Just In
- just now
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- News
ಪಾಟ್ನಾ: ಡ್ರಗ್ ಇನ್ಸ್ಪೆಕ್ಟರ್ ಮನೆ ಮೇಲೆ ದಾಳಿ: ನೋಟು ಎಣಿಸಲು ಯಂತ್ರ ಆರ್ಡರ್
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಗ್ರಾಹಕರಿಂದ ಆರ್ಡರ್ ಪಡೆದು 1.35 ಲಕ್ಷ ಕಾರುಗಳನ್ನು ಬಾಕಿ ಉಳಿಸಿಕೊಂಡ ಹ್ಯುಂಡೈ: ಕಾರಣ ಇಲ್ಲಿದೆ
ವಿಶ್ವ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಾರು ತಯಾರಕ ಕಂಪನಿಗಳು ಕಳೆದ 2-3 ವರ್ಷಗಳಿಂದ ತಮ್ಮ ವಾಹನಗಳ ಪೂರೈಕೆಗೆ ಗ್ರಾಹಕರ ಕಾಯುವ ಅವಧಿಯನ್ನು ಹಿಂದೆಂದೂ ಇಲ್ಲದಂತೆ ಹೆಚ್ಚಿಸಿವೆ. ಇದಕ್ಕೆ ಪ್ರಮುಖ ಕಾರಣ ಸೆಮಿಕಂಡಕ್ಟರ್ (ಅರೆವಾಹಕ) ಕೊರತೆಯಾಗಿದೆ. ಭಾರತೀಯ ಆಟೋಮೊಬೈಲ್ ವಲಯದಲ್ಲೂ ಸೆಮಿಕಂಡಕ್ಟರ್ ಪೂರೈಕೆ ಬಹುತೇಕ ಸ್ಥಗಿತಗೊಂಡಿತ್ತು.

ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆಯಾದರೂ, ಇನ್ನೂ ಉತ್ಪಾದನೆಯ ಕೊರತೆಯನ್ನು ಹಲವು ಕಂಪನಿಗಳು ಎದುರಿಸುತ್ತಿವೆ. ಮುಖ್ಯವಾಗಿ ಹ್ಯುಂಡೈ ಇಂಡಿಯಾ ಸುಮಾರು 1.35 ಲಕ್ಷ ಯುನಿಟ್‌ಗಳ ಆರ್ಡರ್ ಅನ್ನು ಗ್ರಾಹಕರಿಗೆ ತಲುಪಿಸಲು ಹೆಣಗಾಡುತ್ತಿರುವುದಾಗಿ ತಿಳಿಸಿದೆ.

ಜಾಗತಿಕ ಸೆಮಿಕಂಡಕ್ಟರ್ ಬಿಕ್ಕಟ್ಟಿನಿಂದಾಗಿ ಇನ್ನೂ ಉತ್ಪಾದನೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಹ್ಯುಂಡೈ ಬಹಿರಂಗಪಡಿಸಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಾಹನಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ವಾಹನಗಳಲ್ಲಿ ಹೆಚ್ಚುತ್ತಿರುವ ಹೊಸ ತಂತ್ರಜ್ಞಾನದ ಬಳಕೆಯಿಂದ ಸೆಮಿಕಂಡಕ್ಟರ್‌ಗಳ ಬೇಡಿಕೆ ಹೆಚ್ಚುತ್ತಿದೆ.

ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಪೂರೈಕೆಯ ಕೊರತೆಯಿಂದಾಗಿ, ಸೆಮಿಕಂಡಕ್ಟರ್‌ಗಳನ್ನು ತಯಾರಿಸುವ ಕಂಪನಿಗಳು ಉತ್ಪಾದನೆಯನ್ನು ಕಡಿಮೆಗೊಳಿಸಿವೆ, ಇದರಿಂದಾಗಿ ಪ್ರಪಂಚದಾದ್ಯಂತದ ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಭಾರತದಲ್ಲಿ ಈ ಹಿಂದೆ ಅನೇಕ ವಾಹನ ತಯಾರಕರು ಸೆಮಿಕಂಡಕ್ಟರ್ ಕೊರತೆ ಬಗ್ಗೆ ಗ್ರಾಹಕರಿಗೆ ವಿವರಣೆ ನೀಡಿದ್ದರು.

ಹ್ಯುಂಡೈ ಹೊರತುಪಡಿಸಿ, ಮಹೀಂದ್ರಾ, ರೆನಾಲ್ಟ್ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳು ಸಹ ಉತ್ಪಾದನೆಯಲ್ಲಿ ಕಡಿತ ಮತ್ತು ದೀರ್ಘ ಕಾಯುವ ಅವಧಿಯನ್ನು ಈ ಹಿಂದೆ ವರದಿ ಮಾಡಿದ್ದವು. ಇತ್ತೀಚಿನ ದಿನಗಳಲ್ಲಿ ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ಹ್ಯುಂಡೈ ಹೇಳಿದೆ.

ಸೆಮಿಕಂಡಕ್ಟರ್‌ನ ಕೆಲಸವೇನು?
ಸೆಮಿಕಂಡಕ್ಟರ್‌ಗಳು ಸಿಲಿಕಾನ್‌ನಿಂದ ಮಾಡಿದ ಎಲೆಕ್ಟ್ರಾನಿಕ್ ಚಿಪ್‌ಗಳಾಗಿವೆ. ಕಾರುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿನ ಕರೆಂಟ್ ಅನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಕಾರುಗಳಿಗೂ ಇವು ನಿರ್ಣಾಯಕವಾಗಿದ್ದು, ಸೆಮಿಕಂಡಕ್ಟರ್‌ಗಳಿಲ್ಲದೇ ಕಾರುಗಳನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

ಪ್ರಸ್ತುತ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕಾರುಗಳನ್ನು ಹೈಟೆಕ್ ತಂತ್ರಜ್ಙಾನದೊಂದಿಗೆ ನಿರ್ಮಿಸಲು ಇವು ಪ್ರಮುಖ ಪಾತ್ರ ವಹಿಸುತ್ತವೆ. ಡಿಸ್ಪ್ಲೇ ಪ್ಯಾನೆಲ್‌ಗಳು, ನ್ಯಾವಿಗೇಷನ್, ಲೈಟ್‌ಗಳು, ಪವರ್ ಸ್ಟೀರಿಂಗ್ ಮತ್ತು ಬಹುತೇಕ ಎಲ್ಲಾ ಸ್ವಯಂಚಾಲಿತ ವೈಶಿಷ್ಟ್ಯಗಳಿಗಾಗಿ ಕಾರ್‌ಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ.

ಇಂತಹ ನಿರ್ಣಾಯಕ ಚಿಪ್‌ಗಳ ಕೊರತೆಯಿಂದಾಗಿ, ಆಟೋಮೊಬೈಲ್ ಉದ್ಯಮವು ಭಾರೀ ಹಿನ್ನಡೆ ಅನುಭವಿಸಿದೆ. ಆದ್ದರಿಂದ ಕಾರುಗಳನ್ನು ನಿಗದಿತ ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿಲ್ಲ. ಇದೇ ಕಾರಣಕ್ಕೆ ಸೆಮಿಕಂಡಕ್ಟರ್ ನೆಪದಲ್ಲಿ ಹಲವು ಕಂಪನಿಗಳು ಇತ್ತೀಗೆ ವಾಹನಗಳ ಬೆಲೆ ಕೂಡ ಏರಿಸಿವೆ.

ಏಕೆ ಸೆಮಿಕಂಡಕ್ಟರ್ ಕೊರತೆಯಿದೆ
ಸೆಮಿಕಂಡಕ್ಟರ್ ಚಿಪ್‌ನಲ್ಲಿ ನೂರಾರು ವಿವಿಧ ರೀತಿಯ ಸರ್ಕ್ಯೂಟ್‌ಗಳಿವೆ. ಇದೀಗ ಉತ್ತಮ ಗುಣಮಟ್ಟದ ಚಿಪ್‌ಗಳನ್ನು Qualcomm Inc. ಮತ್ತು Intel Corp ನಂತಹ ಕಂಪನಿಗಳು ಪೂರೈಸುತ್ತವೆ. ಆದಾಗ್ಯೂ, ಜಾಗತಿಕ ಕೊರೊನಾವು ಕಂಪನಿಗಳ ಚಿಪ್‌ಗಳ ಪೂರೈಕೆಯನ್ನು ಅಡ್ಡಿಪಡಿಸಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಅರೆವಾಹಕಗಳನ್ನು ಉತ್ಪಾದಿಸಲು ಈ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ.

ಇದಲ್ಲದೆ, ಸ್ಮಾರ್ಟ್‌ಫೋನ್‌ಗಳು, ಟಿವಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸೆಮಿಕಂಡಕ್ಟರ್‌ಗಳ ಬೇಡಿಕೆ ಹೆಚ್ಚಾಗಿದೆ, ಚಿಪ್ ಉತ್ಪಾದನಾ ಕಂಪನಿಗಳಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ, ಕಾರುಗಳಲ್ಲಿ ಬಳಸುವ ಕೆಲವು ಸೆಮಿಕಂಡಕ್ಟರ್ ಚಿಪ್‌ಗಳ ಬೆಲೆ ಹೆಚ್ಚಾಗಿದೆ. ಕಾರುಗಳಲ್ಲಿನ ಡಿಸ್ಪ್ಲೇ ಡ್ರೈವರ್ ಚಿಪ್‌ಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ, ಇದನ್ನು ಟಿವಿಗಳು, ಲ್ಯಾಪ್‌ಟಾಪ್‌ಗಳು, ಕಾರುಗಳು ಮತ್ತು ವಿಮಾನಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ.

ಈಗ ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಪವರ್ ಮ್ಯಾನೇಜ್‌ಮೆಂಟ್ ಚಿಪ್‌ಗಳ ಕೊರತೆಯೂ ಇದೆ. ಇದು ವಿಶ್ವ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಫೋರ್ಡ್ ಮೋಟಾರ್ ಕಂಪನಿ, ನಿಸ್ಸಾನ್ ಮೋಟಾರ್ ಕಂಪನಿ, ಫೋಕ್ಸ್ ವ್ಯಾಗನ್ ಎಜಿ ಮೊದಲಾದ ಕಂಪನಿಗಳು ಉತ್ಪಾದನೆಯನ್ನು ಕಡಿತಗೊಳಿಸಬೇಕಾಗಿದೆ. ಅಂದಾಜಿನ ಪ್ರಕಾರ, ಈ ಚಿಪ್ನ ಪೂರೈಕೆಯ ಕೊರತೆಯಿಂದಾಗಿ ವಿಶ್ವದ ಕಾರು ಉದ್ಯಮವು ಈ ವರ್ಷ $ 60 ಶತಕೋಟಿ ಕಳೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸದ್ಯ ಸೆಮಿಕಂಡಕ್ಟರ್‌ಗಳು ವಾಹನ ಉದ್ಯಮದ ಮೇಲೆ ಹಿಡಿತವನ್ನು ಸಾಧಿಸಿವೆ. ಇವುಗಳಿಲ್ಲದೇ ಯಾವುದೇ ಡಿಜಿಟಲ್ ಕಾರುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ವಾಹನ ತಯಾರಕರು ಕೂಡ ಆಂಡ್ರಾಯ್ಡ್, ಆಪಲ್ ಕಾರ್ಪ್ಲೇ, ಡಿಜಿಟಲ್ ಕ್ಲಸ್ಟರ್‌ನಂತಹ ಅಪ್ಡೇಟೆಡ್ ವರ್ಷನ್‌ಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರು ಕೂಡ ಇವುಗಳಿಲ್ಲದ ಕಾರುಗಳನ್ನು ಕೊಳ್ಳಲು ಮುಂದಗುತ್ತಿಲ್ಲ. ಸದ್ಯ ಸೆಮಿಕಂಡಕ್ಟರ್‌ಗಳನ್ನು ಸ್ಥಳೀಯವಾಗಿ ನಿರ್ಮಿಸಲು ಭಾರತೀಯ ಕೆಲ ಕಂಪನಿಗಳು ಮುಂದಗಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಹನ ಉದ್ಯಮಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.