ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಮೇ ಮೊದಲ ವಾರವು ಭಾರತದ ಬೈಕ್ ಕಂಪನಿಗಳಿಗೆ ಉತ್ತೇಜನಕಾರಿಯಾಗಿತ್ತು. ಕಳೆದ ವಾರ ಕೆಟಿಎಂ ತನ್ನ ಹೊಸ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದರೆ, ಬಜಾಜ್, ಹೋಂಡಾ ಮತ್ತು ರಾಯಲ್ ಎನ್‌ಫೀಲ್ಡ್‌ನಂತಹ ಕಂಪನಿಗಳು ಕೆಲವು ಹೊಸ ಬದಲಾವಣೆಗಳೊಂದಿಗೆ ತಮ್ಮ ಅಸ್ತಿತ್ವದಲ್ಲಿರುವ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

1. ಹೊಸ KTM 390 ಅಡ್ವೆಂಚರ್ ಬಿಡುಗಡೆ

ಮೇ ಮೊದಲ ವಾರದಲ್ಲಿ, KTM ತನ್ನ ಎರಡು ನವೀಕರಿಸಿದ ಮಾದರಿಗಳನ್ನು ಬಿಡುಗಡೆ ಮಾಡಿದೆ. ಕಳೆದ ವಾರ ಕಂಪನಿಯು ಹೊಸ 390 ಅಡ್ವೆಂಚರ್ ಬೈಕ್ ಅನ್ನು 3.28 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿತ್ತು. ಹೊಸ 390 ಅಡ್ವೆಂಚರ್ ಅನ್ನು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳ ನವೀಕರಣಗಳೊಂದಿಗೆ ಪರಿಚಯಿಸಲಾಗಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹೊಸ KTM RC 390 ತನ್ನ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ತಲೆಮಾರಿನ ಬೈಕ್‌ನ ನೋಟವನ್ನು ಸಾಕಷ್ಟು ಸುಧಾರಿಸಲಾಗಿದೆ. ಬೈಕ್‌ನಲ್ಲಿ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸಲು ಸ್ಪೋರ್ಟಿ ಬಾಡಿ ಪ್ಯಾನೆಲ್‌ಗಳನ್ನು ಬಳಸಲಾಗಿದೆ. ಫೀಚರ್‌ಗಳ ವಿಷಯದಲ್ಲಿಯೂ ಈ ಬೈಕ್ ಅನ್ನು ನವೀಕರಿಸಲಾಗಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಈಗ ಇದು ಮ್ಯೂಸಿಕ್ ಕಂಟ್ರೋಲ್, ಕರೆ / SMS ಎಚ್ಚರಿಕೆಗಳು ಮತ್ತು ಟರ್ನ್ ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಬ್ಲೂಟೂತ್ ಸಕ್ರಿಯಗೊಳಿಸಿದ TFT ಇಕ್ವಿಪ್‌ಮೆಂಟ್‌ ಡಿಸ್ಪ್ಲೆಯನ್ನು ಪಡೆದುಕೊಂಡಿದೆ. ರೈಡರ್‌ಗಳು ತಮ್ಮ ಹೊಸ ಸ್ವಿಚ್‌ಗಿಯರ್ ಅನ್ನು ಬಳಸಿಕೊಂಡು ಪ್ರಯಾಣದಲ್ಲಿರುವಾಗ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಫೋನ್ ಕರೆಗಳನ್ನು ನಿಯಂತ್ರಿಸಬಹುದು.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

KTM 390 ಅಡ್ವೆಂಚರ್ 373.27cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 42.9 bhp ಪವರ್ ಮತ್ತು 37 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

2. ಹೊಸ KTM RC390 ಬಿಡುಗಡೆ

ಭಾರತದಲ್ಲಿ KTM ನ ಎರಡನೇ ಅತಿ ದೊಡ್ಡ ಲಾಂಚ್‌ ಎಂದರೆ ಹೊಸ RC390 (2022 KTM RC390). ಹೊಸ RC390 ಅನ್ನು 3.14 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ತನ್ನ ಹಳೆಯ ಮಾದರಿಗಿಂತ 36,000 ರೂ. ಬೆಲೆ ಹೆಚ್ಚಳ ಪಡೆದುಕೊಂಡಿದೆ. ಹೊಸ ತಲೆಮಾರಿನ KTM RC390 ಅನ್ನು ಸಂಪೂರ್ಣವಾಗಿ ಹೊಸ ವಿನ್ಯಾಸದಲ್ಲಿ ಪರಿಚಯಿಸಲಾಗಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹಳೆಯ KTM RC 390 ಗೆ ಹೋಲಿಸಿದರೆ, ಹೊಸ ಬೈಕ್ ಹೆಚ್ಚು ಸ್ಪೋರ್ಟಿಯಾಗಿದೆ. ಇದರ ತೂಕವು ಅದರ ಹಳೆಯ ಮಾದರಿಗಿಂತ ಸುಮಾರು 7 ಕೆ.ಜಿ ಕಡಿಮೆಯಾಗಿದೆ, ಇದರಿಂದಾಗಿ ಬೈಕ್ ಈಗ ಮೊದಲಿಗಿಂತ ಹೆಚ್ಚು ಮೈಲೇಜ್ ಪಡೆಯುತ್ತದೆ. ಹೊಸ RC390 ಮುಂಭಾಗದ ಹೆಡ್‌ಲ್ಯಾಂಪ್‌ಗಳಿಗಾಗಿ LED ಹೆಡ್‌ಲೈಟ್, ಟರ್ನ್ ಇಂಡಿಕೇಟರ್‌ಗಳು ಮತ್ತು DRL ಗಳೊಂದಿಗೆ ಎಲ್ಲಾ-ಹೊಸ ಆಲ್-LED ಸೆಟ್-ಅಪ್‌ ಅನ್ನು ಪಡೆದುಕೊಂಡಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹೊಸ ತಲೆಮಾರಿನ KTM RC390 ಹಳೆಯ ಮಾದರಿಯಲ್ಲಿ ಬಳಸಿದ ಅದೇ ಎಂಜಿನ್ ಅನ್ನು ಪಡೆದುಕೊಂಡಿದೆ. ಎಂಜಿನ್‌ನಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ RC390 373.2cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ BS6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 43.5 bhp ಪವರ್ ಮತ್ತು 37 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

3. ಹೋಂಡಾ ಹೈನೆಸ್ CB350 iOS ವೈಶಿಷ್ಟ್ಯದೊಂದಿಗೆ ಬಿಡುಗಡೆ

ಹೋಂಡಾ ಹೈನೆಸ್ ಈಗ CB350 ನಲ್ಲಿ iOS ಅನ್ನು ಸಪೋರ್ಟ್ ಮಾಡುವಂತೆ ಸುಧಾರಿಸಲಾಗಿದೆ. ಅಂದರೆ ಹೋಂಡಾದ ಕನೆಕ್ಟಿವಿಟಿ ವೈಶಿಷ್ಟ್ಯವನ್ನು iOS ಸಾಧನಗಳಲ್ಲಿಯೂ ಸಹ ಪ್ರವೇಶಿಸಬಹುದು. ಹೋಂಡಾ ಹೈನೆಸ್ CB350 ನಲ್ಲಿ ಕಂಡುಬರುವ ವಾಯ್ಸ್ ಕಮಾಂಡ್ ಸಿಸ್ಟಮ್ ಈಗ iOS ಸಾಧನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಹಿಂದೆ ಆಂಡ್ರಾಯ್ಡ್ ಸಿಸ್ಟಮ್‌ಗಳಿಗೆ ಮಾತ್ರ ಹೊಂದಿಕೆಯಾಗುತ್ತಿತ್ತು.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಮಾಂಡ್ ಸಿಸ್ಟಮ್ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುತ್ತದೆ. ಈ ಮೂಲಕ ಕರೆ, ಎಸ್‌ಎಂಎಸ್ ಮತ್ತು ನ್ಯಾವಿಗೇಷನ್ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಈ ವ್ಯವಸ್ಥೆಯು Hnesse CB350 ನ DLX Pro ಮತ್ತು ವಾರ್ಷಿಕೋತ್ಸವ ಆವೃತ್ತಿಯಲ್ಲಿ ಲಭ್ಯವಿದೆ. DLX Pro ಬೆಲೆ ರೂ. 2,03,179 ಮತ್ತು ವಾರ್ಷಿಕ ಆವೃತ್ತಿ ರೂ 2,05,679 (ಎಕ್ಸ್ ಶೋ ರೂಂ, ದೆಹಲಿ) ನಲ್ಲಿ ಲಭ್ಯವಿದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

4. ಬಜಾಜ್ ಪಲ್ಸರ್ 250 ಹೊಸ ಬಣ್ಣಗಳಲ್ಲಿ ಲಭ್ಯ

ಬಜಾಜ್ ಪಲ್ಸರ್ F250 ಮತ್ತು N250 ಈಗ ಹೊಸ ಕೆರಿಬಿಯನ್ ಬ್ಲೂ ಬಣ್ಣದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಕೆರಿಬಿಯನ್ ಬ್ಲೂನಲ್ಲಿ ಪಲ್ಸರ್ ಎನ್250 ಬೆಲೆ ರೂ. 1,43,680 ಮತ್ತು ಪಲ್ಸರ್ ಎಫ್ 250 ಬೆಲೆ ರೂ. 1,44,979 (ಎಕ್ಸ್ ಶೋ ರೂಂ) ನಲ್ಲಿ ಆರಂಭವಾಗುತ್ತದೆ. ಹೊಸ ಬಣ್ಣದ ಜೊತೆಗೆ ಕಂಪನಿಯು ಬೈಕ್‌ನ ಅಲಾಯ್ ವೀಲ್‌ಗಳಲ್ಲಿ ಮ್ಯಾಚಿಂಗ್ ಕಲರ್ ಸ್ಟಿಕರ್ ಅನ್ನು ಸಹ ನೀಡಿದೆ. ಹೊಸ ಬಣ್ಣವನ್ನು ಹೊರತುಪಡಿಸಿ, ಬೈಕ್‌ನಲ್ಲಿ ಯಾವುದೇ ನವೀಕರಣವನ್ನು ಮಾಡಲಾಗಿಲ್ಲ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಎರಡೂ ಬೈಕ್‌ಗಳನ್ನು ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್ ಮತ್ತು ಎರಡು-ವಾಲ್ವ್ ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ. ಈ ಬೈಕ್‌ಗಳು 249.07cc ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು 8,750 rpm ನಲ್ಲಿ 24.1 Bhp ಮತ್ತು 6,500 rpm ನಲ್ಲಿ 21.5 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

5.ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹೋಂಡಾ ತನ್ನ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಮುಂದಿನ ಹಣಕಾಸು ವರ್ಷದ ವೇಳೆಗೆ ಬಿಡುಗಡೆಗೆ ಸಿದ್ಧವಾಗಲಿದೆ ಎಂದು ಹೋಂಡಾ ಹೇಳಿದೆ. ಇದನ್ನು ಸ್ವತಃ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಅತ್ಸುಶಿ ಒಗಾಟಾ ಅವರು ಬಹಿರಂಗಪಡಿಸಿದ್ದಾರೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹೋಂಡಾ ಆಕ್ಟಿವಾ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗೆ ಅದೇ ಹೆಸರನ್ನು ಬಳಸುವುದು ತಾರ್ಕಿಕವಾಗಿದೆ. 'ಆಕ್ಟಿವಾ' ಬ್ರ್ಯಾಂಡ್‌ನ ವಿಶ್ವಾಸಾರ್ಹ ಸ್ಕೂಟರ್ ಆಗಿರುವುದರಿಂದ ಗ್ರಾಹಕರು ಬ್ರ್ಯಾಂಡ್‌ನೊಂದಿಗೆ ಸಂಯೋಜಿಸಲು ಇದು ಸುಲಭವಾಗುತ್ತದೆ.

ಕಳೆದ ವಾರ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ 5 ಬೈಕ್‌ಗಳು

ಹೋಂಡಾ ಭಾರತೀಯ ಮಾರುಕಟ್ಟೆಗೆ ಹೊಸ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತದೆಯೇ ಅಥವಾ ಅಂತರಾಷ್ಟ್ರೀಯ ಉತ್ಪನ್ನ ಶ್ರೇಣಿಯಿಂದ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ನ ಸ್ವಲ್ಪ ಮಾರ್ಪಡಿಸಿದ ಆವೃತ್ತಿಯನ್ನು ಪರಿಚಯಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Most Read Articles

Kannada
English summary
Top two wheeler news of the week
Story first published: Monday, May 9, 2022, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X