ಹೊಸ ಬಜಾಜ್ ಪಲ್ಸರ್ 250 ಬ್ಲ್ಯಾಕ್ ಎಡಿಷನ್ ಟೀಸರ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪಲ್ಸರ್ 250 ಸಿಸಿ ಮೋಟಾರ್‌ಸೈಕಲ್‌ನ ಹೊಸ ಬಣ್ಣದ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ತೋರುತ್ತದೆ. ಬಜಾಜ್ ಆಟೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟೀಸರ್ ಚಿತ್ರದಲ್ಲಿ 'ಡಾನ್ ಆಫ್ ದಿ ಎಕ್ಲಿಪ್ಸ್' ಎಂಬ ಶೀರ್ಷಿಕೆಯ ಜೊತೆ ಕಪ್ಪು ಬಣ್ಣದ ಬೈಕ್‌ನ ನೆರಳನ್ನು ನೀವು ನೋಡಬಹುದು. ಇದು ಬಜಾಜ್ ಪಲ್ಸರ್ 250 ಎಕ್ಲಿಪ್ಸ್ ಆವೃತ್ತಿ ಅಥವಾ ಬ್ಲ್ಯಾಕ್ ಎಢಿಷನ್ ಎಂದು ಕರೆಯಬಹುದು. ಬಜಾಜ್ ವೆಬ್‌ಸೈಟ್‌ನ ಇತರ ಭಾಗಗಳು ಇದನ್ನು ಪಲ್ಸರ್ 250 ಬ್ಲಾಕ್ ಎಂದು ಕರೆಯಬಹುದೆಂದು ಸುಳಿವು ನೀಡುತ್ತವೆ. ಹೊಸ ಬೈಕಿನ ಬಿಡುಗಡೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದಿನಾಂಕ ಬಹಿರಂಗವಾಗಿಲ್ಲ. ಬಜಾಜ್‌ನಿಂದ ಅದರ ಕುರಿತು ಹೆಚ್ಚಿನ ವಿವರಗಳಿಲ್ಲ.

ಆದರೆ ಚಿತ್ರವನ್ನು ನೋಡುವಾಗ, ಇದು ಸ್ಟ್ಯಾಂಡರ್ಡ್ ಪಲ್ಸರ್ 250 ಗಿಂತ ಯಾಂತ್ರಿಕವಾಗಿ ಬದಲಾಗಿಲ್ಲ ಎಂದು ತೋರುತ್ತದೆ ಮತ್ತು ಇಲ್ಲಿ ವಿಭಿನ್ನ ಅಂಶಗಳು ಸೌಂದರ್ಯವರ್ಧಕವಾಗಿರಬಹುದು. ಹೊಸ ರೂಪಾಂತರದ ಬಿಡುಗಡೆಯ ಮೂಲಕ ಪಲ್ಸರ್ ಸರಣಿಯನ್ನು ವಿಸ್ತರಿಸಿದೆ. ಹೊಸ ಪಲ್ಸರ್ 250 ರೇಂಜ್ ದೊಡ್ಡ ಮತ್ತು ಪವರ್ ಫುಲ್ ಬೈಕ್‍ಗಳಾಗಿವೆ.

ಈ ನಿರ್ದಿಷ್ಟ ಟೀಸರ್ ಚಿತ್ರದಲ್ಲಿನ ಬೈಕ್ ನೇಕೆಡ್ ಪಲ್ಸರ್ ಎನ್250 ಅನ್ನು ಆಧರಿಸಿದೆ ಎಂದು ತೋರುತ್ತದೆ, ಆದರೆ ಫೇರ್ಡ್ ಎಫ್250 ತನ್ನದೇ ಆದ ಬ್ಲ್ಯಾಕ್ ಎಢಿಷನ್ ಅನ್ನು ಸಹ ಪಡೆಯುವ ಸಾಧ್ಯತೆಯಿದೆ. ಬೈಕ್(ಗಳು) ಡಾರ್ಕ್ ಪೇಂಟ್ ಸ್ಕೀಮ್‌ಗಳನ್ನು ಮತ್ತು ಇಂಜಿನ್ ಕವರ್‌ಗಳು, ಎಕ್ಸಾಸ್ಟ್ ಸಿಸ್ಟಮ್ ಮತ್ತು ವೀಲ್‌ಗಳಂತಹ ಪ್ರಾಯಶಃ ಬ್ಲ್ಯಾಕ್-ಔಟ್ ಕಾಂಪೊನೆಂಟ್‌ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಪ್ರಸ್ತುತ, ಬೈಕ್ ಮಾದರಿಯ ರೇಸಿಂಗ್ ರೆಡ್, ಕೆರಿಬಿಯನ್ ಬ್ಲೂ ಮತ್ತು ಟೆಕ್ನೋ ಗ್ರೇ ಎಂಬ ಬಣ್ಣದ ಯೋಜನೆಗಳಲ್ಲಿ ಲಭ್ಯವಿದೆ. ಪಲ್ಸರ್ ಎನ್250 ಬೈಕ್ ಶಾರ್ಪ್ ಮತ್ತು ಸ್ಟೈಲಿಶ್ ಹೆಡ್‌ಲೈಟ್ ಯುನಿಟ್ ಅನ್ನು ಒಳಗೊಂಡಿದೆ. ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಅನ್ನು ನೀಡಲಾಗಿದೆ.

ಇದರ ಜೊತೆಗೆ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ ಮತ್ತು ಅನಲಾಗ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೆಡ್‌ಲೈಟ್‌ನ ಮೇಲೆ ಇರಿಸಲಾಗಿದೆ. ಇದರ ವಿನ್ಯಾಸವನ್ನು ತೀಕ್ಷ್ಣ ಮತ್ತು ಅಗ್ರೇಸಿವ್ ಆಗಿದೆ, ಇದು ಹಿಂಭಾಗದಲ್ಲಿಯೂ ಕಂಡುಬರುತ್ತದೆ.

ಬಜಾಜ್ ಪಲ್ಸರ್ ಎಫ್250 ಒಂದು ಸೆಮಿ-ಫೇರ್ಡ್ ಬೈಕ್ ಆಗಿದ್ದು, ಇದು ನೇಕೆಡ್ ಪಲ್ಸರ್ ಎನ್250 ಬೈಕ್ ಗಿಂತ ಹೆಚ್ಚು ಸ್ಪೋರ್ಟಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದೇ ಗುಣಲಕ್ಷಣವು ಎರ್ಗಾನಾಮಿಕ್ಸ್ ನಲ್ಲಿ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.

ಈ ಎರಡೂ 250ಸಿಸಿ ಬೈಕ್‍ಗಳು ಒಂದೇ ರೀತಿಯ ಫುಟ್‌ಪೆಗ್‌ಗಳು ಮತ್ತು ಸ್ಪ್ಲಿಟ್ ಸೀಟ್‌ಗಳನ್ನು ಪಡೆದರೆ, ಪಲ್ಸರ್ ಎಫ್250 ಎತ್ತರದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ ಮತ್ತು ಹೀಗಾಗಿ ಸ್ಪೋರ್ಟಿ ರೈಡಿಂಗ್ ಪೋಸಿಶನ್ ನೀಡುತ್ತದೆ.

ಇನ್ನು ಪಲ್ಸರ್ ಎನ್250 ಸಾಮಾನ್ಯ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ. ಬಜಾಜ್ ಪಲ್ಸರ್ ಎಫ್250 ಪಲ್ಸರ್ ಎನ್250 ಬೈಕ್ ಗಿಂತ 2 ಕೆಜಿ ಹೆಚ್ಚು ತೂಕವಿದೆ. ಇದು ಪ್ರಾಥಮಿಕವಾಗಿ ಹೆಚ್ಚುವರಿ ಸೆಮಿ-ಫೇರಿಂಗ್ ಪ್ಲಾಸ್ಟಿಕ್ ಬಿಟ್‌ಗಳಿಂದಾಗಿ .ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ 162 ಕೆಜಿ ತೂಕವನ್ನು ಹೊಂದಿದೆ. ಆದರೆ ಸೆಮಿ-ಫೇರ್ಡ್ ಪಲ್ಸರ್ ಎಫ್250 ಬೈಕ್ 164 ಕೆಜಿ ತೂಕವನ್ನು ಹೊಂದಿದೆ.

ಬಜಾಜ್ ಪಲ್ಸರ್ ಎಫ್250 ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ, ಇದರಿಂದಾಗಿ ಸೀಟ್ ಪೋಸಿಶನ್ ನೇರವಾಗಿರುತ್ತದೆ, ಅಂದರೆ ರೈಡರ್ ಮೇಲೆ ನೇರವಾಗಿ ಕುಳಿತುಕೊಳ್ಳಬಹುದು. ಇನ್ನು ಪಲ್ಸರ್ ಎನ್250 ಬೈಕಿನಲ್ಲಿ ಸಿಂಗಲ್ ಪೀಸ್ ಬಾರ್ ಹ್ಯಾಂಡಲ್ ಅನ್ನು ನೀಡಲಾಗಿದೆ, ಇದರಿಂದಾಗಿ ಸೀಟ್ ಪೋಸಿಶನ್ ಅಗ್ರೇಸಿವ್ ಆಗಿದೆ. ಅಂದರೆ ಸವಾರನು ಸ್ವಲ್ಪ ಹೊರೆಯಾಗಿ ಕುಳಿತುಕೊಳ್ಳಬೇಕು.

ಹೊಸ ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಲೆನ್ಸ್ ಸ್ವಲ್ಪಮಟ್ಟಿಗೆ ಮುಚ್ಚಲ್ಪಟ್ಟಿದೆ. ಆದರೆ ಪಲ್ಸರ್ ಎನ್250 ಬೈಕಿನಲ್ಲಿ ಪ್ರೊಜೆಕ್ಟರ್ ಲೆನ್ಸ್ ತೆರೆದಿರುತ್ತದೆ. ಆದರೆ ಇದು ಮುಂಚಿರುವಂತೆ ಕಾಣುತ್ತದೆ. ಇದು ಕೂಡ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳ ನಡುವಿನ ವ್ಯತ್ಯಾಸಗಳಲ್ಲಿ ಒಂದಾಗಿದೆ. ಬಜಾಜ್ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್‍ಗಳಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 24.1 ಬಿಹೆಚ್‍ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿರುತ್ತದೆ.

ಈ ಬಜಾಜ್ ಪಲ್ಸರ್ ಎನ್250 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ FZ25 ಮತ್ತು ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಕ್ವಾರ್ಟರ್-ಲೀಟರ್ ವಿಭಾಗದಲ್ಲಿ ಕೆಲವು ಇತರ ಬೈಕ್ ಗಳು ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್, ಇತ್ಯಾದಿಗಳನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಬಜಾಜ್ ಆಟೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಪಲ್ಸರ್ 250 ಬೈಕಿನ ಹೊಸ ರೂಪಾಂತರವಾಗಿರಬಹುದು, ಇಲ್ಲಿಯವರೆಗೆ ಈ ಬೈಕಿನ ಅಧಿಕೃತ ದಿನಾಂಕ ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.


Click it and Unblock the Notifications








