ದ್ವಿಚಕ್ರ ವಾಹನ ಸವಾರರ ರಕ್ಷಣೆಗಾಗಿ ವಿಶ್ವದ ಮೊದಲ ಏರ್‌ಬ್ಯಾಗ್ ಹೆಲ್ಮೆಟ್ ಅನಾವರಣ: ವಿಶೇಷತೆಗಳೇನು?

ಇತ್ತೀಚೆಗಿನ ವರ್ಷಗಳಲ್ಲಿ ವಾಹನಗಳು ಖರೀದಿಸುವ ಗ್ರಾಹಕರು ಹೆಚ್ಚಾಗಿ ಅದರ ಸುರಕ್ಷತೆಯ ಪ್ರಾಮುಖ್ಯತೆ ಕೂಡ ಹೆಚ್ಚಾಗಿದೆ. ಜನರು ಈಗ ಸುರಕ್ಷಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ವಾಹನ ತಯಾರಕರು ಕೂಡ ತಮ್ಮ ವಾಹನಗಳಲಿ ಹೆಚ್ಚಿನ ಸುರಕ್ಷತಾ ಅಂಶಗಳನ್ನು ಸೇರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಹೇಳಬಹುದು.

ಕೇಂದ್ರ ಸರ್ಕಾರ ವಾಹನ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ. ಸುರಕ್ಷಿತ ಕಾರು ಎಂದು ಖರೀದಿದಾರರಿಂದ ನಂಬಿಕೆಯನ್ನು ಸಾಧಿಸಲು ಕಾರುಗಳಲ್ಲಿ ಏರ್ ಬ್ಯಾಗ್ ಗಳು ಕೂಡ ಪ್ರಮುಖ ಅಂಶವಾಗಿದೆ. ಆದರೆ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಯಾವುದೇ ಏರ್ ಬ್ಯಾಗ್ ಗಳು ಇರುವುದಿಲ್ಲ. ಆದರೆ ಇದೀಗ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ನಲ್ಲಿ ಏರ್‌ಬ್ಯಾಗ್‌ ಅನ್ನು ಪರಿಚಯಿಸಲು ಮುಂದಾಗಿದೆ.

ಇಟಲಿಯನ್ ಹೆಲ್ಮೆಟ್ ತಯಾರಕರು ವಿಶ್ವದ ಮೊದಲ ಏರ್‌ಬ್ಯಾಗ್ ಸಂಯೋಜಿತ ಹೆಲ್ಮೆಟ್ ಅನ್ನು ಅನಾವರಣಗೊಳಿಸಿದೆ. ಏರ್‌ಬ್ಯಾಗ್ ಸಂಯೋಜಿತ ಹೆಲ್ಮೆಟ್ 2023ರ ವೇಳೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಸ್ಫೋಟಕ ಸುರಕ್ಷತಾ ತಂತ್ರಜ್ಞಾನದೊಂದಿಗೆ ಮೂಲಮಾದರಿಯು ಏರ್‌ಬ್ಯಾಗ್ ನೊಂದಿಗೆ 70 ವರ್ಷಗಳ ಅನುಭವಕ್ಕೆ ಹೆಸರುವಾಸಿಯಾದ ಸ್ವೀಡಿಷ್ ತಯಾರಕ ಆಟೋಲಿವ್‌ನ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ. ಇನ್ನು ಈ ಹೊಸ ಇಂಟಿಗ್ರೇಟೆಡ್ ಏರ್‌ಬ್ಯಾಗ್ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಸಬಹುದು ಎಂದು ನಿರೀಕ್ಷಿಸುತ್ತೇವೆ.

ಇಂಟಿಗ್ರೇಟೆಡ್ ಏರ್‌ಬ್ಯಾಗ್ ಕಾರಿನ ಡ್ಯಾಶ್‌ಬೋರ್ಡ್‌ ನಲ್ಲಿರುವ ತಂತ್ರಜ್ಞಾನದಂತೆಯೇ ಕಾರ್ಯನಿರ್ವಹಿಸುತ್ತದೆ. ಪ್ರಭಾವದ ನಂತರ, ಏರ್‌ಬ್ಯಾಗ್ ಅನ್ನು ಹೆಲ್ಮೆಟ್‌ನ ಕಿರೀಟದಿಂದ ಎಲೆಕ್ಟ್ರಿಕ್ ಆಗಿ ನಿಯೋಜಿಸಲಾಗುತ್ತದೆ. ಇನ್ನು ಸಮಾನ್ಯ ಸಾಂಪ್ರದಾಯಿಕ ಹೆಲ್ಮೆಟ್‌ಗಿಂತ ಹೆಚ್ಚಿನ ಸುರಕ್ಷತೆಯನ್ನು ನೀಡಲು ಹೊರಗಿನ ಶೆಲ್‌ನಲ್ಲಿ ಸಣ್ಣ ವಿಭಾಗಗಳು. ತಲೆಬುರುಡೆಯ ಮುರಿತದ ಸಂಭವನೀಯತೆಯು ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ಐರೋಹ್ ಹೇಳಿಕೊಂಡಿದೆ. ಇದನ್ನು ಬೆಂಬಲಿಸಲು ಯಾವುದೇ ವೇಗ ಅಥವಾ ಪರಿಣಾಮದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಅಂಶವನ್ನು ಗಮನಿಸಿ.

ಅದರೊಂದಿಗೆ, ಏರ್‌ಬ್ಯಾಗ್ ಹೆಲ್ಮೆಟ್ ತಂತ್ರಜ್ಞಾನದ ಪರೀಕ್ಷೆಯು 2020 ರಿಂದ ಪ್ರಾರಂಭವಾಗಿದೆ, ಐರೋಹ್ ಸಾಂಪ್ರದಾಯಿಕ ಹೆಲ್ಮೆಟ್‌ನಿಂದ ಒಬ್ಬರು ನಿರೀಕ್ಷಿಸಬಹುದಾದ ಬಾಹ್ಯ ವೈಶಿಷ್ಟ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇದು ನಿಯೋಜನೆಯ ಮೊದಲು ಮತ್ತು ನಂತರ ಇತ್ತೀಚಿನ ECE22.06 ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಸವಾಲನ್ನು ಸಹ ಎದುರಿಸಿದೆ. ಅದರ ಅಧಿಕೃತ ಬಿಡುಗಡೆಯ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಇದು ತನ್ನ ಚೊಚ್ಚಲ ಪ್ರವೇಶವನ್ನು ಮಾಡಬಹುದು ನಾವು ನಿರೀಕ್ಷಿಸಬಹುದು.

ಇದು ಭಾರತಕ್ಕೆ ಕಾಲಿಡುತ್ತದೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅದೇನೇ ಇದ್ದರೂ, ಇದು ನೀವು ಬೈಕ್ ರೈಡಿಂಗ್ ವೇಳೆ ಸೇರಿಸಲು ಸುರಕ್ಷತಾ ತಂತ್ರಜ್ಞಾನದ ಆಸಕ್ತಿದಾಯಕ ಭಾಗವಾಗಿದೆ. ಇನ್ನು ಭಾರತದಲ್ಲಿ ವಾಹನ ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಇದರಿಂದ ಸುರಕ್ಷಿತ ವಾಹನ ಚಾಲನೆಗಾಗಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ದ್ವಿ-ಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಪೂರ್ತಿ ಮುಖ ಮುಚ್ಚದ ಹಾಫ್‌ ಹೆಲ್ಮೆಟ್‌, ಐಎಸ್‌ಐ ಮಾರ್ಕ್‌ ಇರದ ಕಳಪೆ ಹೆಲ್ಮೆಟ್‌ ಧರಿಸುವುದನ್ನು ನಿಷೇಧ ಮಾಡಿದೆ.

ದ್ವಿ-ಚಕ್ರ ವಾಹನ ಸವಾರರು ಫುಲ್ ಸೈಜ್ ಹೆಲ್ಮೆಟ್ ಬಳಸಬೇಕು. ಆದರೂ ಕೆಲವು ದ್ವಿ-ಚಕ್ರ ವಾಹನ ಸವಾರರು ಇನ್ನೂ ಕೂಡ ಹಾಫ್ ಹೆಲ್ಮೆಟ್ ಧರಿಸುತ್ತಾರೆ. ಇದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವ ದ್ವಿ-ಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಈ ಹಾಫ್‌ ಹೆಲ್ಮೆಟ್‌ಗಳು ತಲೆಗೆ ಸರಿಯಾಗಿ ರಕ್ಷಣೆ ಒದಗಿಸುವುದಿಲ್ಲ. ಹೀಗಾಗಿ ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಸವಾರರು ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿದೆ.

ಹಾಗಾಗಿ ಐಎಸ್‌ಐ ಮಾರ್ಕ್‌ ಇಲ್ಲದ, ಕಳಪೆ ಗುಣಮಟ್ಟದ ಹೆಲ್ಮೆಟ್‌ ಅನ್ನು ನಿಷೇಧಿಸಿದೆ. ಇದರಿಂದ ಫುಲ್ ಸೈಜ್ ಹೆಲ್ಮೆಟ್ ಅನ್ನು ಬಳಿಸಿ. ಇನ್ನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೈಟೆಕ್ ಟೆಕ್ನಾಲಜಿ ಬಳಸಿ ದಂಡ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರ ಮೊಬೈಲ್'ಗೆ ಉಲ್ಲಂಘನೆಯ ಮಾಹಿತಿ ಫೋಟೋ ಸಹಿತ ಮೆಸೇಜ್ ಬರಲಿದೆ.

Most Read Articles

Kannada
English summary
Worlds first airbag helmet revealed launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X