ಮತ್ತಷ್ಟು ಸದ್ದು ಮಾಡಲು ನವೀಕರಣಗಳೊಂದಿಗೆ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗದ್ದು, ಈ ರಾಯಲ್ ಎನ್‌ಫೀಲ್ಡ್ ಕಂಪನಿಯ ಇಂಟರ್‌ಸೆಪ್ಟರ್ 650 (Interceptor 650) ಮತ್ತು ಕಾಂಟಿನೆಂಟಲ್ ಜಿಟಿ650 (Continental GT 650) ಎಂಬ ಟ್ವಿನ್ ಬೈಕ್‌ಗಳು ಬಾರತೀಯ ಮಾರುಕಟ್ಟೆಯಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡಿವೆ.
2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯು ರೂ.3.03 ಲಕ್ಷಗಳಾದರೆ, ಕಾಂಟಿನೆಂಟಲ್ ಜಿಟಿ 650 ಬೈಕ್ ಬೆಲೆಯು ರೂ.3.19 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಚೆನ್ನೈ ಎಕ್ಸ್ ಶೋರೂಂ ಪ್ರಕಾರವಾಗಿದೆ. ಚೆನ್ನೈ ಮೂಲದ ತಯಾರಕರು ಈ ಹೊಸ ಬೈಕ್‌ಗಳಲ್ಲಿ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚು ಅಗತ್ಯವಿರುವ ಅಲಾಯ್ ವ್ಹೀಲ್ ಗಳನ್ನು ಪರಿಚಯಿಸಿದ್ದಾರೆ. ವೈರ್ ಸ್ಪೋಕ್ಡ್ ವೀಲ್‌ಗಳು ಅದ್ಭುತವಾದ ರೆಟ್ರೊ ಲುಕ್ ಅನ್ನು ನೀಡುತ್ತದೆ.

2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ650 ಬೈಕ್‌ಗಳು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ. 2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಬ್ಲ್ಯಾಕ್ ರೇ, ಬಾರ್ಸಿಲೋನಾ ಬ್ಲೂ, ಬ್ಲ್ಯಾಕ್ ಪರ್ಲ್ ಮತ್ತು ಕ್ಯಾಲಿ ಗ್ರೀನ್ ಎಂಬ ನಾಲ್ಕು ಹೊಸ ಬಣ್ಣಗಳನ್ನು ಪಡೆದುಕೊಂಡಿವೆ. ಇದರೊಂದಿಗೆ ಪ್ರಸ್ತುತದ ಸನ್‌ಸೆಟ್ ಸ್ಟ್ರಿಪ್ ಮತ್ತು ಕ್ಯಾನ್ಯನ್ ರೆಡ್ ಬಣ್ಣಗಳಲ್ಲಿಯೂ ಲಭ್ಯವಿರಲಿದೆ.
ಇನ್ನು 2023ರ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಆಗಿ ಬ್ಲ್ಯಾಕ್ ಔಟ್ ಬಿಟ್‌ಗಳೊಂದಿಗೆ ಸ್ಲಿಪ್‌ಸ್ಟ್ರೀಮ್ ಬ್ಲೂ ಮತ್ತು ಅಪೆಕ್ಸ್ ಗ್ರೇ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ. ಇನ್ನು ಈ ಕೆಫೆ ರೇಸರ್ ಅನ್ನು ಡಕ್ಸ್ ಡಿಲಕ್ಸ್, ಬ್ರಿಟಿಷ್ ರೇಸಿಂಗ್ ಗ್ರೀನ್, ರಾಕರ್ ರೆಡ್ ಪೇಂಟ್ ಮತ್ತು ಮಿಸ್ಟರ್ ಕ್ಲೀನ್ ಬಣ್ಣಗಳೊಂದಿಗೆ ಸಹ ಮಾರಾಟವಾಗಲಿದೆ.

ಬ್ಲ್ಯಾಕ್ ಔಟ್ ಬಿಟ್‌ಗಳು ಎಂಜಿನ್ ಪ್ರದೇಶ ಮತ್ತು ಎಕ್ಸಾಸ್ಟ್‌ಗೆ ಡಾರ್ಕ್ ಫಿನಿಶ್ ಅನ್ನು ಒಳಗೊಂಡಿವೆ. ಟ್ಯೂಬ್‌ಲೆಸ್ ಟೈರ್‌ಗಳಲ್ಲಿನ ಕ್ಯಾಸ್ಟ್ ಅಲಾಯ್ ವ್ಹೀಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಆದರೆ ಇತರ ನವೀಕರಣಗಳಲ್ಲಿ ಹೊಸ ಎಲ್ಇಡಿ ಹೆಡ್‌ಲೈಟ್ ಯುನಿಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಹೊಸ ಸ್ವಿಚ್‌ಗಿಯರ್ ಮತ್ತು ಸುಧಾರಿತ ಸೀಟ್ ಸೌಕರ್ಯಗಳು ಕೂಡ ಸೇರಿವೆ.
ಇನ್ನು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ 2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳಲ್ಲಿ 648 ಸಿಸಿ ಏರ್- ಮತ್ತು ಆಯಿಲ್-ಕೂಲ್ಡ್ ಪ್ಯಾರಲಲ್ ಟ್ವಿನ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎರಡೂ ಟ್ವಿನ್ ಬೈಕ್‌ಗಳಲ್ಲಿ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳಾಗಿವೆ. ಈ ಹೊಸ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಭಾರತದಾದ್ಯಂತ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








