ಭಾರತದಲ್ಲಿ 2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಹೋಂಡಾ ತನ್ನ 2022ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ 2022ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಅಗ್ರೇಸಿವ್ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನ ಮ್ಯಾನುವಲ್ ರೂಪಾಂತರದ ಬೆಲೆಯು ರೂ.16.01 ಲಕ್ಷಗಳಾದರೆ, ಡ್ಯುಯಲ್-ಕ್ಲಚ್ (ಡಿಸಿಟಿ) ಆಟೋಮ್ಯಾಟಿಕ್ ರೂಪಂತರದ ಬೆಲೆಯು ರೂ.17.55 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಬಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಕ್ ತಯಾರಕರು 7 ನಗರಗಳಾದ್ಯಂತ ಇರುವ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಮ್‌ಗಳಲ್ಲಿ ಅಥವಾ ಬಿಗ್‌ವಿಂಗ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಎರಡೂ ಮಾದರಿಗಳಿಗೆ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಮಾರ್ಗದ ಮೂಲಕ ದೇಶಕ್ಕೆ ತರಲಾಗುತ್ತದೆ. ಈ ಹೊಸ ಆವೃತ್ತಿಯೊಂದಿಗೆ ಉತ್ತಮ ಪ್ರೇಕ್ಷಕರನ್ನು ಸೆಳೆಯಲು ಜಪಾನಿನ ತಯಾರಕರು ನಿರೀಕ್ಷಿಸುತ್ತಾರೆ.

ಈ 2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನಲ್ಲಿ 1082.96 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 98 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 103 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಆಫ್ರಿಕಾ ಟ್ವಿನ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಆಫ್ರಿಕಾ ಟ್ವಿನ್ ಅರೆ ಡಬಲ್ ಕ್ರೇಡಲ್ ಚಾಸಿಸ್ ಜೊತೆಗೆ 231 ಎಂಎಂ ಟ್ರ್ವಾವೆಲ್ ನೊಂದಿಗೆ ಇನ್ವರ್ಡಡ್ ಶೋವಾ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನುಹೊಂದಿದೆ ಮತ್ತು 221 ಎಂಎಂ ಟ್ರ್ಯಾವೆಲ್ ನೊಂದಿಗೆ ಬೈಕ್‌ಮೇಕರ್‌ನ ಪ್ರೊ ಲಿಂಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಪ್ರಮುಖವಾಗಿ ಆಫ್ರಿಕಾ ಟ್ವಿನ್‌ನಲ್ಲಿನ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್‌ಗಳು ಮುಂಭಾಗದಲ್ಲಿ ನಾಲ್ಕು-ಪಿಸ್ಟನ್ ಕ್ಯಾಲಿಪರ್‌ಗಳನ್ನು ಒಳಗೊಂಡಿರುತ್ತವೆ. ಹಿಂಭಾಗದಲ್ಲಿ, ಹೋಂಡಾ ಆಫ್ರಿಕಾ ಟ್ವಿನ್ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 256 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಈ 2022ರ ಆಫ್ರಿಕಾ ಟ್ವಿನ್ ಕ್ರಮವಾಗಿ 90/90-21 ಮತ್ತು 150/70R-18 ಟೈರ್‌ಗಳೊಂದಿಗೆ 21-ಇಂಚಿನ (ಮುಂಭಾಗ) ಮತ್ತು 18-ಇಂಚಿನ ವ್ಹೀಲ್ ಅನ್ನು ಒಳಗೊಂಡಿದೆ

ಈ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನಲ್ಲಿ 2,307 ಎಂಎಂ ಉದ್ದ, 963 ಎಂಎಂ ಎತ್ತರವಾಗಿದೆ. ಆಫ್ರಿಕಾ ಟ್ವಿನ್‌ನ ವ್ಹೀಲ್‌ಬೇಸ್ 1,558 ಉದ್ದವಾಗಿದೆ ಮತ್ತು ಅಡ್ವೆಂಚರ್ ಬಬೈಕ್‌ನ ಸೀಟ್ ಎತ್ತರವನ್ನು 810 ಮತ್ತು 830 ಎಂಎಂ ನಡುವೆ ಸರಿಹೊಂದಿಸಬಹುದು. ಆಫ್ರಿಕಾ ಟ್ವಿನ್ 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

2022ರ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ನಾಲ್ಕು ಡೀಫಾಲ್ಟ್ ರೈಡ್ ಮೋಡ್ ಸೆಟ್ಟಿಂಗ್‌ಗಳು - ಟೂರ್, ಅರ್ಬನ್, ಗ್ರಾವೆಲ್ ಮತ್ತು ಆಫ್-ರೋಡ್ ಜೊತೆಗೆ ಎರಡು ರೈಡರ್ ಕಸ್ಟಮೈಸ್ ಮಾಡಬಹುದಾದ ಮೋಡ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ.

ಈ ಬೈಕಿನಲ್ಲಿ Bluetooth ಸುಸಜ್ಜಿತ ಎಲ್ಸಿಡಿ ಟಚ್‌ಸ್ಕ್ರೀನ್ ಈಗ Apple CarPlay ಮತ್ತು Android Auto ಕನೆಕ್ಟಿವಿಟಿಯೊಂದಿಗೆ ಉತ್ತಮ ಗೋಚರತೆಯನ್ನು ನೀಡುತ್ತದೆ. ಇತರ ವೈಶಿಷ್ಟ್ಯಗಳು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಡ್ಯುಯಲ್ ಎಲ್ಇಡಿ ಹೆಡ್‌ಲೈಟ್‌ಗಳು, ದೊಡ್ಡ 24.5-ಲೀಟರ್ ಇಂಧನ ಟ್ಯಾಂಕ್ ಮತ್ತು ಹೊಂದಾಣಿಕೆ ವಿಂಡ್‌ಸ್ಕ್ರೀನ್ ಒಳಗೊಂಡಿವೆ.

ಆಫ್ರಿಕಾ ಟ್ವಿನ್‌ನಲ್ಲಿರುವ ಇತರ ವೈಶಿಷ್ಟ್ಯಗಳು, ಐಎಂಯು, ಚಾನೆಲ್ ಎಬಿಎಸ್, ಮತ್ತು HSTC (ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್) ಅನ್ನು ಒಳಗೊಂಡಿವೆ. ಹೋಂಡಾ ಆಫ್ರಿಕಾ ಟ್ವಿನ್ ಅನ್ನು ಎರಡು ಬಣ್ಣಗಳಲ್ಲಿ ನೀಡಲಾಗುತ್ತದೆ. ಆಫ್ರಿಕಾ ಟ್ವಿನ್‌ನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆವೃತ್ತಿಯನ್ನು ಪರ್ಲ್ ಗ್ಲೇರ್ ವೈಟ್ ತ್ರಿವರ್ಣದಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಡಿಸಿಟಿ ರೂಪಾಂತರವನ್ನು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟಾಲಿಕ್ ಪೇಂಟ್ ಜಾಬ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ನೋಡುತ್ತಿದ್ದಾರೆ. ಭಾರತದಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲು ಹೋಂಡಾ ಸಜ್ಜಾಗುತ್ತಿದೆ. ಇತ್ತೀಚೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಿಬಿಆರ್ 150ಆರ್ ಪೇಟೆಂಟ್ ಪಡೆದಿದ್ದೇವೆ ಎಂದು ಹೇಳಿದ್ದರು, ಫೇರ್ಡ್ ಸೂಪರ್‌ಸ್ಪೋರ್ಟ್ ಸ್ಪರ್ಧಾತ್ಮಕವಾಗಿ ಬೆಲೆಯಿದ್ದರೆ ಯಮಹಾ ಆರ್15 ವಿ4 ಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದು ಆದರೆ ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದಿಲ್ಲ. ಇದೀಗ ಕಂಪನಿಯು ಸಿಆರ್‌ಎಫ್190ಎಲ್ ಅನ್ನು ಪೇಟೆಂಟ್ ಮಾಡಿದೆ. ಈ ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಬೈಕ್ ಚೀನಾದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಸಿಆರ್‌ಎಫ್1100ಎಲ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ.

2022ರ ಹೋಂಡಾ ಆಫ್ರಿಕಾ ಟ್ವಿನ್‌ನ ಬಿಡುಗಡೆಯು ಜಪಾನಿನ ಮೋಟಾರ್‌ಸೈಕಲ್ ತಯಾರಕರು ಭಾರತದಲ್ಲಿ ಅಡ್ವೆಂಚ್ ವಿಭಾಗದ ಪ್ರಯಾಣವನ್ನು ಮುಂದುವರೆಸುವುದನ್ನು ನೋಡುತ್ತದೆ. ಈ ಹೋಂಡಾ ಆಫ್ರಿಕಾ ಟ್ವಿನ್ ಉತ್ತಮ ಅಡ್ವೆಂಚರ್ ಬೈಕ್ ಆಗಿದೆ.


Click it and Unblock the Notifications