ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯೊಂದಿಗೆ ಖರೀದಿಗೆ ಲಭ್ಯವಿರುವ ಐದು 250 ಸಿಸಿ ಬೈಕ್‌ಗಳು

ಭಾರತದಲ್ಲಿ ಯುವಕರಿಗೆ ಬೈಕ್ ಕ್ರೇಸ್ ಹೆಚ್ಚು ಅದರಲ್ಲೂ 250ಸಿಸಿ ಬೈಕ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಡ್ಯೂಕ್, ಯಮಹಾ, ಬಜಾಜ್, ಸುಜುಕಿ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್‌ಗಳನ್ನು ಪರಿಚಯಿಸಿವೆ.

ಸದ್ಯ ಈ ಕಂಪನಿಗಳ 250ಸಿಸಿ ಬೈಕ್‌ಗಳು ಉತ್ತಮ ಬೇಡಿಕೆಯೊಂದಿಗೆ ಪ್ರತಿ ತಿಂಗಳು ಮಾರಾಟ ಬೆಳವಣಿಗೆಯನ್ನು ದಾಖಲಿಸುತ್ತಿವೆ. ಅಂತಹ ಟಾಪ್ 5 ಬೈಕ್‌ಗಳ ವಿವರ ಇಲ್ಲಿದೆ. ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ.

ಕೆಟಿಎಂ 250 ಡ್ಯೂಕ್
ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ಅತ್ಯಂತ ಶಕ್ತಿಶಾಲಿ 250ಸಿಸಿ ಬೈಕ್‌ಗಳಲ್ಲಿ 'ಕೆಟಿಎಂ 250 ಡ್ಯೂಕ್' ಸಹ ಒಂದಾಗಿದೆ. ಇದು 248.7ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್- ಕೂಲ್ಡ್, ಡಿಒಎಚ್‌ಸಿ ಎಂಜಿನ್ 9,000rpmನಲ್ಲಿ 29.6bhp ಗರಿಷ್ಠ ಶಕ್ತಿ ಹಾಗೂ 24Nm ಟಾರ್ಕ್ ಶಕ್ತಿಯನ್ನು ಉತ್ಪಾದಿಸಬಲ್ಲದು. 6-ಸ್ಪೀಡ್ ಗೇರ್‌ಬಾಕ್ಸ್, ಟ್ರೆಲ್ಲಿಸ್ ಫ್ರೇಮ್ ಹಾರ್ಡ್‌ವೇರ್, ಮುಂಭಾಗದಲ್ಲಿ USD ಫೋರ್ಕ್‌ ಹೊಂದಿದೆ. ಕೊಂಚ ದುಬಾರಿಯಾಗಿರುವ ಈ ಬೈಕ್ ಬೆಲೆ ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ. 2.37 ಲಕ್ಷ ಇದೆ.

ಬಜಾಜ್ F250
'ಬಜಾಜ್ F250' ಬೈಕ್ ಅನ್ನು ಸವಾರರಿಗೆ ದೈನಂದಿನ ಪ್ರಯಾಣದ ಅಗತ್ಯತೆ ಹಾಗೂ ದೀರ್ಘ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಈ ಬೈಕ್ ಸಿಂಗಲ್-ಸಿಲಿಂಡರ್, 2-ವಾಲ್ವ್, ಆಯಿಲ್-ಕೂಲ್ಡ್, ಎಸ್‌ಒಎಚ್‌ಸಿ ಎಂಜಿನ್ ಹೊಂದಿದೆ. ಇದು 8,750rpmನಲ್ಲಿ 23.5bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಡ್ಯುಯಲ್-ಚಾನೆಲ್ ABS ಯುನಿಟ್ ಆಯ್ಕೆಯೊಂದಿಗೆ ಖರೀದಿ ಮಾಡಬಹುದು. ದೆಹಲಿ ಎಕ್ಸ್ ಶೋ ರೂಂ ಪ್ರಕಾರ ಆರಂಭಿಕ ಬೆಲೆ ರೂ 1.40 ಲಕ್ಷದಿಂದ ಪ್ರಾರಂಭವಾಗುತ್ತದೆ.

ಯಮಹಾ ಎಫ್‌ಜೆಡ್ 25
ದೂರದ ಪ್ರಯಾಣಕ್ಕೆ ಯಮಹಾ ಎಫ್‌ಜೆಡ್ ಬೈಕ್ ಅನ್ನು ಬೆಸ್ಟ್ ಎಂದು ಹೇಳಿದರೆ ತಪ್ಪಾಗವುದಿಲ್ಲ. ಇದರಲ್ಲಿರುವ 249ಸಿಸಿ ಏರ್-ಕೂಲ್ಡ್ ಎಸ್‌ಒಎಚ್‌ಸಿ ಎಂಜಿನ್ 8,000rpmನಲ್ಲಿ 20.51bhp & 6,000rpmನಲ್ಲಿ 20.1Nm ಟಾರ್ಕ್ ಪವರ್ ಉತ್ಪಾದಿಸುತ್ತದೆ. ಈ ಬೈಕಿನ ಮತ್ತೊಂದು ವಿಶೇಷತೆ ಅಂದರೆ ದೊಡ್ಡ 14L ಇಂಧನ ಟ್ಯಾಂಕ್‌ ಹೊಂದಿರುವುದು. ಈ ಬೈಕ್ 1.47 ಲಕ್ಷ ರೂ. ಆಕರ್ಷಕ ಬೆಲೆಯೊಂದಿಗೆ ಗ್ರಾಹಕರ ಕೈ ಸೇರಲಿದೆ (ಎಕ್ಸ್ ಶೋ ರೂಂ, ದೆಹಲಿ).

ಸುಜುಕಿ ವಿ-ಸ್ಟಾರ್ಮ್ SX
ದೂರದ ಪ್ರವಾಸಕ್ಕೆ ಬೇಕಾಗುವ ರೀತಿಯೇ 'ಸುಜುಕಿ ವಿ-ಸ್ಟಾರ್ಮ್ SX' ಬೈಕ್ ವಿನ್ಯಾಸ ಮಾಡಲಾಗಿದ್ದು, ಎಂತಹ ವೇಗದ ಗಾಳಿ ಬೀಸುವ ಸಂದರ್ಭದಲ್ಲಿಯೂ ಈ ಬೈಕ್ ಸವಾರ ಸುಲಭವಾಗಿ ಚಲಾಯಿಸಬಹುದು. ಇದರ ಬೆಲೆ ಬೇರೆ ಬೈಕ್‌ಗಳಿಗೆ ಹೋಲಿಕೆ ಮಾಡಿದರೆ ಕೊಂಚ ದುಬಾರಿಯಾಗಿದ್ದು, ರೂ. 2.11 ಲಕ್ಷ (ಎಕ್ಸ್ ಶೋರೂಂ, ಭಾರತ) ಖರೀದಿಗೆ ಲಭ್ಯವಿದೆ. ಈ ಬೈಕ್ 249ಸಿಸಿ, ಸಿಂಗಲ್-ಸಿಲಿಂಡರ್, ಎಸ್‌ಒಎಚ್‌ಸಿ ಎಂಜಿನ್ ಹೊಂದಿದೆ. ಇದು ಎಂಜಿನ್ 9,300rpmನಲ್ಲಿ 26.5bhp ಪವರ್ ಹಾಗೂ 7,300rpmನಲ್ಲಿ 22.2Nm ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಡೊಮಿನಾರ್ 250
ಬಹುತೇಕರು ಇಷ್ಟಪಡುವ ಬೈಕ್‌ಗಳಲ್ಲಿ 'ಬಜಾಜ್ ಡೊಮಿನಾರ್ 250' ಸಹ ಒಂದಾಗಿದೆ. ಇದರ ಬೆಲೆ 1.75 ಲಕ್ಷ (ಎಕ್ಸ್-ಶೋರೂಮ್, ದೆಹಲಿ) ಇದೆ. ಅತ್ಯುನ್ನತವಾಗಿ ಗ್ರಾಹಕ ಸ್ನೇಹಿಯಾಗಿ ವಿನ್ಯಾಸ ಮಾಡಲಾಗಿರುವ ಈ ಬೈಕಿನಲ್ಲಿ 248.7ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC ಎಂಜಿನ್ 8,500rpm ನಲ್ಲಿ 26.6bhp ಗರಿಷ್ಠ ಶಕ್ತಿ ಹಾಗೂ 6,500 ನಲ್ಲಿ 23.5Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಈ 'ಬಜಾಜ್ ಡೊಮಿನಾರ್ 250' ಬೈಕ್ ಅನ್ನು ಆರಾಮದಾಯಕವಾಗಿ ರೈಡಿಂಗ್ ಮಾಡಬಹುದಾಗಿದ್ದು, ಉತ್ತಮ ಸಾಮರ್ಥ್ಯ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Top 5 250 cc bikes in indian market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X