Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 12 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 12 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ಯಾಟರಿ ವಿನಿಮಯಕ್ಕಾಗಿ 'ಬ್ಯಾಟರಿ ಸ್ಮಾರ್ಟ್' ಕಂಪನಿ ಜೊತೆ ಪಾಲುದಾರಿಕೆ ಪ್ರಕಟಿಸಿದ ಜೈಪ್ ಎಲೆಕ್ಟ್ರಿಕ್
ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಜೈಪ್ ಎಲೆಕ್ಟ್ರಿಕ್ ಕಂಪನಿಯು ಇವಿ ವಾಹನ ಬಳಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಇವಿ ವಾಹನ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.
ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇ-ಕಾಮರ್ಸ್ ಕಂಪನಿಗಳಿಗೆ ವ್ಯಾಪಕವಾದ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.
ಇದಕ್ಕೆ ಪೂರಕವಾಗಿ ಇವಿ ವಾಹನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಖಾತ್ರಿಪಡಿಸುತ್ತಿದ್ದು, ತಡೆರಹಿತ ಡೆಲಿವರಿ ಸೇವೆಗಳಿಗಾಗಿ ಬ್ಯಾಟರಿ ವಿನಿಮಯಕ್ಕಾಗಿ ವಿವಿಧ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸುತ್ತಿದೆ.
ಇವಿ ವಾಹನಗಳಿಗೆ ತ್ವರಿತ ಗತಿಯಲ್ಲಿ ಬ್ಯಾಟರಿ ಸೇವೆಗಳನ್ನು ಒದಗಿಸಲು ದೆಹಲಿ ಮೂಲದ ಬ್ಯಾಟರಿ ಸ್ಮಾರ್ಟ್ ಕಂಪನಿಯೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ದೆಹಲಿಯಲ್ಲಿ ಸುಮಾರು 175 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯುತ್ತಿರುವ ಸ್ಮಾರ್ಟ್ ಬ್ಯಾಟರಿ ಕಂಪನಿಯು ಜೈಪ್ ಡೆಲಿವರಿ ಇವಿ ವಾಹನಗಳಿಗೆ ಎಲ್ಲಾ ಮಾದರಿಯ ಬ್ಯಾಟರಿ ಸೇವೆಗಳನ್ನು ಒದಗಿಸಲಿದೆ.
ಇನ್ನು ಜೈಪ್ ಎಲೆಕ್ಟ್ರಿಕ್ ಸ್ಮಾರ್ಟ್ ಇವಿ ಕಂಪನಿಯು ವಿತರಣಾ ವಲಯದಲ್ಲಿನ ಸೇವೆಗಳಿಗಾಗಿ ವಿಶೇಷವಾದ ಹೊಸ ಇವಿ ವಾಹನಗಳ ಉತ್ಪಾದನೆಗೂ ಕೂಡಾ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.
ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಇವಿ ವಾಹನಗಳನ್ನು ಒದಗಿಸುತ್ತಿರುವ ಜೈಪ್ ಕಂಪನಿಯು ಪ್ರಮುಖ ಇ-ಕಾರ್ಮಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಇದೀಗ ದೇಶಾದ್ಯಂತ ತನ್ನ ಫ್ಲೀಟ್ನಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವುದಾಗಿ ಘೋಷಿಸಿದೆ.
ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.
ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಮಾದರಿಗಳಿಗಾಗಿ ಹೊಸದಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದ್ದು, ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ.94 ಕೋಟಿ ಬಂಡವಾಳ ಹೂಡಿಕೆಯಾದಂತಾಗಿದೆ.
ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದ್ದು, 2022ರಲ್ಲಿ ಜೈಪ್ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.
ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ.
ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್ವಾಲ್ ಎಂಬುವವರು ಸ್ಥಾಪನೆ ಮಾಡಿದರು.
ಆರಂಭದಲ್ಲಿ ಕಡಿಮೆ ಬಂಡವಾಳದೊಂದಿಗೆ ಆರಂಭವಾದ ಜೈಪ್ ಕಂಪನಿಯು ಇದೀಗ ಸುಮಾರು ರೂ. 94 ಕೋಟಿಯಷ್ಟು ಬಂಡವಾಳ ಪಡೆದುಕೊಂಡ ಹೊಸ ಇವಿ ಸ್ಕೂಟರ್ ಉದ್ಯಮ ಕಂಪನಿಯಾಗಿ ಹೊರಹೊಮ್ಮಿದ್ದು, ಎ ಸೀರಿಸ್ನಲ್ಲಿ ಮಾರ್ಕ್ಯೂ ಇಕ್ವಿಟಿ, ನಾನಾವತಿ ಫ್ಯಾಮಿಲಿ ಆಫೀಸ್, ವಿ ಫೌಂಡರ್ ಸರ್ಕಲ್, ರಿಸೋ ಕ್ಯಾಪಿಟಲ್, ಧೋಲಾಕಿಯಾ ವೆಂಚರ್ಸ್, ಐಎಎನ್ ಫಂಡ್, ವೇರ್ಹೌಸ್ ನೌ ಸಂಸ್ಥೆಯ ತರುಣ್ ಸರಾಫ್, ಎಡಬ್ಲ್ಯುಎಲ್ ಲಾಜಿಸ್ಟಿಕ್ಸ್ನ ರಾಹುಲ್ ಖೇರಾ ಮತ್ತು ಉದ್ಯಮಿಗಳಾದ ಅರ್ಜುನ್ ಸೇಠ್ ಮತ್ತು ಮಾರ್ಕ್ ಜೋಸೆಫ್ ಜೈಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಜೈಪ್ ಇವಿ ಕಂಪನಿಯು ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್ ಒಂದನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು.
ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನು ಮಾತ್ರ ಬಳಕೆ ಮಾಡುತ್ತಿದೆ. ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.