ಭಾರತದಲ್ಲಿ ಆಕ್ಟಿವಾಕ್ಕಿಂತ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್​ಗಳಿವು!

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನ ಯಾವುದು ಎಂದು ಕೇಳಿದರೆ ಚಿಕ್ಕ ಮಕ್ಕಳು ಸಹ ಹೇಳುವ ಒಂದೇ ಉತ್ತರ ಅದು ಹೋಂಡಾ ಆಕ್ಟಿವಾ ಸ್ಕೂಟರ್ ಅಂತ. ಆ ಮಟ್ಟಿಗೆ ಈ ದ್ವಿಚಕ್ರ ವಾಹನಕ್ಕೆ ದೇಶದ ಜನರಲ್ಲಿ ಮನಸ್ಸಿನಲ್ಲಿ ಬೇರುಬಿಟ್ಟಿದೆ. ವಿವಿಧ ಕಾರಣಗಳಿಗಾಗಿ ಈ ಸ್ಕೂಟರ್ ಭಾರತೀಯರ ನೆಚ್ಚಿನ ದ್ವಿಚಕ್ರ ವಾಹನವಾಗಿದೆ.

ಕಡಿಮೆ ನಿರ್ವಹಣಾ ವೆಚ್ಚ, ಧೀರ್ಘ ಬಾಳಿಕೆ, ಸ್ಕೂಟರ್‌ನ ಬಿಡಿ ಭಾಗಗಳು ಕೈಗೆಟುಕುವಂತೆ ಲಭ್ಯವಿರುವುದು ಜೊತೆಗೆ ಇದರ ಗ್ರಾಹಕಸ್ನೇಹಿ ಬೆಲೆ ಮತ್ತು ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವು ಭಾರತೀಯರು ಈ ಸ್ಕೂಟರ್ ಅನ್ನು ಹೆಚ್ಚು ಇಷ್ಟಪಟ್ಟು ಖರೀದಿಸಲು ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಏಕೈಕ ಸ್ಕೂಟರ್ ಆಕ್ಟಿವಾ ಎಂದು ನೀವು ಆಶ್ಚರ್ಯ ಪಡಬಹುದು. ಇದಕ್ಕೆ ನಮ್ಮ ಉತ್ತರ ಇಲ್ಲ.

ಭಾರತದಲ್ಲಿ ಆಕ್ಟಿವಾಕ್ಕಿಂತ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್​ಗಳಿವು!

ಹೋಂಡಾ ಆಕ್ಟಿವಾಗಿಂತಲೂ ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಗಳು ದೇಶೀಯ ಮಾರುಕಟ್ಟೆಯಲ್ಲಿವೆ. ಭಾರತೀಯರು ದೊಡ್ಡ ಮಟ್ಟದ ಮೈಲೇಜ್ ಪ್ರಿಯರು ಎಂದು ತಿಳಿದ ಕೆಲವು ಬೈಕ್ ತಯಾರಕರು ಹೆಚ್ಚಿನ ಮೈಲೇಜ್ ನೀಡುವ ಸ್ಕೂಟರ್‌ಗಳನ್ನು ಮಾರಾಟಕ್ಕೆ ಇರಿಸುತ್ತಿದ್ದಾರೆ. ಈ ಲೇಖನದಲ್ಲಿ ನಾವು ಇಂತಹ ಸ್ಕೂಟರ್‌ಗಳ ಬಗ್ಗೆ ವಿವರವನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ಅದೇನೆಂದರೆ, ಹೋಂಡಾ ಆಕ್ಟಿವಾ ಸ್ಕೂಟರ್ ಗಿಂತಲೂ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಮಾದರಿಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಹೋಂಡಾ ಆಕ್ಟಿವಾ 6G:
ಮೊದಲು ಹೋಂಡಾ ಆಕ್ಟಿವಾ ಮೈಲೇಜ್ ಬಗ್ಗೆ ತಿಳಿಯೋಣ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೋಂಡಾ ಆಕ್ಟಿವಾ ಕೇವಲ 60 kmpl ಮೈಲೇಜ್ ನೀಡುತ್ತದೆ. ಇದು 110 ಸಿಸಿ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಮೋಟಾರ್ ಗರಿಷ್ಠ 7.68 bhp ಮತ್ತು 8.79 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಆಕ್ಟಿವಾ 6G ಅನ್ನು ರೂ.75 ಸಾವಿರದ ಆರಂಭಿಕ ಬೆಲೆಯಿಂದ ಗ್ರಾಹಕರು ಖರೀದಿ ಮಾಡಬಹುದು. ಇದು ಎಕ್ಸ್ ಶೋ ರೂಂ ಬೆಲೆ ಮಾತ್ರ. ಆನ್-ರೋಡ್‌ ಬೆಲೆ ಸ್ವಲ್ಪ ಹೆಚ್ಚಿರುತ್ತದೆ.

ಟಿವಿಎಸ್ ಜುಪಿಟರ್:
ಟಿವಿಎಸ್‌ನ ಬಹುತೇಕ ದ್ವಿಚಕ್ರ ವಾಹನ ಮಾದರಿಗಳು ಹೆಚ್ಚಿನ ಮೈಲೇಜ್‌ಗೆ ಹೆಸರುವಾಸಿಯಾಗಿವೆ. ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಫ್ ಫೈಟ್ ನೀಡುವ ಮೈಲೇಜ್ ಸ್ಕೂಟರ್ ಟಿವಿಎಸ್ ಜೂಪಿಟರ್ ಆಗಿದೆ ಎಂದು ಹೇಳಬಹುದು. ಈ ಸ್ಕೂಟರ್ 62 kmplವರೆಗೆ ಮೈಲೇಜ್ ನೀಡುತ್ತದೆ. 110 ಸಿಸಿ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿರುವ ಜುಪಿಟರ್, 7.4 bhp ಗರಿಷ್ಠ ಪವರ್ ಮತ್ತು 8.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಿವಿಎಸ್ ಈ ಸ್ಕೂಟರ್‌ನಲ್ಲಿ ಇಂಟೆಲಿಕೊ ಎಂಬ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿದ್ದು, ಇದು ಹೆಚ್ಚಿನ ಮೈಲೇಜ್ ನೀಡಲು ಕಾರಣವಾಗಿದೆ.

ಸುಜುಕಿ ಆಕ್ಸೆಸ್ 125:
ಈ ಸುಜುಕಿ ದ್ವಿಚಕ್ರ ವಾಹನವು 64 kmplವರೆಗೆ ಮೈಲೇಜ್ ನೀಡುತ್ತದೆ. ಇದಕ್ಕಾಗಿ ಈ ಸ್ಕೂಟರ್ ನಲ್ಲಿ 125 ಸಿಸಿ ಎಂಜಿನ್ ಅಳವಡಿಸಲಾಗಿದ್ದು, ಇದು8.58 bhp ಗರಿಷ್ಠ ಪವರ್ ಮತ್ತು 10 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಆರಂಭಿಕ ಬೆಲೆ ರೂ.77,600 (ಎಕ್ಸ್ ಶೋ ರೂಂ) ಇದೆ. ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ರೆಟ್ರೊ ಶೈಲಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಆದ್ದರಿಂದ, ಭಾರತದಲ್ಲಿ ಇದಕ್ಕೆ ವಿಶಿಷ್ಟವಾದ ಬೇಡಿಕೆಯಿದೆ. ಇದಲ್ಲದೆ, ಆಕ್ಸೆಸ್ 125 ಹೆಚ್ಚು ಪ್ರೀಮಿಯಂ ಮತ್ತು ಆಧುನಿಕ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಹೊಂದಿದೆ.

ಯಮಹಾ ರೇ ZR 125:
ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಪ್ರಮುಖ ಸ್ಕೂಟರ್‌ಗಳಲ್ಲಿ ಯಮಹಾ ರೇ ZR 125 ಕೂಡ ಒಂದಾಗಿದೆ. ಅದಕ್ಕೆ ತಕ್ಕಂತೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದು 66 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. 80 ಸಾವಿರದ 230 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ. ಬಿಎಸ್ 6 ಸ್ಟ್ಯಾಂಡರ್ಡ್ 125 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಒಳಗೊಂಡಿದೆ. ಇದು 6,500 rpm ನಲ್ಲಿ 8 bhp ಗರಿಷ್ಠ ಪವರ್ ಮತ್ತು 5,000 rpm ನಲ್ಲಿ 10.3 Nm ಟಾರ್ಕ್ ಉತ್ಪಾದಿಸಲಿದೆ.

ಯಮಹಾ Fascino 125:
ಯಮಹಾದ ಮತ್ತೊಂದು ಹೆಚ್ಚಿನ ಮೈಲೇಜ್ ಸ್ಕೂಟರ್ ಕೊಡುಗೆ ಯಮಹಾ ಫ್ಯಾಸಿನೊ 125 ಆಗಿದೆ. ರೇ ZR 125 ಸ್ಕೂಟರ್‌ನಲ್ಲಿ ಬಳಸಿದ ಅದೇ ಮಿಡ್ ಹೈಬ್ರಿಡ್ ಮೋಟಾರ್ ಅನ್ನು ಈ ಸ್ಕೂಟರ್‌ನಲ್ಲಿಯು ಬಳಸಲಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.76,600 ಆಗಿದೆ. ಈ ಸ್ಕೂಟರ್‌ನಲ್ಲಿ ಬಳಸಲಾಗಿರುವ 125 ಸಿಸಿ ಎಂಜಿನ್ 8 bhp ಗರಿಷ್ಠ ಪವರ್ ಮತ್ತು 10.3 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಗಮನಾರ್ಹ ಅಂಶವಾಗಿದೆ.

Most Read Articles

Kannada
English summary
These are the scooters that give more mileage than activa in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X