ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ 2022ರ 390 ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಇತ್ತೀಚೆಗೆ ಯುಎಸ್ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಬಿಡುಗದೆಗೊಳಿಸಲಾಗಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಮೊದಲ ಬ್ಯಾಚ್ ಭಾರತದಾದ್ಯಂತ ಡೀಲರ್ ಶೋರೂಮ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಪ್ರಪಂಚದಾದ್ಯಂತದ ಕೆಟಿಎಂ ಸರಣಿಯಿಂದ 390 ಸರಣಿಯವರೆಗಿನ ಮಾದರಿಗಳನ್ನು ಭಾರತದಲ್ಲಿ ಬಜಾಜ್ ಆಟೋ ತನ್ನ ಚಕನ್-ಆಧಾರಿತ ಘಟಕದಲ್ಲಿ ತಯಾರಿಸುತ್ತದೆ. ಆದ್ದರಿಂದ ಯುಎಸ್ ನಲ್ಲಿ ಬಿಡುಗಡೆ ಮಾಡಲಾದ ಮಾದರಿಯು ಭಾರತದಿಂದ ರಫ್ತು ಮಾಡುವ ಸಾಧ್ಯತೆಯಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಸೂಕ್ಷ್ಮ ಮತ್ತು ಗಮನಿಸಬಹುದಾದ ನವೀಕರಣಗಳೊಂದಿಗೆ ಬರುತ್ತದೆ. ಈ ಅಡ್ವೆಂಚರ್ ಟೂರರ್‌ನಲ್ಲಿನ ದೃಶ್ಯ ನವೀಕರಣಗಳು ಡಾಕರ್ ವಿಜೇತ KTM ಫ್ಯಾಕ್ಟರಿ ರ್ಯಾಲಿ ಯಂತ್ರಗಳಿಗೆ ಅನುಗುಣವಾಗಿರುತ್ತವೆ. ಇದರ ಒಟ್ಟಾರೆ ವಿನ್ಯಾಸವು ಒಂದೇ ಆಗಿರುತ್ತದೆ, ಇದು ತಿಳಿದಿರುವ ಅದೇ ಒರಟಾದ ಶೈಲಿಯನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ನವೀಕರಿಸಿದ 390 ಅಡ್ವೆಂಚರ್ ಈಗ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಪಡೆದುಕೊಂಡಿದೆ. ಇದು ಗ್ರೇ-ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳಾಗಿವೆ. ಇದರಲ್ಲಿ ಆರೇಂಜ್ ಅಸ್ಸೆಂಟ್ ಗಳು ಮತ್ತು ಬಾಡಿ ಗ್ರಾಫಿಕ್ಸ್‌ನೊಂದಿಗೆ ನೀಡಲಾಗುತ್ತದೆ. ಇವು ಕೆಟಿಎಂನ ದೊಡ್ಡ ಮಾದರಿಗಳಿಂದ ಸ್ಫೂರ್ತಿ ಪಡೆದಿವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಉದಾಹರಣೆಗೆ 890 ಅಡ್ವೆಂಚರ್ ಜೊತೆಗೆ ಬೈಕು ಹೊಸ ಟ್ಯಾಂಕ್ ಕವಚಗಳು ಮತ್ತು ಹಿಂಭಾಗದ ಸೈಡ್ ಪ್ಯಾನೆಲ್‌ಗಳನ್ನು ಪಡೆಯುತ್ತದೆ. ಇದು ಸವಾರನಿಗೆ ಉತ್ತಮ ನಿಯಂತ್ರಣವನ್ನು ಒದಗಿಸುತ್ತದೆ. ಈ ಹೊಸ 390 ಅಡ್ವೆಂಚರ್ ಬೈಕಿನ ಹೆಡ್‌ಲೈಟ್ ಮಾಸ್ಕ್ ಅನ್ನು ಮುಂಭಾಗವನ್ನು ಸ್ವಲ್ಪ ಹಗುರವಾಗಿಸಲು ಕಡಿಮೆ ಮಾಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಇನ್ನು ಫ್ಯೂಯಲ್ ಟ್ಯಾಂಕ್‌ನ ಆಕಾರವನ್ನು ಸಹ ಸವಾರರ ಚಲನೆ ಮತ್ತು ನಿಯಂತ್ರಣದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಹೊಂದುವಂತೆ ಮಾಡಲಾಗಿದೆ. ಹೊಸ 390 ಅಡ್ವೆಂಚರ್‌ನಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ವೈಸರ್‌ನೊಂದಿಗೆ ತನ್ನ ಸರಣಿಯಲ್ಲಿ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ವೈಶಿಷ್ಟ್ಯಗಳಿಗೆ ಬರುವುದಾದರೆ, ಎಲ್ಲಾ ಎಲ್ಇಡಿ ಲೈಟಿಂಗ್, ಹೊಂದಾಣಿಕೆಯ ವಿಂಡ್‌ಸ್ಕ್ರೀನ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಸಕ್ರಿಯಗೊಳಿಸಲಾದ ಸಂಪೂರ್ಣ ಬಣ್ಣದ TFT ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇ, ಆಯ್ಕೆಯ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಸ್ಟ್ಯಾಂಡರ್ಡ್ 12V ಚಾರ್ಜಿಂಗ್ ಪೋರ್ಟ್‌ನಂತಹ ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಕೆಟಿಎಂ 390 ಅಡ್ವೆಂಚರ್ ಬೈಕ್ ಹಾರ್ಡ್‌ವೇರ್ ಕಾನ್ಫಿಗರೇಶನ್‌ಗಳು ಒಂದೇ ಸಸ್ಪೆಂಕ್ಷನ್ ಸೆಟಪ್‌ನೊಂದಿಗೆ ಹೊಂದಾಣಿಕೆ ಮಾಡಲಾಗದ ಇನ್ವರ್ಡರ್ಡ್ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ WP ಅಪೆಕ್ಸ್ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಇನ್ನು ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಈ ಹೊಸ ಅಡ್ವೆಂಚರ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಆಫ್ರೋಡ್ ಮೋಡ್‌ನೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಹಾಯ ಮಾಡುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಅದೇ 373.2cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 42.3ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು ಸ್ಟ್ಯಾಂಡರ್ಡ್ ಬೈ-ಡೈರೆಕ್ಷನಲ್ ಕ್ವಿಕ್-ಶಿಫ್ಟರ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಇದರೊಂದಿಗೆ ಕೆಟಿಎಂ ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಹೊಸ ಕೆಟಿಎಂ ಆರ್‌ಸಿ 390 ಬೈಕ್ ಭಾರತದಲ್ಲಿ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದಕ್ಕಾಗಿ ಆರ್‌ಸಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಟಿಎಂ ಆರ್‌ಸಿ 390 ಬೈಕ್ ಅನ್ನು 2021 ರಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಸೆಮಿಕಂಡಕ್ಟರ್‌ಗಳ ಕೊರತೆ ಮತ್ತು ನಡೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಬಿಡುಗಡೆಯಾಗಲಿ ವಿಳಂಬವಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಇಂಟರ್ನ್ಯಾಷನಲ್-ಸ್ಪೆಕ್ ಮೋಟಾರ್ಸೈಕಲ್ ಹೊಂದಾಣಿಕೆಯ ಸಸ್ಪೆಂಕ್ಷನ್ ವೈಶಿಷ್ಟ್ಯವನ್ನು ಹೊಂದಿದೆ. ಹಿಂದೆ ನೋಡಿದಂತೆ. ಭಾರತದ ಕೆಲವು ಕೆಟಿಎಂ ಮಾದರಿಗಳು ಈ ಫೀಚರ್ ಅನ್ನು ಕಳೆದುಕೊಂಡಿದೆ. ಆದರೆ ಹೊಸ ಸಸ್ಪೆರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯಾದಾಗ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಹೊಂದಿರುತ್ತದೆ. ಎರಡನೇ ತಲೆಮಾರಿನ ಆರ್‌ಸಿ-ಸರಣಿಯ ಬೈಕ್‌ಗಳನ್ನು ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು. ಕೆಟಿಎಂ ಕಂಪನಿಯು ಎರಡನೇ ತಲೆಮಾರಿನ ಕೆಟಿಎಂ ಆರ್‌ಸಿ 390 ಬೈಕಿನ ಹೆಸರನ್ನು ಕಂಪನಿಯ ಭಾರತದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಮಾದರಿಯು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Image Courtesy: KTM Khamla Square and Hitesh Ghogalia

More from DriveSpark

Article Published On: Tuesday, February 15, 2022, 10:27 [IST]
English summary
New ktm 390 adventure 2022 launch soon in india details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+