ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ರಾಯಲ್ ಎನ್‌ಫೀಲ್ಡ್ ಕಂಪನಿಯು ಅಂತಿಮವಾಗಿ ತನ್ನ ಬಹುನಿರೀಕ್ಷಿತ ಹಂಟರ್ 350 ಮೋಟಾರ್‌ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮಾದರಿಯು ರಾಯಲ್ ಎನ್‌ಫೀಲ್ಡ್ ಲೈನ್‌ಅಪ್‌ನಲ್ಲೇ ಅತಿ ಕಡಿಮೆ ರೂ.1.49 ಲಕ್ಷ ಎಕ್ಸ್‌ ಶೋರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಡಿಸೈನ್ ಕುರಿತು ಮಾತನಾಡುವುದಾದರೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಅನ್ನು ಯುವಕರನ್ನು ಗುರಿಯಾಗಿಸಿಕೊಂಡು ಡಿಸೈನ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ರಾಯಲ್‌ ಎನ್‌ಫೀಲ್ಡ್‌ ಮಾದರಿಗಳನ್ನು ಖರೀದಿಸುವುದು ಬಡ, ಮಧ್ಯಮ ವರ್ಗಗಳಿಗೆ ತುಸು ಕಷ್ಟವಾಗಿರುವ ಕಾರಣ, ಇದೀಗ ಹಂಟರ್ 350 ರೂ.1.49 ಲಕ್ಷ ಎಕ್ಸ್‌ ಶೋರೂಂ ಬೆಲೆಗೆ ಲಭ್ಯವಿದ್ದು, ಎಲ್ಲರಿಗೂ ಕೈಗೆಟುಕುವಂತಿದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಬಿಡುಗಡೆಯ ಬಳಿಕ ಇದು ವಿವಿಧ ಮೋಟಾರ್‌ಸೈಕಲ್‌ಗಳೊಂದಿಗೆ ಸ್ಪರ್ಧಿಸಬೇಕಿದೆ. ಈ ಬಗ್ಗೆ ಹೇಳುವುದಾದರೆ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ಗೆ ಮಾರುಕಟ್ಟೆಯಲ್ಲಿ ಹೋಂಡಾ CB350RS, Jawa 42 ಮತ್ತು TVS ರೋನಿನ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಈ ಎಲ್ಲಾ ಮೋಟಾರ್‌ಸೈಕಲ್‌ಗಳು ಬಹುತೇಕ ಒಂದೇ ರೀತಿಯ ಡಿಸೈನ್ ಹೊಂದಿವೆ. ರೌಂಡ್ ಷೇಪ್ ಹೆಡ್‌ಲ್ಯಾಂಪ್, ಟಿಯರ್-ಡ್ರಾಪ್-ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ರೌಂಡ್ ರಿಯರ್‌ವ್ಯೂ ಮಿರರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬಹುತೇಕ ಒಂದೇ ಆಗಿವೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದರೆ, ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ತನ್ನ ಸ್ಪರ್ಧಿಗಳಿಗಿಂತ ದೊಡ್ಡ 349cc ಎಂಜಿನ್ ಅನ್ನು ಹೊಂದಿದೆ. ನಂತರ ಕ್ರಮವಾಗಿ ಹೋಂಡಾ CB350RS, Jawa 42, ಮತ್ತು TVS ರೋನಿನ್ ಬರುತ್ತವೆ. ಅತ್ಯಂತ ಶಕ್ತಿಶಾಲಿ ಎಂಜಿನ್ ಜಾವಾ 42 ನಲ್ಲಿ ಕೂಡ ಇದೆ. ಈ ಮೋಟರ್‌ಸೈಕಲ್‌ಗಳು ಟಾರ್ಕ್ ವಿಷಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

Specs Hunter 350 Ronin Jawa 42 CB350RS
Engine cc 349 cc 225.9 cc 293 cc 348.36 cc
Engine Type Air-Oil Cooled, Fi Air-Oil Cooled, Fi Liquid Cooled Air Cooled
Power 21 PS 6100 RPM 20.4 PS 7750 RPM 28 PS 21 PS 5500 RPM
Torque 27 Nm 4000 RPM 19.93 Nm 3750 RPM 27.05 Nm 30 Nm 3000 RPM
Transmission 5-speed 5-speed 6-speed 5-speed
Wheelbase mm 1370 1357 1369 1441
Ground Clearance 150.5 181 165 168
Seat Ht Rider 800 795 765 800
Kerb Wt kgs 177-181 160 172 179
Fuel Tank Litres 13 14 14 15
Front Tyre 110/70-17 110/70-17 90/90-18 100/90-19
Rear Tyre 140/70-17 130/70-17 120/80-17 150/70-17
Front Disc 300 mm 300 mm 280 mm 310 mm
Rear Disc 270 mm 240 mm Drum 240 mm
ABS Single / Dual Single / Dual Single / Dual Dual Channel
Front Suspension Telescopic USD Telescopic Telescopic
Rear Suspension Twin Shockers Mono Twin Shockers Twin Shockers
Headlight Halogen LED Halogen LED
Taillight Halogen / LED LED LED LED
Instrument Cluster Analog / Digital Digital Semi Digital Semi-Digital
Bluetooth App Optional Yes No Yes
USB Charger - - No No
Ride Modes No Yes No No
Bluetooth Optional Yes No Yes
Price Range, Ex-Delhi - ₹1.49 Lakh - ₹1.70 Lakh ₹1.74 Lakh - ₹1.96 Lakh ₹2.03 Lakh
ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಈ ಎಲ್ಲಾ ಮೋಟಾರ್‌ಸೈಕಲ್‌ಗಳಲ್ಲಿ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಹೆಚ್ಚು ಟಾರ್ಕ್ ಅನ್ನು ಹೊಂದಿದೆ. ಆದರೆ ಅದಕ್ಕಿಂತ ಹೆಚ್ಚು ಟಾರ್ಕ್ ಅನ್ನು ಹೋಂಡಾ CB350RS ಹೊಂದಿದ್ದು, ಇದು 30Nm ಪೀಕ್ ಟಾರ್ಕ್‌ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಪೀಕ್ ಟಾರ್ಕ್ ಅನ್ನು ಅತ್ಯಂತ ಕಡಿಮೆ 3,000rpm ನಲ್ಲಿ ಉತ್ಪಾದಿಸಬಲ್ಲದು. ಇದು ಹೋಂಡಾ CB350RS ಗೆ ಅತ್ಯಂತ ಶ್ರಮವಿಲ್ಲದ ರೈಡ್ ಅನುಭವವನ್ನು ನೀಡುತ್ತದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಈ ಎಲ್ಲಾ ಮೋಟಾರ್‌ಸೈಕಲ್‌ಗಳು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬಂದರೆ, ಜಾವಾ 42 ಹೆಚ್ಚುವರಿ ಕಾಗ್ ಅನ್ನು ಹೊಂದಿದೆ. ಇದು ಜಾವಾ 42ಗೆ ತೆರೆದ ರಸ್ತೆಗಳಲ್ಲಿ ಇತರ ಮೋಟಾರ್‌ಸೈಕಲ್‌ಗಳಿಗಿಂತ ಹೆಚ್ಚುವರಿ ಎಡ್ಜ್ ಅನ್ನು ನೀಡುತ್ತದೆ. ಇದರ ಗೇರ್‌ಬಾಕ್ಸ್ ಪವರ್‌ಟ್ರೇನ್‌ನ ಸ್ಪೋರ್ಟಿಯಾಗಿರಿಸಲು ಇದು ಸಹಕರಿಸುತ್ತದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಈ ಎಲ್ಲಾ ಮೋಟಾರ್‌ಸೈಕಲ್‌ಗಳು ಒಂದೇ ರೀತಿಯ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿರುವುದರಿಂದ, ಈ ಮೋಟಾರ್‌ಸೈಕಲ್‌ಗಳ ಡೈಮೆನ್ಷನ್‌ಗಳು (ಆಯಾಮಗಳು) ಸಹ ಪರಸ್ಪರ ಹತ್ತಿರದಲ್ಲಿವೆ. TVS ರೋನಿನ್ ಕೇವಲ 1,357mm ವ್ಹೀಲ್‌ಬೇಸ್‌ನೊಂದಿಗೆ ಈ ಗುಂಪಿನಲ್ಲಿರುವ ಚಿಕ್ಕ ಮೋಟಾರ್‌ಸೈಕಲ್ ಆಗಿದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಟಿವಿಎಸ್ ರೋನಿನ್ ಈ ಗುಂಪಿನ ಅತ್ಯಂತ ಹಗುರವಾದ ಮೋಟಾರ್‌ಸೈಕಲ್ ಆಗಿದ್ದು, ಕೇವಲ 160 ಕೆ.ಜಿ ತೂಕವಿದೆ. ಈ ಗುಂಪಿನಲ್ಲಿನ ನಂತರದ ಹಗುರವಾದ ಮೋಟಾರ್‌ಸೈಕಲ್ ಜಾವಾ 42 ಇದ್ದು ನಂತರ ಕ್ರಮವಾಗಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೋಂಡಾ CB350RS ಬರುತ್ತವೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಈ ಮೋಟಾರ್‌ಸೈಕಲ್‌ಗಳನ್ನು ಸಾಂದರ್ಭಿಕ ಪ್ರವಾಸದ ಉದ್ದೇಶಗಳಿಗಾಗಿಯೂ ಬಳಸಲಾಗುವುದರಿಂದ, ಈ ಎಲ್ಲಾ ಮೋಟಾರ್‌ಸೈಕಲ್‌ಗಳು ಸಾಕಷ್ಟು ದೊಡ್ಡ ಇಂಧನ ಟ್ಯಾಂಕ್‌ಗಳನ್ನು ಹೊಂದಿವೆ. ಹೋಂಡಾ CB350RS ನಲ್ಲಿ ಸುಸಜ್ಜಿತವಾದ 15-ಲೀಟರ್ ಇಂಧನ ಟ್ಯಾಂಕ್, ಜಾವಾ 42 ಮತ್ತು TVS ರೋನಿನ್‌ನಲ್ಲಿ 14-ಲೀಟರ್ ಇಂಧನ ಟ್ಯಾಂಕ್ ಇದ್ದರೆ, ಗುಂಪಿನಲ್ಲಿ 13-ಲೀ.ನ ಅತ್ಯಂತ ಚಿಕ್ಕ ಇಂಧನ ಟ್ಯಾಂಕ್ ಹೊಂದುವ ಮೂಲಕ ರಾಯಲ್ ಎನ್‌ಫೀಲ್ಡ್ ಹಂಟರ್ 350 ಕೊನೆಯಲ್ಲಿದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಈ ಎಲ್ಲಾ ಮೋಟಾರ್‌ಸೈಕಲ್‌ಗಳು ಆಧುನಿಕ ವಾಹನಗಳಾಗಿದ್ದರೂ, ಟಿವಿಎಸ್ ರೋನಿನ್ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ USD ಫೋರ್ಕ್‌ಗಳನ್ನು ಹೊಂದಿರುವ ಏಕೈಕ ಮೋಟಾರ್‌ಸೈಕಲ್ ಆಗಿದೆ. ಎಲ್ಲಾ ಇತರ ಮೋಟಾರ್‌ಸೈಕಲ್‌ಗಳು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಅಲ್ಲದೇ LED ಹೆಡ್‌ಲೈಟ್‌ಗಳು, LED ಟೈಲ್ ಲ್ಯಾಂಪ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ರೈಡ್ ಮೋಡ್‌ಗಳಂತಹ ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗೆ ಟಿವಿಎಸ್ ರೋನಿನ್ ಈ ಗುಂಪಿನಲ್ಲಿರುವ ಏಕೈಕ ಮೋಟಾರ್‌ಸೈಕಲ್ ಆಗಿದೆ. ಬೆಲೆಗೆ ಸಂಬಂಧಿಸಿದಂತೆ, ರಾಯಲ್ ಎನ್‌ಫೀಲ್ಡ್ ಮತ್ತು ಟಿವಿಎಸ್ ತಮ್ಮ ಮೋಟಾರ್‌ಸೈಕಲ್‌ಗಳ ಆರಂಭಿಕ ಬೆಲೆಯನ್ನು ಕೇವಲ 1.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ನೀಡಿವೆ. ಹೋಂಡಾ CB350RS 2.03 ಲಕ್ಷ ಬೆಲೆಯೊಂದಿಗೆ ಈ ಗುಂಪಿನಲ್ಲಿ ಅತ್ಯಂತ ದುಬಾರಿಯಾಗಿದೆ.

ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ನ ಬೆಲೆಯನ್ನು ಸ್ಪಷ್ಟವಾಗಿ ನಿಗದಿಪಡಿಸಿದ್ದು, ಈ ಮೋಟಾರ್‌ಸೈಕಲ್ ದೇಶದಲ್ಲಿ ಹೆಚ್ಚು ಮಾರಾಟವಾಗುವ 350cc ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಇನ್ನು ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಮೂಲಗಳು ಹೇಳುತ್ತಿವೆ.

Most Read Articles

Kannada
English summary
Hunter 350 Honda CB350RS Java 42 TVS Ronin Which is the best
Story first published: Tuesday, August 9, 2022, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X