ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

ಭಾರತದಲ್ಲಿ ವಾಹನಗಳ ಮಾರಾಟ ಸೇರಿದಂತೆ ದೇಶೀಯ ಕಂಪನಿಗಳು ಹೆಚ್ಚಾಗಿ ರಫ್ತು ಕೂಡ ಮಾಡುವುದರಿಂದ ಭಾರತವು ವಿಶ್ವ ಆಟೋ ಉದ್ಯಮದಲ್ಲಿ ಪ್ರಬಲ ದೇಶವಾಗಿ ಗುರ್ತಿಸಿಕೊಂಡಿದೆ. ಇದು ಕೇವಲ ಕಾರುಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ದ್ವಿಚಕ್ರ ವಾಹನ ಮಾರುಕಟ್ಟೆ ಕೂಡ ಇತ್ತಿಚಿನ ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

ಹಾಗಾಗಿ ದ್ವಿಚಕ್ರ ವಾಹನ ತಯಾರಕರು ಗ್ರಾಹಕರನ್ನು ಆಕರ್ಷಿಸಲು ಮಾರುಕಟ್ಟೆಗೆ ತಮ್ಮ ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದಾರೆ. ಈ ತಿಂಗಳು ಭಾರತದಲ್ಲಿ ಐದು ಹೊಸ ದ್ವಿಚಕ್ರ ವಾಹನಗಳು ಬಿಡುಗಡೆ ಸಜ್ಜಾಗಿದ್ದು, ಎಲ್ಲವನ್ನೂ ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

ಹಲವಾರು ಬ್ರ್ಯಾಂಡ್‌ಗಳು ಪ್ರಸ್ತುತ ಈ ತಿಂಗಳು ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿವೆ. ಭಾರತದಲ್ಲಿ ಸೆಪ್ಟೆಂಬರ್ 2022 ರಲ್ಲಿ ಮುಂಬರುವ ಟಾಪ್ 5 ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

1. ಬಜಾಜ್ ಪಲ್ಸರ್ N150

ಬಜಾಜ್ ಪ್ರಸ್ತುತ ದೇಶದಲ್ಲಿ ತನ್ನ ಶ್ರೇಣಿಯನ್ನು ನವೀಕರಿಸುತ್ತಿದೆ. ಶೀಘ್ರದಲ್ಲೇ ಹೊಸ ಪಲ್ಸರ್ N150 ಅನ್ನು ದೇಶದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಪಲ್ಸರ್ N150 ಇತ್ತೀಚೆಗೆ ಪರೀಕ್ಷೆಯನ್ನು ನಡುಸುತ್ತಾ ಕಾಣಿಸಿಕೊಂಡಿತ್ತು. ಇದನ್ನು ಎರಡು ರೂಪಾಂತರದ ಆಯ್ಕೆಗಳಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಬೈಕ್ 150 ಸಿಸಿ ಮೋಟಾರ್ ನಿಂದ ಚಾಲಿತವಾಗುವ ಸಾಧ್ಯತೆ ಇದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

2. ಹೊಸ ಹೀರೋ 125cc

ಹೊಸ ಹೀರೋ 125cc ಸ್ಕೂಟರ್ ರೂ. 85,000-ರೂ. 90,000 (ಎಕ್ಸ್ ಶೋ ರೂಂ, ದೆಹಲಿ) ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಮುಂಬರುವ 125cc ಹೀರೋ ಸ್ಕೂಟರ್ NTorq 125 ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಬಲವಾದ ಕಾರ್ಯಕ್ಷಮತೆ ಮತ್ತು ಆಕ್ರಮಣಕಾರಿ ನೋಟವನ್ನು ಹೊಂದಿದೆ. ಭಾರತದಲ್ಲಿ ಈ ಹೊಸ 125cc ಸ್ಕೂಟರ್‌ನ ಅಧಿಕೃತ ಸ್ಪೆಕ್ಸ್ ಮತ್ತು ಬಿಡುಗಡೆ ದಿನಾಂಕದ ಕುರಿತು ಹೆಚ್ಚಿನ ವಿವರಗಳನ್ನು ಕಂಪನಿ ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

3. ಅಲ್ಟ್ರಾವೈಲೆಟ್ F77

ಹೊಸ ಅಲ್ಟ್ರಾವೈಲೆಟ್ F77 ದೇಶದ ಮೊದಲ ಕಾರ್ಯಕ್ಷಮತೆ ಆಧಾರಿತ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಒಂದಾಗಲಿದೆ. ಈ ಮಾದರಿಯನ್ನು ಇದೇ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೊಸ F77 ಎಲೆಕ್ಟ್ರಿಕ್ ಬೈಕ್ ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು 250cc ಬೈಕ್‌ಗೆ ಹೋಲಿಸಬಹುದಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಬಿಡುಗಡೆ ನಂತರ ಟೆಸ್ಟ್‌ ರೈಡ್‌ಗಳು ಕೂಡ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

4. Hero XPulse 200T 4V

ಹೀರೋ ಎಕ್ಸ್‌ಪಲ್ಸ್ ಅನ್ನು ಕೈಗೆಟುಕುವ ಮತ್ತು ಸಮರ್ಥ ಅಡ್ವೆಂಚರ್ ಬೈಕ್ ಎಂದು ಕರೆಯಲಾಗುತ್ತದೆ. ಬ್ರ್ಯಾಂಡ್ ಈಗ ಹೊಸ ಮತ್ತು ನವೀಕರಿಸಿದ ಎಕ್ಸ್‌ಪಲ್ಸ್ 200 ಟಿ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಈ 4V ಆವೃತ್ತಿಯು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರ ಜೊತೆಗೆ ಸಣ್ಣ ರೆಟ್ರೊ-ಲುಕ್‌ನಲ್ಲಿ ಫ್ಲೈಸ್ಕ್ರೀನ್ ಮತ್ತು ಗೈಟರ್ಡ್ ಫೋರ್ಕ್‌ಗಳನ್ನು ಒಳಗೊಂಡಂತೆ ಅನೇಕ ದೃಶ್ಯ ಟ್ವೀಕ್‌ಗಳನ್ನು ಸಹ ಪಡೆಯುತ್ತದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

5. ಹೊಸ ಕವಾಸಕಿ ಬೈಕ್

ಕವಾಸಕಿಯು ಸೆಪ್ಟೆಂಬರ್ 25, 2022 ರಂದು ತನ್ನ ಹೊಸ ಬೈಕನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬ್ರ್ಯಾಂಡ್ ತನ್ನ ಮುಂಬರುವ ಬೈಕಿನ ಕುರಿತು ವಿವರಗಳನ್ನು ಇನ್ನೂ ಹಂಚಿಕೊಳ್ಳದಿದ್ದರೂ, ಬುಲೆಟ್ 350 ಮತ್ತು ಇತರ 350cc ಬೈಕ್‌ಗಳಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಬೇಬಿ ರೆಟ್ರೋ ಬೈಕ್ ಅನ್ನು ಪರಿಚಯಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಬೈಕ್‌ಗಳು

ದೇಶದಲ್ಲಿ ಕವಾಸಕಿ ಡಬ್ಲ್ಯು 175 ಮಾದರಿಯನ್ನು ಕಳೆದ ವರ್ಷ ಕಂಪನಿಯು ಟೆಸ್ಟ್‌ ರೈಡ್ ಮಾಡುವ ವೇಳೆ ಕಾಣಿಸಿಕೊಂಡಿತ್ತು. ಇದೀಗ ಭಾರತಕ್ಕೆ ಪಾದಾರ್ಪಣೆ ಮಾಡಬಹುದು ಎನ್ನಲಾಗಿದೆ. KTM 390 ಡ್ಯೂಕ್‌ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಬ್ರ್ಯಾಂಡ್ ಹೊಸ Z400 ಅನ್ನು ಭಾರತದಲ್ಲಿ ಪ್ರಾರಂಭಿಸಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ.

Most Read Articles

Kannada
English summary
The much awaited bikes are all set to launch in India this month
Story first published: Tuesday, September 6, 2022, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X