ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿದೊಡ್ಡ ಇವಿ ವಾಹನಗಳ ಡೀಲರ್‌ಶಿಪ್ ಜಾಲ ಹೊಂದಿರುವ ಕೊಮಾಕಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ವೆನಿಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.15 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಕೊಮಾಕಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಸೆಗ್ಮೆಂಟ್‌ಗಳಲ್ಲಿ ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಇದೀಗ ಕಂಪನಿಯು ವೆನಿಸ್ ಇವಿ ಸ್ಕೂಟರ್ ಮತ್ತು ರೇಂಜರ್ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ವೆನಿಸ್ ಇವಿ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯಾಗಿರುವ ವೆನಿಸ್ ಆವೃತ್ತಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಕೊಮಾಕಿ ಕಂಪನಿಯು ಹೊಸ ವೆನಿಸ್ ಮಾದರಿಯೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಇವಿ ಸ್ಕೂಟರ್‌ಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಗರಿಷ್ಠ 120 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ವೆನಿಸ್ ಇವಿ ಸ್ಕೂಟರ್‌ನಲ್ಲೂ ವಿವಿಧ ರೈಡ್ ಮೋಡ್‌ಗಳಿದ್ದು, ಇಕೋ ಮೋಡ್‌ನಲ್ಲಿ ಹೆಚ್ಚು ಮೈಲೇಜ್ ಒದಗಿಸಲಿದ್ದರೆ ಹೈ ಸ್ಪೀಡ್ ಮೋಡ್‌ನಲ್ಲಿ ಸ್ಕೂಟರ್ ಮೈಲೇಜ್‌ನಲ್ಲಿ ತುಸು ಕಡಿಮೆಯಾಗಬಹುದಾಗಿದೆ

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಕೊಮಾಕಿ ಕಂಪನಿಯು ಸದ್ಯ ಲೋ-ಸ್ಪೀಡ್ ಮಾದರಿಗಳಲ್ಲಿ ಎಕ್ಸ್‌ಜಿಟಿ ಸರಣಿಗಳನ್ನು ಮತ್ತು ಹೈ ಸ್ಪೀಡ್ ಮಾದರಿಗಳಲ್ಲಿ ಟಿಎನ್ 95, ಎಂ-5, ಎಸ್ಇ ಮತ್ತು ಹೊಸದಾಗಿ ಬಿಡುಗಡೆ ವೆನಿಸ್ ಹಾಗೂ ರೇಂಜರ್ ಕ್ರೂಸರ್ ಬೈಕ್ ಮಾದರಿಗಳ ಮಾರಾಟ ಆರಂಭಿಸಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಹೊಸ ವೆನಿಸ್ ಮಾದರಿಯು ವಿವಿಧ ಹತ್ತು ಬಣ್ಣಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಹೊಸ ಸ್ಕೂಟರ್ ಮಾದರಿಯಲ್ಲಿ ಕಂಪನಿಯು 2.9 kWh ಬ್ಯಾಟರಿ ಪ್ಯಾಕ್ ಜೊತೆಗೆ 4 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಜೊತೆಗೆ ಹೊಸ ಸ್ಕೂಟರ್ ಮಾದರಿಯು ಸಾಮಾನ್ಯ ಇವಿ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಸೆಲ್ಪ್ ಡೈಗ್ನೊಸಿಸ್ ಸಿಸ್ಟಂ, ಮೊಬೈಲ್ ಚಾರ್ಜಿಂಗ್ ಪೋರ್ಟ್, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್ ಮತ್ತು ರಿವರ್ಸಿಂಗ್ ಅಸಿಸ್ಟ್ ಸೌಲಭ್ಯಗಳಿವೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಇದಲ್ಲದೆ ಹೊಸ ಇವಿ ಸ್ಕೂಟರಿನ ಹಿಂಭಾಗದಲ್ಲಿ ಮೌಂಟೆಡ್ ಸ್ಟೋರೇಜ್ ಬಾಕ್ಸ್‌ ಸೇರಿದಂತೆ ಪ್ರಸ್ತುತ ಇವಿ ಸ್ಕೂಟರ್ ಮಾದರಿಗಳಿಂತಲೂ ದೊಡ್ಡದಾದ ಆಸನ ಸೌಲಭ್ಯ, ಈ ಮೂಲಕ ಹೊಸ ಇವಿ ಸ್ಕೂಟರ್ ಮೂಲಕ ಭಾರತೀಯ ರಸ್ತೆಗಳಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುವುದಾಗಿ ಕೊಮಾಕಿ ಕಂಪನಿಯು ಹೇಳಿಕೊಂಡಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿದೊಡ್ಡ ಡೀಲರ್‌ಶಿಪ್ ಸರಪಳಿಯನ್ನು ಹೊಂದಿರುವ ಕೊಮಾಕಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಿದ ನಂತರ 30 ಸಾವಿರಕ್ಕೂ ಯುನಿಟ್ ಇವಿ ಸ್ಕೂಟರ್ ಮಾರಾಟ ಮಾಡಿದ್ದು, ಹೊಸ ಉತ್ಪನ್ನಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಜೊತಗೆ ರಾಜ್ಯ ಸರ್ಕಾರಗಳು ಸಹ ಇವಿ ವಾಹನ ಬಳಕೆ ಹೆಚ್ಚಳಕ್ಕೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ.

ಆಕರ್ಷಕ ವಿನ್ಯಾಸದ ಕೊಮಾಕಿ ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರನ್ನು ಉತ್ತೇಜಿಸಲು ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕ ಮನ್ನಾದಂತಹ ಯೋಜನೆಗಳನ್ನು ಪ್ರಕಟಿಸಿ ಇವಿ ವಾಹನ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ವಿವಿಧ ಸ್ಟಾರ್ಟ್ಅಪ್ ಕಂಪನಿಗಳು ಹೊಸ ಮಾದರಿಯ ಇವಿ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

More from DriveSpark

Article Published On: Tuesday, January 25, 2022, 12:02 [IST]
English summary
Komaki venice e scooter launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+