ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬೈಕ್‌ಗಳ ಆಯ್ಕೆಗಳಿವೆ. ಪ್ರತಿ ವಿಭಾಗದಲ್ಲಿಯು ಹಲವು ವಿಧದ ಆಯ್ಕೆಗಳನ್ನು ಒಳಗೊಂಡಿದೆ, ಪ್ರತಿ ಖರೀದಿದಾರನು ವಿಭಿನ್ನ ಅವಶ್ಯಕತೆ ಮತ್ತು ಬಯಕೆಗಳನ್ನು ಹೊಂದಿರಬಹುದು. ಗ್ರಾಹಕರ ಅವಶ್ಯಕತೆ ಮತ್ತು ಬಯಕೆಗಳಿಗೆ ತಕ್ಕಂತೆ ವಿಭಿನ್ನ ಆಯ್ಕೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕೈಗೆಟುಕುವ ದರದ ಮತ್ತು ಅತಿ ಹೆಚ್ಚು ಮೈಲೇಜ್ ಅನ್ನು ಒದಗಿಸುವ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತದೆ. ಆದರೆ ಇತ್ತೀಚೆಗೆ ಪ್ರೀಮಿಯಂ ಬೈಕ್‌ಗಳಿಗೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ. ಹೆಚ್ಚಿನ ಯುವ ಖರೀದಿದಾರರು ಪ್ರೀಮಿಯಂ ಬೈಕ್‌ಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಹೊಂದಿರುವುದರಿಂದ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿದೆ.ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗದೆಯಾಗಲಿರುವ ಟಾಪ್ ಪ್ರೀಮಿಯಂ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ರಾಯಲ್ ಎನ್‍ಫೀಲ್ಡ್ ಸ್ಕ್ರಾಮ್ 411

ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹಿಮಾಲಯನ್ ಬೈಕಿನ ಹೊಸ ಸ್ಕ್ರ್ಯಾಂಬ್ಲರ್ ವೆರಿಯೆಂಟ್ ಕೂಡ ಒಳಗೊಂಡಿದೆ. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಪರೀಕ್ಷಿಸುವಾಗ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಡೀಲರ್‌ಶಿಪ್ ಯಾರ್ಡ್‌ನಲ್ಲಿರುವ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ತಲುಪಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಶೀಘ್ರದಲ್ಲೇ ಭಾರತದಲ್ಲಿ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಬಿಡುಗಡೆ ಮಾಡಲಿದೆ. ಇದೀಗ ರಾಯಲ್ ಎನ್‍ಫೀಲ್ಡ್ ಕಂಪನಿಯು ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ಪ್ರಕಾರ, ಹಿಮಾಲಯನ್ ಆಧಾರಿತ ಸ್ಕ್ರ್ಯಾಂಬ್ಲರ್ ಶೈಲಿಯ ಸ್ಕ್ರಾಮ್ 411 ಬೈಕ್ ಅನ್ನು ಈ ವರ್ಷದ ಮಾರ್ಚ್ ತಿಂಗಳ 7 ರಂದು ಬಿಡುಗಡೆಯಾಗಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ರಸ್ತೆ-ಆಧಾರಿತ ಮತ್ತು ಹೆಚ್ಚು ಕೈಗೆಟುಕುವ ಮಾದರಿಯು ವಿನ್ಯಾಸದಂತಹ ಹೆಚ್ಚು ಸ್ಕ್ರ್ಯಾಂಬ್ಲರ್ ಮಾದರಿಯನ್ನು ಹೊಂದಿರುತ್ತದೆ. ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತದೆ. ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್‌ನ ಬ್ರೋಷರ್ ಸ್ಕ್ಯಾನ್‌ಗಳು ವೆಬ್‌ನಲ್ಲಿ ಕಾಣಿಸಿಕೊಂಡಿವೆ. ಸೋರಿಕೆಯಾದ ಚಿತ್ರಗಳು ಇದು ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಹಿಮಾಲಯನ್‌ನ ಹೆಚ್ಚು ಕೈಗೆಟುಕುವ ರೂಪಾಂತರವಾಗಿದೆ ಎಂದು ಖಚಿತಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

2022ರ ಕೆಟಿಎಂ 390 ಅಡ್ವೆಂಚರ್

ಕೆಟಿಎಂ ತನ್ನ 2022ರ 390 ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಇತ್ತೀಚೆಗೆ ಯುಎಸ್ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಬಿಡುಗದೆಗೊಳಿಸಲಾಗಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಮೊದಲ ಬ್ಯಾಚ್ ಭಾರತದಾದ್ಯಂತ ಡೀಲರ್ ಶೋರೂಮ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ನವೀಕರಿಸಿದ ಕೆಟಿಎಂ 390 ಅಡ್ವೆಂಚರ್ ಬೈಕ್ ಸೂಕ್ಷ್ಮ ಮತ್ತು ಗಮನಿಸಬಹುದಾದ ನವೀಕರಣಗಳೊಂದಿಗೆ ಬರುತ್ತದೆ. ಈ ಅಡ್ವೆಂಚರ್ ಟೂರರ್‌ನಲ್ಲಿನ ದೃಶ್ಯ ನವೀಕರಣಗಳು ಡಾಕರ್ ವಿಜೇತ KTM ಫ್ಯಾಕ್ಟರಿ ರ್ಯಾಲಿ ಯಂತ್ರಗಳಿಗೆ ಅನುಗುಣವಾಗಿರುತ್ತವೆ. ಇದರ ಒಟ್ಟಾರೆ ವಿನ್ಯಾಸವು ಒಂದೇ ಆಗಿರುತ್ತದೆ, ಇದು ತಿಳಿದಿರುವ ಅದೇ ಒರಟಾದ ಶೈಲಿಯನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಕೆಟಿಎಂ 390 ಅಡ್ವೆಂಚರ್ ಈಗ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಪಡೆದುಕೊಂಡಿದೆ. ಇದು ಗ್ರೇ-ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳಾಗಿವೆ. ಇದರಲ್ಲಿ ಆರೇಂಜ್ ಅಸ್ಸೆಂಟ್ ಗಳು ಮತ್ತು ಬಾಡಿ ಗ್ರಾಫಿಕ್ಸ್‌ನೊಂದಿಗೆ ನೀಡಲಾಗುತ್ತದೆ. ಇವು ಕೆಟಿಎಂನ ದೊಡ್ಡ ಮಾದರಿಗಳಿಂದ ಸ್ಫೂರ್ತಿ ಪಡೆದಿವೆ. ಉದಾಹರಣೆಗೆ 890 ಅಡ್ವೆಂಚರ್ ಜೊತೆಗೆ ಬೈಕು ಹೊಸ ಟ್ಯಾಂಕ್ ಕವಚಗಳು ಮತ್ತು ಹಿಂಭಾಗದ ಸೈಡ್ ಪ್ಯಾನೆಲ್‌ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಹಂಟರ್ 350

ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕನ್ನು ಬ್ರ್ಯಾಂಡ್‌ನ ಹೊಸ ಜೆ-ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಹೊಸ ಹಂಟರ್ 350 ಬೈಕ್ ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಬೈಕ್ ಸ್ಫಾಟ್ ಟೆಸ್ಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗಪಡಿಸಿವೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸ, ಫೀಚರ್ ಮತ್ತು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಸ್ಫಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಾದರಿಯು ಕ್ಲಾಸಿಕ್-ರೋಡ್‌ಸ್ಟರ್ ಲುಕ್ ಅನ್ನು ಹೊಂದಿದೆ. ಈ ಬೈಕಿನ ವೃತಕಾರದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಗೇಟರ್ ಗಳನ್ನು ಒಳಗೊಂಡಿವೆ. ಇದರ ವೃತ್ತಾಕಾರದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸಂಯೋಜಿತ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಕೆಟಿಎಂ ಆರ್‌ಸಿ 390

ಕೆಟಿಎಂ ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎರಡನೇ ತಲೆಮಾರಿನ ಕೆಟಿಎಂ ಆರ್‌ಸಿ 390 (KTM RC 390) ಬೈಕ್ ಹಲವಾರು ಹೊಸ ನವೀಕರಣಗಳನು ಪಡೆದುಕೊಂಡಿವೆ ಇತ್ತೀಚಿನ ವರದಿಯ ಪ್ರಕಾರ, ಹೊಸ ಕೆಟಿಎಂ ಆರ್‌ಸಿ 390 ಬೈಕ್ ಭಾರತದಲ್ಲಿ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ,

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಇದಕ್ಕಾಗಿ ಆರ್‌ಸಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಟಿಎಂ ಆರ್‌ಸಿ 390 ಬೈಕ್ ಅನ್ನು 2021 ರಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಸೆಮಿಕಂಡಕ್ಟರ್‌ಗಳ ಕೊರತೆ ಮತ್ತು ನಡೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಬಿಡುಗಡೆಯಾಗಲಿ ವಿಳಂಬವಾಗಿದೆ. ಇಂಟರ್ನ್ಯಾಷನಲ್-ಸ್ಪೆಕ್ ಮೋಟಾರ್ಸೈಕಲ್ ಹೊಂದಾಣಿಕೆಯ ಸಸ್ಪೆಂಕ್ಷನ್ ವೈಶಿಷ್ಟ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಹಿಂದೆ ನೋಡಿದಂತೆ. ಭಾರತದ ಕೆಲವು ಕೆಟಿಎಂ ಮಾದರಿಗಳು ಈ ಫೀಚರ್ ಅನ್ನು ಕಳೆದುಕೊಂಡಿದೆ. ಆದರೆ ಹೊಸ ಸಸ್ಪೆರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯಾದಾಗ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಹೊಂದಿರುತ್ತದೆ. ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ,

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಡುಕಾಟಿ ಸ್ಟ್ರೀಟ್‌ಫೈಟರ್ ವಿ2

ಡುಕಾಟಿ ತನ್ನ ಹೊಸ ಸ್ಟ್ರೀಟ್‌ಫೈಟರ್ ವಿ2 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2(Ducati Streetfighter V2) ಬೈಕ್ ನೇಕೆಡ್ ಸ್ಟ್ರೀಟ್ ಆವೃತ್ತಿಯಾಗಿದೆ. ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಫೇರಿಂಗ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಹೆಚ್ಚು ನೇರವಾದ 'ಸ್ಟ್ರೀಟ್' ರೈಡಿಂಗ್ ಪೋಷಿಸನ್ ಫ್ಲಾಟ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಇದು ಮೂಲಭೂತವಾಗಿ ಪಾನಿಗಲೆ ವಿ2 ಬೈಕಿನಿಂದ ಎಲ್ಲಾ ತಂತ್ರಜ್ಞಾನ ಎರವಲು ಪಡೆದುಕೊಂಡಿದೆ ಮತ್ತು ದೈನಂದಿನ ಬಳಕೆಗಾಗಿ ಹೆಚ್ಚು ಪ್ರಾಯೋಗಿಕ ಪ್ಯಾಕೇಜ್‌ನಲ್ಲಿ ಪ್ಯಾಕ್ ಮಾಡಲಾಗಿದೆ. ಸ್ಟ್ರೀಟ್‌ಫೈಟರ್ ವಿ2 ಬೈಕ್ ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ2 ಬೈಕ್ ಅದೇ 955 ಸಿಸಿ, ಸೂಪರ್‌ಕ್ವಾಡ್ರೊ ಎಂಜಿನ್‌ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಬೈಕ್‌ಗಳಿವು..

ಇದೇ ಎಂಜಿನ್ ಅದು ಪ್ರಸ್ತುತ ಪಾನೆಗಲೆ ವಿ2 ನಲ್ಲಿಯು ಕೂಡ ಇದೆ. ಆದರೆ ಪೂರ್ಣ-ಫೇರ್ಡ್ ಸಿಬ್ಲಿಂಗ್‌ಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್‌ನೊಂದಿಗೆ. ಸ್ಟ್ರೀಟ್‌ಫೈಟರ್ ವಿ2 ನಲ್ಲಿ ಎಂಜಿನ್ 10,750 ಆರ್‌ಪಿಎಂನಲ್ಲಿ 151 ಬಿಹೆಚ್‍ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 101.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಬೈ-ಡೈರೆಕ್ಷನಲ್ ಅಪ್/ಡೌನ್ ಕ್ವಿಕ್‌ಶಿಫ್ಟರ್‌ನೊಂದಿಗೆ ಪಡೆಯುತ್ತದೆ,

Most Read Articles

Kannada
English summary
Top upcoming premium motorcycles in india this year details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X