27 ವರ್ಷದ ಹಳೆಯ ಸುಜುಕಿ ಸಮುರಾಯ್‌ಗೆ TVS ಡೀಲರ್ ಭರ್ಜರಿ ಆಫರ್

'ಸುಜುಕಿ ಸಮುರಾಯ್' ಇದು ಹಲವರಿಗೆ ಹಳೆಯ ನೆನಪುಗಳನ್ನು ಹುಟ್ಟುಹಾಕುವ ಹೆಸರು. ಇಂದು ಹಲವರ ಬಳಿ ಇಲ್ಲದಿದ್ದರೂ ಕೆಲವೇ ಕೆಲವರು ಹಾಗೇ ಉಳಿಸಿಕೊಂಡು ತಮ್ಮ ಬೈಕ್‌ನೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಅಂತಹ ಸಮುರಾಯ್ ಮಾಲೀಕನಿಂದ ಟಿವಿಎಸ್ ಡೀಲರ್ ಒಬ್ಬರು ಬೈಕ್ ಪಡೆದು ಬರೋಬ್ಬರಿ 41,000 ರೂ. ವಿನಿಮಯ ಮೌಲ್ಯವನ್ನು ನೀಡಿದ್ದಾರೆ.

ಮೊದಲಿಗೆ ಈ ಸಮುರಾಯ್ ಇತಿಹಾಸವನ್ನು ನೋಡೋಣ. ಏಕೆಂದರೆ ಸುಜುಕಿ ಮತ್ತು TVS ಸಹಯೋಗದಲ್ಲಿ ಈ ಸಮುರಾಯ್ ಬೈಕ್ ಅನ್ನು ನಿರ್ಮಿಸಲಾಗಿದೆ ಎಂಬುದು ಇಂದಿನ ಬಹುತೇಕ ಯುವಕರಿಗೆ ತಿಳಿದೇ ಇಲ್ಲ. 1984 ರಲ್ಲಿ ಈ ಎರಡೂ ಕಂಪನಿಗಳು ಕಮ್ಯೂಟರ್ (100cc) ಮೋಟಾರ್‌ಸೈಕಲ್‌ಗಳ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡವು. ಅದೇ ಸಮಯದಲ್ಲಿ ಆ ಕಂಪನಿಗೆ ಇಂಡ್-ಸುಜುಕಿ ಎಂಬ ಹೊಸ ಹೆಸರು ಕೂಡ ಹುಟ್ಟಿತು.

27-year-old-suzuki-samurai-tvs-dealer-huge-exchange-value

ಇದು RX100 ನಂತಹ 2-ಸ್ಟ್ರೋಕ್ ಯುಗದ ಜನಪ್ರಿಯ ಬೈಕ್ ಆಗಿತ್ತಾದರೂ RX100 ನಷ್ಟು ಹೆಸರು ಮಾಡಲಿಲ್ಲ. ಇದೇ ಕಾರಣಕ್ಕೆ TVS-ಸುಜುಕಿ ಸಮುರಾಯ್ ಬೈಕ್‌ಗಳು ಇಂದು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಇಂದಿಗೂ ಅನೇಕ ಉತ್ತಮ ನಿರ್ವಹಣೆಯ ಯಮಹಾ RX100 ಮೋಟಾರ್‌ಸೈಕಲ್‌ಗಳನ್ನು ನಾವು ನೋಡಬಹುದು.

ಈಗ ವಿಷಯಕ್ಕೆ ಬಂದರೆ, ಬಹಳ ವಿರಳವಾಗಿ ಕಾಣುವ ಸುಜುಕಿ ಸಮುರಾಯ್ ಅನ್ನು ಉತ್ತಮವಾಗಿ ನಿರ್ವಹಿಸಿರುವ ಬೈಕ್ ಕೇರಳದಲ್ಲಿ ಕಾಣಿಸಿಕೊಂಡಿದೆ. ಇದರ ಕಂಡಿಷನ್ ಕಂಡು ಡೀಲರ್‌ಶಿಪ್ ಸಿಬ್ಬಂದಿಯೇ ಬೆರಗಾಗಿ ಮೂಲ ಬೆಲೆಗಿಂತ ದುಪ್ಪಟ್ಟು ಬೆಲೆಗೆ ವಿನಿಮಯ ಮಾಡಿಕೊಂಡಿದ್ದಾರೆ. ಈ ಕುರಿತ ವೀಡಿಯೊವನ್ನು ಶ್ರೀ ಮೋಟಾರ್ ವಾಲ್ಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

27-year-old-suzuki-samurai-tvs-dealer-huge-exchange-value

ಈ ಬೈಕ್ ಮಾಲೀಕ ಸರಿಸುಮಾರು 27 ವರ್ಷಗಳ ಹಿಂದೆ ಟಿವಿಎಸ್-ಸುಜುಕಿ ಜಂಟಿಯಾಗಿದ್ದ ಡೀಲರ್‌ಶಿಪ್‌ನಿಂದ ಬೈಕನ್ನು ಖರೀದಿಸಿದ್ದರು. ಮಾಲೀಕ ಖರೀದಿಸಿದಾಗಿನಿಂದ ಇಲ್ಲಿಯವರೆಗೆ ಎಲ್ಲಾ ಸರ್ವಿಸ್ ಮತ್ತು ನಿರ್ವಹಣಾ ಕಾರ್ಯಗಳನ್ನು ಅಧಿಕೃತ ಸೇವಾ ಕೇಂದ್ರದಲ್ಲಿ ಮಾಡಿಸಿದ್ದಾರೆ. ಇಷ್ಟೂ ವರ್ಷಗಳಲ್ಲಿ ಮಾಲೀಕ ಬೇರೆ ಇನ್ಯಾವುದೇ ಬ್ರಾಂಡ್‌ನ ಬೈಕನ್ನು ಬಳಸಿಲ್ಲ ಎಂದು ಡೀಲರ್‌ ತಿಳಿಸಿದ್ದಾರೆ.

ಬರೋಬ್ಬರಿ 27 ವರ್ಷಗಳಿಂದ ಬೈಕ್ ಕಂಡಿಷನ್ ನೋಡಿರುವ ಡೀಲರ್‌ಶಿಪ್ ಸಿಬ್ಬಂದಿ ಇತ್ತೀಚೆಗೆ ಈ ಮೋಟಾರ್‌ಸೈಕಲ್ ಅನ್ನು ಮಾಲೀಕರಿಂದ ವಿನಿಮಯದ ಮೂಲಕ ಪಡೆದುಕೊಂಡಿದ್ದಾರೆ. ಆದ್ರೆ ಈ ಬೈಕ್ ನೀಡಿ ಇದರ ಬದಲು ಯಾವ ಹೊಸ ಬೈಕ್ ಅನ್ನು ವಿನಿಮಯವಾಗಿ ಪಡೆದಿದ್ದಾರೆ ಎಂಬುದರ ಕುರಿತು ವಿಡಿಯೋದಲ್ಲಿ ಖಚಿತ ಮಾಹಿತಿ ಲಭಿಸಿಲ್ಲ.

27-year-old-suzuki-samurai-tvs-dealer-huge-exchange-value

ಆದ್ರೆ ಡೀಲರ್‌ಶಿಪ್ ಸಿಬ್ಬಂದಿ 41,000 ರೂ. ವಿನಿಮಯ ಮೌಲ್ಯವನ್ನು ನೀಡಿರುವುದಾಗಿ ತಿಳಿಸಿದ್ದಾರೆ. 27 ವರ್ಷಗಳ ಹಿಂದೆ ಗ್ರಾಹಕರು ಖರೀದಿಸಿದಾಗ ಈ ಮೋಟಾರ್‌ಸೈಕಲ್‌ನ ಮೂಲ ಆನ್‌ರೋಡ್ ಬೆಲೆ 21,000 ರೂ. ಇತ್ತು. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಮಾಲೀಕ ಮೋಟಾರ್‌ಸೈಕಲ್ ಅನ್ನು ಬರೋಬ್ಬರಿ 27 ವರ್ಷಗಳಿಂದ ಬಳಸುತ್ತಿದ್ದರೂ ಮೂಲ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ.

ಇಂತಹ ಘಟನೆಗಳು ಅಪರೂಪಕ್ಕೆ ಎದುರಾಗುತ್ತವೆ. ನಮ್ಮ ಪ್ರಕಾರ ಮಾಲೀಕ ಹೆಚ್ಚಿನ ಮೌಲ್ಯವನ್ನು ಪಡೆಯಲು ಮುಖ್ಯ ಕಾರಣವೆಂದರೆ ಮೋಟಾಸೈಕಲ್ ಅತ್ಯುತ್ತಮ ನಿರ್ವಹಣೆ. ಜೊತೆಗೆ ಮೋಟಾರ್‌ಸೈಕಲ್‌ನ ಎಲ್ಲಾ ಸೇವೆಗಳು ಮತ್ತು ನಿರ್ವಹಣೆಯನ್ನು ಈ ಡೀಲರ್‌ಶಿಪ್‌ನಲ್ಲಿ ಸತತವಾಗಿ ನಿರ್ವಹಿಸಲಾಗಿರುವುದರಿಂದ ಅದರ ಸ್ಥಿತಿಯ ಬಗ್ಗೆ ಡೀಲರ್ ಚೆನ್ನಾಗಿ ತಿಳಿದಿರಬಹುದು.

27-year-old-suzuki-samurai-tvs-dealer-huge-exchange-value

ಇನ್ನೊಂದು ಪ್ರಮುಖ ಕಾರಣವೆಂದರೆ ಬಹುಶಃ ಈ ರೀತಿಯ ಮೋಟಾರ್‌ಸೈಕಲ್‌ಗಳನ್ನು ಅಪರೂಪವೆಂದು ಪರಿಗಣಿಸುವುದರಿಂದ ಹೊರಗಿನವರಿಗೆ ಇನ್ನೂ ಹೆಚ್ಚಿನ ಬೆಲೆಗೆ ಮಾರಬಹುದು. ಕೇರಳದಂತಹ ರಾಜ್ಯದಲ್ಲಿ ಸಾಕಷ್ಟು ಉತ್ಸಾಹಿಗಳು ಉತ್ತಮವಾಗಿ ನಿರ್ವಹಿಸಲ್ಪಟ್ಟ ಮೋಟಾರ್‌ಸೈಕಲ್‌ಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಿದ್ಧರಿದ್ದಾರೆ. ಅಲ್ಲದೇ ಡೀಲರ್‌ಶಿಪ್ ಅವರು ಗ್ರಾಹಕರಿಗೆ ಅವರು ನೀಡುವ ಸೇವೆಯ ಗುಣಮಟ್ಟವನ್ನು ಪ್ರದರ್ಶಿಸಲು ಪ್ರದರ್ಶನ ವಾಹನವಾಗಿ ಬಳಸಬಹುದು ಎಂಬುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 25, 2023, 16:58 [IST]
English summary
27 year old suzuki samurai tvs dealer huge exchange value
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+