RE ಬೈಕ್‌ಗಳೇ ಭಾರವೆಂದರೆ ಇವುಗಳಿಗೆ ಏನಂತೀರಾ...ಭಾರತದಲ್ಲೂ ಲಭ್ಯವಿರುವ ಟಾಪ್ 5 ದೈತ್ಯಗಳಿವು!

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಸೂಪರ್ ಮೀಟಿಯರ್ 650 ಅನ್ನು ಅನಾವರಣಗೊಳಿಸಿ ಹಲವರ ಹುಬ್ಬೇರಿಸಿದೆ.

ಇದಕ್ಕೆ ಮುಖ್ಯ ಕಾರಣ ರಾಯಲ್ ಎನ್‌ಫೀಲ್ಡ್ ತಯಾರಿಸುವ ಇದುವರೆಗಿನ ಅತ್ಯಂತ ಭಾರವಾದ ಮೋಟಾರ್‌ಸೈಕಲ್ ಇದಾಗಿರುವುದು. ಇದು ಬರೋಬ್ಬರಿ 241kg ತೂಕವಿದ್ದು, ತನ್ನ ಬೈಕ್‌ಗಳ ಲಿಸ್ಟ್‌ನಲ್ಲಿ ಸೂಪರ್ ಮೀಟಿಯರ್ 650 ದೈತ್ಯವಾಗಿ ಕಾಣುತ್ತದೆ.

RE ಬೈಕ್‌ಗಳೇ ಭಾರವೆಂದರೆ ಇವುಗಳಿಗೆ ಏನಂತೀರಾ...ಭಾರತದಲ್ಲೂ ಲಭ್ಯವಿರುವ ಟಾಪ್ 5 ದೈತ್ಯಗಳಿವು!

ಆದರೆ ನಾವು ಹೇಳಲು ಹೊರಟಿರುವ ಇತರ ಬೈಕ್‌ಗಳಿಗೆ ಸೂಪರ್ ಮೀಟಿಯರ್ 650 ಅನ್ನು ಹೋಲಿಸಿದರೆ ಯಾವುದೇ ಮೂಲೆಗೂ ಸಾಲುವುದಿಲ್ಲ. ಇವೆಲ್ಲವೂ ಭಾರತದಲ್ಲಿ ಮಾರಾಟವಾಗಿರುವ ಟಾಪ್ 5 ಭಾರವಾದ ಬೈಕ್‌ಗಳಾಗಿದ್ದು, ಇವುಗಳ ತೂಕ ಹಾಗೂ ಕೆಲವೊಂದು ವಿಶೇಷತೆಗಳನ್ನು ಇಲ್ಲಿ ತಿಳಿದುಕೊಳ್ಳೋಣ...

1. ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್
ಹಾರ್ಲೆ-ಡೇವಿಡ್ಸನ್ ಟೂರಿಂಗ್ ಮಾಡೆಲ್ ಯಾರಿಗೆ ಗೊತ್ತಿಲ್ಲ ಹೇಳಿ.. ಇದರ ಹೆಸರನ್ನು ವಾಹನ ಪ್ರಿಯರು ಒಮ್ಮೆಯಾದ್ರೂ ಕೇಳಿರುತ್ತೀರ, ಆದರೆ ಇದರ ಭಾರದ ಬಗ್ಗೆ ತಿಳಿದಿರುವುದಿಲ್ಲ. ಇದು ನಿಖರವಾಗಿ 375 ಕೆ.ಜಿ ತೂಕವಿದ್ದು, 1,868cc Milwaukee Eight V-Twin ಎಂಜಿನ್ ನೊಂದಿಗೆ ಬರುತ್ತದೆ. ಈ ಬೈಕ್ 3,250rpm ನಲ್ಲಿ 158Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದರ ಬೆಲೆಯು ರೂ. 33.99 ಲಕ್ಷ ಎಕ್ಸ್‌ ಶೋರೂಂ ಆಗಿದೆ.

2. ಹಾರ್ಲೆ-ಡೇವಿಡ್ಸನ್ ರೋಡ್ ಗ್ಲೈಡ್ ಸ್ಪೆಷಲ್
ರೋಡ್ ಗ್ಲೈಡ್ ಸ್ಪೆಷಲ್ ಮತ್ತು ಮೇಲೆ ತಿಳಿಸಿದ ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ಬಹುತೇಕ ಒಂದೇ ವಿಶೇಷತೆಗಳೊಂದಿಗೆ ಬಂದರೂ, ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಆರಂಭಿಕರಿಗಾಗಿ ರಸ್ತೆಯ ಫೋರ್ಕ್-ಮೌಂಟೆಡ್ ಬ್ಯಾಟ್ವಿಂಗ್ ಫೇರಿಂಗ್‌ಗಿಂತ ರೋಡ್ ಗ್ಲೈಡ್‌ನಲ್ಲಿನ ಫೇರಿಂಗ್ ಅನ್ನು ಚಾಸಿಸ್‌ಗೆ ಜೋಡಿಸಲಾಗಿದೆ. ಇದು ಹೆಚ್ಚು ಆಧುನಿಕ ಅವಳಿ-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಅನ್ನು ಸಹ ಹೊಂದಿದೆ. ಇನ್ನು ತೂಕ 387kg ಯಿದ್ದು ಇದು ಸ್ಟ್ರೀಟ್ ಗ್ಲೈಡ್‌ಗಿಂತ 12kg ಭಾರವಾಗಿರುತ್ತದೆ. ಹಾಗೆಯೇ ಬೆಲೆಯಲ್ಲಿ 3 ಲಕ್ಷ ರೂ. ಹೆಚ್ಚಾಗಿದೆ.

3. ಹೋಂಡಾ ಗೋಲ್ಡ್ ವಿಂಗ್ ಟೂರ್
ಹೋಂಡಾ ಒಂದಲ್ಲ, ಎರಡು ಹಾರ್ಲೆ-ಡೇವಿಡ್ಸನ್‌ಗಳಿಗಿಂತ ಹೆಚ್ಚು ಭಾರವಿರುವ ಏಕೈಕ ಗೋಲ್ಡ್ ವಿಂಗ್ ಟೂರ್ ಎಂಬ ಬೈಕನ್ನು ಹೊಂದಿದೆ. ಈ ಬೈಕ್ ಲಿಕ್ವಿಡ್-ಕೂಲ್ಡ್ 1,833cc ಫ್ಲಾಟ್-ಸಿಕ್ಸ್ ಎಂಜಿನ್ 125hp ಮತ್ತು 170Nm ಟಾರ್ಕ್ ಅನ್ನು ಹೊರಹಾಕಬಲ್ಲದು. ಇದನ್ನು ದೂರದ ಪ್ರವಾಸಗಳಿಗೆ ಹೇಳಿ ಮಾಡಿಸದ ಗಾಡಿ ಎಂದು ಶ್ಲಾಘಿಸಲಾಗಿದೆ. ಇದರ ತೂಕ ಹಾಗೂ ಬೆಲೆ ವಿಷಯಕ್ಕೆ ಬಂದರೆ ಬರೋಬ್ಬರಿ 390 ಕೆ.ಜಿ ಭಾರವಿದ್ದು, ರೂ. 39.72 ಲಕ್ಷ ಬೆಲೆಯನ್ನು ಹೊಂದಿದೆ.

4. ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್
ಇಂಡಿಯನ್ ರೋಡ್‌ಮಾಸ್ಟರ್ ಅಲಂಕೃತ ಆವೃತ್ತಿಯಾಗಿದ್ದು, ಹೆಚ್ಚು ಶಕ್ತಿಶಾಲಿ ಮ್ಯೂಸಿಕ್ ಸಿಸ್ಟಮ್ ಮತ್ತು ಫ್ಲ್ಯಾಶಿ ಪೇಂಟ್ ಆಯ್ಕೆಗಳನ್ನು ಹೊಂದಿದೆ. ರೋಡ್‌ಮಾಸ್ಟರ್ ಲಿಮಿಟೆಡ್ ಏರ್-ಕೂಲ್ಡ್, 1,890cc ಥಂಡರ್‌ಸ್ಟ್ರೋಕ್ 116 V-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದ್ದು, ಕೇವಲ 3,000rpm ನಲ್ಲಿ 171Nm ಟಾರ್ಕ್ ಅನ್ನು ಹೊರಹಾಕಬಲ್ಲದು. ಇನ್ನು 403 ಕೆ.ಜಿ ತೂಕದೊಂದಿಗೆ ರೂ. 43.80 ಲಕ್ಷ ಬೆಲೆಗೆ ಖರೀದಿಗೆ ಲಭ್ಯವಿದೆ.

5. ಇಂಡಿಯನ್ ಪರ್ಸ್ಯೂಟ್ ಲಿಮಿಟೆಡ್
ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಭಾರವಾದ ಬೈಕ್ 416 ಕೆ.ಜಿಯ ಇಂಡಿಯನ್ ಪರ್ಸ್ಯೂಟ್ ಲಿಮಿಟೆಡ್ ಆಗಿದೆ. ಹೊಸ ಲಿಕ್ವಿಡ್-ಕೂಲ್ಡ್, 1,768cc ಪವರ್‌ಪ್ಲಸ್ V-ಟ್ವಿನ್ ಎಂಜಿನ್‌ನಿಂದ 3,800rpm ನಲ್ಲಿ 178Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂಡಿಯನ್ ಪರ್ಸ್ಯೂಟ್ ಲಿಮಿಟೆಡ್ ಮತ್ತು ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ನಡುವಿನ ಬೆಲೆ ವ್ಯತ್ಯಾಸವು ಸುಮಾರು 11 ಲಕ್ಷ ರೂ. ಇದೆ. ಇದರ ತೂಕವು ಬರೋಬ್ಬರಿ 416kg ಇದ್ದು, ಬೆಲೆಯು ರೂ. 44.70 ಲಕ್ಷವಿದೆ.

Article Published On: Saturday, November 19, 2022, 12:41 [IST]
English summary
Re bikes are heavy but what about these
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+