Hero: ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ಸ್ಕೂಟರ್ ಬಿಡುಗಡೆ.. ರೂ.79,738 ಬೆಲೆ, ವಿಶೇಷತೆಗಳೇನು?

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಇನ್ನಷ್ಟು ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಆಕರ್ಷಿಸಲು ಪ್ಲೆಷರ್ ಪ್ಲಸ್ (Pleasure Plus) ಸ್ಕೂಟರ್ ಲೈನ್ - ಅಪ್ ವಿಸ್ತರಿಸಿದ್ದು, ಎಕ್ಸ್‌ಟೆಕ್ ಸ್ಪೋರ್ಟ್ಸ್ (Xtec Sports) ಎಂಬ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಪರಿಚಯಿಸಲಾಗಿರುವ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ (Hero Pleasure Plus Xtec Sports) ಮಾದರಿಯು ರೂ.79,738 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪ್ಲೆಷರ್ ಪ್ಲಸ್ ಸ್ಕೂಟರ್​ನ ಎಕ್ಸ್‌ಟೆಕ್ ಕನೆಕ್ಟೆಡ್ ಹಾಗೂ ಎಕ್ಸ್‌ಟೆಕ್ ಸ್ಟ್ಯಾಂಡರ್ಡ್ ರೂಪಾಂತರದ ಮುಂದುವರಿದ ಆವೃತ್ತಿ ಇದಾಗಿದ್ದು, ಕೊಂಚ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

Hero Pleasure Plus Xtec Sports Launch In India Rs 79 738 Price

ಇತರೆ ಮಾದರಿಗಳಿಗೆ ಹೋಲಿಕೆ ಮಾಡಿದರೆ, ನೂತನ ಸ್ಕೂಟರ್​ನ ಬಣ್ಣ (ಪೇಂಟ್ ಸ್ಕೀಮ್) ಮತ್ತು ಗ್ರಾಫಿಕ್ಸ್ ಹೆಚ್ಚು ಅತ್ಯಾಕರ್ಷಣೀಯವಾಗಿದೆ. ಸೈಡ್ (ಬದಿ) ಪ್ಯಾನೆಲ್‌ನಲ್ಲಿ ಅಬ್ರಾಕ್ಸ್ ಆರೆಂಜ್ ಬ್ಲೂ ಬಣ್ಣವನ್ನು ಹೊಂದಿದ್ದು, ಉಳಿದಂತೆ ಸಂಪೂರ್ಣವಾಗಿ ಬ್ಲೂ (ನೀಲಿ) ಬಣ್ಣದ ಆಯ್ಕೆಯನ್ನು ಒಳಗೊಂಡಿದೆ. ವೀಲ್ಸ್ ಕೂಡ ಆರೆಂಜ್ (ಕಿತ್ತಳೆ) ಬಣ್ಣದ ಪಿನ್‌ಸ್ಟ್ರೈಪ್‌ ಅನ್ನು ಪಡೆದಿವೆ.

ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ರೂಪಾಂತರವು ಎಕ್ಸ್‌ಟೆಕ್ ಕನೆಕ್ಟೆಡ್ ಮತ್ತು ಎಕ್ಸ್‌ಟೆಕ್ ಸ್ಟ್ಯಾಂಡರ್ಡ್ ಮಾದರಿಯಂತೆ 110.9 ಸಿಸಿ ಎಂಜಿನ್ ಪಡೆದಿದ್ದು, 8 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಸಿವಿಟಿ ಟ್ರಾಸ್ಮಿಷನ್ ಸಿಸ್ಟಮ್ ಅನ್ನು ಪಡೆದಿದೆ. ಈ ಸ್ಕೂಟರ್ 50 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡಬಹುದು.

Hero Pleasure Plus Xtec Sports Launch In India Rs 79 738 Price

ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ಸ್ಕೂಟರ್ 106 ಕೆಜಿ ತೂಕವಿದ್ದು, 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಅನ್ನು ಹೊಂದಿದೆ. 10-ಇಂಚಿನ ವೀಲ್ಸ್ ಕೂಡ ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಒಳಗೊಂಡಿದ್ದು, ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ನೂತನ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ರೂಪಾಂತರವು ಯುವ ಖರೀದಿದಾರರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಕಾಲ್, ಎಸ್ಎಂಎಸ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸಲು ಬ್ಲೂಟೂತ್ ಕನೆಕ್ಟ್ ಮಾಡಬಲ್ಲ ಎಲ್‌ಸಿಡಿ ಸೆಮಿ ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದ್ದು, ಅತ್ಯಾಧುನಿಕ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ ಕೂಡ ಒಳಗೊಂಡಿದೆ.

Hero Pleasure Plus Xtec Sports Launch In India Rs 79 738 Price

ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ಸ್ಕೂಟರ್​ಗೆ ಹೋಂಡಾ ಆಕ್ಟಿವಾ 6ಜಿ (Honda Activa 6G) ಮತ್ತು ಟಿವಿಎಸ್ ಜೂಪಿಟರ್‌ (TVS Jupiter) ಪ್ರಬಲ ಎದುರಾಳಿಯಾಗಿವೆ. ಈ ನೂತನ ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಮುಂಬರುವ ದಿನಗಳಲ್ಲಿ ಬಹುತೇಕರ ಆಯ್ಕೆಯ ವಾಹನವಾಗಬಹುದು. ಇದು ದಿನನಿತ್ಯದ ಬಳಕೆಗೂ ಹೆಚ್ಚು ಸೂಕ್ತವಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 27, 2024, 10:24 [IST]
English summary
Hero pleasure plus xtec sports launch in india rs 79738 price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+