Hero Vida: ಹೊಸ ಹೀರೋ ವಿಡಾ ಇ-ಸ್ಕೂಟರ್‌ಗಾಗಿ ಪೇಟೆಂಟ್ ಸಲ್ಲಿಕೆ.. ಶೀಘ್ರ ಬಿಡುಗಡೆ, ವಿಶೇಷತೆಗಳೇನು?

ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಜನಪ್ರಿಯತೆ ಗಳಿಸಿದೆ. 2022ರಲ್ಲಿ ವಿಡಾ (Vida) ಸರಣಿ ಇ-ಸ್ಕೂಟರ್‌ ಬಿಡುಗಡೆಯೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೂ ಲಗ್ಗೆ ಇಟ್ಟಿತ್ತು. ಸದ್ಯ, ವಿಡಾ ಲೈನ್ಅಪ್ ವಿಸ್ತರಿಸುವಲ್ಲಿ ಕಂಪನಿಯು ಕಾರ್ಯಪ್ರವೃತವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಪರಿಚಯಿಸಲು ಪೇಟೆಂಟ್ ಸಲ್ಲಿಸಿದೆ ಎಂದು ವರದಿಯಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮುಂಬರಲಿರುವ ಇ-ಸ್ಕೂಟರ್‌ ವಿನ್ಯಾಸ (ಡಿಸೈನ್) ಹೇಗಿರಲಿದೆ ಎಂಬ ಫೋಟೋ ಕೂಡ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಇದೊಂದು ಫ್ಯಾಮಿಲಿ (ಕುಟುಂಬ) ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದ್ದು, ವಿಡಾ ರೀತಿಯಲ್ಲಿಯೇ ಪ್ಲಾಟ್‌ಫಾರ್ಮ್ ಹೊಂದಿರಲಿದೆ ಎಂದು ತಿಳಿದುಬಂದಿದೆ.

New Hero Vida Electric Scooter Patent Filed Details

ಮುಂಬರಲಿರುವ ನೂತನ ಎಲೆಕ್ಟ್ರಿಕ್ ಸ್ಕೂಟರ್, ವಿ-ಆಕಾರದ ಎಲ್ಇಡಿ ಹೆಡ್ ಲ್ಯಾಂಪ್, ಆಕರ್ಷಕ ಡಿಆರ್‌ಎಲ್‌, 12-ಇಂಚಿನ ಸ್ಪೋಕ್ ಅಲಾಯ್ ವೀಲ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೆನ್ಸರ್ಸ್ ರಿಂಗ್ಸ್, ಡಿಸ್ಕ್ ಬ್ರೇಕ್ಸ್, ಮುಂಭಾಗ (ಫ್ರಂಟ್) ಟ್ವಿನ್ ಕಾಯಿಲ್ ಹಾಗೂ ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿರುವ ಸಾಧ್ಯತೆಯಿದೆ.

ಪ್ರಸ್ತುತ ಭಾರತದಲ್ಲಿ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ 2 ಆಕರ್ಷಕ ರೂಪಾಂತರ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ, ವಿ1 ಪ್ರೊ (V1 Pro) ಮತ್ತು ವಿ1 ಪ್ಲಸ್ (V1 Plus). ಕ್ರಮವಾಗಿ ಸುಮಾರು ರೂ.1.45 ಲಕ್ಷ ಮತ್ತು ರೂ.1.15 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿವೆ. ಆಕರ್ಷಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿವೆ.

New Hero Vida Electric Scooter Patent Filed Details

ಹೀರೋ ವಿಡಾ ವಿ1 ಪ್ರೊ ಮಾದರಿಯು 3.94 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 110 ಕಿ.ಮೀ ಓಡುತ್ತದೆ. ವಿ1 ಪ್ಲಸ್ ರೂಪಾಂತರವು 3.44 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಭರ್ತಿ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಇವೆರೆಡು ಸ್ಕೂಟರ್‌ಗಳಲ್ಲಿ ಒಂದೇ ತರಹದ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಗಂಟೆ 80 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿವೆ.

ಕೆಲವೇ ದಿನಗಳ ಹಿಂದೆ, ಹೀರೋ ಕಂಪನಿಯು ವಿಡಾ ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು ವಿಡಾ ಅಡ್ವಾಂಟೇಜ್ ಪ್ಯಾಕೇಜ್ ಪರಿಚಯಿಸಿತ್ತು. ಇದು ರೂ.27,000 ಮೌಲ್ಯದ ಕೊಡುಗೆಯನ್ನು ಒಳಗೊಂಡಿದೆ. ಇದರಲ್ಲಿ ಬ್ಯಾಟರಿಗಾಗಿ 5 ವರ್ಷ ಅಥವಾ 60,000 ಕಿ.ಮೀ ವಾರಂಟಿ ಸೇರಿದಂತೆ ವಿವಿಧ ಪ್ರಯೋಜನಗಳು ಸೇರಿವೆ. ಏಪ್ರಿಲ್ 30ರವರೆಗೆ ವಿಡಾ ವಿ1 ಪ್ರೊ ಮಾಲೀಕರಿಗೆ ಶೂನ್ಯ ವೆಚ್ಚದಲ್ಲಿ ಈ ಪ್ಯಾಕೇಜ್ ಸಿಗಲಿದೆ.

ಹೊಸದಾಗಿ ಪೇಟೆಂಟ್ ಮಾಡಲಾದ ಎಲೆಕ್ಟ್ರಿಕ್ ಸ್ಕೂಟರ್ ವಿಚಾರಕ್ಕೆ ಬರುವುದಾದರೆ, ಇದು ಫ್ಯಾಮಿಲಿ ಸ್ಕೂಟರ್ ಆಗಿರುವುದರಿಂದ ಕೊಂಚ ಹೆಚ್ಚಿನ ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕವೇ ಇದರ ವಿನ್ಯಾಸ ಹಾಗೂ ವೈಶಿಷ್ಟ್ಯದ ಕುರಿತು ಎಲ್ಲ ಮಾಹಿತಿ ಸಿಗಲಿದ್ದು, ಟಿವಿಎಸ್, ಬಜಾಜ್ ಮತ್ತು ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 26, 2024, 17:37 [IST]
English summary
New hero vida electric scooter patent filed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+