YouTube

ಭಾರತದಲ್ಲಿನ ಅತಿದೊಡ್ಡ ಬೈಕಿಂಗ್ ಉತ್ಸವ 'TVS MotoSoul' ಡೇಟ್ ಅನೌನ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಸಿದ್ಧ ವಾಹನ ತಯಾರಕರಾದ ಟಿವಿಎಸ್ ಕಂಪನಿ 'TVS MotoSoul' ಬೈಕಿಂಗ್ ಉತ್ಸವವನ್ನು ಜನವರಿ 03 ಮತ್ತು 04, 2023ರಂದು ಆಯೋಜಿಸುತ್ತಿದೆ. ಇದು ಅತಿದೊಡ್ಡ ಕಾರ್ಯಕ್ರಮವಾಗಿದ್ದು, ಗೋವಾದ ಹಿಲ್‌ಟಾಪ್ ವ್ಯಾಗೇಟರ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಉತ್ಸವಕ್ಕಾಗಿ ಬೈಕ್ ಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದಾರೆ.

'TVS MotoSoul 2023' ಒಂದು ಅತ್ಯಾಕರ್ಷಕ ಎರಡು ದಿನಗಳ ಮೋಟಾರ್‌ಸೈಕಲ್ ಮ್ಯೂಸಿಕ್ ಫೆಸ್ಟಿವಲ್ ಆಗಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಸಮಾರಂಭದಲ್ಲಿ ಮೋಟೋ ಕ್ರಾಸ್ ಫಿಟ್, ಡರ್ಟ್ ರೇಸ್ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೆ, ಪೆಟ್ರೋನಾಸ್ ಟಿವಿಎಸ್ ರೇಸಿಂಗ್‌ನ ಸ್ಟಂಟ್ ರೈಡರ್‌ಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಲೈವ್ ಕ್ಯಾನ್ವಾಸ್ ಪೇಂಟಿಂಗ್ ಮತ್ತು ಸಂಗೀತ ಪ್ರದರ್ಶನಗಳು ಸಹ ಅದ್ದೂರಿಯಾಗಿ ನಡೆಯಲಿವೆ.

'TVS MotoSoul' ಈವೆಂಟ್ ಮೂಲಕ ಪ್ರಪಂಚದಾದ್ಯಂತದ ಸಂಸ್ಕೃತಿ ಮತ್ತು ಜೀವನಶೈಲಿ ಇತ್ಯಾದಿಗಳ ಸಮ್ಮಿಲನವಾಗಲು ಅವಕಾಶ ದೊರೆಯುತ್ತದೆ. ಈ ವರ್ಷ TVS MotoSoul ಬೈಕಿಂಗ್ ಉತ್ಸವದಲ್ಲಿ ದೇಶ-ವಿದೇಶಗಳ ವಿವಿಧ ಗಣ್ಯರಿಂದ ಟೆಕ್ ಮಾತುಕತೆಗಳು ಸಹ ನಡೆಯುತ್ತದೆ. ಇದು ಗ್ರಾಹಕರು, ಆಟೋಮೊಬೈಲ್ ಪ್ರಿಯರು ಮತ್ತು ಉತ್ಸಾಹಿಗಳು ತಮ್ಮ ಜೀವಮಾನದ ಅನುಭವಗಳನ್ನು ಹಂಚಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಖಂಡಿತವಾಗಿಯೂ ವಾಹನ ಪ್ರಿಯರಿಗೆ ತುಂಬಾ ಉಪಯುಕ್ತವಾಗುತ್ತದೆ. ಇವೆಲ್ಲವನ್ನೂ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತದೆ.

ಎರಡು ದಿನಗಳ ಅತ್ಯಾಕರ್ಷಕ TVS MotoSoul ಈವೆಂಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಮತ್ತು DJಗಳು ರೋಮಾಂಚಕ ಸಂಗೀತ ಪ್ರದರ್ಶನಗಳನ್ನು ನೀಡಲಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಪ್ರಸಿದ್ಧ ಸಂಗೀತಗಾರರ ಹಾಡುಗಳಿಗೆ ಡ್ಯಾನ್ಸ್ ಮಾಡುವ ಅವಕಾಶವು ಸಿಗುತ್ತದೆ. ಒಟ್ಟಾರೆಯಾಗಿ 2023ರ TVS MotoSoul ಅನೇಕ ಮೋಟಾರ್‌ಸೈಕಲ್ ಉತ್ಸಾಹಿಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಸದ್ಯ ಈ ಉತ್ಸವದ ಮೇಲೆ ಪ್ರತಿಯೊಬ್ಬರ ನಿರೀಕ್ಷೆಗಳು ಭಾರೀ ಪ್ರಮಾಣದಲ್ಲಿಯೇ ಹೆಚ್ಚಾಗಿದೆ ಎಂದು ಹೇಳಬಹುದು.

ಕಂಪನಿಯು ತನ್ನ ಜನಪ್ರಿಯ ದ್ವಿಚಕ್ರ ವಾಹನಗಳನ್ನು 2023ರ TVS MotoSoul ಈವೆಂಟ್‌ನಲ್ಲಿ ಪ್ರದರ್ಶಿಸುತ್ತದೆ. ಇವೆಲ್ಲವೂ ಟಿವಿಎಸ್ ಮೋಟಾರ್ ಕಂಪನಿಯ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತದೆ. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಆಹಾರ ಪ್ರಿಯರ ಆದ್ಯತೆಯನ್ನು ಪೂರೈಸಲು ವಿವಿಧ ಖಾದ್ಯಗಳ ಆಯ್ಕೆಯನ್ನೇ ನೀಡಲಾಗುತ್ತದೆ. ಈ ಈವೆಂಟ್ ಬಹುತೇಕ ಮೊದಲೇ ನಡೆಸಬೇಕಿತ್ತು, ಆದರೆ, ದೇಶದಲ್ಲಿ ಕೊರೋನಾ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದರಿಂದ ಈ ಹಿಂದೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಸದ್ಯ ಮುಂದಿನ ತಿಂಗಳು ಭರ್ಜರಿಯಾಗಿ ನಡೆಯಲಿದೆ.

ಮುಂಬರುವ TVS MotoSoul ಕುರಿತು ಕಂಪನಿಯ ಹೆಡ್ ಬ್ಯುಸಿನೆಸ್ 'ವಿಮಲ್ ಸುಂಬ್ಲಿ ಮಾತನಾಡಿದ್ದಾರೆ. 'ಟಿವಿಎಸ್ ಮೋಟಾರ್ ಕಂಪನಿಯ ಪ್ರಮುಖ ಕಾರ್ಯಕ್ರಮವಾದ TVS MotoSoul ದಿ ಅಲ್ಟಿಮೇಟ್ ಬೈಕಿಂಗ್ ಫೆಸ್ಟಿವಲ್ ಅನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಪ್ರಪಂಚದಾದ್ಯಂತದ ಪ್ರೀಮಿಯಂ ಮೋಟಾರ್‌ಸೈಕಲ್ ಮಾಲೀಕರು ಮತ್ತು ಬೈಕ್ ಉತ್ಸಾಹಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ರೇಸಿಂಗ್ ಮತ್ತು ಬೈಕಿಂಗ್‌ನ ದೈತ್ಯರೊಂದಿಗೆ ಮಾತುಕತೆ ನಡೆಸಲು ಇದು ಖಂಡಿತವಾಗಿಯೂ ಉಪಯುಕ್ತವಾಗಿರುತ್ತದೆ' ಎಂದು ಹೇಳಿದ್ದಾರೆ.

ಗೋವಾದಲ್ಲಿ ಎರಡು ದಿನಗಳ ಕಾಲ ನಡೆಯುವ ಟಿವಿಎಸ್ ಮೋಟೋಸೋಲ್ ಫೆಸ್ಟಿವಲ್ ಬೈಕಿಂಗ್ ಉತ್ಸಾಹಿಗಳಿಗೆ ಉತ್ತಮ ಸಂದೇಶವನ್ನು ನೀಡುವುದು ಖಚಿತ. ಇದರಲ್ಲಿ ದೇಶ - ವಿದೇಶಗಳ ಸಂಸ್ಕೃತಿ - ಆಚಾರ ವಿಚಾರಗಳು ಬೆರೆತು ಆಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ದೇಶದ ವಿವಿಧೆಡೆಯಿಂದ ಬೈಕ್ ಆಸಕ್ತರು ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಹಿಂದೆಯೂ ಟಿವಿಎಸ್ ಕಂಪನಿ ಈ ಉತ್ಸವವನ್ನು ಆದ್ದೂರಿಯಾಗಿ ಆಯೋಜಿಸಿತ್ತು ಎನ್ನುವುದು ಗಮನಾರ್ಹ ಅಂಶವಾಗಿದೆ.

ಟಿವಿಎಸ್ ಮೋಟಾರ್ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಕಾಲಕಾಲಕ್ಕೆ ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿ, ಅವುಗಳ ಬೆಲೆ ವೈಶಿಷ್ಟ್ಯ ಹಾಗೂ ವಿನ್ಯಾಸದಿಂದ ಸಾಮಾನ್ಯ ಜನರನ್ನು ಆಕರ್ಷಿಸುವುದಲ್ಲದೆ ಇಂತಹ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದು ಖಂಡಿತವಾಗಿಯೂ ಭಾರತದಲ್ಲಿನ ಅದ್ದೂರಿ ಈವೆಂಟ್‌ಗಳಲ್ಲಿ ಒಂದಾಗಿದೆ. ದೇಶದಾದ್ಯಂತದ ಮೋಟಾರ್‌ಸೈಕಲ್ ಉತ್ಸಾಹಿಗಳು ಈವೆಂಟ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಈಗಿನಿಂದಲೇ ಈ ಕಾರ್ಯಕ್ರಮದ ಮೇಲೆ ನಿರೀಕ್ಷೆಗಳು ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಎಂದು ಹೇಳಬಹುದು.

Most Read Articles

Kannada
English summary
India biggest biking festival tvs motoSoul date announced
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X