MotoGP: ಕೌಂಟ್‌ಡೌನ್ ಶುರುವಾಯ್ತು.. ಹೈದರಾಬಾದ್‌ನಲ್ಲಿ ಸಿಟಿ ಟೂರ್
ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒಂದಾಗಿರುವ ಮೋಟೋಜಿಪಿ (MotoGP) ವರ್ಲ್ಡ್ ಚಾಂಪಿಯನ್‌ಶಿಪ್‌ನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಇದೇ ಮೊದಲ ಬಾರಿಗೆ ಭಾರತವು ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್ 22 ರಿಂದ 24ರವರೆಗೆ ನೋಯ್ಡಾದ 'ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್'ನಲ್ಲಿ ಅದ್ದೂರಿಯಾಗಿ ರೇಸ್ ನಡೆಯಲಿದೆ.
ರೇಸ್ ಆರಂಭವಾಗುವುದಕ್ಕೆ ಇನ್ನೂ ಎರಡು ತಿಂಗಳು ಬಾಕಿಯಿದೆ. ಆದರೆ, ಈಗಿನಿಂದಲೇ ಸಖತ್ ಹೈಪ್ ಕ್ರೆಯೆಟ್ ಆಗಿದ್ದು, ಭಾನುವಾರ ಹೈದರಾಬಾದ್‌ನಲ್ಲಿ ಮೋಟೋಜಿಪಿ ಆಯೋಜಕರು 'ಸಿಟಿ ಟೂರ್' ಏರ್ಪಡಿದ್ದರು. ಹೈಟೆಕ್ ಸಿಟಿಯ ಧ್ರುವ ಕಾಲೇಜ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪ್ರಾರಂಭವಾದ ರೈಡ್‌ನಲ್ಲಿ 400 ಬೈಕ್ ರೈಡರ್‌ಗಳು ಭಾಗಿಯಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರೈಡ್ ಮಾಡಿ, ಮೋಟೋಜಿಪಿ ಬಗ್ಗೆ ಜಾಗೃತಿ ಮೂಡಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫೇರ್‌ಸ್ಟ್ರೀಟ್ ಸ್ಪೋರ್ಟ್‌ನ ಎಂಡಿ ಹಾಗೂ ಸಿಟಿ ಟೂರ್ಸ್ ಮುಖ್ಯಸ್ಥ ಸುಶಾಂತ್ ಶ್ರೀವಾಸ್ತವ ಅವರು, 'ಹೈದರಾಬಾದ್‌ನಲ್ಲಿ ಆಯೋಜಿಸಿದ್ದ 'ಸಿಟಿ ಟೂರ್' ಕಾರ್ಯಕ್ರಮ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಅದ್ಬುತ ಯಶಸ್ಸನ್ನು ಕಂಡಿದೆ. ಜೊತೆಗೆ ಮೋಟೋಜಿಪಿ ಚಾಂಪಿಯನ್‌ಶಿಪ್‌ಗೆ ಉತ್ತಮ ಆರಂಭವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.
'ಸಿಟಿ ಟೂರ್'ನಲ್ಲಿ ಪುರುಷ ರೈಡರ್‌ಗಳು ಮಾತ್ರವಲ್ಲದೆ ಮಾಹಿಳಾ ರೈಡರ್‌ಗಳು ಭಾಗವಹಿಸಿದ್ದು, ಮತ್ತಷ್ಟು ಮೆರುಗನ್ನು ತಂದುಕೊಟ್ಟಿತು. ಈ ಮೂಲಕ ಮೋಟೋಜಿಪಿ ಪ್ರತಿಯೊಂದು ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಬೈಕ್ ರೈಡ್‌ನೊಟ್ಟಿಗೆ ಡಿಜೆ ಶೋ, ಬೈಕ್ ಸ್ಟಂಟ್, ಫುಡ್ ಸ್ಟಾಲ್ ಹಾಗೂ ಸೆಲ್ಫಿ ಬೂತ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮುಂದಿನ 'ಸಿಟಿ ಟೂರ್' ಜುಲೈ 23ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇತ್ತೀಚೆಗೆ, ಮೋಟೋಜಿಪಿ ರೇಸ್ ನಡೆಯುವ ನೋಯ್ಡಾದ 'ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್'ನಲ್ಲಿ ಭದ್ರತೆ ವಿಚಾರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಜಕರು ಹಾಗೂ ಅಲ್ಲಿನ ಸ್ಥಳೀಯ ಪೊಲೀಸರು ಚರ್ಚಿಸಿದ್ದರು. ಅದಕ್ಕೂ ಕೆಲವೇ ದಿನಗಳ ಮೊದಲು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸುವಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಮೋಟೋಜಿಪಿ ಆಯೋಜಕರು ಆಹ್ವಾನಿಸಿದ್ದರು.
ಸೆಪ್ಟೆಂಬರ್ 22 - 24ರವರೆಗೆ ನೋಯ್ಡಾದ 'ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್'ನಲ್ಲಿ ನಡೆಯುವ ರೇಸ್ ನಲ್ಲಿ ಡುಕಾಟಿ, ಕೆಟಿಎಂ, ಅಪ್ರಿಲಿಯಾ ಯಮಹಾ, ಹೋಂಡಾ, ಸೇರಿದಂತೆ ಪ್ರಮುಖ ತಂಡಗಳು ಭಾಗವಹಿಸಲಿವೆ. ನೀವು ಈ ಸ್ಪರ್ಧೆಯನ್ನು ವೀಕ್ಷಿಸಲು ಬುಕ್ ಮೈಶೋನಲ್ಲಿ ಟಿಕೆಟ್ ಖರೀದಿಸಬಹುದು. ದರಗಳು ರೂ.800 ದಿಂದ ರೂ.40,000ದವರೆಗೆ ಇದೆ.

ನಿಮಗೆ ಅಲ್ಲಿ ಹೋಗಿ, ರೇಸ್ ವೀಕ್ಷಿಸಲು ಸಾಧ್ಯವಾಗದಿದ್ದರೆ, ಜಿಯೋ ಸಿನಿಮಾ/ ಸ್ಪೋರ್ಟ್ಸ್18 ವಾಹಿನಿಯಲ್ಲಿ ನೋಡಬಹುದು. ಇನ್ನು, ಮೋಟೋಜಿಪಿ ಮೋಟಾರ್‌ಸೈಕಲ್ ವರ್ಲ್ಡ್ ಚಾಂಪಿಯನ್‌ಶಿಪ್ ಆರಂಭವಾಗುವುದಕ್ಕೆ ಎರಡು ತಿಂಗಳು ಬಾಕಿವಿದ್ದು, ಈಗಿನಿಂದಲೇ ದೊಡ್ಡ,ಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾಗಿದೆ. ಅದಕ್ಕೆ ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಮುಂಬರುವ ಇದರ ಸೆಳೆತ ಮತ್ತಷ್ಟು ಹೆಚ್ಚಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications