ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ 2022ರ ಮಾರ್ಚ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ ಜಪಾನ್ ಮೂಲದ ದ್ವಿಚಕ್ರ ವಾಹನ ಕಂಪನಿ ಹೋಂಡಾ ಕಳೆದ ತಿಂಗಳು ಒಟ್ಟು 3,21,343 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಕಳೆದ ವರ್ಷದ ಮಾರ್ಚ್ ತಿಂಗಳ ಒಟ್ಟು ಮಾರಾಟಕ್ಕೆ ಹೋಲಿಸಿದರೆ ಶೇಕಡಾ 2.8 ರಷ್ಟು ಹೆಚ್ಚಾಗಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 3,09,549 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಮಾರಾಟವು ಕಳೆದ ತಿಂಗಳಿಗಿಂತ ಶೇಕಡಾ 8.3 ರಷ್ಟು ಏರಿಕೆ ಕಂಡಿದೆ. ಇನ್ನು ಹೋಂಡಾ ಕಂಪನಿಯು ಕಳೆದ ತಿಂಗಳಿನಲ್ಲಿ 11,794 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ.ಜಪಾನಿನ ಬೈಕ್ ತಯಾರಕರ ರಫ್ತು ಫೆಬ್ರವರಿಗಿಂತ 56.2 ರಷ್ಟು ಕಡಿಮೆಯಾಗಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹಣಕಾಸು ವರ್ಷ 2021-22 ರ ಕಂಪನಿಯ ಮಾರಾಟದ ಅಂಕಿಅಂಶಗಳ ಕುರಿತು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಯದ್ವಿಂದರ್ ಸಿಂಗ್ ಗುಲೇರಿಯಾ ಮಾತನಾಡಿ, ಹಣಕಾಸು ವರ್ಷ 2021-22 ಒಂದು ವಿಶೇಷ ವರ್ಷವಾಗಿದ್ದು, ನಾವು 5 ಕೋಟಿ ಗ್ರಾಹಕರ ಐಕಾನಿಕ್ ಹೆಗ್ಗುರುತನ್ನು ಆಚರಿಸಿದ್ದೇವೆ,

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಇದು ಹೋಂಡಾ ಬ್ರ್ಯಾಂಡ್‌ನಲ್ಲಿನ ಭಾರತದ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಮತ್ತಷ್ಟು ಸಂತೋಷಪಡಿಸುವ ಮೂಲಕ, ಹೋಂಡಾದ ಶೈನ್ ಬ್ರ್ಯಾಂಡ್ ಮತ್ತೊಮ್ಮೆ ಬಲಪಡಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ HMSI ರಫ್ತು ಸಾಮರ್ಥ್ಯಗಳನ್ನು ಅನ್ಲಾಕ್ ಮಾಡುವುದರಿಂದ, ನಾವು ಬಲವರ್ಧಿತ ಸಕಾರಾತ್ಮಕತೆಯೊಂದಿಗೆ ಮುಂದುವರಿಯುತ್ತೇವೆ. ಮುಂಬರುವ ಆರ್ಥಿಕ ವರ್ಷದಲ್ಲಿ ನಾವು ಮೇಲ್ಮುಖ ಬೆಳವಣಿಗೆಯ ಪಥವನ್ನು ಎದುರು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ 2ವೀಲರ್ಸ್ ಇಂಡಿಯಾ 2021-22ರ ಹಣಕಾಸು ವರ್ಷವನ್ನು 37,99,680 ಯುನಿಟ್‌ಗಳು ಮಾರಾಟ ಮಾಡುವುದರೊಂದಿಗೆ ಮುಕ್ತಾಯಗೊಳಿಸಿತು, ಅದರಲ್ಲಿ 3,30,852 ರಫ್ತುಗಳಾಗಿವೆ. ಈ ರಫ್ತು ಅಂಕಿಅಂಶವು ಹಣಕಾಸು ವರ್ಷ 2020 -21 ಕ್ಕಿಂತ 58% ಹೆಚ್ಚಾಗಿದೆ, ಆದರೆ ಹಣಕಾಸಿನ ವರ್ಷದಲ್ಲಿ ದೇಶೀಯ ಮಾರಾಟವು 34,68,828 ಯುನಿಟ್‌ಗಳಷ್ಟಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ವಾಹನಗಳ ರಫ್ತಿನಲ್ಲಿ 30 ಲಕ್ಷದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿತು. ಈ ಹೋಂಡಾ ಕಂಪನಿಯು 21 ವರ್ಷಗಳ ಕಾರ್ಯಾಚರಣೆಯಲ್ಲಿ 30 ಲಕ್ಷ ಯುನಿಟ್ ಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಜಪಾನಿನ ತಯಾರಕರು 2001 ರಲ್ಲಿ ಐಕಾನಿಕ್ ಹೋಂಡಾ ಆಕ್ಟಿವಾದೊಂದಿಗೆ ರಫ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ 15 ಲಕ್ಷ ಮೈಲಿಗಲ್ಲನ್ನು ದಾಟಿದರು. ಉಳಿದಂತೆ ಹೋಂಡಾ ಕಂಪನಿಯು ತನ್ನ ಮುಂದಿನ 15 ಲಕ್ಷ ರಫ್ತುಗಳು ಕಳೆದ ಐದು ವರ್ಷಗಳಲ್ಲಿ ಸಾಧಿಸಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಇದು ಹಿಂದಿನದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಭಾರತೀಯ ನಿರ್ಮಿತ ಮಾಡೆಲ್ ಶ್ರೇಣಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿರುವ ಸಮಯದಲ್ಲಿ ರಫ್ತುಗಳಲ್ಲಿನ ಏರಿಕೆಯು ಸಹ ಕಂಡು ಬರುತ್ತಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಗಮನಾರ್ಹವಾಗಿ, ಹೋಂಡಾ 2ವೀಲರ್ಸ್ ಇಂಡಿಯಾ ತನ್ನ ಜಾಗತಿಕ ರಫ್ತು ಹೆಜ್ಜೆಗುರುತನ್ನು ಇತರ ಮಾರುಕಟ್ಟೆಗಳ ನಡುವೆ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಾದ ಯುಎಸ್, ಜಪಾನ್, ಯುರೋಪ್‌ಗಳಿಗೆ ವಿಸ್ತರಿಸಲು ಹೊಸ 'ಸಾಗರೋತ್ತರ ವ್ಯಾಪಾರ ವಿಸ್ತರಣೆ'ಯನ್ನು ಸ್ಥಾಪಿಸಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ವರ್ಟಿಕಲ್ ಹೋಂಡಾವು ಭಾರತದಲ್ಲಿ ಜಾಗತಿಕ ಎಂಜಿನ್‌ಗಳ ತಯಾರಿಕೆಯನ್ನು ಗುಜರಾತ್‌ನ ವಿಠಲಾಪುರ ಘಟಕದಲ್ಲಿ ಪ್ರಾರಂಭಿಸಿತು, ಇದು 250ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಮೋಟಾರ್‌ಸೈಕಲ್ ಎಂಜಿನ್‌ಗಳನ್ನು ತಯಾರಿಸುತ್ತದೆ. ಹೋಂಡಾ ಜಾಗತಿಕವಾಗಿ 29 ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ ಮತ್ತು ಇದು 18 ದ್ವಿಚಕ್ರ ವಾಹನಗಳನ್ನು ಒಳಗೊಂಡಿದೆ. ಹೋಂಡಾ ಡಿಯೊ ಕಂಪನಿಯ ಸ್ಥಿರತೆಯಲ್ಲಿ ಭಾರತದಿಂದ ಹೆಚ್ಚು ರಫ್ತು ಮಾಡಲಾದ ಕೊಡುಗೆಯಾಗಿದೆ. ಕಳೆದ ವರ್ಷ, ಭಾರತದಲ್ಲಿ ತಯಾರಿಸಿದ ಹೋಂಡಾ ನವಿ ಯುಎಸ್‌ನಲ್ಲಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿತು, ಇದನ್ನು ಮೂಲತಃ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಆದರೆ ಲ್ಯಾಟಿನ್ ಅಮೆರಿಕದಲ್ಲಿ ದೊಡ್ಡ ಹಿಟ್ ಆಗಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಶೈನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1 ಕೋಟಿ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಈ ವರ್ಷದ ಆರಂಭದಲ್ಲಿ ಸಾಧಿಸಿದೆ. ಹೋಂಡಾ ಶೈನ್ ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಮೋಟಾರ್‌ಸೈಕಲ್ ಆಗಿದೆ. ಇದು ಭಾರತದಲ್ಲಿ 125 ಸಿಸಿ ಬೈಕ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ. ಅಲ್ಲದೇ ಹೋಂಡಾ ಶೈನ್ ಶೇಕಡಾ 50 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಹೋಂಡಾ ಶೈನ್ ವರ್ಷದಿಂದ ವರ್ಷಕ್ಕೆ 29 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ ಮತ್ತು ಈಗ 1 ಕೋಟಿ ಗ್ರಾಹಕರ ಮೈಲಿಗಲ್ಲನ್ನು ತಲುಪಿದ ಮೊದಲ 125 ಸಿಸಿ ಬೈಕ್ ಆಗಿದೆ.

ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ನೋಡುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಸಜ್ಜಾಗುತ್ತಿದೆ. ಈ ಹೊಸ ಮಾದರಿಗಳು ಮಾರಾಟದಲ್ಲಿ ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
Honda two wheeler march 2022 sales 2 8 percent growth details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X