ಓಲಾ ಸ್ಕೂಟರ್ ವಂಚನೆಗೆ ಒಳಗಾಗಬೇಡಿ...ಒಮ್ಮೆ ಈ ನಕಲಿ ಸ್ಕೂಟರ್ ವೆಬ್‌ಸೈಟ್ ಸ್ಕ್ಯಾಮ್ ನೋಡಿ

ಓಲಾ ಎಲೆಕ್ಟ್ರಿಕ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಗ್ರಾಹಕರಿಂದ ಲಕ್ಷಾಂತರ ರೂ. ವಸೂಲಿ ಮಾಡಿರುವ ಅಂತಾರಾಜ್ಯ ವಂಚನೆ ತಂಡವನ್ನು ಬಂಧಿಸಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಹೊರಟಿದ್ದ ಸುಮಾರು 1000 ಮಂದಿಯನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮೂರು ರಾಜ್ಯಗಳ 20 ಜನರು ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ಹೆಸರಿನಲ್ಲಿ 1000 ಕ್ಕೂ ಹೆಚ್ಚು ಗ್ರಾಹಕರನ್ನು ವಂಚಿಸಿದ್ದಾರೆ.

ಓಲಾ ಸ್ಕೂಟರ್ ವಂಚನೆಗೆ ಒಳಗಾಗಬೇಡಿ...ಒಮ್ಮೆ ಈ ನಕಲಿ ಸ್ಕೂಟರ್ ವೆಬ್‌ಸೈಟ್ ಸ್ಕ್ಯಾಮ್ ನೋಡಿ

ಸಂತ್ರಸ್ತರಿಂದ ಹಣ ಪಡೆದ ನಂತರ, ವಿತರಣೆ ವಿಳಂಬವಾಗುತ್ತದೆ ಎಂದು ವಂಚಿಸುತ್ತಿದ್ದ ಆರೋಪಿಗಳು, ಸೋಮವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ 11 ಮಂದಿ ಬಿಹಾರ ಮೂಲದವರು, ನಾಲ್ವರು ತೆಲಂಗಾಣ, ಮೂವರು ಜಾರ್ಖಂಡ್ ಮತ್ತು ಇಬ್ಬರು ಕರ್ನಾಟಕದ ಬೆಂಗಳೂರಿಗರಾಗಿದ್ದಾರೆ.

ನೋಂದಣಿಗಾಗಿ ಆನ್‌ಲೈನ್‌ನಲ್ಲಿ ರೂ. 499 ಪಾವತಿಸುವಂತೆ ಹೇಳಿ ಸಂತ್ರಸ್ತರನ್ನು ಮೊದಲು ಮೋಸಗೊಳಿಸಲಾಗುತ್ತದೆ. ನಂತರ ಸಾರಿಗೆ ಮತ್ತು ವಾಹನ ವಿಮೆಗಾಗಿ ಹಣವನ್ನು ಹಸ್ತಾಂತರಿಸುವಂತೆ ಕೇಳಲಾಗುತ್ತದೆ. ತಮ್ಮಿಂದ ಹಣ ಪಡೆದ ನಂತರ ಈ ವಾಹನಗಳ ವಿತರಣೆಯಲ್ಲಿ ವಿಳಂಬವಾಗುತ್ತದೆ ಎಂದು ಹೇಳಿ ಅವರನ್ನು ವಂಚಿಸಲಾಗಿದೆ.

ಪೊಲೀಸರ ವಿವರಣೆ
ಪ್ರಮುಖ ಆರೋಪಿಗಳಿಬ್ಬರು ಬೆಂಗಳೂರು ಮೂಲದವರು, ಓಲಾ ಎಲೆಕ್ಟ್ರಿಕ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರೂಪಿಸಿದ್ದರು. ಜನರು ತಮ್ಮ ವಿವರಗಳನ್ನು ನಕಲಿ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ ತಕ್ಷಣ ಸಂತ್ರಸ್ತರ ಮೊಬೈಲ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು ಇತರ ರಾಜ್ಯಗಳಲ್ಲಿರುವ ತಮ್ಮ ಗ್ಯಾಂಗ್ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಿದ್ದರು.

ವ್ಯಕ್ತಿಯೊಬ್ಬರಿಗೆ ವಂಚನೆ ತಂಡದ ಜಾಲದ ಮೇಲೆ ಅನುಮಾನಗೊಂಡು ತಮ್ಮ 30,998 ರೂ. ವಂಚನೆಯಾಗಿದೆ ಎಂದು ದೂರು ನೀಡಿದಾಗ ಹಗರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬೆಂಗಳೂರಿನಿಂದ ಪತ್ತೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಂಧನಕ್ಕೊಳಗಾದ ಆರೋಪಿಯಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಗುಂಪಿನ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿಯಿಂದ ಏಳು ಲ್ಯಾಪ್‌ಟಾಪ್‌ಗಳು, 38 ಸ್ಮಾರ್ಟ್‌ಫೋನ್‌ಗಳು, 25 ಫೀಚರ್ ಫೋನ್‌ಗಳು, ಎರಡು ಹಾರ್ಡ್ ಡಿಸ್ಕ್‌ಗಳು, ಎರಡು ಸ್ಮಾರ್ಟ್ ವಾಚ್‌ಗಳು ಮತ್ತು 114 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್‌ನ ವಿಮೆ ಮತ್ತು ಸರಕು ಸಾಗಣೆ ಶುಲ್ಕಕ್ಕಾಗಿ 60,000 ರಿಂದ 70,000 ರೂಪಾಯಿಗಳನ್ನು ನೀಡುವಂತೆ ಗ್ಯಾಂಗ್ ಸದಸ್ಯರು ಸಂತ್ರಸ್ತರಿಗೆ ಕೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಾಟ್ನಾದಲ್ಲಿ ಕಾರ್ಯಾಚರಿಸುತ್ತಿರುವ ವಂಚನೆ ಜಾಲದ ಕಾಲ್ ಸೆಂಟರ್ ಅನ್ನು ಪತ್ತ ಹಚ್ಚಿ 16 ಜನರನ್ನು ಬಂಧಿಸಲಾಗಿದೆ.

114 ಸಿಮ್ ಕಾರ್ಡ್‌ಗಳು, 60 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಮತ್ತು ಏಳು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, 25 ಬ್ಯಾಂಕ್ ಖಾತೆಗಳು 5 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಕನಿಷ್ಠ 1,000 ಜನರು ಅವರಿಂದ ವಂಚನೆಗೊಳಗಾಗಿದ್ದಾರೆ' ಎಂದು ದೆಹಲಿ ಪೊಲೀಸ್ ಡಿಸಿಪಿ ದೇವೇಶ್ ಮಹ್ಲಾ ಹೇಳಿದ್ದಾರೆ.

Most Read Articles

Kannada
English summary
Just check out ola scooter fake website scam
Story first published: Tuesday, November 15, 2022, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X