ಬಹುನೀರಿಕ್ಷಿತ 2022ರ ಕೆಟಿಎಂ ಆರ್‌ಸಿ 390 ಬೈಕ್ ಭಾರತದಲ್ಲಿ ಬಿಡುಗಡೆ
ಕೆಟಿಎಂ(KTM) ಕಂಪನಿಯು ತನ್ನ ಹೊಸ ಆರ್‌ಸಿ 390 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾದರಿಯು ದುಬಾರಿ ಬೆಲೆಯೊಂದಿಗೆ ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಆರ್‌ಸಿ 390 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.14 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ಮಾದರಿಯು ಹಳೆಯ ಆವೃತ್ತಿಗಿಂತ ಬರೋಬ್ಬರಿ ರೂ. 36 ಸಾವಿರದಷ್ಟು ದುಬಾರಿಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಂಡಿದ್ದ ಆರ್‌ಸಿ 390 ಮಾದರಿಯು ಇದುವರೆಗೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕಳೆದ ಎಂಟು ವರ್ಷಗಳಲ್ಲಿ ಬರೋಬ್ಬರಿ 1 ಲಕ್ಷದಷ್ಟು ದುಬಾರಿಯಾಗಿದೆ.

ದುಬಾರಿ ಬೆಲೆ ನಡುವೆಯೂ ಹೊಸ ಆರ್‌ಸಿ 390 ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ಬೆಲೆ ಹೊಂದಿದ್ದು, ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಹೊಸ ಬೈಕ್ ಹಲವಾರು ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಆರ್‌ಸಿ 390 ಬೈಕ್ ಹಿಂದಿನ ಮಾದರಿಗಿಂತಲೂ ಹೆಚ್ಚು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದಲ್ಲಿ ಫೇರಿಂಗ್-ಮೌಂಟೆಡ್ ಟರ್ನ್-ಇಂಡಿಕೇಟರ್‌ಗಳ ಜೊತೆಗೆ ಹೊಸ ಹೆಡ್‌ಲ್ಯಾಂಪ್ ವಿನ್ಯಾಸವನ್ನು ನೀಡಲಾಗಿದೆ.

ಇದರ ಜೊತೆಗೆ 13.7 ಲೀಟರ್ ಸಾಮರ್ಥ್ಯದ ಹೊಸ ವಿನ್ಯಾಸದ ಇಂಧನ ಟ್ಯಾಂಕ್‌ನೊಂದಿಗೆ ಸ್ಪ್ಲಿಟ್-ಸೀಟ್ ಸೆಟಪ್ ಅನ್ನು ಸಹ ಪಡೆದುಕೊಂಡಿದ್ದು, 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಸ ವಿನ್ಯಾಸದೊಂದಿಗೆ ಮೊದಲಿಗಿಂತಲೂ ಸಾಕಷ್ಟು ಹಗುರವಾಗಿಸಿವೆ.

ನ್ಯೂ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಕೆಟಿಎಂ ಆರ್‌ಸಿ 390 ಬೈಕ್ ಮಾದರಿಯು ಈ ಹಿಂದಿನ ಮಾದರಿಯಲ್ಲಿದ್ದ 373 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 43.5 ಬಿಹೆಚ್‍ಪಿ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಪರ್ಫಾಮೆನ್ಸ್‌ಗೆ ಪೂರಕವಾಗಿ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಲಿದ್ದು, ಮುಂಭಾಗದಲ್ಲಿ ಫೋರ್ಕ್‌ಗೆ ಹೊಂದಾಣಿಕೆ ಮಾಡಬಹುದಾದ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯ ಸೆಟಪ್ ಅನ್ನು ಒಳಗೊಂಡಿರುತ್ತದೆ.

ಇದರೊಂದಿಗೆ ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದ್ದು, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಬಾಷ್ ಕಂಪನಿಯ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇದು ಕಾರ್ನರ್ ಗಳಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಬ್ರೇಕ್ ಉಪಯೋಗಿಸುವಾಗ ಅತ್ಯುತ್ತಮ ಸುರಕ್ಷತೆಯನ್ನು ಖಚಿತಪಡಿಸಲಿದ್ದು, ಆರ್‌ಸಿ 390 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಕಾರ್ನರ್ ಮಾಡುವ ಎಬಿಎಸ್ (ಡ್ಯುಯಲ್-ಚಾನೆಲ್, ಹೊಂದಾಣಿಕೆ) ಮತ್ತು ಹೊಂದಾಣಿಕೆ ಮಾಡಬಹುದಾದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳಂತಹ ಕೆಲವು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಬೈಕಿನ ಟಿಎಫ್‌ಟಿ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ (ಬ್ಲೂಟೂತ್-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ) ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಸೆನ್ಸಾರ್ ತಂತ್ರಜ್ಞಾನ ಹೊಂದಿರುವ ಹೊಸ ಬೈಕಿನ ಡಿಸ್‌ಪ್ಲೇಯಲ್ಲಿರುವ ಆ್ಯಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯವು ಹೊರಗಿನ ಬಣ್ಣಕ್ಕಿಂತ ಭಿನ್ನವಾಗುವ ಮೂಲಕ ಸವಾರನಿಗೆ ಸ್ಪಷ್ಟ ಗೋಚರ ನೀಡುತ್ತದೆ.

ಹಾಗೆಯೇ ಇಂಟರ್ನ್ಯಾಷನಲ್ ಆವೃತ್ತಿಯಂತೆಯೇ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಸಸ್ಷೆಷನ್ ಕೂಡಾ ಲಭ್ಯವಿರವಿದ್ದು, ರೈಡಿಂಗ್ ಅನುಭವನ್ನು ಮತ್ತಷ್ಟು ಸುಧಾರಣೆಗೊಳಿಸುವ ಉದ್ದೇಶದಿಂದ ಬೈಕಿನಲ್ಲಿ 835 ಎಂಎಂ ಎತ್ತರದ ಆಸನವನ್ನು ನೀಡಲಾಗಿದೆ.

ಮುಖ್ಯವಾಗಿ ಹೊಸ ಬೈಕಿನಲ್ಲಿ ಕಂಪನಿಯು ಟ್ರೆಲ್ಲಿಸ್ ಫ್ರೆಮ್ ಬಳಕೆಯಿಂದಾಗಿ ಹೊಸ ಬೈಕ್ ತೂಕದಲ್ಲಿ ಸುಮಾರು 1.5 ಕೆ.ಜಿ ತೂಕ ಕಡಿತಗೊಂಡಿದ್ದು, ಇದು ಇಂಧನ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಿದೆ.


Click it and Unblock the Notifications








