಕ್ಕೆ ಬಿಡುಗಡೆಗೊಳಿಸಿತ್ತು. ಆದರೆ ಬೆಲೆ ಹೆಚ್ಚಾದ ಕಾರಣ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿತ್ತು. ಇದರಿಂದ ಇದೀಗ ಹೋಂಡಾ ಕಂಪನಿಯು ಈ ಬೈಕಿನ ಬೆಲೆಯನ್ನು ಕಡಿತಗೊಳಿಸಿದೆ. ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ 471ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಹೊಸ ಹೋಂಡಾ ಅಡ್ವೆಂಚರ್ ಟೂರರ್ ಅನ್ನು ಬಿಗ್‌ವ್ಹಿಂಗ್ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಇನ್ನು ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, 150ಎಂಎಂ ಟ್ರ್ಯಾವೆಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 135 ಎಂಎಂ ಟ್ರಾವೆಲ್ ಯುನಿಟ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನು ಈ ಹೊಸ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ (110/80 ಆಲ್-ಟೆರೈನ್ ಟೈರ್) ಮತ್ತು ಹಿಂಭಾಗದಲ್ಲಿ 17 ಇಂಚಿನ (160/60 ಆಲ್-ಟೆರೈನ್ ಟೈರ್) ಅಲಾಯ್ ವ್ಹೀಲ್ ಅನ್ನು ಕೂಡ ನೀಡಲಾಗಿದೆ.

ಇನ್ನು ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಕೂಡ ಒಳಗೊಂಡಿದೆ.

ಈ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಸ್ಟೆಪ್ ಅಪ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸಿಸ್ಟಂನಂತಹ ಫೀಚರ್ ಗಳೊಂದಿಗೆ ಇದು ಪೂರ್ಣ ಎಲ್ಇಡಿ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಳಗೊಂಡಿದೆ.

ಇನ್ನು ಹೋಂಡಾ ಹೊಸ 2022ರ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಅನಾವರಣಗೊಳಿಸಿದೆ. 2022ರ ನವೀಕರಣಗಳನ್ನು ಪಡೆದುಕೊಂಡಿರುವ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

2022ರ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಗಮನಾರ್ಹವಾದ ನವೀಕರಣವನ್ನು ಸ್ವೀಕರಿಸಿದೆ. ಈ ಮಾದರಿಯು ಹೊಸ ಪರ್ಲ್ ಆರ್ಗ್ಯಾನಿಕ್ ಗ್ರೀನ್ ಎಂಬ ಬಣ್ಣದ ಪಡೆದುಕೊಂಡಿವೆ. ಈ ಬೈಕ್ ಫ್ಯೂಯಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಹಿಂಭಾಗವನ್ನು ಕಪ್ಪು ಬಣ್ಣದಲ್ಲಿದೆ. ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಕೂಡ ಒಳಗೊಂಡಿದೆ,

ಈ ಬೈಕಿನ ದೊಡ್ಡ ನವೀಕರಣವೆಂದರೆ ಹೊಸ ಮುಂಭಾಗದ ಸಸ್ಪೆಂಕ್ಷನ್ ಆಗಿದೆ. ಇದು ಶೋವಾ SF-BPF ಇನ್ವರ್ಟಡ್ ಫೋರ್ಕ್‌ಗಳಿಂದ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಬದಲಾಯಿಸಲಾಗಿದೆ. ಎಸ್ಎಫ್ ಪ್ರತ್ಯೇಕ ಕಾರ್ಯವನ್ನು ಸೂಚಿಸುತ್ತದೆ ಆದರೆ 'BPF' ಬಿಗ್ ಪಿಸ್ಟನ್ ಫೋರ್ಕ್ಸ್ ಆಗಿದೆ. ಸೆಟಪ್ ಪ್ರೀಮಿಯಂ ಮತ್ತು ಹೆಚ್ಚು ದೊಡ್ಡ ಬೈಕ್ ಗಳಲಿ ಕಂಡುಬರುತ್ತದೆ.

ಹೊಸ ಸಸ್ಪೆಂಕ್ಷನ್ ಜೊತೆಗೆ, ಹೋಂಡಾ ಸಹ ಮುಂದಕ್ಕೆ ಹೋಗಿದೆ ಮತ್ತು ಮೋಟಾರ್‌ಸೈಕಲ್‌ನ ಬ್ರೇಕ್‌ಗಳನ್ನು ಪರಿಷ್ಕರಿಸಿದೆ. ಸಿಬಿ500ಎಕ್ಸ್ ಹಿಂದಿನ ಆವೃತ್ತಿಯು ಒಂದೇ 310mm ಡಿಸ್ಕ್ ಅನ್ನು ಬಳಸಿದರೆ, 2022 ಮಾದರಿಯು ಎಬಿಎಸ್ ಜೊತೆಗೆ ಮುಂಭಾಗದಲ್ಲಿ ಎರಡು 296ಎಂಎಂ ಡಿಸ್ಕ್ ಗಳನ್ನು ನೀಡುತ್ತದೆ. ಸಿಬಿ500ಎಕ್ಸ್ ತನ್ನ ಎಲ್ಲಾ ಪರಿಷ್ಕರಣೆಗಳನ್ನು ಮುಂಭಾಗದಲ್ಲಿಯೇ ಪಡೆದುಕೊಂಡಿದೆ. ಟೂರಿಂಗ್-ಕೇಂದ್ರಿತ ಮೋಟಾರ್‌ಸೈಕಲ್ ಈಗ ಹಗುರವಾದ ಮುಂಭಾಗದ ವ್ಹೀಲ್ ದೊಂದಿಗೆ ಬರುತ್ತದೆ. ಅದು ಮೋಟಾರ್‌ಸೈಕಲ್‌ನ ಒಟ್ಟು ತೂಕದ 1 ಕೆಜಿಯನ್ನು ಚೆಲ್ಲುತ್ತದೆ. ಇದು ಕ್ಯಾಸ್ಟ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆಯಾದ್ದರಿಂದ ಹೆಚ್ಚು ಆಕರ್ಷಕವಾಗಿದೆ.

ನವೀಕರಿಸಿದ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ, ಈ ಹಿಂದೆ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ಕಳೆದ ತಿಂಗಳು ಹೋಂಡಾ ದ್ವಿಚಕ್ರ ವಾಹನಗಳಲ ಮಾರಾಟದಲ್ಲಿ ಕುಸಿತವನ್ನು ಕಂಡಿತ್ತು. ಆದ್ರೆ ಇತ್ತೀಚೆಗೆ ಕರೋನಾ ತ್ರೀವತೆ ಕಡಿಮೆಯಾಗುವುದರಿಂದ ಮುಂದಿನ ದಿನಗಳಲ್ಲಿ ವಾಹನಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು.

ಅಲ್ಲದೇ ಮುಂದಿನ ದಿನಗಳಲ್ಲಿ ಹೋಂಡಾ ಕಂಪನಿಯು ಭಾರತದಲ್ಲಿ ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಿದೆ. ಇನ್ನು ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬೆನೆಲ್ಲಿ ಟಿಆರ್ಕೆ 502, ಸುಜುಕಿ ವಿ-ಸ್ಟ್ರೋಮ್ 650ಎಕ್ಸ್‌ಟಿ ಮತ್ತು ಕವಾಸಕಿ ವರ್ಸಿಸ್ 650 ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications