ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಭಾರತದಲ್ಲಿ ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಬಿಡುಗಡೆಗೆ ಯಾವುದೇ ಕೊರತೆಯಿಲ್ಲ. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಹೊಸ ಅಥವಾ ನವೀಕರಿಸಿದ ವಾಹನಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಇದರಲ್ಲಿ ಅದ್ಭುತ ವಿನ್ಯಾಸ, ವೈಶಿಷ್ಟ್ಯಗಳನ್ನು ಹೊಂದಿರುವ ಬೈಕ್‌ಗಳನ್ನು ಖರೀದಿಸಲು ಖರೀದಿದಾರರು ಹಚ್ಚು ಆಸಕ್ತಿ ತೋರಿಸುತ್ತಾರೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಆದರೆ ಸ್ಕೂಟರ್‌ನ ವಿಷಯಕ್ಕೆ ಬಂದರೆ ವಿನ್ಯಾಸ, ವೈಶಿಷ್ಟ್ಯಗಳು ಮಾತ್ರವಲ್ಲದೇ ಅಂಡರ್ ಸೀಟ್ ಸ್ಟೋರೇಜ್ ಹೆಚ್ಚಾಗಿ ಇದ್ದರೆ ಅವುಗಳನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಾರೆ. ಹಾಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಟಾಪ್ 10 ಸ್ಕೂಟರ್‌ಗಳನ್ನು ಇಲ್ಲಿ ನೋಡೋಣ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಓಲಾ ಎಸ್1 ಮತ್ತು ಓಲಾ ಎಸ್1 ಪ್ರೋ:

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಜನಪ್ರಿಯತೆ ಪಡೆದ ಓಲಾ ಎಲೆಕ್ಟ್ರಿಕ್ ಕಂಪನಿಯ ಎಸ್1 ಮತ್ತು ಎಸ್1 ಪ್ರೋ ಉತ್ತಮ ಅಂಡರ್ ಸೀಟ್ ಸ್ಟೋರೇಜ್ ಪಡೆಯುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಅಂಡರ್ ಸೀಟ್ ಸ್ಟೋರೇಜ್ 36 ಲೀಟರ್ ವರೆಗೆ ಇರುತ್ತದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಹಾಗಾಗಿ ಈ ಜಾಗದಲ್ಲಿ ಎರಡು ಹೆಲ್ಮೆಟ್‌ಗಳನ್ನು ಕೂಡ ಸುಲಭವಾಗಿ ಇರಿಸಿಕೊಳ್ಳಲು ಅವಕಾಶವಿರುತ್ತದೆ. ಓಲಾ ಎಸ್1 ಮತ್ತು ಎಸ್1 ಪ್ರೋ ಬೆಲೆಗಳು ಮಾರುಕಟ್ಟೆಯಲ್ಲಿ ಕ್ರಮವಾಗಿ ರೂ. 99,999 ಮತ್ತು ರೂ. 1,39,999 (ಎಕ್ಸ್‌ ಶೋರೂಂ) ಇದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಓಲಾ ಎಸ್1 ಏರ್:

ಓಲಾ ಎಸ್1 ಏರ್ ಎಂಬುದು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಓಲಾ ಎಲೆಕ್ಟ್ರಿಕ್‌ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಬೆಲೆ ಆರಂಭದಲ್ಲಿ ರೂ. 79,999 ಇತ್ತು, ಆದರೆ ಪ್ರಸ್ತುತ ಇದರ ಬೆಲೆ ರೂ. 84,999 ಕ್ಕೆ ಹೆಚ್ಚಾಗಿದೆ. ಈ ಎಲಕ್ಟ್ರಿಕ್ ಸ್ಕೂಟರ್ ಬಹುತೇಕ ಅದರ ಹಿಂದಿನ ಮಾದರಿಗಳನ್ನು ಹೋಲುತ್ತದೆ. ಆದರೆ ಕಡಿಮೆ ವೈಶಿಷ್ಟ್ಯಗಳಿವೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅಂಡರ್ ಸೀಟ್ ಸ್ಟೋರೇಜ್ 34 ಲೀಟರ್ ಇದೆ. ಇದು ಅದರ ಹಿಂದಿನ ಮಾದರಿಗಿಂತ ಕೇವಲ 2 ಲೀಟರ್‌ಗಳಷ್ಟು ಕಡಿಮೆ ಇರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಸಿಂಗಲ್ ಚಾರ್ಜ್ ನಲ್ಲಿ 101 ರಂಜ್ ನೀಡುತ್ತದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಟಿವಿಎಸ್ ಜುಪಿಟರ್ 125:

ಟಿವಿಎಸ್ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ಸ್ಕೂಟರ್‌ಗಳಲ್ಲಿ ಜುಪಿಟರ್ ಕೂಡ ಒಂದು. ಈ ಸ್ಕೂಟರ್‌ನ ಅಂಡರ್ ಸೀಟ್ 32 ಲೀಟರ್ ವರೆಗೆ ಇರುತ್ತದೆ. ಅಂದರೆ ಇದು ಓಲಾ1 ಏರ್‌ಗಿಂತ 2 ಲೀಟರ್‌ಳಷ್ಟು ಕಡಿಮೆ ಇರುತ್ತದೆ. ಇದರಲ್ಲಿ ಎರಡು ಹೆಲ್ಮೆಟ್‌ಗಳನ್ನು ಸುಲಭವಾಗಿ ಇರಿಸಿಕೊಳ್ಳಲು ಅವಕಾಶವಿದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಟಿವಿಎಸ್ ಐಕ್ಯೂಬ್ ST:

ಟಿವಿಎಸ್ ಮೋಟಾರ್‌ನ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಐಕ್ಯೂಬ್ ST ವೆರಿಯಂಟ್‌ನಲ್ಲಿ 32 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಇರುತ್ತದೆ. ಟಿವಿಎಸ್ ಐಕ್ಯೂಬ್ ಉತ್ತಮ ವಿನ್ಯಾಸದೊಂದಿಗೆ ಲೇಟೆಸ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಉತ್ತಮ ಬ್ಯಾಟರಿ ಪ್ಯಾಕ್ ಹೊಂದಿರುವ ಜೊತೆಗೆ ಉತ್ತಮ ರೇಂಜ್ ಸಹ ನೀಡುತ್ತದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಯಮಹಾ ಏರೋಕ್ಸ್ 155:

ಅತ್ಯಂತ ಜನಪ್ರಿಯವಾಗಿರುವ ಯಮಹಾ ಕಂಪನಿಯ ಎರೋಕ್ಸ್ 155 ಸ್ಕೂಟರ್ 24.5 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. ಇದರಲ್ಲಿ ಒಂದು ದೊಡ್ಡ ಹೆಲ್ಮೆಟ್ ಮತ್ತು ಒಂದು ಹಾಫ್ ಲೀಟರ್ ವಾಟರ್ ಬಾಟಲ್ ಅನ್ನು ಇರಿಸಬಹುದು. ಇದರ ಫೆರ್ಫಾಮೆನ್ಸ್ ಕೂಡ ಇದು ತುಂಬಾ ಅನುಕೂಲಕರವಾಗಿರುತ್ತದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಟಿವಿಎಸ್ ಎನ್‌ಟಾರ್ಕ್ 125:

ಟಿವಿಎಸ್ ಕಂಪನಿಯ ಎನ್‌ಟಾರ್ಕ್ 125 ಸ್ಕೂಟರ್‌ನ ಅಂಡರ್ ಸೀಟ್ ಸ್ಟೋರೇಜ್ 22 ಲೀಟರ್ ವರೆಗೆ ಇರುತ್ತದೆ. ಇದರಲ್ಲಿ ಎರೋಕ್ಸ್ 155 ನಂತೆ ಒಂದು ದೊಡ್ಡ ಹೆಲ್ಮೆಟ್ ಇರಿಸಬಹುದು. ಇದು ಲೆಟೆಸ್ಟ್ ವೈಶಿಷ್ಟ್ಯಗಳು ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಒದಗಿಸುವ ಸ್ಕೂಟರ್ ಆಗಿದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಹೀರೋ ಮಾಸ್ಟ್ರೋ ಎಡ್ಜ್:

ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಸ್ಕೂಟರ್ ಪಟ್ಟಿಯಲ್ಲಿ 'ಹೀರೋ ಮಾಸ್ಟ್ರೋ ಎಡ್ಜ್' ಕೂಡ ಇದೆ. ಈ ಹೀರೋ ಮಾಸ್ಟ್ರೋ ಎಡ್ಜ್ ಸ್ಕೂಟರ್‌ನ ಅಂಡರ್ ಸೀಟ್ ಸ್ಟೋರೇಜ್ 22 ಲೀಟರ್. ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟಗಳನ್ನು ಪಡೆಯುತ್ತಿದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಎಥರ್ 450:

ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್ 22 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಪಡೆದಿದೆ. ಇದು ಉತ್ತಮ ವಿನ್ಯಾಸ, ಲೇಟೆಸ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಪರ್ಫಾಮೆನ್ಸ್ ದೃಷ್ಟಿಯಿಂದ ತುಂಬಾ ಉತ್ತಮವಾಗಿದೆ. ಇತ್ತೀಚೆಗೆ ಕಂಪನಿ ಒಂದೇ ದಿನ 250 ಎಥರ್ 450 ಎಕ್ಸ್ ಸ್ಕೂಟರ್‌ಗಳನ್ನು ಡೆಲಿವರಿ ನೀಡಿದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಸುಜುಕಿ 125:

ಸುಜುಕಿ ಕಂಪನಿಯ ಪ್ರವೇಶ ಮಟ್ಟದ 125 ಸ್ಕೂಟರ್ ಅಂಡರ್ ಸೀಟ್ ಸ್ಟೋರೇಜ್ ವಿಷಯಕ್ಕೆ ಬಂದರೆ ಇದು 21.8 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಪಡೆಯುತ್ತದೆ. ಹೆಚ್ಚು ಅಂಡರ್ ಸೀಟ್ ಸ್ಟೋರೇಜ್ ಹಾಗೂ ಪರ್ಫಾಮೆನ್ಸ್ ಜೊತೆಗೆ ಮೈಲೇಜ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

ಭಾರತದಲ್ಲಿ ಅತ್ಯುತ್ತಮ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಸಿಗುವ ಟಾಪ್ 10 ಸ್ಕೂಟರ್‌ಗಳಿವು!

ಸುಜುಕಿ ಬರ್ಗ್‌ಮಾನ್ 125:

ಇನ್ನು ನಮ್ಮ ಪಟ್ಟಿಯಲ್ಲಿ ಅತ್ಯುತ್ತಮವಾದ ಅಂಡರ್ ಸೀಟ್ ಸ್ಟೋರೇಜ್ ಹೊಂದಿರುವ ಕೊನೆಯ ಸ್ಕೂಟರ್ ಸುಜುಕಿ ಬರ್ಗ್‌ಮಾನ್ 125. ಈ ಬರ್ಗ್‌ಮಾನ್ 125 ಸ್ಕೂಟರ್‌ನ ಅಂಡರ್ ಸೀಟ್ ಸ್ಟೋರೇಜ್ 21.5 ಲೀಟರ್. ಇದು ಅದರ ಪ್ರವೇಶ ಮಟ್ಟದ 125 ಸ್ಕೂಟರ್ ಮೇಲೆ ಆಧಾರಿತವಾಗಿರುತ್ತದೆ.

Most Read Articles

Kannada
English summary
Top 10 Scooters with Best Under Seat Storage in India
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X