ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

2022ರ ದೀಪಾವಳಿ ಸೇರಿದಂತೆ ಮುಂಬರಲಿರುವ ಸಾಲು ಸಾಲು ಹಬ್ಬಗಳಿಗೆ ದ್ವಿಚಕ್ರ ವಾಹನ ಮಾರುಕಟ್ಟೆಯೂ ಮಿಂಚಲಿದೆ, ಹಲವು ಹೊಸ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ನೀವು ದೀಪಾವಳಿಗೆ ಹೊಸ ಬೈಕ್ ಅನ್ನು ಹುಡುಕುತ್ತಿದ್ದರೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬೈಕ್‌ಗಳ ಪಟ್ಟಿಯನ್ನು ನಾವು ನಿಮಗಾಗಿ ತಂದಿದ್ದೇವೆ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

ಸದ್ಯ ವಾಹನ ಮಾರುಕಟ್ಟೆಯಲ್ಲಿ ಹಲವು ಮಾದರಿಗಳು ಬಿಡುಗಡೆಯಾಗಲು ಸಜ್ಜಾಗುತ್ತಿವೆ. ಕೆಲವು ಹೊಸ ಮಾದರಿಗಳು ಟೆಸ್ಟಿಂಗ್ ಮುಗಿಸಿದ್ದರೇ, ಇನ್ನೂ ಕೆಲವು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಬದಲಾವಣೆ ಪಡೆದುಕೊಂಡು ಬಿಡುಗಡೆಗೆ ಸಿದ್ದವಾಗುತ್ತಿವೆ. ಈ ನಿಟ್ಟಿನಲ್ಲಿ ಬೈಕ್ ಪ್ರಿಯರು ಶೀಘ್ರವೇ ಖರೀದಿಸಬಹುದಾದ ಕೆಲವು ಮಾದರಿಗಳನ್ನು ಇಲ್ಲಿ ನೋಡಬಹುದು.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

1. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450

ರಾಯಲ್ ಎನ್‌ಫೀಲ್ಡ್‌ನ ಹಿಮಾಲಯನ್ 450 ಬೈಕ್ ಕಳೆದ ಹಲವು ದಿನಗಳಿಂದ ಕುತೂಹಲವನ್ನು ಹೆಚ್ಚಿಸಿದೆ. ಇದನ್ನು ಬಹುದಿನಗಳಿಂದ ಪರೀಕ್ಷಿಸಲಾಗುತ್ತಿದೆ. ಹಲವಾರು ಬಾರಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್‌ನ ಎಂಡಿ ಈ ಬೈಕ್‌ನ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಿಂದ ಹೊಸ ಮಾದರಿಯ ನೋಟದ ಬಗ್ಗೆ ಸ್ವಲ್ಪ ಮಾಹಿತಿ ನೀಡಲಾಗಿದೆ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಇದು ಪ್ರಸ್ತುತ ಮಾದರಿಗಿಂತ ಸ್ವಲ್ಪ ದೊಡ್ಡದಾಗಿರಲಿದೆ. ಬಿಡುಗಡೆಯಾದ ಫೋಟೋ ಪ್ರಕಾರ ಬೈಕಿನ ಮುಂಭಾಗದ ಎಲ್ಇಡಿ ಹೆಡ್‌ಲೈಟ್ ಅನ್ನು ನೋಡಬಹುದಾಗಿದೆ. ಆದರೆ ಹೆಚ್ಚಿನ ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಸ್ವಲ್ಪ ದೊಡ್ಡ ಎಕ್ಸಾಸ್ಟ್ ಅನ್ನು ಪಡೆಯುವ ನಿರೀಕ್ಷೆಯಿದೆ, ಆದರೆ ಅದರ ವಿಂಡ್‌ಶೀಲ್ಡ್, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳನ್ನು ಹಾಗೇ ಇಡಬಹುದು. ಮುಂಭಾಗ ಮತ್ತು ಹಿಂಭಾಗದ ಲಗೇಜ್ ರಾಕ್‌ಗಳನ್ನು ಮೊದಲಿನಂತೆಯೇ ಇರಿಸಬಹುದು ಆದರೆ ಅದರ ಪ್ರೊಫೈಲ್ ಅನ್ನು ಸಹ ಸ್ವಲ್ಪ ಬದಲಾಯಿಸಬಹುದು.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

2. ಹೀರೋ Xplus 400, Xtreme 400S

ಹೀರೋ ಪ್ರಸ್ತುತ ಹಲವಾರು Xplus ಬೈಕ್‌ಗಳನ್ನು ಪರೀಕ್ಷಿಸುತ್ತಿದೆ. ಈ ಹಿಂದೆ Xplus 400 ಮಾಡೆಲ್ ಮತ್ತು Xtreme 400S ಅನ್ನು ಪರೀಕ್ಷಿಸುತ್ತಿದೆ. ಕಂಪನಿಯು ಈಗ ತನ್ನ ಜನಪ್ರಿಯ Xplus ಶ್ರೇಣಿಯ ಮೂಲಕ 400cc ವಿಭಾಗಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

ಅದೇ ಸಮಯದಲ್ಲಿ ಎಕ್ಸ್‌ಟ್ರೀಮ್ ಮಾದರಿಯ 400 ಸಿಸಿ ಮಾದರಿಯನ್ನು ಸಹ ತರಬಹುದು, ಇದನ್ನು ಕೂಡ ಏಕಕಾಲದಲ್ಲಿ ಪರೀಕ್ಷಿಸಲಾಗುತ್ತಿದೆ. ಕಂಪನಿಯು ಸಂಪೂರ್ಣವಾಗಿ ಹೊಸ ವಿಭಾಗವನ್ನು ಪ್ರವೇಶಿಸಲಿರುವುದರಿಂದ ಹೀರೋಗೆ ಇದು ಬಹಳ ಮುಖ್ಯವಾದ ಮಾದರಿಯಾಗಲಿದೆ. ನೋಟದಿಂದ ವೈಶಿಷ್ಟ್ಯಗಳವರೆಗೆ ಯಾವುದೇ ಕಡಿತವನ್ನು ಮಾಡಲು ಕಂಪನಿಯು ಬಯಸಿಲ್ಲ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

3. ಬಜಾಜ್ ಪ್ಲೇಸರ್ N150

ಬಜಾಜ್ ಪಲ್ಸರ್ ಕಂಪನಿಯ ಜನಪ್ರಿಯ ಶ್ರೇಣಿಯಾಗಿದೆ. ಇದರಲ್ಲಿ 150cc ಮಾದರಿಯು ಇದೀಗ ಸದ್ದು ಮಾಡುತ್ತಿದೆ. ಇದರಿಂದಾಗಿ ಇದು ಈ ಶ್ರೇಣಿಯ ಅತ್ಯುತ್ತಮ ಮಾರಾಟವಾದ ಮಾದರಿಯಾಗಿದೆ. ಈಗ ಇದನ್ನು ವಿಸ್ತರಿಸಿ, ನಿರಂತರವಾಗಿ ಪರೀಕ್ಷೆಗೆ ಒಳಪಟ್ಟಿರುವ N150 ಮಾದರಿಯನ್ನು ಕಂಪನಿಯು ತರಲು ಹೊರಟಿದೆ. ಅಂತಿಮ ಟಸ್ಟಿಂಗ್ ಕೂಡ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಬಹುದು.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

4. ಹೊಸ ಹೀರೋ XPulse 200T

ಹೀರೋ ತನ್ನ 200cc ಬೈಕ್ XPulse 200T ಅನ್ನು ಹೊಸ ಅವತಾರದಲ್ಲಿ ತರಲು ತಯಾರಿ ನಡೆಸುತ್ತಿದೆ. ಕಂಪನಿಯು ಈ ಬೈಕ್‌ನ ನೋಟ ಮತ್ತು ಗ್ರಾಫಿಕ್ಸ್‌ನಲ್ಲಿ ಬದಲಾವಣೆಗಳನ್ನು ಮಾಡಲಿದೆ. ಆದರೆ ಎಂಜಿನ್‌ನಲ್ಲಿ ಯಾವುದೇ ನವೀಕರಣವನ್ನು ಮಾಡಲಾಗುವುದಿಲ್ಲ. ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲೂ ಈ ಬೈಕ್ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಲಾಂಚ್ ಆಗಲಿದೆ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

5. ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 7 ಅಕ್ಟೋಬರ್ 2022 ರಂದು ಬಿಡುಗಡೆ ಮಾಡಲಿದೆ. ಹೀರೋನ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಹೊಸ ವಿಡಾ ಸಬ್ ಬ್ರಾಂಡ್ ಹೆಸರಿನಲ್ಲಿ ಲಭ್ಯವಿರುತ್ತದೆ. ಹೊಸ Vida ಸಬ್-ಬ್ರಾಂಡ್ ಅನ್ನು 1 ಜುಲೈ 2021 ರಂದು ಪರಿಚಯಿಸಲಾಯಿತು. ಸದ್ಯಕ್ಕೆ ಮುಂಬರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ನ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿಲ್ಲ.

ಮುಂಬರುವ ಹಬ್ಬಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ ಹೊಸ ಬೈಕ್‌ಗಳು: ತುಸು ಕಾದರೆ ಖರೀದಿದಾರರಿಗೆ ಹಲವು ಆಯ್ಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದ್ವಿಚಕ್ರ ವಾಹನ ಮಾರುಕಟ್ಟೆಯು ಪ್ರತಿ ವರ್ಷ ಹಲವು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಆದರೆ ಈ ವರ್ಷ ಭಾರೀ ಮಾದರಿಗಳು ಮಾರುಕಟ್ಟೆ ತಲುಪಿದ್ದು, ವರ್ಷಾಂತ್ಯಕ್ಕೆ ಇನ್ನೂ ಹಲವು ಹೊಸ ಮಾಡಲ್‌ಗಳು ಸದ್ದು ಮಾಡಲಿವೆ. ಈಗಾಗಲೇ ಬೈಕ್ ಖರೀಗೆ ಸಜ್ಜಾಗಿರುವವರು ಮೇಲೆ ತಿಳಿಸಿರುವ ವಾಹನಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಬಳಿಕ ಖರೀದಿಸಬಹುದು.

Most Read Articles

Kannada
English summary
New Bike Launches in Upcoming Festivals Lots of Choices for Buyers to Wait for
Story first published: Thursday, September 22, 2022, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X