ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೈಕ್‌ಗಳಷ್ಟೇ ಜನಪ್ರಿಯತೆಯನ್ನು ಸ್ಕೂಟರ್‌ಗಳು ಪಡೆದುಕೊಳ್ಳುತ್ತಿವೆ. ಬೈಕ್‌ಗಳು ಹೆಚ್ಚಿನ ಪರ್ಫಾಮೆನ್ಸ್ ನೀಡಿದರೆ ಸ್ಕೂಟರ್‌ಗಳು ಹೆಚ್ಚು ಮೈಲೇಜ್ ನೀಡುವ ಮೂಲಕ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿವೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ದೇಶದಲ್ಲಿ ಬೈಕ್‌ಗಳಂತೆ ಸ್ಕೂಟರ್‌ಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾವು ಅಂಕಿಅಂಶಗಳನ್ನು ನೋಡುವುದಾದರೆ, ಜೂನ್ 2022 ರಲ್ಲಿ ದ್ವಿಚಕ್ರ ವಾಹನ ತಯಾರಕರು ಅತಿ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ತಿಂಗಳಿನಂತೆ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಹೋಂಡಾ ಆಕ್ಟಿವಾ ಹೊರಹೊಮ್ಮಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಆಕ್ಟಿವಾವನ್ನು ಹೊರತುಪಡಿಸಿ ಇತರ ಎಲ್ಲಾ ಸ್ಕೂಟರ್‌ಗಳ ಮಾರಾಟದ ಅಂಕಿಅಂಶಗಳನ್ನು ನೋಡುವುದಾದ್ರೆ, ಜೂನ್ 2022 ರಲ್ಲಿ 1,91,577 ಯುನಿಟ್‌ಗಳು ಮಾರಾಟವಾಗಿವೆ. ಇಲ್ಲಿ ಕುತುಹಲಕಾರಿ ವಿಷಯವೆಂದರೆ ಹೋಂಡಾ ಆಕ್ಟಿವಾದ 1,84,305 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಮಾರುಕಟ್ಟೆಯ ಅರ್ಧದಷ್ಟು ಪಾಲನ್ನು ಆಕ್ಟೀವಾ ದಕ್ಕಿಸಿಕೊಂಡಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

Jupiter, Access, Dio, Ntorq, Pleasure, Avenis, Burgman ಮತ್ತು RAZR ಮಾರಾಟವನ್ನು ಒಟ್ಟುಗೂಡಿಸಿದರೆ, ಆಕ್ಟಿವಾ ಮಾತ್ರ ಅತಿ ಹೆಚ್ಚು ಮಾರಾಟವನ್ನು ಹೊಂದಿದೆ. ಜೂನ್ 2021 ರಲ್ಲಿ ಹೋಂಡಾ ಆಕ್ಟಿವಾ 94,274 ಯೂನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಜೂನ್ 2022 ರಲ್ಲಿ ದ್ವಿಗುಣಗೊಂಡಿದ್ದು, ಈ ಟಾಪ್ 10 ಪಟ್ಟಿಯಲ್ಲಿ ಶೇ49.03 ರಷ್ಟು ಪಾಲನ್ನು ಹೊಂದುವ ಮೂಲಕ ವಾರ್ಷಿಕವಾಗಿ ಶೇ94.57 ರಷ್ಟು ಬೆಳವಣಿಗೆ ದಾಖಲಿಸಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ TVS ಜುಪಿಟರ್ ಜೂನ್ 2022 ರಲ್ಲಿ 62,851 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಜೂನ್ 2021 ಕ್ಕೆ ಹೋಲಿಸಿದರೆ 97.35% ಹೆಚ್ಚಾಗಿದೆ. ಜೂನ್ 2021 ರಲ್ಲಿ 31,848 ಯುನಿಟ್ ಜುಪಿಟರ್ ಮಾರಾಟವಾಗಿದೆ. ಟಿವಿಎಸ್ ಜುಪಿಟರ್ ಈ ಪಟ್ಟಿಯಲ್ಲಿ ಶೇ16.72% ಪಾಲನ್ನು ಪಡೆದುಕೊಂಡಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಟಾಪ್ 10 ಸ್ಕೂಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವು ಸುಜುಕಿ ಆಕ್ಸೆಸ್‌ನದ್ದಾಗಿದೆ. ಜೂನ್ 2021 ರಲ್ಲಿ ಮಾರಾಟವಾದ 31,399 ಯುನಿಟ್‌ಗಳಿಗೆ ಹೋಲಿಸಿದರೆ ಜೂನ್ 2022 ರಲ್ಲಿ ಸುಜುಕಿ ಆಕ್ಸೆಸ್ 34,131 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರಾಟದಲ್ಲಿ ಶೇ8.70 ರಷ್ಟು ಬೆಳವಣಿಗೆಯನ್ನು ಮಾತ್ರ ದಾಖಲಿಸಿದ್ದು, ಪಟ್ಟಿಯ ಶೇ9.08% ಪಾಲನ್ನು ಪಡೆದುಕೊಂಡಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಈ ಪಟ್ಟಿಯಲ್ಲಿ ಹೋಂಡಾ ಡಿಯೋ ನಾಲ್ಕನೇ ಸ್ಥಾನದಲ್ಲಿದೆ. ಜೂನ್ 2021 ರಲ್ಲಿ ಮಾರಾಟವಾದ 18,983 ಯುನಿಟ್‌ಗಳಿಗೆ ಹೋಲಿಸಿದರೆ ಜೂನ್ 2022 ರಲ್ಲಿ ಡಿಯೋ 26,450 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಪಟ್ಟಿಯಲ್ಲಿ 7.04% ಪಾಲನ್ನು ಹೊಂದುವ ಮೂಲಕ ವಾರ್ಷಿಕವಾಗಿ ಶೇ39.34 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಐದನೇ ಸ್ಥಾನದಲ್ಲಿ TVS NTorq ಇದ್ದು, ಇದೊಂದು ಸ್ಪೋರ್ಟಿಯಸ್ಟ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. TVS Ntorq ಜೂನ್ 2022 ರಲ್ಲಿ 22,741 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಜೂನ್ 2021 ರಲ್ಲಿ 15,544 ಯುನಿಟ್‌ಗಳನ್ನು ಮಾರಾಟ ಮಾಡಿದೆ. Ntorq ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 46.30% ಬೆಳೆದಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಹೀರೋ ಪ್ಲೆಷರ್ ಆರನೇ ಸ್ಥಾನದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಮಾರಾಟವು 36.88% ಕಡಿಮೆಯಾಗಿದೆ. ಇದು ಜೂನ್ 2022 ರಲ್ಲಿ 11,321 ಯುನಿಟ್‌ಗಳನ್ನು ಮಾರಾಟ ಮಾಡಿದರೆ, ಜೂನ್ 2021 ರಲ್ಲಿ 17,937 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಅವೆನಿಸ್ 125 ರ 9,284 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸುವ ಮೂಲಕ ಸುಜುಕಿ ಜೂನ್ 2022 ರಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಮ್ಯಾಕ್ಸಿ ಶೈಲಿಯ ಸ್ಕೂಟರ್ ಜೂನ್ 2022 ರಲ್ಲಿ 8,793 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಜೂನ್ 2021 ರಲ್ಲಿ ಮಾರಾಟವಾದ 7,935 ಯುನಿಟ್‌ಗಳಿಂದ ಶೇ10.81 ರಷ್ಟು ಬೆಳವಣಿಗೆಯಾಗಿದೆ. ಸ್ಕೂಟರ್ ವಿಭಾಗದಲ್ಲಿ ಸುಜುಕಿ 2.34% ಪಾಲನ್ನು ಹೊಂದಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಕೊನೆಯದಾಗಿ Yamaha Fascino 125 ಮತ್ತು RayZR 125 ಅವಳಿ ಸ್ಕೂಟರ್‌ಗಳಾಗಿದ್ದು, ಅದರ ಹೊಸ ಹೈಬ್ರಿಡ್ ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಹೊಸ ಹೈಬ್ರಿಡ್ ವ್ಯವಸ್ಥೆಯು ಭಾರತದಲ್ಲಿ ಅತ್ಯಂತ ಕೈಗೆಟುಕುವ 125cc ಸ್ಕೂಟರ್‌ಗಳನ್ನು ಮಾಡಿದೆ. Yamaha ಜೂನ್ 2022 ರಲ್ಲಿ RayZR 125 ರ 8,091 ಯುನಿಟ್‌ಗಳನ್ನು ಮಾರಾಟ ಮಾಡಿತು, ಜೂನ್ 2021 ರಲ್ಲಿ ಮಾರಾಟವಾದ 2,229 ಯುನಿಟ್‌ಗಳಿಗೆ ಹೋಲಿಸಿದರೆ ಶೇ262.99 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಈ ಸ್ಕೂಟರ್‌ಗಳ ಪಟ್ಟಿಯಲ್ಲಿ RayZR 125 ಶೇ2.15 ಪಾಲನ್ನು ಹೊಂದಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಟಾಪ್ 10 ಸ್ಕೂಟರ್‌ಗಳ ಪಟ್ಟಿಯಲ್ಲಿ Yamaha Fascino 125 10 ನೇ ಸ್ಥಾನದಲ್ಲಿದೆ, ಜೂನ್ 2022 ರಲ್ಲಿ 7,915 ಯುನಿಟ್‌ಗಳ ಮಾರಾಟ ಮಾಡಿದೆ. ಜೂನ್ 2021 ರಲ್ಲಿ ಮಾರಾಟವಾದ 2,065 ಯುನಿಟ್‌ಗಳಿಗೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ ಶೇ283.29% ರಷ್ಟು ಬೆಳವಣಿಗೆಯಾಗಿದೆ.

ಜೂನ್‌ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಎಂದಿನಂತೆ ನಂ.1 ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಇತ್ತೀಚೆಗೆ ಸ್ಕೂಟರ್‌ಗಳ ಮಾರಾಟವು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರಲ್ಲಿ ಹೋಂಡಾ ಆಕ್ಟಿವಾ, ಮತ್ಯಾವುದೇ ಕಂಪನಿ ತನ್ನ ಹತ್ತಿರವೂ ಸುಳಿಯದ ಮಾರಾಟದ ಅಂಕಿ ಅಂಶಕಗಳನ್ನು ದಾಖಲು ಮಾಡಿದೆ. ಸದ್ಯ ಈ ತಿಂಗಳು ಕೂಡ ಸ್ಕೂಟರ್‌ಗಳು ಉತ್ತಮ ಮಾರಾಟ ಬೆಳವಣಿಗೆ ದಾಖಲಿಸುತ್ತಿದ್ದು, ಮುಂದಿನ ತಿಂಗಳು ಒಟ್ಟಾರೆ ಮಾರಾಟದ ಅಂಕಿಅಂಶಗಳು ಜೂನ್‌ಗಿಂತ ಅಧಿಕವಾಗಲಿವೆ.

Most Read Articles

Kannada
English summary
Top 10 Selling Scooters in June Honda Activa at No 1 as usual
Story first published: Monday, July 18, 2022, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X