ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಕ್ಯಾಪಿಟಲ್ ಇನ್‌ಕ್ಯುಬೇಶನ್ ಇನ್‌ಸೈಟ್ಸ್ ಎವೆರಿಥಿಂಗ್ (CIIE.Co), IIM ಅಹಮದಾಬಾದ್ ಕ್ಯಾಂಪಸ್‌ನಲ್ಲಿ ಮ್ಯಾಟರ್ ಎಂಬ ಹೊಸ ಟೆಕ್ನಾಲಜಿ ಸ್ಟಾರ್ಟ್-ಅಪ್ ಕಂಪನಿಯು ತನ್ನ ಮೊದಲ ಟೆಕ್‌ಡೇ ಅನ್ನು ಆಯೋಜಿಸಿದ್ದು, ಆಂತರಿಕವಾಗಿ ನಿರ್ಮಿಸಲಾದ ತನ್ನ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಕಾರ್ಯಕ್ರಮದಲ್ಲಿ ಮ್ಯಾಟರ್ ಡ್ರೈವ್ 1.0 (ಲಿಕ್ವಿಡ್-ಕೂಲ್ಡ್ ಮೋಟಾರ್) ಮತ್ತು ಮ್ಯಾಟರ್ ಚಾರ್ಜ್ 1.0 (ಡ್ಯುಯಲ್ ಮೋಡ್ ಪರಿವರ್ತಕ) ಗಾಗಿ ನೀಡಲಾದ ಪೇಟೆಂಟ್‌ಗಳು ಮತ್ತು ಐಪಿಗಳನ್ನು ಪ್ರಕಟಿಸಲಾಯಿತು. ಇದೇ ವೇಳೆ ತನ್ನ ಲೋಗೋವನ್ನು ಅನಾವರಣಗೊಳಿಸಿ ನವೆಂಬರ್ 2022 ರಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಪ್ರದರ್ಶಿಸಲಾದ ತಂತ್ರಜ್ಞಾನವು ಅದರ ಮುಂಬರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಯಾವರೀತಿ ಇರಲಿದೆ ಹಾಗೂ ಇತರ ಇವಿಗಳಿಗಿಂತ ಎಷ್ಟು ಭಿನ್ನವಾಗಿರಲಿದೆ ಎಂಬುದರ ಬಗ್ಗೆ ವಿವರಿಸಿದೆ. ಜೊತೆಗೆ ಮ್ಯಾಟರ್ ಕಂಪನಿಯು ಕಳೆದ ಮೂರು ವರ್ಷಗಳಲ್ಲಿ, ಡ್ರೈವ್‌ಟ್ರೇನ್, ಎಲೆಕ್ಟ್ರಾನಿಕ್ಸ್, ಬ್ಯಾಟರಿ ಸಿಸ್ಟಮ್‌ಗಳು, ಚಾರ್ಜರ್‌ಗಳಂತಹ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವ ಆಂತರಿಕ ಹೈಪರ್ ಸ್ಕೇಲೆಬಲ್ ಟೆಕ್ ಸ್ಟಾಕ್ ಅನ್ನು ನಿರ್ಮಿಸಿರುವುದಾಗಿ ಹೇಳಿದೆ.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಪೇಟೆಂಟ್‌ಗಳು ಮತ್ತು ಐಪಿಗಳು

ಮ್ಯಾಟರ್ 35 ಕ್ಕೂ ಹೆಚ್ಚು ಪೇಟೆಂಟ್ ಅಪ್ಲಿಕೇಶನ್‌ಗಳು, 15 ಕ್ಕೂ ಹೆಚ್ಚು ಕೈಗಾರಿಕಾ ವಿನ್ಯಾಸ ಅಪ್ಲಿಕೇಶನ್‌ಗಳು ಮತ್ತು 60 ಕ್ಕೂ ಹಚ್ಚು ಟ್ರೇಡ್‌ಮಾರ್ಕ್‌ಗಳನ್ನು ಒಳಗೊಂಡಿರುವ 100 ಕ್ಕೂ ಹೆಚ್ಚು IP ಗಳನ್ನು ರಚಿಸಿದೆ. ಕಂಪನಿಯು ಪವರ್‌ಟ್ರೇನ್, ನಿಯಂತ್ರಣಗಳು, ಪವರ್ ಎಲೆಕ್ಟ್ರಾನಿಕ್ಸ್ ಮತ್ತು ವೆಹಿಕಲ್ ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ವಾಹನ ಡೊಮೇನ್‌ಗಳಲ್ಲಿ ಬಲವಾದ ಪೇಟೆಂಟ್ ಪೈಪ್‌ಲೈನ್ ಅನ್ನು ಹೊಂದಿದೆ.

ಮ್ಯಾಟರ್‌ನ ಸಂಯೋಜಿತ ವಿಧಾನವು ಎರಡು ಮಂಜೂರು ಮಾಡಿದ ಪೇಟೆಂಟ್‌ಗಳಿಗೆ ಕಾರಣವಾಗಿದೆ. ಇದರಲ್ಲಿ ಒಂದು ಮ್ಯಾಟರ್ ಡ್ರೈವ್ 1.0 (ಲಿಕ್ವಿಡ್-ಕೂಲ್ಡ್ ಮೋಟಾರ್) ಮತ್ತು ಡ್ಯುಯಲ್ ಮೋಡ್ ಪರಿವರ್ತಕವಾಗಿದೆ. ಈ ಮಂಜೂರು ಮಾಡಿದ ಪೇಟೆಂಟ್‌ಗಳ ಜೊತೆಗೆ, ಮ್ಯಾಟರ್ ಡ್ರೈವ್ 1.0, ಪವರ್ ಪ್ಯಾಕ್, ಚಾರ್ಜರ್, ನಿಯಂತ್ರಣಗಳು ಮತ್ತು ಇತರ ಸಂಬಂಧಿತ ತಂತ್ರಜ್ಞಾನಗಳಿಗಾಗಿ ಬಹು ಪೇಟೆಂಟ್ ಅಪ್ಲಿಕೇಶನ್‌ಗಳು ಪೈಪ್‌ಲೈನ್‌ನಲ್ಲಿವೆ.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಹೊಸ ಲೋಗೋ

ಕಂಪನಿಯು ತನ್ನ ಹೊಸ ಲೋಗೋ ಮತ್ತು ಬ್ರ್ಯಾಂಡ್ ಗುರುತನ್ನು ಅನಾವರಣಗೊಳಿಸಿದೆ. ಹೊಸ ಲೋಗೋ ಪ್ರಮುಖ ಮೌಲ್ಯಗಳು, ಬೆಳೆಯುತ್ತಿರುವ ಶಕ್ತಿ, ಪ್ರಗತಿ ಮತ್ತು ತಾಂತ್ರಿಕವಾಗಿ ಮತ್ತು ಪರಿಸರೀಯವಾಗಿ ಜವಾಬ್ದಾರಿಯುತ ಭವಿಷ್ಯವನ್ನು ನಿರ್ಮಿಸುವ ಬಯಕೆಯನ್ನು ಒಳಗೊಂಡಿದೆ.

ಲೋಗೋದಲ್ಲಿರುವ M ನಾಲ್ಕು ತೋಳುಗಳ ನಡುವಿನ ಮಾರ್ಗವನ್ನು ಪ್ರತಿನಿಧಿಸುತ್ತದೆ. ತಂತ್ರಜ್ಞಾನ, ಜೀವನವನ್ನು ಸರಳಗೊಳಿಸುವ ನಾವೀನ್ಯತೆ, ನಿಷ್ಪಾಪ ವಿನ್ಯಾಸ ಮತ್ತು ಉತ್ತಮ ಶಕ್ತಿಗಾಗಿ ನಿಂತಿರುವ ಗುರಾಣಿಯನ್ನು ಇದರಲ್ಲಿ ನೋಡಬಹುದು.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಮ್ಯಾಟರ್ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಮೋಹಲ್ ಲಾಲ್ಭಾಯ್ ಮಾತನಾಡಿ, "ಎಲೆಕ್ಟ್ರಿಕ್ ವಾಹನಗಳು ಮುಖ್ಯವಾಹಿನಿಗೆ ಬರಲು ನಾವು ಹೊಸ ಯೋಜನೆಯೊಂದಿಗೆ ಬಂದಿದ್ದೇವೆ. ಅಗತ್ಯ ಪ್ರಗತಿಯನ್ನು ಡಿಕೋಡ್ ಮಾಡುವುದು ಮತ್ತು ಉತ್ಪನ್ನ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಹತೋಟಿಗೆ ತರುವುದು ಮುಖ್ಯವಾಗಿದೆ. ಇಂದು ನನಗೆ ಹೆಮ್ಮೆಯ ವಿಷಯವೆಂದರೆ ನಮ್ಮ ನಾವೀನ್ಯತೆ ಸಂಸ್ಕೃತಿಯು ಇವಿ ವಾಹನದ ಬಹು ಡೊಮೇನ್‌ಗಳಲ್ಲಿ ಪ್ರಮುಖ ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸಿದೆ ಎಂದರು.

ನಮ್ಮ ಮುಂಬರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಟಾಪ್ ತಂತ್ರಜ್ಞಾನಗಳನ್ನು ಒಳಗೊಂಡು ನಿರ್ಮಿಸಲಾದ ಉತ್ಪನ್ನವಾಗಿದ್ದು, ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಹೊಸ ಯುಗದ ಮೊಬಿಲಿಟಿ, ಸಂಪರ್ಕಿತ ಅನುಭವಗಳ ಯುಗವನ್ನು ಪ್ರಾರಂಭಿಸುತ್ತದೆ ಮತ್ತು ಸುಸ್ಥಿರ, ಸೃಜನಶೀಲ ಭಾರತಕ್ಕಾಗಿ ಭವಿಷ್ಯವನ್ನು ರೂಪಿಸುತ್ತದೆ ಎಂದರು.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ತಂತ್ರಜ್ಞಾನ ಮತ್ತು ನಾವೀನ್ಯತೆ ಭವಿಷ್ಯದ ಪ್ರಾಥಮಿಕ ವಿಶಯಗಳಾಗಿವೆ. ಇವು ಮೊಬಿಲಿಟಿ ವಲಯವನ್ನು ಬದಲಾಯಿಸುತ್ತಿವೆ. ಸುರಕ್ಷತೆ, ಭದ್ರತೆ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಬಲವಾದ ಒತ್ತು ನೀಡುವ ಮೂಲಕ EV ಪರಿಸರ ವ್ಯವಸ್ಥೆಯಲ್ಲಿ ಮ್ಯಾಟರ್ ಗಮನಾರ್ಹ ತಾಂತ್ರಿಕ ಪ್ರಗತಿಯನ್ನು ಕಾಣಳಿದೆ ಎಂದು ಮ್ಯಾಟರ್ ಸಂಸ್ಥಾಪಕ ಮತ್ತು ಗ್ರೂಪ್ ಸಿಟಿಒ ಕುಮಾರ್ ಪ್ರಸಾದ್ ತೆಲಿಕೆಪಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಭವಿಷ್ಯದ ವಾಹನಗಳು ಹೆಚ್ಚು ಚುರುಕಾಗಿ ಹಾಗೂ ಡೇಟಾ-ಚಾಲಿತವಾಗಿರಲಿವೆ. ತಂತ್ರಜ್ಞಾನದ ಪ್ರಗತಿಯು ಹಲವಾರು ಸಾಧ್ಯತೆಗಳನ್ನು ತೆರೆದಿಡಲಿದ್ದು, ನಿರಂತರ ಹೊಸ ಅನುಭವಗಳನ್ನು ನೀಡುತ್ತದೆ. ಈ ದೃಷ್ಟಿಯಿಂದ ಉತ್ತಮ ಗುರಿಯಿಂದ ನಡೆಸಲ್ಪಡುವ ಮೂಲಕ, ಮ್ಯಾಟರ್ ತನ್ನ ಅನುಭವ ಮತ್ತು ಭವಿಷ್ಯದ ತಂತ್ರಜ್ಞಾನದ ಪರಿಹಾರಗಳನ್ನು ಬಳಸಿಕೊಂಡು ಪ್ರತಿಯೊಬ್ಬ ವ್ಯಕ್ತಿಯನ್ನು ಶುದ್ಧ ಪರ್ಯಾಯದ ಆಯ್ಕೆಯೊಂದಿಗೆ ಸಶಕ್ತಗೊಳಿಸಲು ಸಜ್ಜಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ನವೆಂಬರ್‌ನಲ್ಲಿ ಮೊದಲ ಬೈಕ್ ಬಿಡುಗಡೆ

ಮ್ಯಾಟರ್ ತನ್ನ ಮೊದಲ ಇ-ಮೋಟಾರ್ ಸೈಕಲ್ ಅನ್ನು ನವೆಂಬರ್ 2022 ರಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಬಳಸುವ ಮ್ಯಾಟರ್ ಡ್ರೈವ್ 1.0 ರೇಡಿಯಲ್ ಫ್ಲಕ್ಸ್ ಮೋಟರ್ ಆಗಿದ್ದು, ಇದು ಫ್ಲಕ್ಸ್ ಗೈಡ್‌ನ ನವೀನ ಆರ್ಕಿಟೆಕ್ಚರ್ ಅನ್ನು ಅತ್ಯುತ್ತಮ ಟಾರ್ಕ್ ವಿತರಣೆಗಾಗಿ ಮತ್ತು ಹಗುರವಾದ ಡ್ರೈವ್‌ಟ್ರೇನ್ ಸಾಧಿಸಲು ಸುಧಾರಿತ ವಸ್ತುಗಳನ್ನು ಸಂಯೋಜಿಸುತ್ತದೆ.

ಇದಲ್ಲದೆ ಈ EV ಡ್ರೈವ್‌ಟ್ರೇನ್ ಪ್ಲಾಟ್‌ಫಾರ್ಮ್ ಆಯಿಲ್ ತಂಪಾಗಿಸುವಿಕೆಯೊಂದಿಗೆ ಇಂಟಿಗ್ರೇಟೆಡ್ ಇಂಟೆಲಿಜೆಂಟ್ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯು ಎಲೆಕ್ಟ್ರಿಕ್ ಮೋಟರ್‌ನ ಬಹು ಘಟಕಗಳ ಏಕಕಾಲಿಕ ತಂಪಾಗಿಸುವಿಕೆಯನ್ನು ಶಕ್ತಗೊಳಿಸುತ್ತದೆ.

ಇವಿ ವಾಹನ ವಲಯಕ್ಕೆ ಲಗ್ಗೆಯಿಟ್ಟ ಮ್ಯಾಟರ್ ಸ್ಟಾರ್ಟ್-ಅಪ್‌ ಕಂಪನಿ: ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆ

ಅವುಗಳೆಂದರೆ ಸ್ಟೇಟರ್ ಮತ್ತು ರೋಟರ್, ಒಂದೇ ಪ್ರವೇಶದ್ವಾರ ಮತ್ತು ಒಂದೇ ಔಟ್‌ಲೆಟ್ ಬಳಸಿಕೊಂಡು ಈ ವ್ಯವಸ್ಥೆಯು ಎಲೆಕ್ಟ್ರಿಕ್ ಮೋಟರ್‌ನಿಂದ ವೇಗವಾಗಿ ಶಾಖ ಹಿಂತೆಗೆದುಕೊಳ್ಳುವಿಕೆಯನ್ನು ಶಕ್ತಗೊಳಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಮ್ಯಾಟರ್ ಚಾರ್ಜ್ 1.0 (ಡ್ಯುಯಲ್ ಮೋಡ್ ಪರಿವರ್ತಕ) ತಂತ್ರಜ್ಞಾನವು ಕಡಿಮೆ ಘಟಕಗಳನ್ನು ಬಳಸುವಾಗ ಯಾವುದೇ ಸಿಂಗಲ್-ಸ್ಟೇಜ್ ಅಥವಾ ಮೂರು-ಹಂತದ AC ಎಲೆಕ್ಟ್ರಿಕ್ ಮೂಲವನ್ನು ಬಳಸಿಕೊಂಡು ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಇದು ಒಟ್ಟು ತೂಕವನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

Most Read Articles

Kannada
English summary
Matter a start up company entering the EV sector Launching a new bike in November
Story first published: Thursday, September 29, 2022, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X