ಭಾರತದಲ್ಲಿ ಮುಂಬರಲಿರುವ ಬಹುನಿರೀಕ್ಷಿತ ಅಡ್ವೆಂಚರ್ ಮೋಟಾರ್ ಸೈಕಲ್‌ಗಳಿವು!
ಭಾರತದಲ್ಲಿ ಅಡ್ವೆಂಚರ್ ಮೋಟಾರ್ ಸೈಕಲ್ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಬೆಳವಣಿಗೆಯನ್ನು ಕಂಡಿದೆ. ಎಂಟ್ರಿ ಲೆವೆಲ್ ಮಾದರಿಗಳಿಂದ ಹಿಡಿದು ಪ್ರೀಮಿಯಂ ದೊಡ್ಡ ಸಾಮರ್ಥ್ಯದ ಮಾದರಿಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ.

ಈ ವಿಭಾಗದ ಬೈಕ್‌ಗಳ ಮೇಲೆ ಗ್ರಾಹಕರ ಆಸಕ್ತಿಯು ಹೆಚ್ಚಾಗುತ್ತಿದ್ದಂತೆ, ಕೆಲವು ಸುಧಾರಿತ ಅಡ್ವೆಂಚರ್ ಬೈಕ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಹಲವು ಕಂಪನಿಗಳು ಯೋಜಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಮುಂಬಲಿರುವ ನಿರೀಕ್ಷಿತ ಐದು ಎಡಿವಿ ಮೋಟಾರ್ ಸೈಕಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450
ರಾಯಲ್ ಎನ್‌ಫೀಲ್ಡ್ ಪ್ರಸ್ತುತ ಹಿಮಾಲಯನ್ ಎಡಿವಿನ 450 ಸಿಸಿ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಪರೀಕ್ಷಾ ಮಾದರಿಗಳನ್ನು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಕೆಲವು ಬಾರಿ ಬೇಹುಗಾರಿಕೆ ಮಾಡಲಾಗಿದೆ. ಹೊಸ ಮಾದರಿಯು ಸಂಪೂರ್ಣವಾಗಿ ಹೊಸ ಫೀಚರ್ಸ್ ಅನ್ನು ಪಡೆದುಕೊಳ್ಳಲಿದೆ, ಸ್ಲೀಕರ್ ವಿನ್ಯಾಸ, ಹೊಸ ಟ್ರೆಲ್ಲಿಸ್ ಫ್ರೇಮ್ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಹಿಮಾಲಯನ್‌ಗಿಂತ ಕೆಲವು ಹೆಚ್ಚುವರಿ ಉಪಕರಣಗಳನ್ನು ಒಳಗೊಂಡಿರಲಿದೆ.

ಮುಂಬರುವ ಹಿಮಾಲಯನ್ 450 ಹೊಸ 450 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಮೋಟರ್ ಕ್ರಮವಾಗಿ ಸುಮಾರು 40 ಪಿಎಸ್ ಮತ್ತು 40 ಎನ್ಎಂ ಗರಿಷ್ಠ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಯುನಿಟ್ ಆಗಿರಬಹುದು ಎನ್ನಲಾಗಿದೆ.

2. 2022 ಕವಾಸಕಿ ವರ್ಸಿಸ್ 650
ಜಪಾನಿನ ದ್ವಿಚಕ್ರ ವಾಹನ ತಯಾರಕ ಕವಾಸಕಿ ನವೀಕರಿಸಿದ 2022 ವರ್ಸಿಸ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲು ಯೋಜಿಸುತ್ತಿದೆ. ಹೊಸ ಆವೃತ್ತಿಯನ್ನು ಇಐಸಿಎಂಎ 2021 ರಲ್ಲಿ ಅನಾವರಣಗೊಳಿಸಲಾಯಿತು, ನವೀಕರಿಸಿದ ಸ್ಟೈಲಿಂಗ್-ತೀಕ್ಷ್ಣವಾದ ಹೆಡ್‌ಲ್ಯಾಂಪ್‌ಗಳು, ಮರುಹೊಂದಿಸಿದ ಬಾಡಿ ಪ್ಯಾನೆಲ್‌ಗಳು, ಹೊಸ ಗ್ರಾಫಿಕ್ಸ್, ಹೊಸ ವೈಶಿಷ್ಟ್ಯಗಳು, ಅಡ್ಜಸ್ಟಬಲ್ ಟ್ರಾಕ್ಷನ್ ಕಂಟ್ರೋಲ್, ಸಂಪೂರ್ಣ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಅಡ್ಜಸ್ಟಬಲ್ ವಿಂಡ್‌ಸ್ಕ್ರೀನ್ ಇತ್ಯಾದಿಗಳನ್ನು ಹೋದಿದೆ.

ಯಾಂತ್ರಿಕವಾಗಿ 2022 ಕವಾಸಾಕಿ ವರ್ಸಿಸ್ 650 ತನ್ನ ಐಡೆಂಟಿಕಲ್ ಔಟ್‌ಗೋಯಿಂಗ್ ಆವೃತ್ತಿಗೆ ಹೋಲುತ್ತದೆ. ಇದು ಹಳೆಯ 649cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್‌ನಿಂದ ಚಾಲಿತಗೊಳ್ಳುತ್ತದೆ, ಇದು 66 ಪಿಎಸ್ ಗರಿಷ್ಠ ಶಕ್ತಿ ಮತ್ತು 61 NM ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಟ್ರಾನ್ಸ್‌ಮಿಷನ್ 6-ಸ್ಪೀಡ್ ಸೀಕ್ವೆನ್ಷಲ್ ಟ್ರಾನ್ಸ್‌ಮಿಷನ್‌ನಿಂದ ನಿರ್ವಹಿಸಲಾಗುತ್ತದೆ.

3. 2022 ಟ್ರಯಂಪ್ ಟೈಗರ್ 1200
ಟ್ರಯಂಪ್ ಟೈಗರ್ 1200 ಶೀಘ್ರದಲ್ಲೇ ಭಾರತದಲ್ಲಿ ಮಾರಾಟವಾಗಲಿದೆ. ಇದಕ್ಕಾಗಿ ಪೂರ್ವ-ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಹೊಸ-ಪೀಳಿಗೆಯ ಮಾದರಿಯು ಅತ್ಯಂತ ನಯವಾದ ಮತ್ತು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ. ಆಫ್ ರೋಡ್ ಮತ್ತು ಆನ್ ರೋಡ್ ಡ್ರೈವಿಂಗ್ ಮಾಡಲು ಉತ್ತಮ ಅನುಭವ ಒದಗಿಸಲು ಅದರ ಫ್ರೇಮ್ ಅನ್ನು ಮೊದಲಿಗಿಂತ ಹಗುರವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಪಡೆದುಕೊಂಡಿದೆ.

ಹೊಸ-ಜನ್ ಟೈಗರ್ 1200 ಹೊಸ 1160 ಸಿಸಿ, ಲಿಕ್ವಿಡ್-ಕೂಲ್ಡ್, ಮೂರು-ಸಿಲಿಂಡರ್ ಎಂಜಿನ್‌ನಿಂದ ಪವರ್ ಪಡೆಯುತ್ತದೆ. ಈ ಪವರ್‌ಪ್ಲಾಂಟ್ ಕ್ರಮವಾಗಿ ಗರಿಷ್ಠ ಶಕ್ತಿ ಮತ್ತು ಟಾರ್ಕ್ ಅನ್ನು 150 ಪಿಎಸ್ ಮತ್ತು 130 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. 6-ಸ್ಪೀಡ್ ಅನುಕ್ರಮ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

4. ಡುಕಾಟಿ ಮಲ್ಟಿಸ್ಟ್ರಾಡಾ ವಿ 2
ಡುಕಾಟಿ ತನ್ನ ಮಲ್ಟಿಸ್ಟ್ರಾಡಾ 650 ಮಾದರಿಯ ಬದಲಿಯಾಗಿ-ಮಲ್ಟಿಸ್ಟ್ರಾಡಾ ವಿ 2 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಪರಿಚಯಿಸಲಿದೆ. ಮಲ್ಟಿಸ್ಟ್ರಾಡಾ 650 ಗೆ ಹೋಲಿಸಿಕೊಂಡರೆ ವಿನ್ಯಾಸವು ತುಂಬಾ ಭಿನ್ನವಾಗಿರುವುದಿಲ್ಲ, ಆದರೆ ಏರ್ಗೋನಾಮಿಕ್ಸ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ, ಕರ್ಬ್ ತೂಕವು ಹಗುರವಾಗಿರಲಿದ್ದು, ಸಾಕಷ್ಟು ಹೊಸ ವೈಶಿಷ್ಟ್ಯಗಳು ಸೇರ್ಪಡೆಯಾಗಿವೆ.

ಡುಕಾಟಿ ಮಲ್ಟಿಸ್ಟ್ರಾಡಾ ವಿ 2ನ ಎಂಜಿನ್ ಮಲ್ಟಿಸ್ಟ್ರಾಡಾ 950 ನಂತೆಯೇ 937 ಸಿಸಿ ಎಲ್-ಟ್ವಿನ್ ಘಟಕವಾಗಿರುತ್ತದೆ, ಈ ಮೋಟರ್ 114 ಪಿಎಸ್ ಮತ್ತು 94 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಸೀಕ್ವೆನ್ಷನಲ್ ಗೇರ್ಬಾಕ್ಸ್‌ಗೆ ಸಂಯೋಜಿಸಲ್ಪಡುತ್ತದೆ, ಹೆಚ್ಚಿನ-ಸ್ಪೆಕ್ ಎಸ್ ರೂಪಾಂತರದಲ್ಲಿ ಎರಡು ಕ್ವಿಕ್ ಷಿಫ್ಟರ್‌ನೊಂದಿಗೆ ಲಭ್ಯವಿದೆ.

5. ಹೀರೋ 450cc ಎಡಿವಿ
ವರದಿಗಳ ಪ್ರಕಾರ, ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಗಾಗಿ ಹೊಸ ಪ್ರೀಮಿಯಂ ಅಡ್ವೆಂಚರ್ ಮೋಟಾರ್ ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಮಾದರಿ ತಯಾರಕರ ಡಾಕರ್ ರ್ಯಾಲಿ ಮೋಟಾರ್ ಸೈಕಲ್‌ನಿಂದ ಸ್ಫೂರ್ತಿ ಪಡೆಯುವ ನಿರೀಕ್ಷೆಯಿದೆ.

ಹೀರೋ ಮೋಟೋಕಾರ್ಪ್‌ನ ಮುಂಬರುವ ಎಡಿವಿ 450cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿರುತ್ತದೆ. ಈ ಮೋಟಾರ್ ಸುಮಾರು 40 ಪಿಎಸ್ ನಿಂದ 45 ಪಿಎಸ್‌ವರೆಗೆ ಉತ್ಪಾದಿಸುತ್ತದೆ, ಇದು ಯಾವುದೇ ಆನ್-ರೋಡ್ ಅಡ್ವೆಂಚರ್ ಮಾಡಲು ಉತ್ತಮವಾಗಿದೆ. ಅಲ್ಲದೆ, ಇದು ಟ್ರೆಲ್ಲಿಸ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿರುವುದರಿಂದ ಹಗುರವಾಗಿರುತ್ತದೆ.


Click it and Unblock the Notifications








