ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ 2022ರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕೆಟಿಎಂ ಕಂಪನಿಯು ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 4,353 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕೆಟಿಎಂ ಕಂಪನಿಯು 5,394 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೆಟಿಎಂ ಕಂಪನಿಯು ಶೇ.19.30 ರಷ್ಟು ಕುಸಿತವನ್ನು ಕಂಡಿದೆ. ಇನ್ನು 2022ರ ಜನವರಿ ತಿಂಗಳಿನಲ್ಲಿ 4,640 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೆಟಿಎಂ ಕಂಪನಿಯು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.6.19 ರಷ್ಟು ಕುಸಿತವನ್ನು ಕಂಡಿದೆ. ಅಂದರೆ 287 ಯೂನಿಟ್ ನಷ್ಟು ಕಡಿಮೆ ಮಾರಾಟವಾಗಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಇದರಲ್ಲಿ, ಕೆಟಿಎಂ 200 (ಆರ್‌ಸಿ + ಡ್ಯೂಕ್) ಮಾರಾಟವು 2,318 ಯುನಿಟ್‌ಗಳಷ್ಟೀದೆ. ಆದರೆ ಕಳೆದ ವರ್ಷದ ಇದೇ ತಿಂಗಳಿನಲ್ಲಿ 2,431 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.4.65 ಪ್ರತಿಶತ ಇಳಿಕೆಯಾಗಿದೆ. ಇನ್ನು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.3.34ರಷ್ಟು ಮಾರಾಟ ಕುಸಿತ ಕಂಡುಬಂದಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕೆಟಿಎಂ 250 (ಅಡ್ವೆಂಚರ್ + ಡ್ಯೂಕ್) ಮಾರಾಟವು 312 ಯುನಿಟ್‌ಗಳಿಂದ 1,425 ಯುನಿಟ್‌ಗಳಿಗೆ ಏರಿಕೆಯಾಗಿದೆ. ಇನ್ನು ತಿಂಗಳಿನಿಂದ ತಿಂಗಳ ಮಾರಾಟದಲ್ಲಿಯು ಕೂಡ 1,223 ಯುನಿಟ್‌ಗಳಿಗೆ ಸುಧಾರಿಸಿದ್ದು, ಇದರಲ್ಲಿ ಶೇ.16.52 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

2022ರ ಫೆಬ್ರವರಿ ತಿಂಗಳಿನಲ್ಲಿ ಕೆಟಿಎಂ ರಫ್ತುಗಳು 38.49 ಶೇಕಡಾ ಕುಸಿತದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಸಿದವು. ರಫ್ತು 8,153 ಯುನಿಟ್‌ಗಳಿಂದ 5,015 ಯೂನಿಟ್‌ಗಳಿಗೆ ಇಳಿಕೆಯಾಗಿದೆ. 3,138 ಯೂನಿಟ್ ನಷ್ಟು ಸಂಪುಟ ನಷ್ಟವಾಗಿದೆ. ಇನ್ನು ತಿಂಗಳಿನಿಂದ ತಿಂಗಳ ರಫ್ತಿನಲ್ಲಿ ಶೇ.18.92 ರಷ್ಟು ಸುಧಾರಿಸಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕೆಟಿಎಂ ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ ಆರ್‌ಸಿ 390 ಬೈಕ್ ಹಲವಾರು ಹೊಸ ನವೀಕರಣಗಳನು ಪಡೆದುಕೊಂಡಿವೆ. ಕೆಟಿಎಂ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ 2022ರ ಆರ್‌ಸಿ 390 ಬೈಕ್ ಬಿಡುಗಡೆಗೆ ಮುಂಚಿತವಾಗಿ ಪಟ್ಟಿ ಮಾಡಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಇಂಡಿಯಾ-ಸ್ಪೆಕ್ ಮಾಡೆಲ್ ಸ್ವೀಕರಿಸುವ ಎಲ್ಲಾ ವೈಶಿಷ್ಟ್ಯಗಳನ್ನು ಕಂಪನಿಯು ಪಟ್ಟಿ ಮಾಡಿದೆ. ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಈ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಬಹುದು.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಕಳೆದ ವರ್ಷ ಅಂತರರಾಷ್ತ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಭಾರತದಲ್ಲಿನ ಅಭಿಮಾನಿಗಳು ಈ ಬೈಕ್ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೊಸ ಕೆಟಿಎಂ ಆರ್‌ಸಿ 390 ಬೈಕ್ ಹಿಂದಿನ ಮಾದರಿಗಿಂತ ಹೆಚ್ಚು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ, ನಾವು ಫೇರಿಂಗ್-ಮೌಂಟೆಡ್ ಟರ್ನ್-ಇಂಡಿಕೇಟರ್‌ಗಳ ಜೊತೆಗೆ ಹೊಸ ಹೆಡ್‌ಲ್ಯಾಂಪ್ ವಿನ್ಯಾಸವನ್ನು ನೋಡುತ್ತೇವೆ. ಬೈಕು ಹೊಸ ಮುಂಭಾಗದ ಫೇರಿಂಗ್ ಅನ್ನು ಹೊಂದಿದೆ,

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಜೊತೆಗೆ ವಿಭಿನ್ನ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಮೋಟಾರ್‌ಸೈಕಲ್ ಹೊಸ ಸ್ಪ್ಲಿಟ್-ಸೀಟ್ ಸೆಟಪ್ ಅನ್ನು ಸಹ ಪಡೆಯುತ್ತದೆ, ಆದರೆ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಸ ವಿನ್ಯಾಸವನ್ನು ಹೊಂದಿವೆ ಮತ್ತು ಮೊದಲಿಗಿಂತ ಹಗುರವಾಗಿರುತ್ತವೆ. ಈ ಆರ್‌ಸಿ 390 ಬೈಕ್ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಈ ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಫೋರ್ಕ್‌ಗೆ ಹೊಂದಾಣಿಕೆ ಮಾಡಬಹುದಾದ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅನ್ನು ಒಳಗೊಂಡಿದೆ.ಇನ್ನು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯ ಸೆಟಪ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಈ ಕೆಟಿಎಂ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಬಾಷ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದು ಕಾರ್ನರ್ ಗಳಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಬ್ರೇಕ್ ಮಾಡುವಾಗ ಅತ್ಯುತ್ತಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಇನ್ನು ಪ್ರಪಂಚದಾದ್ಯಂತದ ಕೆಟಿಎಂ ಸರಣಿಯಿಂದ 390 ಸರಣಿಯವರೆಗಿನ ಮಾದರಿಗಳನ್ನು ಭಾರತದಲ್ಲಿ ಬಜಾಜ್ ಆಟೋ ತನ್ನ ಚಕನ್-ಆಧಾರಿತ ಘಟಕದಲ್ಲಿ ತಯಾರಿಸುತ್ತದೆ. ಆದ್ದರಿಂದ ಯುಎಸ್ ನಲ್ಲಿ ಬಿಡುಗಡೆ ಮಾಡಲಾದ ಮಾದರಿಯು ಭಾರತದಿಂದ ರಫ್ತು ಮಾಡುವ ಸಾಧ್ಯತೆಯಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಸೂಕ್ಷ್ಮ ಮತ್ತು ಗಮನಿಸಬಹುದಾದ ನವೀಕರಣಗಳೊಂದಿಗೆ ಬರುತ್ತದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಹೊಸ ವಿನ್ಯಾಸದ ನ್ಯೂ ಜನರೇಷನ್ ಆರ್‌ಸಿ ಬೈಕ್‌ಗಳು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಇದರೊಂದಿಗೆ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಬೈಕ್ ಕೂಡ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

More from DriveSpark

Article Published On: Saturday, March 19, 2022, 10:28 [IST]
English summary
Ktm india revealed 2022 february sales exports report details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+