Just In
- 1 hr ago
ಭಾರತದಲ್ಲಿ ಶೀಘ್ರವೇ ಸಿಗಲಿದೆ ಟಾಟಾ ಆಲ್ಟ್ರೊಜ್ ರೇಸರ್: ಎಲ್ಲರೂ ಮೆಚ್ಚುವ ವೈಶಿಷ್ಟ್ಯಗಳಿವೆ..!
- 13 hrs ago
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- 14 hrs ago
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- 15 hrs ago
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
Don't Miss!
- News
ವಾಯುಭಾರ ಕುಸಿತ; ಬೆಂಗಳೂರು ನಗರದಲ್ಲಿ ಮಳೆ ಮುನ್ಸೂಚನೆ
- Movies
ಬರಲಿದೆ 'ನಂಗನ್ಸಿದ್ದು 2'; ಈ ಬಾರಿ ರಾಹುಲ್ ಡಿಟೊ ಹಾಡಿನ ಬಾಣ ಯಾರ ಕಡೆ?
- Sports
ಅಹ್ಮದಾಬಾದ್ನಲ್ಲಿ ಶುಬ್ಮನ್ ಅಬ್ಬರ: ಅಪರೂಪದ ಸಾಧನೆ ಮಾಡಿದ ಗಿಲ್
- Lifestyle
Horoscope Today 2 Feb 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್; ಇದು ಟೆಕ್ ಲೋಕದ ಅಚ್ಚರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಡುಗರ ಹಾಟ್ ಫೇವರೇಟ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಭಾರೀ ಬೇಡಿಕೆ
ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಇದರ ಬೈಕ್ ಗಳು ದಾಖಲೆಯ ಮಾರಾಟವಾಗುತ್ತಿದೆ. ಸತತವಾಗಿ ಕ್ಲಾಸಿಕ್ 350 ಮಾರಾಟದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ.
2022ರ ಅಕ್ಟೋಬರ್ ತಿಂಗಳಿನಲ್ಲಿ ಕ್ಲಾಸಿಕ್ 350 ಮಾದರಿಯ 31,791 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾದ 19,728 ಯುನಿಟ್ ಗಳಿಗೆ ಹೋಲಿಸಿದರೆ ಶೇಕಡಾ 61 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕಳೆದ ವರ್ಷ ದೊಡ್ಡ ನವೀಕರಣಗಳನ್ನು ಪಡೆದುಕೊಂಡಿತು. ಇದು ಅದರ ಪರಿಷ್ಕರಣೆ, ನಿರ್ವಹಣೆ ಮತ್ತು ವೈಶಿಷ್ಟ್ಯಗಳ ಪಟ್ಟಿಗೆ ಬದಲಾವಣೆಗಳನ್ನು ತಂದಿತು. ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಯುರೋಪ್, ದಕ್ಷಿಣ ಏಷ್ಯಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟವಾಗುತ್ತಿದೆ.
ಇನ್ನು ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ. ಈ ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.
ಇದರ ಪರಿಣಾಮವಾಗಿ ಕಾಯುವ ಅವಧಿಯು ಹೆಚ್ಚಾಯ್ತು. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಯು ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.
ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದೆ, ಈ ಹೊಸ ಬೈಕಿನಲ್ಲಿ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದೆ.
ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ. ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದೆ.