ಬಡವರ ಮೆಚ್ಚಿನ ಕಂಪನಿ 'ಹೀರೋ' ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಬೆಳವಣಿಗೆ!
ಹೀರೋ ಮೋಟೋಕಾರ್ಪ್ (Hero MotoCorp) ಭಾರತದ ಅತ್ಯಂತ ಪ್ರಸಿದ್ದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ. ಇದು ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದಲ್ಲೇ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ. ಗ್ರಾಹಕರ ನಾಡಿ ಮಿಡಿತವನ್ನು ಅರಿತಿರುವ ಹೀರೋ, ಹಲವು ಪ್ರಸಿದ್ದ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ತಂದಿದೆ.
ಇದೀಗ ಹೀರೋ ಮೋಟೋಕಾರ್ಪ್ ಕಂಪನಿಯು 2024ರ ಏಪ್ರಿಲ್ ತಿಂಗಳಿನ ದ್ವಿಚಕ್ರ ವಾಹನಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಹೀರೋ ಮೋಟೋಕಾರ್ಪ್ ಕಂಪನಿಯು 5,33,585 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ 3.96 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34.7 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 4,90,415 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.9 ರಷ್ಟು ಬೆಳವಣಿಗೆಯನ್ನು ಕಂಡಿದೆ.ಸ್ವದೇಶಿ ದ್ವಿಚಕ್ರ ವಾಹನ ತಯಾರಕರ ಮೋಟಾರ್‌ಸೈಕಲ್ ಮಾರಾಟವು ಏಪ್ರಿಲ್'24 ರಲ್ಲಿ 4,96,542 ಯುನಿಟ್‌ಗಳು ಮತ್ತು ಏಪ್ರಿಲ್'23 ರಲ್ಲಿ 3,68,830 ಯುನಿಟ್‌ಗಳಷ್ಟಿತ್ತು. ಸ್ಕೂಟರ್‌ಗಳ ಮಾರಾಟವು ಏಪ್ರಿಲ್'24 ರಲ್ಲಿ 37,043 ಯುನಿಟ್‌ಗಳು ಮತ್ತು ಏಪ್ರಿಲ್'23 ರಲ್ಲಿ 27,277 ಯುನಿಟ್‌ಗಳಷ್ಟಿತ್ತು.
ಸತತವಾಗಿ ಎಲ್ಲಾ ಆರ್ಥಿಕ ವರ್ಷವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದಿದೆ. ಇನ್ನು ಹೀರೋ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಸಹ ಸಾಕಷ್ಟು ಮಾರಾಟವನ್ನು ಪಡೆದುಕೊಂಡಿದ್ದು, ಈಗಾಗಲೇ ಹೀರೋ, ಮತ್ತೊಂದು ಪ್ರಸಿದ್ದ ಇವಿ ನಿರ್ಮಾಣ ಕಂಪನಿಯಾದ ಏಥರ್ ಜೊತೆ ಸೇರಿ ಭಾರತದ 100 ಕ್ಕೂ ಅಧಿಕ ನಗರಗಳಲ್ಲಿ 2000 ಚಾರ್ಜಿಂಗ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಈಗಾಗಲೇ ಹಲವಾರು ಬೈಕ್‌ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಗೆ ಬಿಟ್ಟಿರುವ ಹೀರೋ, ಜನರ ಮೆಚ್ಚುಗೆಗೆ ಪಾತ್ರವಾದ ಮಾಡೆಲ್‌ಗಳಲ್ಲಿ ಮಾರ್ವಿಕ್ ಸಹ ಒಂದು. ಹಾರ್ಲೆ ಡೇವಿಡ್ಸನ್ ಎಕ್ಸ್440 (Hero Marvick 440) ಬೈಕ್‌ನಲ್ಲಿರುವ ಅದೇ ಎಂಜಿನ್ ಬಳಸಿಕೊಂಡು ಹೀರೋ ತನ್ನ ಮಾರ್ವಿಕ್ 440 ಬೈಕ್ ಅನ್ನು ಪರಿಚಯಿಸಿದೆ. ಆಕರ್ಷಕ ಲುಕ್ ಮತ್ತು ಉತ್ತಮ ಪರ್ಫಾಮೆನ್ಸ್ ನಿಡುವ ಈ ಬೈಕ್, ಇದೀಗ ನಿಧಾನವಾಗಿ ಭಾರತೀಯರ ಫೇವರೀಟ್ ಆಗಿ ಬದಲಾಗುವ ಕಾಲ ದೂರವಿಲ್ಲ.
ಇತ್ತೀಚೆಗೆ ಬ್ರಾಂಡ್ ಈ ಹೊಸ ಹೀರೋ ಮಾವ್ರಿಕ್ 440 ಬೈಕಿನ ವಿತರಣೆಯು ಪ್ರಾರಂಭಿಸಿತು. ಈ ಹೊಸ ಹೀರೋ ಮಾವ್ರಿಕ್ 440 ಬೈಕನ ಬೆಲೆಯು ರೂ.1.99 ಲಕ್ಷವಾಗಿದೆ. ಈ ಹೀರೋ ಮಾವ್ರಿಕ್ 440 ಬೈಕ್ ಬೇಸ್, ಮಿಡ್ ಮತ್ತು ಟಾಪ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಮಾವ್ರಿಕ್ ಅನ್ನು ಹೀರೋನ ಪ್ರೀಮಿಯಾ ಡೀಲರ್‌ಶಿಪ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ.

ಈ ಹೀರೋ ಮಾವ್ರಿಕ್ 440 ಬೈಕಿನಲ್ಲಿ ಹಾರ್ಲೆ ಡೇವಿಡ್ಸನ್ X440 ಬೈಕಿನಂತೆಯೇ ಅದೇ ಎಂಜಿನ್ 440 cc ಸಿಂಗಲ್-ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 6,000 rpm ನಲ್ಲಿ 27 bhp ಪವರ್ ಮತ್ತು 4,000 rpm ನಲ್ಲಿ 36 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. X440 ನ ಟಾರ್ಕ್‌ಗಿಂತ 2 Nm ಗಿಂತ ಸ್ವಲ್ಪ ಕಡಿಮೆ ಆಗಿದೆ.
ಈ ಕಡಿಮೆ-ಮಟ್ಟದ ಟಾರ್ಕ್ ಅನ್ನು ಆದ್ಯತೆ ನೀಡಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. ನಗರ ಪ್ರಯಾಣ ಮತ್ತು ಹೆದ್ದಾರಿ ಪ್ರಯಾಣ ಎರಡಕ್ಕೂ ಉತ್ತಮ ಅನುಭವ ನೀಡುತ್ತದೆ. ಈ ಹೀರೋ ಮಾವ್ರಿಕ್ 440 ಬೈಕ್ ಮಸ್ಕ್ಯುಲರ್ ಸ್ಟೈಲಿಂಗ್ ಅನ್ನು ಬಲ್ಬಸ್ ಫ್ಯುಯಲ್ ಟ್ಯಾಂಕ್‌ನೊಂದಿಗೆ ಸಂಪೂರ್ಣ ಶ್ರೌಡ್ಸ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಹೆಡ್‌ಲ್ಯಾಂಪ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್‌ನೊಂದಿಗೆ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








