ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‍ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಹೊಸ ಬೈಕ್‌ಗಳೊಂದಿಗೆ ವಿವಿಧ ವಿಭಾಗಗಳಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹೊಸ ಮತ್ತು ಹೆಚ್ಚು ಶಕ್ತಿಶಾಲಿ 450ಸಿಸಿ ಅಡ್ವೆಂಚರ್ ಬೈಕ್ ಅನ್ನು ಒಳಗೊಂಡಿದೆ, ಹೊಸ 450ಸಿಸಿ ಅಡ್ವೆಂಚರ್ ಬೈಕ್ ಅನ್ನು ರಾಯಲ್ ಎನ್‍ಫೀಲ್ಡ್ ಕಂಪನಿಯು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳಾಗಿದೆ. ಕಂಪನಿಯು ತನ್ನ ಭವಿಷ್ಯದ ಅಡ್ವೆಂಚರ್ ಮಾದರಿಗಗಿ K1 ಎಂಬ ಕೋಡ್ ನೇಮ್ ಹೊಂದಿರುವ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಈ ಪ್ಲಾಟ್‌ಫಾರ್ಮ್‌ನಲ್ಲಿನ ಮೊದಲ ಬೈಕ್ ಹೊಸ ಅಡ್ವೆಂಚರ್ ಬೈಕ್ ಆಗಿರುತ್ತದೆ, ಇದನ್ನು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಎಂದು ಕರೆಯಲಾಗುತ್ತದೆ. ಇದು ಕೆಟಿಎಂ 390 ಅಡ್ವೆಂಚರ್ ಬೈಕಿಗೆ ಪೈಪೋಟಿಯಾಗಿ ಬರಲಿದೆ, ಈ ಹೊಸ ಬೈಕ್ 450cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಇದು ಸುಮಾರು 45b ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಅಡ್ವೆಂಚರ್ ಮೋಟಾರ್‌ಸೈಕಲ್‌ಗಳಿಗೆ ಅಗತ್ಯವಿರುವ ಬಲವಾದ ಕಡಿಮೆ ಮತ್ತು ಮಧ್ಯಮ ಶ್ರೇಣಿಯನ್ನು ನೀಡುವಲ್ಲಿ ರಾಯಲ್ ಎನ್‌ಫೀಲ್ಡ್ ಕಾರ್ಯನಿರ್ವಹಿಸುತ್ತಿದೆ. ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್ ಹೊಸ ವಿನ್ಯಾಸದ ಶೈಲಿಯನ್ನು ಆಧರಿಸಿರುತ್ತದೆ, ಆದರೆ ಹಿಮಾಲಯನ್ 411 ನಿಂದ ಕೆಲವು ವಿನ್ಯಾಸ ಸ್ಫೂರ್ತಿಯನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಈ ಬೈಕಿನ ಇಂಧನ ಟ್ಯಾಂಕ್ ಅನ್ನು ಹೆಡ್‌ಲ್ಯಾಂಪ್ ಘಟಕಕ್ಕೆ ಸಂಪರ್ಕಿಸಲು ಬಳಸುವ ಫ್ರೇಮ್ ಮೂಲ ಹಿಮಾಲಯನ್‌ನಿಂದ ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುತ್ತದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್ 21 ಇಂಚಿನ ಮುಂಭಾಗ ಮತ್ತು 17 ಇಂಚಿನ ಹಿಂದಿನ ವ್ಹೀಲ್ ಗಳನ್ನು ಹೊಂದಿದೆ, ಇದು ಅಸ್ತಿತ್ವದಲ್ಲಿರುವ ಮಾದರಿಯನ್ನು ಹೋಲುವ ಕ್ಲಾಸಿಕ್ ರೌಂಡ್-ಆಕಾರದ ಹೆಡ್‌ಲ್ಯಾಂಪ್ ಯುನಿಟ್ ಅನ್ನು ಉಳಿಸಿಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಈ ಬೈಕ್ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಸ್ಪೋಕ್ ವೀಲ್‌ಗಳನ್ನು ಹೊಂದಿರುತ್ತದೆ. ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿದೆ. ಇದು ಪ್ರಸ್ತುತ ಮಾದರಿಗಿಂತ ಗಮನಾರ್ಹವಾಗಿ ಹಗುರವಾಗಿರುವ ಸಾಧ್ಯತೆಯಿದೆ. ಈ ಹೊಸ ಬೈಕ್ ಅನ್ನು ಹಾರ್ಡ್‌ಕೋರ್ ಮಿಡಲ್‌ವೇಟ್ ಅಡ್ವೆಂಚರ್ ಆಗಿ ಇರಿಸಲಾಗುತ್ತದೆ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಈ ಹೊಸ ಹಿಮಾಲಯನ್ 450 ಬೈಕ್ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಹೊಂದಿರುತ್ತದೆ ಮತ್ತು ಉದ್ದವಾದ ವೀಲ್‌ಬೇಸ್‌ ಅನ್ನು ಕೂಡ ಒಳಗೊಂಡಿರುತ್ತದೆ,ಹೊಸ ಬೈಕು ಆರಾಮದಾಯಕ ಸವಾರಿಯನ್ನು ನೀಡುತ್ತದೆ, ಸೆಂಟರ್-ಸೆಟ್ ಪೆಗ್‌ಗಳು, ಉದ್ದವಾದ ಸಿಂಗಲ್-ಸೀಟ್ ಮತ್ತು ಫ್ಲಾಟ್ ಹ್ಯಾಂಡಲ್‌ಬಾರ್‌ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಸೂಪರ್ ಮೆಟಿಯರ್ ಮತ್ತು ಶಾಟ್‌ಗನ್‌ಗಳನ್ನು ಪರಿಚಯಿಸಿದ ನಂತರ ಹೊಸ ಹಿಮಾಲಯನ್ 450 ಬೈಕ್ ಅನ್ನು ಬಿಡುಗಡೆ ಮಾಡಲಾಗುವುದು. ಹೊಸ ಹಿಮಾಲಯನ್ 450 ಅನ್ನು 2023 ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಈ ಹೊಸ ಬೈಕ್ 410cc ಆಯಿಲ್-ಕೂಲ್ಡ್ ಮತ್ತು 650cc ಪ್ಯಾರಲಲ್-ಟ್ವಿನ್ ಮೋಟಾರ್‌ಗಳ ನಡುವೆ ಇರಿಸಲಾಗುವುದು. ಇದರ ಬೆಲೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.2.7 ಲಕ್ಷ ಆಗಿರಬಹುದು, ಈ ಬೆಲೆಯು ಇಂಟರ್‌ಸೆಪ್ಟರ್ 650 ಮಾದರಿಯ ಹತ್ತಿರದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 65,187 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2020ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 65,492 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯಾಗಿದೆ. ಇನ್ನು 2019ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 48,489 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು 2021ರ ಡಿಸೆಂಬರ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಇನ್ನು ಕಳೆದ ತಿಂಗಳ ಕಂಪನಿಯು 8,552 ಯುನಿಟ್‌ಗಳನ್ನು ವಿದೇಶಕ್ಕೆ ರಫ್ಟು ಮಾಡಲಾಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ 3,503 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.144.13 ರಷ್ಟು ಹೆಚ್ಚಳವಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 60,898 ಯುನಿಟ್‌ಗಳನ್ನು ಮಾರಾಟ ಮಾಡಿದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ಏಪ್ರಿಲ್ ಮತ್ತು ಡಿಸೆಂಬರ್ 2020 ರ ಅವಧಿಯಲ್ಲಿ ಮಾರಾಟವಾದ 383,779 ಯುನಿಟ್‌ಗಳಿಗೆ ಹೋಲಿಸಿದರೆ ಸುಮಾರು ಶೇ.6 ರಷ್ಟು ಕುಸಿತವಾಗಿದೆ. ಮತ್ತೊಂದೆಡೆ, ರಫ್ತುಗಳು, 55,695 ಯುನಿಟ್‌ಗಳಾದರೆ, ಹಿಂದಿನ ಹಣಕಾಸು ವರ್ಷದಲ್ಲಿ 23,677 ರಷ್ಟಿತ್ತು. ಇದು ರಫ್ತಿನಲ್ಲಿ 135 ಪ್ರತಿಶತದಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Royal Enfield Himalayan 450 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಳಿವೆ,

Most Read Articles

Kannada
English summary
Royal enfield planning to launch himalayan 450 engine design features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X