ಮುತ್ತಾತಂದಿರ ಕಾಲದ ಬೈಕ್ ಬ್ರಾಂಡ್‌ಗಳು: ಈಗಿನ ಯುವಕರು ನೋಡಲೇಬೇಕಾದ ಫೋಟೋಗಳು!
ವಿಶ್ವದ ಮುಂದುವರೆದ ದೇಶಗಳಲ್ಲಿ ಹೆಚ್ಚಾಗಿ ಕಾರುಗಳನ್ನು ಬಳಸಲಾಗುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳು ಹಾಗೂ ಬಡ ದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸಾಕಷ್ಟು ಬೇಡಿಕೆಯಿದೆ. ಇಂದು ಬೇಡಿಕೆ ಪೂರೈಸಲು ಹಲವು ಬ್ರಾಂಡ್‌ಗಳು ಇವೆಯಾದರೂ, ಇಂದಿನ ಮೋಟಾರ್‌ಸೈಕಲ್‌ಗಳಿಗೆ ಹಾದಿಯನ್ನು ಮಾಡಿಕೊಟ್ಟ 100 ವರ್ಷಕ್ಕೂ ಹಳೆಯ 5 ಬ್ರಾಂಡ್ (Bike Companies) ಗಳನ್ನು ಇಲ್ಲಿ ನೋಡೋಣ.
ಹಾರ್ಲೇ ಡೇವಿಡ್‌ಸನ್ (Harley Davidson): ಹಾರ್ಲೇ ಡೇವಿಡ್‌ಸನ್ ಈಗಿನ ಬಹುತೇಕರಿಗೆ ಗೊತ್ತೇ ಇದೆ. ಆದ್ರೆ ಈ ಬ್ರಾಂಡ್ ನೂರು ವರ್ಷಗಳಿಗಿಂತ ಹಳೆಯದ್ದು ಎಂಬುದು ಹಲವರಿಗೆ ಗೊತ್ತಿಲ್ಲ. ಇದು ಮೂಲತಃ ಅಮೆರಿಕಾ ಬ್ರಾಂಡ್ ಆಗಿದ್ದು, ವಿಲಿಯಂ ಎಸ್.ಹಾರ್ಲೇ ಹಾಗೂ ಆರ್ಥರ್ ಡೇವಿಡ್‌ಸನ್ ಎಂಬ ಇಬ್ಬರು ಸ್ನೇಹಿತರು 1903 ರಲ್ಲಿ ಬ್ರಾಂಡ್ ಅನ್ನು ಸ್ಥಾಪಿಸಿದರು.

120 ವರ್ಷಗಳಿಂದ ಹಾರ್ಲೇ ಡೇವಿಡ್‌ಸನ್ ಮೋಟಾರ್‌ಸೈಕಲ್ ತಯಾರಿಯಲ್ಲಿ ಸಕ್ರಿಯವಾಗಿದೆ. ಇಂದಿಗೂ ಅದರ ಆಕರ್ಷಕ ವಿನ್ಯಾಸ, ಬಹು ಸಿಲಿಂಡರ್‌ಗಳನ್ನು ಒಳಗೊಂಡ ಎಂಜಿನ್ ಹಾಗೂ ದೈತ್ಯ ರೂಪವು ವಿಶ್ವ ಮೋಟಾರ್‌ಸೈಕಲ್ ವಿಭಾಗದಲ್ಲಿ ಪ್ರತ್ಯೇಕ ಸ್ಥಾನವನ್ನು ನೀಡಿದೆ. ಈ ಮೋಟಾರ್‌ಸೈಕಲ್‌ಗಳು ಹೆಚ್ಚಾಗಿ ಕ್ರೂಸಿಂಗ್ ಮಾಡಲು ಜನಪ್ರಿಯವಾಗಿವೆ.
ಟ್ರಯಂಫ್ (Triumph): ಟ್ರಯಂಫ್ ಬ್ರಿಟನ್ ಮೂಲದ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕರಾಗಿದ್ದಾರೆ. ಈ ಬ್ರಾಂಡ್ 1902 ರಿಂದ ತಮ್ಮ ಮೋಟಾರ್‌ಸೈಕಲ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿಕೊಂಡು ಬಂದಿದೆ. ಈ ಬ್ರಿಟೀಷ್ ಮೋಟಾರ್‌ಸೈಕಲ್ ತಯಾರಕರ ಬೈಕ್‌ಗಳ ವೇಗದಲ್ಲಿ ಹಲವು ದಾಖಲೆಗಳಿವೆ. ಈಗಲೂಕಂಪನಿಯು ತಮ್ಮ ಮೋಟಾರ್‌ಸೈಕಲ್‌ಗಳನ್ನು ವಿಶ್ವದಾದ್ಯಂತ ಮಾರಾಟ ಮಾಡುತ್ತಿದೆ.

ಇತ್ತೀಚೆಗೆ ಭಾರತದಲ್ಲಿ ಬಜಾಜ್ ಪಾಲುದಾರಿಕೆಯಡಿ ಟ್ರಯಂಫ್ ಸ್ಪೀಡ್ 400 ಬೈಕ್ ಅನ್ನು ಅಗ್ಗದ ಬೆಲೆಗೆ ಬಿಡುಗಡೆ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಏಕೆಂದರೆ ಟ್ರಯಂಫ್ ಮೋಟಾರ್‌ಸಯಕಲ್ಸ್ ವಿಶ್ವದ ಅತ್ಯಂತ ದುಬಾರಿ ಮೋಟಾರ್‌ಸೈಕಲ್‌ಗಳೆಂದು ಪರಿಗಣಿಸಲಾಗುತ್ತದೆ. ಆದರೆ ಭಾರತೀಯ ಮಾರುಕಟ್ಟೆಗಾಗಿ ಕೇವಲ 3 ಲಕ್ಷದೊಳಗೆ ಪರಿಚಯಿಸಿದೆ.
ಹಸ್ಕ್‌ವರ್ನಾ (Husqvarna): ಹಸ್ಕ್‌ವರ್ನಾ ಬ್ರಾಂಡ್‌ಗೆ ಬರೋಬ್ಬರಿ 300 ವರ್ಷಗಳ ಇತಿಹಾಸವಿದೆ. ಮೊದಲು ಇದು ಆಯುಧ ತಯಾರಿ ಕಂಪನಿಯಾಗಿದ್ದು, ನಂತರದ ಕಾಲದಲ್ಲಿ ಮೋಟಾರ್‌ಸೈಕಲ್ ಬ್ರಾಂಡ್ ಆಗಿ ಜನಪ್ರಿಯವಾಯಿತು. 1903 ರಲ್ಲಿ ಮೋಟಾರ್‌ಸೈಕಲ್ ತಯಾರಿಸಿದ ಇವರು 1918 ರವರೆಗೆ ಎಂಜಿನ್‌ಗಳನ್ನು ಆಮದು ಮಾಡಿಕೊಂಡು ಬೈಕ್‌ಗಳನ್ನು ನಿರ್ಮಿಸಿದ್ದರು. ಬಳಿಕ ಎಲ್ಲವೂ ಇವರದ್ದೇ ಬ್ರಾಂಡ್ ಅಡಿಯಲ್ಲಿ ನಿರ್ಮಾಣಗೊಂಡವು. ಮುಖ್ಯವಾಗಿ ಮೋಟೋಸ್ಪೋರ್ಟ್ ಹಾಗೂ ಕಡಿಮೆ ತೂಕದ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳಿಗೆ ಬ್ರಾಂಡ್ ಜನಪ್ರಿಯವಾಗಿದೆ.

ರಾಯಲ್ ಎನ್‌ಫೀಲ್ಡ್ (Royal Enfield): ರಾಯಲ್ ಎನ್‌ಫೀಲ್ಡ್ ಕೂಡ ಅತ್ಯಂತ ಹಳೆಯ ಮೋಟಾರ್‌ಸಯಲ್ ಬ್ರಾಂಡ್ ಆಗಿದ್ದು, 1901 ರಲ್ಲಿ ಸ್ಥಾಪಿಸಲಾಯಿತು. ಬ್ರಾಂಡ್‌ನ ಮೊದಲ ಮೋಟಾರ್‌ಸೈಕಲ್ 1901 ರಲ್ಲಿ ಹೊರಬಂದಿತ್ತು, ಈ ಮೋಟಾರ್‌ಸೈಕಲ್‌ಗಳನ್ನು ಮೊದಲಿಗೆ ಹೆಚ್ಚಾಗಿ ವಿಶ್ವಯುದ್ಧದ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಸಲಾಗಿತ್ತು. ಮೊದಲಿಗೆ ಬ್ರಿಟಿಷ್ ಒಡೆತನದಲ್ಲಿದ್ದ ಬ್ರಾಂಡ್ 60 ದಶಕಗಳಲ್ಲಿ ಭಾರತದ ಒಡೆತನಕ್ಕೆ ಬಂದಿತು. ಇಂದಿಗೂ ಬ್ರಾಂಡ್ ಯಶಸ್ವಿಯಾಗಿ ವಿವಿಧ ಮಾದರಿಯ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ.
ಇಂಡಿಯನ್ ಮೋಟಾರ್‌ಸೈಕಲ್ಸ್ (Indian Motorcycles): ಇಂಡಿಯನ್ ಮೋಟಾರ್‌ಸೈಕಲ್ಸ್ ಇದುವರೆಗಿನ ಅತ್ಯಂತ ಹಳೆಯ ಮೋಟಾರ್‌ಸೈಕಲ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದ್ದು, ಅಮೆರಿಕಾ ಮೂಲದ ಬ್ರಾಂಡ್ ಆಗಿದೆ. 1901 ರಲ್ಲಿ ಆರಂಭವಾದ ಕಂಪನಿಯು ಚೈನ್‌ಡ್ರೈವ್ ಮೋಟಾರ್‌ಸೈಕಲ್‌ಗಳನ್ನು ಮೊದಲಿಗೆ ಪರಿಚಯಿಸಿದ ಬ್ರಾಂಡ್ ಆಗಿದೆ. ಹಾಗೆಯೇ 1903 ರಲ್ಲಿ ಅತ್ಯಂತ ವೇಗದ (90 ಕಿ.ಮೀ ವೇಗ) ಮೋಟಾರ್ ಸೈಕಲ್ ಅನ್ನು ಪರಿಚಿಸಿಯಿಸಿದ ದಾಖಲೆ ಕೂಡ ಇವರಿಗಿದೆ. ಇಂದಿಗೂ ಇವರ ಮಾದರಿಗಳಿಗೆ ತುಂಬಾ ಬೇಡಿಕೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








