ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ದ್ವಿಚಕ್ರ ವಾಹನ ತಯಾರಕರು ತಮ್ಮ ಜನಪ್ರಿಯ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದೆ. ಇದರಿಂದ ಗ್ರಾಹಕರು ತಮ್ಮ ಆದ್ಯತೆಯ ಮೇರೆಗೆ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಿಂದ ತೀವ್ರವಾಗಿ ಬದಲಾಗಿದೆ ಮತ್ತು ಅದು ಉತ್ತಮ ರೀತಿಯಲ್ಲಿ ಬದಲಾಗಿದೆ. ಸ್ಕೂಟರ್‌ಗಳು ಅನುಕೂಲಕ್ಕಾಗಿ ಮತ್ತು ಪ್ರಾಯೋಗಿಕತೆಗೆ ಮಾತ್ರ ಸಂಬಂಧಿಸಿದ ಮಾದರಿಗಳಾಗಿತು. ಆದರೆ ಇತ್ತೀಚೆಗೆ ಹೆಚ್ಚಿನ ಕಾರ್ಯಕ್ಷಮತೆಯ ಸ್ಕೂಟರ್ ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಗ್ರಾಹಕರು ಕೂಡ ಹೆಚ್ಚಿನ ಕಾರ್ಯಕ್ಷಮತೆಯ ಸ್ಕೂಟರ್ ಗಳನ್ನು ಬಯಸುತ್ತಾರೆ. 2022 ರಲ್ಲಿ ಖರೀದಿಸಬಹುದಾದ ಪವರ್‌ಫುಲ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್

ಹೊಸ ಬಿಎಂಡಬ್ಲ್ಯು ಸಿ 400 ಜಿಟಿ(BMW C 400 GT) ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಸ್ಕೂಟರ್ ಸಿಬಿಯು ಯುನಿಟ್ ಆಗಿ ಲಭ್ಯವಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಆಲ್ಪೈನ್ ವೈಟ್ ಮತ್ತು ಸ್ಟೈಲ್ ಟ್ರಿಪಲ್ ಬ್ಲ್ಯಾಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಈ ದುಬಾರಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ಮುಂಭಾಗದಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್, ವಿಂಡ್‌ಶೀಲ್ಡ್, ಎರಡು ಗ್ಲೌಸ್ ಕಂಪಾರ್ಟ್‌ಮೆಂಟ್‌ಗಳು, ಸಿಂಗಲ್-ಸೆಕ್ಷನ್ ಸೀಟಿನ ಅಡಿಯಲ್ಲಿ ಒಂದು ಫ್ಲೆಕ್ಸ್‌ಕೇಸ್ ಮತ್ತು ಕೀಲೆಸ್ ರೈಡ್‌ನಂತಹ ಟ್ವಿನ್-ಪಾಡ್ ಎಲ್‌ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಈ ಐಷಾರಾಮಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ 350 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 7,500 ಆರ್‌ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 35 ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಸ್ಕೂಟರ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ, ಇನ್ನು ಈ ಸ್ಕೂಟರ್ ಟಾಪ್-ಸ್ಫೀಡ್ 139 ಕಿ.ಮೀ ಆಗಿದೆ,

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಯಮಹಾ ಏರೋಕ್ಸ್ 155

ಈ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಒಳಗೊಂಡಿದೆ. ಈ ವಾಹನದ ಒಟ್ಟು ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಏರಾಕ್ಸ್ 155 ಸ್ಕೂಟರ್ ಮಿಡ್-ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಸ್ಕೂಟರ್ ನಲ್ಲಿ ಅದೇ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಧನ-ಇಂಜೆಕ್ಟೆಡ್ ಡಿಒಎಚ್‌ಸಿ ಎಂಜಿನ್ ಅನ್ನು ವೇರಿಯಬಲ್ ವ್ಯಾಲ್ಯೂ ಆಕ್ಚುವೇಶನ್ ಟೆಕ್‌ನೊಂದಿಗೆ ಬಳಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 14.95 ಬಿಹೆಚ್‍ಪಿ ಪವರ್ ಅನ್ನು ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಈ ಸ್ಕೂಟರ್ ಹರ್ಡ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್ ಫೇರಿಂಗ್ ಮತ್ತು ಸಮತಲವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ಜೋಡಿಸಲಾಗಿದೆ.ಇನ್ನು ಈ ಸ್ಕೂಟರ್ ಸಣ್ಣ ವಿಂಡ್‌ಸ್ಕ್ರೀನ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಸ್ಟಬ್ಬಿ ಎಕ್ಸಾಸ್ಟ್ ಸಿಸ್ಟಂ, ದೊಡ್ಡ ಫುಟ್‌ಬೋರ್ಡ್ ಮತ್ತು ವಿಶಾಲವಾದ ಸ್ಟೋರೆಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಈ ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ,

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಎಪ್ರಿಲಿಯಾ ಎಸ್ಆರ್ 160

ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ನವೀಕರಿಸಿದ ಮುಂಭಾಗದ ಫಾಸಿಕಿವನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟ್ 160 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7600 ಆರ್‌ಪಿಎಂನಲ್ಲಿ 10.8 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಇನ್ನು ಈ ಹೊಸ ಎಸ್‌ಆರ್ 160 ಯುವ ಪೀಳಿಗೆಯ ಖರೀದಿದಾರರನ್ನು ಆಕರ್ಷಿಸುವಂತೆ ಆಗ್ರೇಸಿವ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ ಸ್ಕೂಟರ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೆಟಪ್ ಅನ್ನು ಒಳಗೊಂಡಿರಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ತಂತ್ರಜ್ಙಾನವನ್ನು ಒಳಗೊಂಡಿದೆ. ಸ್ಕೂಟರ್ ಸವಾರ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಆರಾಮದಾಯಕವಾಗಿರುವ ಸೀಟುಗಳನ್ನು ನೀಡಲಾಗಿದೆ. ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍‍ಗಳು ಸಹ ಈ ಮ್ಯಾಕ್ಸಿ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ನಲ್ಲಿ 160 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,600 ಆರ್‌ಪಿಎಂನಲ್ಲಿ 10.84 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 11.6 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮ್ಯಾಕ್ಸಿ ಸ್ಕೂಟರ್ ನಲ್ಲಿ ಪೂರ್ಣ ಗಾತ್ರದ ಹೆಲ್ಮೆಟ್ ಮತ್ತು 7 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌ಗಾಗಿ ಅಂಡರ್-ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ನೀಡಿದೆ. ಇನ್ನು ಈ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಗ್ಲೋಸಿ ರೆಡ್, ಮ್ಯಾಟ್ ಬ್ಲೂ, ಗ್ಲೋಸಿ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್‌ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಪವರ್‌ಫುಲ್ ಸ್ಕೂಟರ್‌ಗಳಿವು..

ಈ ಸ್ಕೂಟರ್ ನಲ್ಲಿ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್, ಡ್ಯುಯಲ್ ಎಲ್‌ಇಡಿ ಟೇಲ್ ಲೈಟ್ ಕ್ಲಸ್ಟರ್‌ಗಳಿವೆ. ಇನ್ನು ಇದರಲ್ಲಿ ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗೆ ಇರಿಸಲಾಗಿದೆ, ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍‍ಗಳು ಈ ಸ್ಕೂಟರ್'ಗೆ ಸ್ಪೋರ್ಟಿ ಲುಕ್ ನೀಡುತ್ತವೆ.

Article Published On: Tuesday, February 1, 2022, 12:49 [IST]
English summary
Top powerful scooters that you can buy in 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+