Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಟಿಎಂ ಒಟ್ಟಾರೆ ದೇಶೀಯ ಮಾರಾಟದಲ್ಲಿ ಭಾರೀ ಕುಸಿತ: ಬೇಡಿಕೆ ಉಳಿಸಿಕೊಂಡ 250 ಮಾದರಿ
ಆಸ್ಟ್ರಿಯಾ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಭಾರತದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ದೇಶೀಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಅಲ್ಲದೇ ಆಸ್ಟ್ರಿಯಾದ ಮೋಟಾರ್ ಸೈಕಲ್ ತಯಾರಕರಿಗೆ ರಫ್ತು ಸಂಖ್ಯೆಗಳು ಸಹ ಕಡಿಮೆಯಾಗಿವೆ.
ಕಳೆದ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಸಾಮಾನ್ಯವಾಗಿ ಕಡಿಮೆಯಿದ್ದರೂ, ಮಾರಾಟದ ಅಂಕಿಅಂಶಗಳನ್ನು ಗಮನಿಸಿದರೆ, ಕೆಟಿಎಂ ದೇಶದಲ್ಲಿ ಗಮನಾರ್ಹ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.
ಕೆಟಿಎಂ ದೇಶದ ಅತ್ಯುತ್ತಮ ಕಾರ್ಯಕ್ಷಮತೆಯ ಮೋಟಾರ್ ಸೈಕಲ್ ತಯಾರಕ ಕಂಪನಿಗಳಲ್ಲಿ ಒಂದಾಗಿದ್ದರೂ, ಅದರ ಬಹುತೇಕ ಎಲ್ಲಾ ಉತ್ಪನ್ನಗಳ ಮಾರಾಟವು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ತಿಂಗಳ ಮತ್ತು ವರ್ಷದ ಮಾರಾಟ ಅಂಕಿಅಂಶಗಳಲ್ಲಿ 250 ಸಿಸಿ ರೂಪಾಂತರಗಳ ಮಾರಾಟ ಮಾತ್ರ ಹೆಚ್ಚಾಗಿದ್ದು, ತನ್ನ ಬೇಡಿಕೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ.
ಮಾರ್ಚ್ 2022 ರಲ್ಲಿ ಕೆಟಿಎಂ 200 ಡ್ಯೂಕ್ ಮತ್ತು ಆರ್ಸಿ ರೂಪಾಂತರಗಳ 1,943 ಯುನಿಟ್ಗಳು ಮಾರಾಟವಾಗಿವೆ. ಕೆಟಿಎಂ ಡ್ಯೂಕ್ ಮತ್ತು ಆರ್ಸಿ ಮೋಟಾರ್ ಸೈಕಲ್ಗಳ 200 ಸಿಸಿ ರೂಪಾಂತರಗಳ ವರ್ಷದಿಂದ ವರ್ಷದ ಮಾರಾಟದ ಅಂಕಿಅಂಶಗಳನ್ನು ನೋಡುವುದಾದರೆ ಮಾರ್ಚ್ 2021 ರಲ್ಲಿ ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕರು 283 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 12ರಷ್ಟು ಕುಸಿತ ಕಂಡಿದೆ.
ತಿಂಗಳ ಮಾರಾಟದ ಅಂಕಿಅಂಶಗಳನ್ನು ನೋಡುವುದಾದರೆ ಫೆಬ್ರವರಿ 2022 ರಲ್ಲಿ ಕಂಪನಿಯು 2,318 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 16 ರಷ್ಟು ಭಾರೀ ಕುಸಿತವನ್ನು ಕಂಡಿದೆ. ಈ ನಡುವೆಯೂ ಕೆಟಿಎಂ ಮೋಟಾರ್ ಸೈಕಲ್ನ 200 ಸಿಸಿ ರೂಪಾಂತರಗಳು ಭಾರತದಲ್ಲಿ ಇನ್ನೂ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಉಳಿದಿವೆ.
ಭಾರತದಲ್ಲಿ 125 ಸಿಸಿ ರೂಪಾಂತರಗಳು ಕೆಟಿಎಂನ ಕಾರ್ಯಕ್ಷಮತೆ-ಆಧಾರಿತ ಮೋಟಾರ್ ಸೈಕಲ್ ಶ್ರೇಣಿಯ ಪ್ರವೇಶ ಮಟ್ಟದ ಬಿಂದುವಾಗಿದ್ದರೂ, ಮಾರ್ಚ್ 2022 ರಲ್ಲಿ ಮಾರಾಟವಾದ ಕೇವಲ 186 ಯುನಿಟ್ಗಳ ಮಾರಾಟ ಸಂಖ್ಯೆಗಳು ಸ್ವಲ್ಪ ಕಡಿಮೆ ಬೆಳವಣಿಗೆಯನ್ನು ಸೂಚಿಸಿವೆ. ವರ್ಷ ಮತ್ತು ತಿಂಗಳ ಎರಡೂ ಮಾರಾಟಗಳು ಶೇಕಡಾ 89 ಮತ್ತು ಶೇಕಡಾ 67 ರಷ್ಟು ಕುಸಿದಿವೆ.
390 ಸರಣಿಯ ಕೆಟಿಎಂ ಮೋಟಾರ್ ಸೈಕಲ್ಗಳಿಗೆ ಸಂಬಂಧಿಸಿದಂತೆ, ಭಾರತದ ಅನೇಕ ಆಟೋಮೋಟಿವ್ ಪ್ರಿಯರ ನೆಚ್ಚಿನ ಮಾದರಿಯ ಹೊರತಾಗಿಯೂ, ಕೆಟಿಎಂ ಮಾರ್ಚ್ 2022 ರಲ್ಲಿ ಕೇವಲ 1 ಯುನಿಟ್ ಅನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು.
ಈ ವರ್ಷ 390 ಸರಣಿಯ ಕೇವಲ 1 ಯುನಿಟ್ ಅನ್ನು ಮಾರಾಟ ಮಾಡಿದರೆ, ಕೆಟಿಎಂ ಮಾರ್ಚ್ 2021 ರಲ್ಲಿ ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕರು 1,000 ಕ್ಕೂ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡಿದ್ದರು.
ಇದಲ್ಲದೆ, ಕೆಟಿಎಂ 390 ರೂಪಾಂತರಗಳ ತಿಂಗಳ ಮಾರಾಟವು ಸಹ ಶೇಕಡಾ 97 ರಷ್ಟು ಕುಸಿದಿದೆ, ಏಕೆಂದರೆ ಕಂಪನಿಯು ಫೆಬ್ರವರಿ 2022 ರಲ್ಲಿ 38 ಯುನಿಟ್ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.
ಈ ಮೊದಲೇ ಹೇಳಿದಂತೆ, ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕರು ಮಾರ್ಚ್ 2022 ರಲ್ಲಿ 1,539 ಯುನಿಟ್ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಕೆಟಿಎಂ ಮೋಟಾರ್ ಸೈಕಲ್ಗಳ 250 ರೂಪಾಂತರಗಳು ಮಾತ್ರ ಸಕಾರಾತ್ಮಕ ಮಾರಾಟವನ್ನು ದಾಖಲಿಸಿವೆ. ಈ ಮಾರಾಟ ಅಂಕಿಅಂಶಗಳು ವರ್ಷದ ಮಾರಾಟದಲ್ಲಿ ಶೇಕಡಾ 23 ರಷ್ಟು ಹೆಚ್ಚಳವನ್ನು ಮತ್ತು ತಿಂಗಳ ಮಾರಾಟದಲ್ಲಿ ಶೇಕಡಾ 8 ರಷ್ಟು ಹೆಚ್ಚಳವನ್ನು ಸೂಚಿಸುತ್ತವೆ.
ಒಟ್ಟಾರೆ ಮಾರ್ಚ್ 2022 ರಲ್ಲಿ ಕೆಟಿಎಂ ತನ್ನ ಮೋಟಾರ್ಸೈಕಲ್ಗಳ 3,669 ಯುನಿಟ್ಗಳನ್ನು ಮಾರಾಟ ಮಾಡಿದೆ, ಇದು ವರ್ಷದ ಮಾರಾಟದಲ್ಲಿ ಶೇಕಡಾ 41 ರಷ್ಟು ಕುಸಿತವನ್ನು ದಾಖಲಿಸಿದೆ. ಅಲ್ಲದೇ ತಿಂಗಳ ಮಾರಾಟದಲ್ಲಿ ಸುಮಾರು ಶೇಕಡಾ 16 ರಷ್ಟು ಕುಸಿತವನ್ನು ದಾಖಲಿಸಿದೆ.
ಇದೆಲ್ಲದರ ಜೊತೆಗೆ, ಮಾರ್ಚ್ 2022 ರಲ್ಲಿ ಕೆಟಿಎಂನ ರಫ್ತು ಸಂಖ್ಯೆಗಳು 3,620 ಯುನಿಟ್ಗಳಷ್ಟಿವೆ, ಇದರಿಂದಾಗಿ ವರ್ಷದ ರಫ್ತು ಶೇಕಡಾ 24 ರಷ್ಟು ಕುಸಿತವನ್ನು ದಾಖಲಿಸಿದೆ. ಮತ್ತೊಂದೆಡೆ ತಿಂಗಳ ರಫ್ತು ಶೇಕಡಾ 27 ರಷ್ಟು ಕುಸಿದಿದೆ.
ಭಾರತದಲ್ಲಿ ನಿಧಾನಗತಿಯ ದ್ವಿಚಕ್ರ ವಾಹನಗಳ ಮಾರಾಟದ ಹೊರತಾಗಿಯೂ, ಸಾಂಕ್ರಾಮಿಕ ರೋಗದಿಂದಾಗಿ ಕೆಟಿಎಂ ಮೋಟಾರ್ ಸೈಕಲ್ಗಳ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. 250 ಮಾದರಿಗಳನ್ನು ಹೊರತುಪಡಿಸಿ, ಕೆಟಿಎಂನ ಇತರ ಪ್ರತಿಯೊಂದು ಮಾದರಿಯು ಮಾರಾಟದ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ.