ಯುವಕರ ಹೃದಯ ಕದಿಯಲು ಆಕರ್ಷಕರ ವಿನ್ಯಾಸದಲ್ಲಿ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ತ ವಾಹನ ತಯಾರಕ ಕಂಪನಿಯಾದ ಜಾವಾ ಮೋಟಾರ್‌ಸೈಕಲ್ಸ್ ತನ್ನ ಜಾವಾ 42 ಬಾಬರ್ ಬೈಕಿನ ಹೊಸ ಹೊಸ ಟಾಪ್-ಎಂಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದನ್ನು ಬ್ಲಾಕ್ ಮಿರರ್ ಎಂದು (Jawa 42 Bobber Black Mirror) ಕರೆಯಲಾಗುತ್ತದೆ. ಈ ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕಿನ ಬೆಲೆಯು ರೂ.2.25 ಲಕ್ಷವಾಗಿದೆ.
ಈ ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಡೀಲರ್‌ಶಿಪ್‌ಗಳಲ್ಲಿ ತೆರಳಿ ಬುಕ್ಕಿಂಗ್ ಮಾಡಬಹುದು. ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕಿನಲ್ಲಿ ಜಾವಾ ಮೋಟಾರ್‌ಸೈಕಲ್ಸ್ ಕಂಪನಿಯು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಲ್ಲ ಆದರೆ ಎಂಜಿನ್ ಅನ್ನು ಪರಿಷ್ಕರಿಸಿದ್ದಾರೆ ಮತ್ತು ರಿಟ್ಯೂನ್ ಮಾಡಿದ್ದಾರೆ.

ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಹೆಚ್ಚು ಕ್ರೋಮ್ ಫ್ಯೂಯಲ್ ಟ್ಯಾಂಕ್ ಅನ್ನು ಪಡೆಯುತ್ತದೆ. ಈ 42 ಬಾಬರ್ ಬೈಕ್ ಈಗ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಬೈಕ್ ಡ್ಯುಯಲ್-ಟೋನ್‌ನಲ್ಲಿ ಫಿನಿಶಿಂಗ್ ಅನ್ನು ಹೊಂದಿದೆ, ಇನ್ನು ಈ ಬೈಕಿನಲ್ಲಿ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿವೆ. ಈ ಬೈಕಿನಲ್ಲಿ ಗೇರ್ ಮತ್ತು ಎಂಜಿನ್ ಕವರ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ.
ಈ ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಸೈಡ್ ಪ್ಯಾನೆಲ್ ಇನ್ನೂ ಬ್ಲ್ಯಾಕ್ ಬಣ್ಣದಲ್ಲಿದೆ ಮತ್ತು "42 ಬಾಬರ್" ಎಂಬ ಬ್ಯಾಡ್ಜ್ ಅನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಜಾವಾ 42 ಬ್ಲ್ಯಾಕ್ ಮಿರರ್ ಬೈಕ್ ಕ್ಲಾಸಿಕ್ ವಿನ್ಯಾಸ, ದೃಢವಾದ ಕಾರ್ಯಕ್ಷಮತೆ ಮತ್ತು ಅತ್ಯುನ್ನತ ಸೌಕರ್ಯದ ಸಾಮರಸ್ಯದ ಮಿಶ್ರಣವನ್ನು ಒದಗಿಸುವ ಬ್ರ್ಯಾಂಡ್‌ನ ಬದ್ಧತೆಯನ್ನು ಸಾರುತ್ತದೆ.

ಇದಲ್ಲೆದೆ, ಜಾವಾ ಮೋಟಾರ್‌ಸೈಕಲ್ಸ್ ಕಂಪನಿಯು ಈ ಹೊಸ ಜಾವಾ 42 ಬ್ಲ್ಯಾಕ್ ಮಿರರ್ ಬೈಕಿನಲ್ಲಿ ಯಾಂತ್ರಿಕ ಬದಲಾವಣೆಗಳನ್ನು ಸಹ ಮಾಡಿದೆ. ಈ ಹೊಸ ಬೈಕಿನ ಥ್ರೊಟಲ್ ಬಾಡಿಯ ಗಾತ್ರವನ್ನು 33 mm ನಿಂದ 38 mm ಗೆ ಹೆಚ್ಚಿಸಲಾಗಿದೆ. RPM ಅನ್ನು 1,500 ರಿಂದ 1,350 ಕ್ಕೆ ಇಳಿಸಲಾಗಿದೆ. ಇನ್ನು ಉತ್ತಮ ರೈಡ್ ಗುಣಮಟ್ಟಕ್ಕಾಗಿ ಹಿಂದಿನ ಮೊನೊಶಾಕ್ ಅನ್ನು ರಿಟ್ವೀಕ್ ಮಾಡಲಾಗಿದೆ.
ಈ ಹೊಸ ಬೈಕಿನಲ್ಲಿ ಅದೇ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 29.49 bhp ಪವರ್ ಮತ್ತು 32.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕಿನಲ್ಲಿ ಈಗ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಪಡೆಯುತ್ತದೆ.
ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಸಿಇಒ ಆಶಿಶ್ ಸಿಂಗ್ ಜೋಶಿ ಅವರು ಮಾತನಾಡಿ, ಕಳೆದ ವರ್ಷ ಜಾವಾ 42 ಬಾಬರ್‌ನ ಯಶಸ್ವಿ ಬಿಡುಗಡೆಯೊಂದಿಗೆ ನಾವು ಬಾಬರ್ ವಿಭಾಗದಲ್ಲಿ ನಮ್ಮ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದ್ದೇವೆ. ನಮ್ಮ ಫ್ಯಾಕ್ಟರಿ ಕಸ್ಟಮ್ ಪೋರ್ಟ್‌ಫೋಲಿಯೊದ ಬಾಬರ್ ಸ್ಟೇಬಲ್ ಭಾರತದಲ್ಲಿ ರೈಡಿಂಗ್ ಸಮುದಾಯದ ಅಭಿಮಾನಿಗಳನ್ನು ಆನಂದಿಸಿದೆ.
ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಅನ್ನು ಎಂಜಿನಿಯರಿಂಗಳ ಶ್ರಮದಿಂದ ಆಕರ್ಷಕವಾಗಿಸಿದೆ. ಜಾವಾ ಬಾಬರ್ ಬೈಕ್ ಭಾವನಾತ್ಮಕ ಖರೀದಿಯಾಗಿದೆ, ಮತ್ತು ಹೊಸ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬಾಬರ್ಸ್ ಏಕೆ ತುಂಬಾ ವಿಶೇಷವಾಗಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ವಿವರಗಳಿಗೆ ನಿಖರವಾದ ಗಮನ, ಅನನ್ಯ ವಿನ್ಯಾಸ ಭಾಷೆಯೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ನಿಜವಾಗಿ ಅಸಾಧಾರಣವಾಗಿದೆ ಎಂದು ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








