2023 Hero Passion Plus ಫೋಟೋಗಳ ಸೋರಿಕೆ... ಹಲವು ವಿಶೇಷತೆಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆ
ಭಾರತದಲ್ಲಿ ಉತ್ತಮ ಮೈಲೇಜ್ ನೀಡುವ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ಗಳು ಮೊದಲಿನಿಂದಲೂ ಜನಪ್ರಿಯವಾಗಿವೆ. ಅಲ್ಲದೇ ಕಂಪನಿಗೆ ಅತ್ಯುತ್ತಮ ಮಾರಾಟ ತಂದುಕೊಟ್ಟ ಮೋಟಾರ್‌ಸೈಕಲ್‌ಗಳು ಎಂದರು ತಪ್ಪಾಗುವುದಿಲ್ಲ. ಈಗ ಸ್ಥಗಿತವಾಗಿದೆ ಎಂದು ಹೇಳಲಾಗಿದ್ದ ಹೀರೋ ಪ್ಯಾಶನ್ ಪ್ಲಸ್ ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಕೆಲವು ವರ್ಷಗಳ ಹಿಂದೆ BS6 ಮಾನದಂಡಲು ಬಂದಾಗ ಬಹುತೇಕ ವಾಹನಗಳು ಸ್ಥಗಿತಗೊಳ್ಳಬೇಕಾಯಿತು ಅಥವಾ ಹೊಸ ಮಾನದಂಡಗಳಿಗೆ ಅನುಗುಣವಾಗಿ ಬದಲಾಗಬೇಕಾಯಿತು. ಈ ನಿಟ್ಟಿನಲ್ಲಿ ಕಂಪನಿಗೆ ಸ್ಪ್ಲೆಂಡರ್ ಚಿನ್ನದ ಮೊಟ್ಟೆಯಾದ್ದರಿಂದ ಅದನ್ನು ಭವಿಷ್ಯಕ್ಕಾಗಿ ನವೀಕರಿಸಿ ಮಾನದಂಡಗಳನ್ನು ಪೂರೈಸುವ ಮೂಲಕ ಉಳಿಸಿಕೊಂಡಿತು. ಆದರೆ ಪ್ಯಾಷನ್ ಕೂಡ ಉತ್ತಮ ಮಾರಾಟದಲ್ಲಿದೆ ಅಲ್ಲವೇ ಈ ಹಿಂದೆಯೇ ಏಕೆ ನವೀಕರಿಸಲಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಎಲ್ಲರ ಊಹೆಗಳನ್ನು ಮೀರಿ ಈಗ ಪ್ಯಾಶನ್ ಪ್ಲಸ್ ಹೊರ ಹೊಮ್ಮಿದೆ.

ಈವೆಂಟ್ ಒಂದರಲ್ಲಿ ಈಗ ಹೊಸ 2023 ಪ್ಯಾಶನ್ ಪ್ಲಸ್ ಕಾಣಿಸಿಕೊಂಡಿದ್ದು, ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ. ಈ ಸೋರಿಕೆಯಾದ ಫೊಟೋಗಳಿಂದ ಪ್ಯಾಶನ್ ಪ್ಲಸ್ ಕಟ್ಟುನಿಟ್ಟಾದ BS6.2 (OND-2) ಯುಗದಲ್ಲಿ ಪುನರಾಗಮನ ಮಾಡಲು ಸಿದ್ಧವಾಗಿದೆ ಎಂದು ತೋರುತ್ತಿದೆ. ಅಲ್ಲಿಗೆ ಇದೇ ವರ್ಷ ಹೊಸ ಪ್ಯಾಶನ್ ಪ್ಲಸ್ ಮಾರುಕಟ್ಟೆಗೆ ಇಳಿಯುವುದು ಬಹುತೇಕ ಕಚಿತವೆಂದೇ ಹೇಳಲಾಗುತ್ತಿದೆ. ಆದರೆ ಈಗ ಹೊಸ ನವೀಕರಣದ ಭಾಗವಾಗಿ ಏನೆಲ್ಲಾ ಬದಲಾಗಿದೆ ಎಂಬುದನ್ನು ಇಲ್ಲಿ ನೋಡೋಣ.
110cc ಎಂಜಿನ್ ಹೊಂದಿರುವ ಪ್ರಸ್ತುತ ಲಭ್ಯವಿರುವ ಪ್ಯಾಶನ್ ಪ್ರೊಗಿಂತ ಭಿನ್ನವಾಗಿ, ಪ್ಯಾಶನ್ ಪ್ಲಸ್ ಸ್ಪ್ಲೆಂಡರ್ ಪ್ಲಸ್‌ನಂತೆಯೇ ವಿಭಿನ್ನ ಕ್ರ್ಯಾಂಕೇಸ್‌ನೊಂದಿಗೆ ಸ್ಲೋಪರ್ ಎಂಜಿನ್ ಅನ್ನು ಹೊಂದಿದೆ. ಇದರ 97.2cc, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಮೋಟಾರ್ 8.02PS ಮತ್ತು 8.05Nm ಟಾರ್ಕ್ ಹೊರಹಾಕುತ್ತದೆ ಎಂದು ತಿಳಿದುಬಂದಿದೆ. ಪ್ಯಾಶನ್ ಪ್ಲಸ್ ಪುನರಾಗಮನವನ್ನು ಮಾಡಲು ಯೋಜಿಸಿದರೆ OBD-2 ಅಥವಾ BS6.2 ಕಂಪ್ಲೈಂಟ್ ಆಗಿರುತ್ತದೆ. ಇವು ಮುಂಬರುವ ಪ್ಯಾಶನ್ ಪ್ಲಸ್‌ನಲ್ಲಿನ ಪ್ರಮುಖ ಬದಲಾವಣೆಗಳಾಗಿವೆ.

ಹಾರ್ಡ್‌ವೇರ್ ಬದಲಾವಣೆಗಳನ್ನು ನೋಡುವುದಾದರೆ ಹೊಸ ಮೋಟಾರ್‌ಸೈಕಲ್‌ನಲ್ಲಿ ಹಿಂದಿನಂತೆ ಎಸ್ಕ್ಯೂ ರಿಬ್ಬಡ್ ಟೈರ್‌ಗಳಿಗೆ ಹೋಲಿಸಿದರೆ ಈಗ ಹೊಸ ರೌಂಡರ್ ಪ್ರೊಫೈಲ್ ಟೈರ್‌ಗಳನ್ನು ಹೊಂದಿದೆ. ಸಸ್ಪೆನ್ಷನ್ ಹಳೆಯ ಬೈಕ್‌ನಂತೆಯೇ ಇದ್ದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಕಾಯಿಲ್ ಸ್ಪ್ರಿಂಗ್ ನೋಡಬಹದು. ಇನ್ನು ಬ್ರೇಕಿಂಗ್ ಸಿಸ್ಟಂ ಅನ್ನು ಸುಧಾರಿಸಲು ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳೇ ಇದ್ದರೂ, ಈ ಬಾರಿ ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆಯನ್ನು (CBS) ನೀಡಲಾಗಿದೆ.
ಇತರ ಬದಲಾವಣೆಗಳ ಪೈಕಿ, ಹಳೆಯ ಮಾದರಿಗೆ ಹೋಲಿಸಿದರೆ ದೋರಿಕೆಯಾದ ಫೋಟೋಗಳ ಪ್ರಕಾರ ಫ್ಲಶ್ ಫಿಟ್ ಫ್ಯೂಯಲ್ ಫಿಲ್ಲರ್ ಕ್ಯಾಪ್, ಹೊಸ ಟೈಲ್‌ಲೈಟ್ ಘಟಕ ಮತ್ತು ವಿಭಿನ್ನ ಶೈಲಿಯ ಹೆಡ್‌ಲೈಟ್ ಕೌಲ್ ಅನ್ನು ಬಹಿರಂಗಪಡಿಸುತ್ತವೆ. ಗ್ರಾಬ್ರೈಲ್ ಕೂಡ ಹೊಸದಾಗಿದ್ದು, ಈಗ ಟೈಲ್ ಲೈಟ್‌ನ ಮೇಲೆ ಹಾದುಹೊಗುತ್ತದೆ. ಬ್ಲಾಕ್ ಅಲಾಯ್ ವೀಲ್‌ಗಳಿಗೆ ಸ್ಪೋರ್ಟಿನೆಸ್ ನೀಡಲು (ಸ್ಪ್ಲೆಂಡರ್‌ನಿಂದ ಎರವಲು ಪಡೆಯಲಾಗಿದೆ) ವ್ಯತಿರಿಕ್ತ ರಿಮ್ ಟೇಪ್‌ಗಳನ್ನು ನೀಡಲಾಗಿದೆ.

ಕೊನೆಯದಾಗಿ ಸೋರಿಕೆಯಾದ ಫೋಟೋಗಳಲ್ಲಿ ಕಂಡುಬರುವ ಎರಡು ಬಣ್ಣಗಳು ಹಳೆಯ ಪ್ಯಾಶನ್ ಪ್ಲಸ್‌ನಂತೆಯೇ ಇರುವುದನ್ನು ನೋಡಲು ಅಭಿಮಾನಿಗಳಿಗೆ ತುಸು ಆನಂದ ನೀಡಬಹುದು. ಮೋಟಾರ್‌ಸೈಕಲ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ವರ್ಷದ ಜುಲೈ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸುಮಾರು 75,000 ರೂ. (ಎಕ್ಸ್ ಶೋರೂಂ) ಬೆಲೆಯಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಟಿವಿಎಸ್ ರೇಡಿಯನ್, ಬಜಾಜ್ ಪ್ಲಾಟಿನಾ 100 ಮತ್ತು ಹೋಂಡಾ ಶೈನ್ 100 ಗೆ ಪ್ರತಿಸ್ಪರ್ಧಿಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








