Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಳಿ ಹಬ್ಬದ ಪ್ರಯುಕ್ತ ಹೊಸ ಹೋಂಡಾ ಎಸ್‌ಪಿ 125 ಬೈಕ್ ಖರೀದಿ ಮೇಲೆ ಭರ್ಜರಿ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್‌ಎಂಎಸ್‌ಐ) ತನ್ನ ಎಸ್‌ಪಿ 125 ಬೈಕ್ ಮೇಲೆ ವಿಶೇಷ ಆಫರ್ ಗಳನ್ನು ಘೋಷಿಸಿದೆ. ಹೋಂಡಾ ಎಸ್‌ಪಿ 125 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.

ಹೊಸ ಹೋಂಡಾ ಎಸ್‌ಪಿ 125 ಬೈಕ್ ಖರೀದಿಸುವಾಗ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ, ಇದು ಗರಿಷ್ಠ ರೂ.5,000 ಆಗಿದೆ. ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಇಎಂಐನಲ್ಲಿ ಖರೀದಿಸುವ ಗ್ರಾಹಕರಿಗೆ ಮಾತ್ರ ಕ್ಯಾಶ್‌ಬ್ಯಾಕ್ ನೀಡಲಾಗುವುದು ಎಂಬುದು ಗಮನಿಸಬೇಕಾದ ಸಂಗತಿ. ಆಫರ್ ಪಡೆಯಲು, ಕನಿಷ್ಠ 30,000 ರೂಪಾಯಿ ವಹಿವಾಟು ನಡೆಸಬೇಕು. ಈ ಕೊಡುಗೆಗಳ ಜೊತೆಗೆ, ಕಂಪನಿಯು ಗ್ರಾಹಕರಿಗೆ ಹೋಂಡಾ ಜಾಯ್ ಕ್ಲಬ್ ಲಾಯಲ್ಟಿ ಸದಸ್ಯತ್ವದ ಖರೀದಿಯೊಂದಿಗೆ ರೂ.ಲಕ್ಷದ ವೈಯಕ್ತಿಕ ವಿಮಾ ರಕ್ಷಣೆಯನ್ನು ಪಡೆಯಲು ಅವಕಾಶವನ್ನು ನೀಡುತ್ತಿದೆ.

ಇನ್ನು ಆಫರ್‌ನ ಅಡಿಯಲ್ಲಿ, ಹೋಂಡಾ ಎಸ್‌ಪಿ 125 ಬೈಕ್ ಅನ್ನು ಕನಿಷ್ಠ ರೂ.5,999 ಗಳ ಡೌನ್ ಪಾವತಿಯೊಂದಿಗೆ ಖರೀದಿಸಬಹುದು. ಈ ಹೊಸ ಹೋಂಡಾ ಎಸ್‌ಪಿ 125 ಬೈಕ್ ಮೇಲೆ ನೀಡಿರುವ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.

ಈ ಹೋಂಡಾ ಎಸ್‌ಪಿ 125 ಬೈಕಿನ ಬಗ್ಗೆ ಹೇಳುವುದಾದರೆ, 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಹೋಂಡಾ ಎಸ್‌ಪಿ 125 ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಸ್‌ಪಿ 125 ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍ಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಈ ಹೋಂಡಾ ಎಸ್‌ಪಿ 125 ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್/ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍ಗಳನ್ನು ಸಹ ಹೊಂದಿದೆ.

ಈ ಹೋಂಡಾ ಎಸ್‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಬೈಕ್ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಈ ಎಸ್‌ಪಿ 125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್‍ಗಳಿವೆ. ಈ ಬೈಕಿನಲ್ಲಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಗಳನ್ನು ಹೊಂದಿವೆ.

ಹೋಂಡಾ ಎಸ್‍ಪಿ 125 ಬೈಕಿನಲ್ಲಿ 18 ಇಂಚಿನ ವ್ಹೀಲ್‍ಗಳಿದ್ದು, ಎರಡೂ ಬದಿಯಲ್ಲಿ 80/100 ಟಯರ್ ಪ್ರೊಫೈಲ್‌ಗಳಿವೆ. ಇನ್ನು ಈ ಬೈಕಿನಲ್ಲಿ ಹೆಚ್‌ಇಟಿ (ಹೋಂಡಾ ಇಕೋ ಟೆಕ್ನಾಲಜಿ) ಯನ್ನು ಹೊಂದಿದೆ. ಇದು ಮೈಲೇಜ್ ಅನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಹೋಂಡಾ ತನ್ನ 2022ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ 2022ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಅಗ್ರೇಸಿವ್ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. 2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನ ಮ್ಯಾನುವಲ್ ರೂಪಾಂತರದ ಬೆಲೆಯು ರೂ.16.01 ಲಕ್ಷಗಳಾದರೆ, ಡ್ಯುಯಲ್-ಕ್ಲಚ್ (ಡಿಸಿಟಿ) ಆಟೋಮ್ಯಾಟಿಕ್ ರೂಪಂತರದ ಬೆಲೆಯು ರೂ.17.55 ಲಕ್ಷವಾಗಿದೆ.

ಈ ಎಲ್ಲಾ ಬೆಲೆಗಳು ಬಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಕ್ ತಯಾರಕರು 7 ನಗರಗಳಾದ್ಯಂತ ಇರುವ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಮ್‌ಗಳಲ್ಲಿ ಅಥವಾ ಬಿಗ್‌ವಿಂಗ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಎರಡೂ ಮಾದರಿಗಳಿಗೆ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಮಾರ್ಗದ ಮೂಲಕ ದೇಶಕ್ಕೆ ತರಲಾಗುತ್ತದೆ. ಈ ಹೊಸ ಆವೃತ್ತಿಯೊಂದಿಗೆ ಉತ್ತಮ ಪ್ರೇಕ್ಷಕರನ್ನು ಸೆಳೆಯಲು ಜಪಾನಿನ ತಯಾರಕರು ನಿರೀಕ್ಷಿಸುತ್ತಾರೆ. ಈ 2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನಲ್ಲಿ 1082.96 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ.

ಕಳೆದ ತಿಂಗಳು ಹೋಂಡಾ ಕಂಪನಿಯು 2022ರ ಫೆಬ್ರವರಿ ತಿಂಗಳಿನಲ್ಲಿ 3,12,621 ಯುನಿಟ್ ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 4,42,696 ಯುನಿಟ್‌ಗಳಿಗೆ ಹೋಲಿಸಿದರೆ. 29 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿದೆ. ಇದರಿಂದ ಈ ರೀತಿಯ ಆಫರ್ ಗಳು ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.